ಈ ರಾಶಿಗೆ ಮಾಡಿದ ಕೆಲಸಕ್ಕೆ ಗೆಲುವಿವೊಂದಿಗೆ ಶುಭ : ಉಳಿದ ರಾಶಿ? 

ಮೇಷ
ಅಪರಿಚಿತ ಸ್ಥಳದಲ್ಲಿ ಪರಿಚಿತ ವ್ಯಕ್ತಿಯ ಭೇಟಿ
ಯಾಗಲಿದೆ. ಚಿಂತೆ ಮರೆತು ಮಾಡಬೇಕಾದ
ಕಾರ್ಯಗಳನ್ನು ಮಾಡಿ ಮುಗಿಸಿರಿ.

ವೃಷಭ
ಅಧಿಕಾರಸ್ಥರ ಮುಂದೆ ಹಲ್ಲು ಕಿರಿದು
ನಿಲ್ಲುವುದಕ್ಕೆ ಬದಲಾಗಿ ಪ್ರಾಮಾಣಿಕವಾಗಿ
ನಿಮ್ಮ ಕಾರ್ಯವನ್ನು ನೀವು ಮಾಡಿಕೊಳ್ಳಿ.

ಮಿಥುನ
ಕರ್ಮಕ್ಕೆ ಸರಿಯಾದ ಫಲವನ್ನು ಅನುಭವಿಸಿ
ಯೇ ತೀರುತ್ತೀರಿ. ನಿಮ್ಮಿಂದ ಮತ್ತೊಬ್ಬರು
ಕಣ್ಣೀರು ಹಾಕದಿರಲಿ. ಎಚ್ಚರಿಕೆ ಅಗತ್ಯ.

ಹಣಕಾಸಿನ ಸಂಬಂಧ ಎಚ್ಚರ : ಮತ್ತೊಂದು ರಾಶಿಗೆ ಬಂಪರ್ - ವಾರ ಭವಿಷ್ಯ...

ಕಟಕ
ಪ್ರಾರಂಭದಲ್ಲಿ ಇದ್ದ ಉತ್ಸಾಹವನ್ನು ಕಡೆಯ
ವರೆಗೂ ಹಾಗೆಯೇ ಉಳಿಸಿಕೊಳ್ಳಿ. ಕ್ಷಣಿಕ
ಸುಖಕ್ಕೆ ಸೋತು ಮುಂದೆ ಸಾಗಿದರೆ ಒಳಿತು.

ಸಿಂಹ
ಅಸಮರ್ಥರನ್ನು ಕಡೆಗಣಿಸಿ ನೀವು ಮುಂದೆ
ಸಾಗುತ್ತಿರಿ. ಇಲ್ಲದೇ ಇದ್ದರೆ ಅವರೂ ನಿಮ್ಮ
ಶಕ್ತಿಯನ್ನು ಕುಂದುವಂತೆ ಮಾಡಿ ಬಿಡುತ್ತಾರೆ.

ಕನ್ಯಾ
ಅಳೆತೆ ಮೀರುವುದು ಬೇಡ. ನಿಮ್ಮ ಶಕ್ತಿಯನ್ನು
ಕಡೆಗಣಿಸುವುದು ಬೇಡ. ಆದ ಎಲ್ಲಾ
ಅನಾಹುತಕ್ಕೂ ನೀವೇ ಜವಾಬ್ಧಾರರಲ್ಲ.

ತುಲಾ 
ಕೆಲಸದ ಜಾಗದಲ್ಲಿ ನೆಮ್ಮದಿಯ ವಾತಾವರಣ
ಇರಲಿದೆ. ಮನೆಯಲ್ಲಿ ಖರ್ಚು ಅಧಿಕ.
ಎಲ್ಲರೂ ಸಂತೋಷದಿಂದ ದಿನ ಕಳೆಯುವಿರಿ.

ವೃಶ್ಚಿಕ
ಧಾರ್ಮಿಕ ಆಚರಣೆಗಳಲ್ಲಿ ಇಡೀ ದಿನ
ತೊಡಗಿಕೊಳ್ಳಲಿದ್ದೀರಿ. ಮತ್ತೊಬ್ಬರ ಮೇಲೆ
ಆರೋಪ ಮಾಡುವುದು ಸರಿಯಲ್ಲ. 

ಧನುಸ್ಸು
ಸುಲಭಕ್ಕೆ ಎಲ್ಲವೂ ದಕ್ಕಬೇಕು ಎನ್ನುವ ಆಸೆ
ಬೇಡ. ಕಷ್ಟಪಟ್ಟರೆ ಮಾತ್ರ ಸೂಕ್ತವಾದ
ಪ್ರತಿಫಲ ಸಿಕ್ಕುವುದು. ಗೆಲುವು ಸಿಗಲಿದೆ.

ಮಕರ
ಧೈರ್ಯದಿಂದ ಮುಂದೆ ಸಾಗಿದರೆ ಅರ್ಧ
ಗೆಲುವು ಸಿಕ್ಕಂತೆಯೇ. ಗೌರವ ದೊರೆಯಲಿದೆ.
ಅದಕ್ಕೆ ತಕ್ಕಂತೆ ನೀವು ನಡೆದುಕೊಳ್ಳಿ.

ಕುಂಭ
ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನೀವು
ಅಂದುಕೊಂಡಂತೆ ಎಲ್ಲಾ ಕಾರ್ಯಗಳು
ಆಗುವುದಿಲ್ಲ. ಹಾಗೆಂದು ಕುಗ್ಗುವುದು ಬೇಡ.

ಮೀನ 
ದೊಡ್ಡ ಕಾರ್ಯ ಮಾಡುವಾಗ ಸಣ್ಣ ಪುಟ್ಟ
ತಪ್ಪುಗಳು ಆಗುವುದು ಸಹಜ. ಅವುಗಳನ್ನು
ಸರಿ ಮಾಡಿಕೊಂಡು ಮುಂದೆ ಸಾಗುತ್ತಿರಬೇಕು.