ಮೇಷಕ್ಕಿಂದು ಹೊಸ ಅವಕಾಶಗಳು ಲಭ್ಯ : ಬೇರೆ ರಾಶಿಗೆ ?

ಮೇಷ : ನೀವು ನಂಬಿದ ದೇವರೆ ಇಂದು ನಿಮಗೆ ಹೊಸ ಅವಕಾಶಗಳ ಬಾಗಿಲು ತೆರೆಯಲಿದ್ದಾನೆ. ಮಹಾತ್ವಾಕಾಂಕ್ಷೆ ಇರಲಿದೆ.

ವೃಷಭ : ನಿಮ್ಮ ಪಾಲಿಗೆ ಬಂದಿರುವುದು ನಿಮ್ಮದು. ಬೇರೆ ವಸ್ತುಗಳಿಗೆ ಆಸೆ ಪಡದಿರಿ.  ಅವಕಾಶ  ಹುಡುಕಿಕೊಂಡು ಬರಲಿವೆ.

ಮಿಥುನ : ನಿಮ್ಮ ಮೇಲೆ ಇರುವ ಜವಾಬ್ದಾರಿ ಮುಗಿಸಲಿದ್ದೀರಿ. ಇಡೀ ದಿನ ನೆಮ್ಮದಿ ಇಂದ ಕಳೆಯಲಿದ್ದೀರಿ.

ಕಟಕ : ಬೆಳಿಗ್ಗೆಯಿಂದ ಒತ್ತಡದ ಕೆಲಸ. ನಿಮ್ಮಲ್ಲಿನ ಶ್ರದ್ಧೆಯಿಂದ ಒಳ್ಳೆಯ ಫಲ

ಸಿಂಹ : ಸುಖಾ ಸುಮ್ಮನೆ ಕೋಪ ಮಾಡಿಕೊಳ್ಳುವುದು ಬೇಡ, ಸಹೋದ್ಯೋಗಿಗಳ ತಪ್ಪುಗಳನ್ನು ಮನ್ನಿಸಿ

ಕನ್ಯಾ : ಪ್ರತಿಫಲ ಬಯಸದೇ ನಿಮ್ಮ ಕಾಯಕ ನೀವು ಮಾಡಿ, ಐಟಿ ಉದ್ಯೋಗಿಗಳಿಗೆ ಒಳ್ಳೆ ಸುದ್ದಿ ಕಾದಿದೆ. 

ತುಲಾ : ಜೊತೆಯಲ್ಲೇ ಇರುವ ಸ್ನೇಹಿತರಿಗೆ ನಿಮ್ಮ ಮಾತಿನಿಂದ ನೋವಾಗಲಿದೆ. ಹೊಸ ವಸ್ತುಗಳನ್ನು ಕೊಳ್ಳುವಿರಿ, ಅತಿ ಆಸೆ ಬೇಡ

ವೃಶ್ಚಿಕ : ಬೆನ್ನ ಹಿಂದೆ ನಿಂತು ಆರೋಪ ಮಾಡವವರ ಬಗ್ಗೆ ಗಮನ ನೀಡದಿರಿ.  ಯಾರು ಹೇಗೆ ಎಂದು ಇಂದು ನಿಮಗೆ ಅರಿವಾಗಲಿದೆ. 

ಧನಸ್ಸು : ತಾವೇ ದೊಡ್ಡವರು ಎಂದುಕೊಳ್ಳುವವರಿಂದ ಅಂತರ ಕಾಯ್ದುಕೊಳ್ಳಿ, ನಿಮ್ಮ ಮಾತುಗಳಿಂದ ಮತ್ತೊಬ್ಬರಿಗೆ  ನೋವಾಗದಿರಲಿ.ಶುಭ ಫಲ

ಮಕರ : ಎಲ್ಲರೊಂದಿಗೆ ಪ್ರೀತಿಯಿಂದ ವರ್ತಿಸಿ, ಇಡೀ ದಿನ ತಮಾಷೆಯಲ್ಲೇ ಕಳೆದು ಹೋಗುತ್ತದೆ.

ಕುಂಭ : ಬೆಳಿಗ್ಗೆಯೇ ಶುಭ ಸುದ್ದಿ ತಿಳಿಯಲಿದೆ.  ಹಣ ಕಾಸಿನ ವ್ಯವಹಾರಗಳಿಕೈಗೂಡಲಿವೆ. ದೊಡ್ಡವರ ಸಲಹೆ ಪಡೆದು ಮುನ್ನಡೆಯಿರಿ

ಮೀನ : ಬೆಳ್ಳಗೆ ಇರುವುದೆಲ್ಲವೂ ಹಾಲಲ್ಲ. ಇತರರ ಬಗ್ಗೆ ಚಿಂತೆ ಮಾಡದೇ ನಿಮ್ಮ ಕಾರ್ಯ ನೀವು ಮಾಡಿ