ಈ ರಾಶಿಯವರು ಅಂದುಕೊಂಡ ಕಾರ್ಯವೆಲ್ಲಾ ಆಗಲಿದೆ : ಉಳಿದ ರಾಶಿ 

ಮೇಷ
ಸಮಯಕ್ಕೆ ಹೊಂದಿಕೊಂಡು ನಡೆಯುವು
ದನ್ನು ಕಲಿತುಕೊಳ್ಳಿ. ಅನ್ಯರ ಬಗ್ಗೆ ಹೆಚ್ಚು ಚಿಂತೆ
ಮಾಡುವುದು ಬೇಡ. ನಿಮ್ಮ ಪಾಡಿಗೆ ನೀವಿರಿ.

ಹಣಕಾಸಿನ ಸಂಬಂಧ ಎಚ್ಚರ : ಮತ್ತೊಂದು ರಾಶಿಗೆ ಬಂಪರ್ - ವಾರ ಭವಿಷ್ಯ...

ವೃಷಭ
ಗೆಲುವು ಬೇಕು ಎಂದು ಕನಸು ಕಂಡರೆ ಅದು
ಸಿಕ್ಕುವುದಿಲ್ಲ. ಅದಕ್ಕೆ ತಕ್ಕುದಾದ ಶ್ರಮವನ್ನು
ಹಾಕಿದರೆ ಮಾತ್ರ ಜಯಶಾಲಿಯಾಗುವಿರಿ.

ಮಿಥುನ
ಆರೋಗ್ಯದಲ್ಲಿ ಕೊಂಚ ಏರುಪೇರು
ಕಂಡುಬರಲಿದೆ. ಹೆಚ್ಚು ಚಿಂತೆ ಮಾಡುವ
ಅಗತ್ಯವಿಲ್ಲ. ಎಲ್ಲವೂ ಒಳ್ಳೆಯದಾಗಲಿದೆ.

ಕಟಕ
ಕಾರಣವಿಲ್ಲದೇ ಕೋಪ ಮಾಡಿಕೊಳ್ಳುವುದು,
ಸಣ್ಣ ವಿಚಾರಗಳಿಗೂ ತಲೆ ಕೆಡಿಸಿಕೊಳ್ಳುವುದು
ಬೇಡ. ನೆಮ್ಮದಿಯಿಂದ ಮುಂದೆ ಸಾಗಿ.

ಸಿಂಹ
ನಿಮ್ಮ ಪಾಲಿಗೆ ಬಂದ ಕರ್ಮವನ್ನು ನೀವೇ
ಮಾಡಿ ಮುಗಿಸಿ. ಅದನ್ನು ಮತ್ತೊಬ್ಬರ ಮೇಲೆ
ಹಾಕಿ ಸುಮ್ಮನೆ ಕೂರುವುದು ಸರಿಯಲ

ಕನ್ಯಾ
ತಾಯಿಯ ಆರೋಗ್ಯದಲ್ಲಿ ಪ್ರಗತಿ ಕಾಣಲಿದೆ.
ಎಲ್ಲವೂ ನಿಮ್ಮ ಕೈಗೆ ಸುಲಭಕ್ಕೆ ಸಿಗಬೇಕು
ಎನ್ನುವ ಅಪೇಕ್ಷೆಯನ್ನು ಇಟ್ಟುಕೊಳ್ಳಬೇಡಿ.

ತುಲಾ

ಶ್ರಮಪಟ್ಟು ಕೆಲಸ ಮಾಡುವುದಕ್ಕೆ ಬದಲಾಗಿ
ತಾಳ್ಮೆಯಿಂದ, ಬುದ್ಧಿವಂತಿಕೆಯಿಂದ ಕೆಲಸ
ಮಾಡಿ. ಅಂದುಕೊಂಡದ್ದು ನೆರವೇರಲಿದೆ.

ವೃಶ್ಚಿಕ
ಯಾವುದೇ ವಿಚಾರದ ಬಗ್ಗೆ ಮಾತನಾಡುವ
ಮೊದಲಿಗೆ ಅದರ ಬಗ್ಗೆ ಸಂಪೂರ್ಣವಾಗಿ
ತಿಳಿದುಕೊಂಡು ಮುಂದೆ ಸಾಗಿ. ಎಚ್ಚರವಿರಲಿ. 

ಧನಸ್ಸು
ಸಂಸಾರದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು
ಬರುವುದು ಸಹಜ. ಅವುಗಳನ್ನು ಕುಳಿತು
ಮಾತನಾಡಿ ಬಗೆಹರಿಸಿಕೊಳ್ಳಿ. ಶುಭಫಲ.

ಮಕರ
ಹಣಕಾಸಿನ ಸಮಸ್ಯೆ ಕಾಡಿದರೂ ಅದಕ್ಕೆ
ಅಂಜುವುದು ಬೇಡ. ದಿಟ್ಟವಾಗಿ ಬಂದ
ಸವಾಲುಗಳನ್ನು ಎದುರಿಸಲಿದ್ದೀರಿ.

ಕುಂಭ
ನಿಮ್ಮ ಕೈಲಿ ಆಗದ ಕೆಲಸಗಳನ್ನು ಒಪ್ಪಿಕೊಂಡು
ನರಳುವುದು ಬೇಡ. ಅತಿಯಾದ ಉತ್ಸಾಹವೂ
ಒಮ್ಮೊಮ್ಮೆ ಕೈ ಕೊಡುವ ಸಾಧ್ಯತೆ ಇರುತ್ತದೆ.

ಮೀನ
ಯಾರದೋ ಮಾತುಗಳನ್ನು ಕಟ್ಟಿಕೊಂಡು
ಗೊತ್ತಿಲ್ಲದ ಸಾಹಸಕ್ಕೆ ಕೈ ಹಾಕದಿರಿ.
ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ.