ಮೇಷ: ಮುಂಜಾನೆಯೇ ಗೊಂದಲಕ್ಕೆ ಸಿಲುಕಲಿದ್ದೀರಿ. ಸಂಜೆ ವೇಳೆಗೆ ಗೊಂದಲಕ್ಕೆ ತೆರೆ ಬೀಳಲಿದೆ. ನಿರಂತರ ಪ್ರಯತ್ನ ಇದ್ದರೆ ಯಶಸ್ಸು ಸಾಧ್ಯ.

ವೃಷಭ: ಹುಚ್ಚು ಮನಸ್ಸು ಹೇಳಿದ ಹಾಗೆ ಕುಣಿದರೆ ಸಂಕಷ್ಟ ಶತ ಸಿದ್ಧ. ಹಿರಿಯರ ಮಾತಿಗೆ ಗೌರವ ನೀಡಿ ಅವರ ಮಾರ್ಗದರ್ಶನದಂತೆ ಸಾಗಿ.

ಮಿಥುನ: ಗುರುಬಲವಿದೆ. ಅಂದುಕೊಂಡ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ಎಲ್ಲಾ ವಿಚಾರಗಳಲ್ಲಿಯೂ ಆಸಕ್ತಿ ತಾಳಲಿದ್ದೀರಿ.

ಕಟಕ: ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಇದು ಸಕಾಲ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಬಂಧುಗಳ ಆಗಮನವಾಗಲಿದೆ.

ಈ ರಾಶಿಯವರಿಗೆ ಕಷ್ಟ ಮುಗಿದು ಸುಖದ ದಿನಗಳು ಬರಲಿವೆ: ವಾರ ಭವಿಷ್ಯ

ಸಿಂಹ: ಎಷ್ಟೇ ಕಷ್ಟ ಬಂದರೂ ಆತ್ಮ ವಿಶ್ವಾಸ ಕಳೆದುಕೊಳ್ಳುವುದು ಬೇಡ. ನಿಮ್ಮ ಪಾಲಿನ ಕಾರ್ಯಗಳನ್ನು ನೀವು ಮಾಡಿ ಮುಗಿಸಿ.

ಕನ್ಯಾ: ಪದೇ ಪದೇ ಅದದೇ ತಪ್ಪುಗಳನ್ನು ಮಾಡುವುದು ಸರಿಯಲ್ಲ. ದೊಡ್ಡವರ ದೃಷ್ಟಿಯಲ್ಲಿ ನಿಮ್ಮ ಬಗ್ಗೆ ಸದಭಿಪ್ರಾಯ ಮೂಡಲಿದೆ.

ತುಲಾ: ಇಂದು ಅಧಿಕಾರ ಕೇಂದ್ರದ ಸುತ್ತಬೇಕಾದ ಸಂದರ್ಭ ಬರಲಿದೆ. ಹಣಕಾಸಿನ ವಿಚಾರದಲ್ಲಿ ಸೂಕ್ತ ಮಾಹಿತಿ ಪಡೆದು ಮುಂದೆ ಸಾಗಿ.

ವೃಶ್ಚಿಕ: ಎಲ್ಲವೂ ನಿಮ್ಮ ಇಷ್ಟದಂತೆಯೇ ಆಗಬೇಕು ಎಂದುಕೊಳ್ಳುವುದು ತಪ್ಪು. ಇಂದು ಪರಿಸ್ಥಿತಿಯ ಕೈಗೊಂಬೆಯಾಗಬೇಕಾದೀತು.

ಧನಸ್ಸು: ಆರೋಗ್ಯದಲ್ಲಿ ಕೊಂಚ ಸಮಸ್ಯೆ ಉಂಟಾಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ.

ಮಕರ: ಮನೆಯಲ್ಲಿ ಸಣ್ಣ ಪ್ರಮಾಣದ ಮನಸ್ತಾಪ ಉಂಟಾಗಲಿದೆ. ಕಚೇರಿಯ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಲಿವೆ.

ಕುಂಭ: ಯಾರೋ ಮಾಡಿದ ತಪ್ಪಿಗೆ ನೀವು ತಲೆ ತಗ್ಗಿಸಬೇಕಾಗಿ ಬರಬಹುದು. ಅಂಜಿಕೆ ಬಿಟ್ಟು ಮುಂದೆ ಸಾಗಿ. ಧೈರ್ಯ ಹೆಚ್ಚಾಗಲಿದೆ.

ಮೀನ: ಸ್ನೇಹಿತರಿಂದ ಸ್ಫೂರ್ತಿಗೊಂಡು ಹೊಸ ಪ್ರಯತ್ನಕ್ಕೆ ಕೈ ಹಾಕಲಿದ್ದೀರಿ. ಹಣಕ್ಕೆ ಆಸೆಪಟ್ಟು ಪೇಚಿಗೆ ಸಿಲುಕುವ ಸಾಧ್ಯತೆ. ಎಚ್ಚರವಿರಲಿ.