ಒಂದು ರಾಶಿಗೆ ಅಂದುಕೊಂಡದ್ದುಆಗಲಿದೆ : ಆದಾಯ ಹರಿಯಲಿದೆ - ಉಳಿದ ರಾಶಿ?

ಮೇಷ
ದುಡುಕು ಪ್ರವೃತ್ತಿಯಿಂದ ಅಪವಾದ ಭೀತಿ,
ಹಣದ ಹರಿವು ಹೆಚ್ಚುವುದು. ದೂರ
ಪ್ರಯಾಣ ಸಾಧ್ಯತೆ ಇದೆ. ಆದಾಯ ಹೆಚ್ಚಳ.

ವೃಷಭ
ಈ ದಿನ ಬಹಳ ಒಳ್ಳೆಯದಿದೆ. ನೆಗೆಟಿವ್
ಯೋಚನೆಗಳನ್ನೆಲ್ಲಾ ಪಕ್ಕಕ್ಕಿಟ್ಟು ಆರಾಮ
ವಾಗಿರಿ. ನೀವು ಅಂದುಕೊಂಡಿದ್ದು ಆಗಲಿದೆ.

ಮಿಥುನ
ಮನೆಗೆ ಬಂಧುಗಳು ಬಂದು ಸಂತಸ ಹೆಚ್ಚಿಸಲಿ
ದ್ದಾರೆ. ತಾಳ್ಮೆಯಿಂದ ಇರಿ. ಆರ್ಥಿಕವಾಗಿ
ಹೆಚ್ಚು ಸದೃಢವಾಗಲಿದ್ದೀರಿ. ಶುಭಫಲ.

ಕಟಕ
ಶೀತ ಬಾಧೆ ಕಾಣಿಸಬಹುದು. ಹೆಚ್ಚು ಜನರ
ಜೊತೆಗೆ ಬೆರೆಯುವಿರಿ. ಖುಷಿಯ
ಸಮಾಚಾರವೊಂದು ನಿಮಗಾಗಿ ಕಾದಿದೆ.

ಸಿಂಹ
ಕೆನ್ನೆಗೆ ಕೈ ಹಚ್ಚಿ ಕುಳಿತರೆ ಕೆಲಸವಾಗದು.
ಚುರುಕಾಗಿರಿ. ಹೊಸ ಆದಾಯದ ದಾರಿ
ತೆರೆಯುತ್ತದೆ. ಬದಲಾವಣೆಯ ಸಾಧ್ಯತೆ ಇದೆ.

ಕನ್ಯಾ
ಸೋಮಾರಿತನದಿಂದ ಆಚೆ ಬರದೇ
ಪ್ರಯೋಜನವಿಲ್ಲ. ಹೆಚ್ಚೆಚ್ಚು ಕೆಲಸ ಮಾಡಿ.
ಖಂಡಿತಾ ಫಲ ಸಿಗುತ್ತದೆ. ಗೆಲುವು ನಿಮ್ಮದೇ.

ತುಲಾ 
ನಿಮ್ಮ ಮನಸ್ಥಿತಿಯಲ್ಲಿ ವ್ಯತ್ಯಾಸವಾಗಬಹುದು.
ಹುಚ್ಚುಚ್ಚು ಯೋಚನೆಗಳು ದೂರಾಗಲಿವೆ.
ಭವಿಷ್ಯದ ಚಿಂತೆ ಬಿಟ್ಟು ನೆಮ್ಮದಿಯಾಗಿರುವಿರಿ.

ಈ ರಾಶಿಯವರಿಗೆ ಕಷ್ಟ ಮುಗಿದು ಸುಖದ ದಿನಗಳು ಬರಲಿವೆ: ವಾರ ಭವಿಷ್ಯ...

ವೃಶ್ಚಿಕ
ಒಮ್ಮೆ ಖುಷಿ, ಒಮ್ಮೆ ಸಿಟ್ಟು, ಮತ್ತೊಮ್ಮೆ
ಬೇಸರ. ಏನೇ ಆದರೂ ತಲೆ ಕೆಡಿಸಿ
ಕೊಳ್ಳಬೇಡಿ. ಖುಷಿಯಿಂದ ಇರುವಿರಿ. 

ಧನುಸ್ಸು
ನಿಮ್ಮ ಆಲೋಚನೆಗಳಿಗೆ ಹಿರಿಯರಿಂದ
ಮೆಚ್ಚುಗೆ ದೊರೆಯುತ್ತದೆ. ಸಂಗಾತಿಯ
ಜೊತೆಗೆ ಸಮರಸ ಸಾಧ್ಯವಾಗಲಿದೆ.

ದುಡ್ಡು ಯಾರಿಗೆ ಬೇಡ ಹೇಳಿ? ಲಕ್ಷ್ಮಿ ಒಲಿಸಿಕೊಳ್ಳಲು ಶ್ರೀ ಸೂಕ್ತವೆಂಬ ಶಕ್ತಿ!...

ಮಕರ
ಪ್ರೇಮಿಯಿಂದ ಶುಭ ಸಮಾಚಾರ. ಪ್ರೀತಿಯ
ಹಾದಿಗೆ ಹೊಸ ದಿಕ್ಕು ಸಿಗಲಿದೆ. ಆರೋಗ್ಯದಲ್ಲಿ
ಚೇತರಿಕೆ, ಆರ್ಥಿಕ ಚೈತನ್ಯ ಹೆಚ್ಚಲಿದೆ.

ಕುಂಭ
ತಲೆನೋವು, ಜ್ವರ ಬಾಧೆ ಬರಬಹುದು.
ವಾಹನ ಚಾಲಕರು ಹುಷಾರಾಗಿರಿ. ಬ್ಯುಸಿನೆಸ್
ನಲ್ಲಿ ಲಾಭ. ಗೆಳೆಯರಿಂದ ಸಹಾಯ ಸಿಗಲಿದೆ.

ಮೀನ 
ನಿಮ್ಮ ಮೂಗಿನ ನೇರಕ್ಕೆ ಚಿಂತಿಸೋದನ್ನು
ಬಿಡಿ. ನೀವು ಅಂದುಕೊಂಡಿದ್ದು ಶೀಘ್ರದಲ್ಲಿ
ನೆರವೇರಲಿದೆ. ಆರಾಮವಾಗಿ ಇದ್ದುಬಿಡಿ.