ಈ ರಾಶಿಗೆ ಈ ದಿನ ಸಂತೋಷದಾಯಕ : ಕೊಂಚ ಎಚ್ಚರ


ಮೇಷ
ನಿಮ್ಮ ನೆಮ್ಮದಿಯನ್ನು ಹಾಳು ಮಾಡಲು
ಸಾಕಷ್ಟು ಪ್ರಯತ್ನಗಳು ನಡೆಯಲಿವೆ.
ಮನೆಯವರ ಬೆಂಬಲದಿಂದ ಮುನ್ನಡೆಯಿರಿ.

ವೃಷಭ
ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ.
ದ್ರವರೂಪದ ಆಹಾರವನ್ನು ಹೆಚ್ಚಾಗಿ ಸೇವಿಸಿ.
ಸ್ನೇಹಿತರ ಸಹಾಯಕ್ಕೆ ಮುಂದಾಗಲಿದ್ದೀರಿ

ಮಿಥುನ
ನೀವಿರುವ ಸಮಯ, ಸಂದರ್ಭ, ಸ್ಥಳವನ್ನು
ನೋಡಿಕೊಂಡು ವರ್ತಿಸಿ. ಓದು ಹೆಚ್ಚಾಗಲಿದೆ.
ಎಲ್ಲರೊಂದಿಗೂ ಆತ್ಮೀಯವಾಗಿ ಇರಲಿದ್ದೀರಿ.

ಕಟಕ
ನಿಮ್ಮ ಪಾಲಿಗೆ ಬಂದ ಜವಾಬ್ದಾರಿಗಳನ್ನು
ಮೊದಲು ಸರಿಯಾಗಿ ನಿರ್ವಹಣೆ ಮಾಡಿ.
ನಂತರ ಬೇರೆಯವರ ಸಹಾಯಕ್ಕೆ ನಿಲ್ಲಿ.

ಸಿಂಹ
ಸ್ವಾರ್ಥವನ್ನು ಮರೆತು ಸಹೋದರರ ಜೊತೆಗೆ
ಸಾಗಲಿದ್ದೀರಿ. ವಿಚಾರಗಳನ್ನು ಪೂರ್ತಿಯಾಗಿ
ತಿಳಿದುಕೊಂಡು ಮಾತನಾಡುವುದು ಸೂಕ್ತ.

ಕನ್ಯಾ
ವಂಚಕರು, ಸ್ವಾರ್ಥಿಗಳಿಂದ ಅಂತರ ಕಾಯ್ದು
ಕೊಳ್ಳಿ. ಇಂದು ಇಡೀ ದಿನ ಸಂತೋಷದಿಂದ
ಕಳೆಯಲಿದ್ದೀರಿ. ತಾಳ್ಮೆಯಿಂದ ಇರಿ.

ತುಲಾ 
ಮನೆ ಮಂದಿಯ ಖುಷಿಗೆ ನೀವು ಕಾರಣ
ವಾಗಲಿದ್ದೀರಿ. ಬಂಧುಗಳು ನಿಮ್ಮ ಒಳಿತಿಗೆ
ದುಡಿಯಲಿದ್ದಾರೆ. ಸಣ್ಣ ಪುಟ್ಟ ಗೊಂದಲವಿದೆ.

ವೃಶ್ಚಿಕ
ಹಣಕಾಸಿನ ವ್ಯವಹಾರದಲ್ಲಿ ಸೂಕ್ತ ಎಚ್ಚರಿಕೆ
ಇರಲಿ. ನೀವು ಮಾಡಿದ ಕಾರ್ಯಕ್ಕೆ ತಕ್ಕದಾದ
ಪ್ರತಿಫಲವನ್ನು ಪಡೆದುಕೊಳ್ಳಲಿದ್ದೀರಿ.

 ಧನುಸ್ಸು
ಹಿಂದೆ ಕೂಡಿಟ್ಟುಕೊಂಡಿದ್ದ ಹಣ ಇಂದು
ಉಪಯೋಗಕ್ಕೆ ಬರಲಿದೆ. ಅಸಮರ್ಥರಿಗೆ
ಜವಾಬ್ದಾರಿ ವಹಿಸುವುದು ಬೇಡ.

ಮಕರ
ಇಡೀ ದಿನ ಸಂತೋಷದಿಂದ ಕೂಡಿರಲಿದೆ.
ಹಳೆಯ ವಿಚಾರಗಳ ಬಗ್ಗೆ ಹೆಚ್ಚು ಚಿಂತೆ
ಮಾಡುವುದು ಬೇಡ. ಸ್ವಾರ್ಥಿಗಳ ಬಗ್ಗೆ ಎಚ್ಚರ.

ಕುಂಭ
ತಪ್ಪು ಮಾಡದ ನೀವು ಯಾರಿಗೂ ಹೆದರು
ವುದು ಬೇಡ. ಪರಧನಕ್ಕೆ ಆಸೆಪಡುವುದು
ಸರಿಯಲ್ಲ. ದುಡಿಮೆ ಹೆಚ್ಚಾಗಲಿದೆ.

ಮೀನ 
ಬೇರೆಯವರ ಹಣದಲ್ಲಿ ನೀವು ಮೋಜು
ಮಾಡುವುದು ಸರಿಯಲ್ಲ. ಸಿಕ್ಕ ಅವಕಾಶವನ್ನು
ಬಳಕೆ ಮಾಡಿಕೊಂಡು ಮುಂದೆ ಸಾಗುತ್ತಿರಿ.