ಈ ರಾಶಿಯವರು ಎಚ್ಚರಿಕೆಯಿಂದ ಮುನ್ನಡೆಯುವುದು ಒಳಿತು

ಮೇಷ : ಪಾಂಡಿತ್ಯವಿರುವುದು ಪ್ರದರ್ಶನಕ್ಕಲ್ಲ. ನಿಮ್ಮ ತಪ್ಪಿನಿಂದ ಬೇರೆಯವರಿಗೆ ತೊಂದರೆ ಸಾಧ್ಯತೆ. ಎಚ್ಚರ

ವೃಷಭ : ಕೋತಿ ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿದ ಹಾಗೆ ನಿಮ್ಮ ಪರಿಸ್ಥಿತಿ.  ನಿಧಾನವಾಗಿ ಮುಂದೆ ಸಾಗಿ

ಮಿಥುನ : ಕೆಲಸದ ಒತ್ತಡ ಹೆಚ್ಚಾಗಲಿದೆ. ನಿಮ್ಮ ಸುತ್ತಲೂ ಇರುವ ದುಷ್ಟರ ಜಾಲಕ್ಕೆ ಬೀಳದಿರಿ. ಎಲ್ಲವೂ ಅಂದುಕೊಂಡಂತೆ ನಡೆಯಲಿದೆ. 

ಕಟಕ : ಭೂ ವ್ಯಾಜ್ಯಗಳು ಮತ್ತಷ್ಟು ಗಂಟಾಗಲಿವೆ. ಸಂಜೆ ವೇಳೆಗೆ ಶುಭ ಸುದ್ದಿ.  ನಿಮ್ಮ ಪಾಲಿಗೆ ಬಂದದ್ದನ್ನು ನೀವೇ ಅನುಭವಿಸಿ. 

ಸಿಂಹ : ನಿಮ್ಮ ಹೊರೆಯನ್ನು ಮತ್ತೊಬ್ಬರ ಮೇಲೆ  ಹಾಕದಿರಿ. ಉದ್ಯೋಗಿಗಳಿಗೆ ರಕೆಯಲ್ಲಿ ಮಸ್ಯೆ. 

ಕನ್ಯಾ : ನಿತ್ಯದ ಕಾರ್ಯಕ್ರಮಗಳಲ್ಲಿ ತುಸು ಬದಲಾವಣೆ ಕಂಡು ಬರಲಿದೆ. ಆತ್ಮೀಯರೊಂದಿಗೆ ಸಂಪರ್ಕ ನಿಧಾನವಾಗಿ  ಕಳೆಯಲಿದೆ

ತುಲಾ: ಹಾಸಿಗೆ ಇದ್ದಷ್ಟಕ್ಕೆ ಕಾಲು ಚಾಚುವುದು ಒಳಿತು.  ವಿನಾಕಾರಣ ಖರ್ಚು ಮಾಡುವುದು ಬೇಡ. ಓಡಾಟ ಹೆಚ್ಚಲಿದೆ. 

ವೃಶ್ಚಿಕ : ಕ್ಷಮಿಸುವ  ಗುಣವೇ ನಿಮ್ಮ ಎತ್ತರ ಹೆಚ್ಚಿಸಲಿದೆ.  ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದೇ ಬಂದದ್ದನ್ನು ಸ್ವೀಕರಿಸಿ

ಧನಸ್ಸು : ಒಂದು ದೊಡ್ಡ ಆಲೋಚನೆ ನಿಮ್ಮೊಳಗೆ ಬೆಳೆಯಲಿದೆ. ಅದಕ್ಕೆ ನೀರೆರೆದು ಮುನ್ನಡೆದರೆ ಒಳ್ಳೆಯ ಫಲ

ಮಕರ : ಆಗಿ ಹೋದ ಘಟನೆಗಳ ಬಗ್ಗೆ ಚಿಂತೆ ಮಾಡಿ ಯಾವುದೇ ಪ್ರಯೋಜನವಿಲ್ಲ. ಶಾಂತಿ ಹುಡುಕಿ ಹೋಗದಿರಿ

ಕುಂಭ :  ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಮಿತಿ ಇರಲಿ. ಮಾತು ಮನೆ ಕೆಡಿಸಲೂಬಹುದು. ಮೌನವೇ ನಿಮ್ಮ ಆಭರಣ

ಮೀನ : ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಮಾಡಿದ ತಪ್ಪಿಗೆ ಶಿಕ್ಷೆ