Asianet Suvarna News Asianet Suvarna News

ಈ ರಾಶಿಗೆ ಅತ್ಯಂತ ಶುಭ ದಿನ : ಉಳಿದ ರಾಶಿ?

ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ ? 

Daily Bhavishya 13 August 2019
Author
Bengaluru, First Published Aug 13, 2019, 7:08 AM IST
  • Facebook
  • Twitter
  • Whatsapp

ಈ ರಾಶಿಗೆ ಅತ್ಯಂತ ಶುಭ ದಿನ : ಉಳಿದ ರಾಶಿ? 

ಮೇಷ
ಕಾಡುವ ಕಹಿ ನೆನಪುಗಳನ್ನು ಸುಟ್ಟು ಹಾಕಿ
ಹೊಸ ದಾರಿಯತ್ತ ನಡೆಯಲಿದ್ದೀರಿ.
ಎಲ್ಲರಿಂದಲೂ ಮೆಚ್ಚುಗೆ ದೊರೆಯಲಿದೆ.

ವೃಷಭ
ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಅಧಿಕಾರಸ್ಥರಿಗೆ ಶುಭವಾಗಲಿದೆ. ಬೀಸುವ
ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿ.

ಮಿಥುನ
ಕಷ್ಟ ಎಂದು ಹಿಡಿದ ಕೆಲಸವನ್ನು ಬಿಟ್ಟು ಹೊರ
ನಡೆಯುವ ಸ್ವಭಾವ ನಿಮ್ಮದಲ್ಲ.
ಸಾಧ್ಯವಾದರೆ ಒಳ್ಳೆಯದನ್ನು ಹಂಚುತ್ತಿರಿ.

ಕಟಕ
ಹಿಂದೆ ನಿಮ್ಮನ್ನು ಅಣಕ ಮಾಡಿದ್ದವರೇ ಇಂದು
ನಿಮ್ಮ ಸಾಧನೆಗೆ ಚಪ್ಪಾಳೆ ಹೊಡೆಯಲಿದ್ದಾರೆ.
ಮನೆಯಲ್ಲಿ ಸಂತೋಷದ ವಾತಾವರಣ.

ಸಿಂಹ
ಬಾಳ ಸಂಗಾತಿಯ ಆಯ್ಕೆಯಲ್ಲಿ ಎಚ್ಚರ
ವಹಿಸಿ. ಯಾರದ್ದೋ ಬಲವಂತಕ್ಕೆ ನಿಮ್ಮ
ಜೀವನ ಬಲಿಯಾಗದಿರಲಿ. ಶುಭ ಫಲ. 

ಕನ್ಯಾ
ಹೇಳುವುದಕ್ಕಿಂತ ಮಾಡುವುದು ಉತ್ತಮ.
ಸ್ವಂತ ಬಲದ ಮೇಲೆ ಉತ್ತುಂಗಕ್ಕೆ ಏರಲಿದ್ದೀರಿ.
ಸಮಾಧಾನದಿಂದ ಕೆಲಸ ಮಾಡಿ ಮುಗಿಸಿ.

ತುಲಾ 
ಹಿರಿಯರು ಹೇಳಿದ ಬುದ್ಧಿ ಮಾತುಗಳನ್ನು
ಕೇಳಿ, ಅದರಂತೆ ನಡೆಯಿರಿ. ಕೆಲಸದ ಸ್ಥಳದಲ್ಲಿ
ಸ್ವಲ್ಪ ಕಿರಿಕಿರಿ ಇದ್ದದ್ದೇ. ಗೆಲುವು ನಿಮ್ಮದೇ.

ವೃಶ್ಚಿಕ
ನಿಗದಿಪಡಿಸಿಕೊಂಡ ಗುರಿಯನ್ನು ಇಂದು
ತಲುಪಲಿದ್ದೀರಿ. ಆತ್ಮೀಯರ ಅಗಲಿಕೆಯಿಂದ
ನೋವು ಸಹಜ. ಧರ್ಮ ಮಾರ್ಗದಲ್ಲಿ ಸಾಗಿ. 

ಧನುಸ್ಸು
ಮನಸ್ಸು ಏಕತಾನತೆಯಿಂದ ಹೊರಬರಲಿದೆ.
ಹೊಸ ಜಾಗ, ಹೊಸ ಜನರ ಪರಿಚಯ
ವಾಗಲಿದೆ. ಇಡೀ ದಿನ ಖುಷಿಯಿಂದಿರುವಿರಿ.

ಮಕರ
ಸಂಜೆ ವೇಳೆಗೆ ಶುಭ ಸುದ್ದಿಯನ್ನು
ಕೇಳಲಿದ್ದೀರಿ. ದೂರದ ಪ್ರಯಾಣವನ್ನು
ಸದ್ಯಕ್ಕೆ ಮೊಟಕುಗೊಳಿಸುವುದು ಒಳ್ಳೆಯದು.

ಕುಂಭ
ಹೆಚ್ಚು ಲಾಭದ ಆಸೆಗೆ ಬಿದ್ದು ಕೈ ಸುಟ್ಟು
ಕೊಳ್ಳುವ ಸಾಧ್ಯತೆ ಇದೆ. ಇರುವುದರಲ್ಲಿಯೇ
ತೃಪ್ತಿ ಕಾಣಿ. ಶ್ರಮಕ್ಕೆ ತಕ್ಕ ಪ್ರತಿಫಲವಿದೆ.

ಮೀನ 
ಸಹೋದರರ ನಡುವೆ ಸಣ್ಣ ಮನಸ್ತಾಪ
ಉಂಟಾಗಲಿದೆ. ತಂದೆಯ ಆರೋಗ್ಯದಲ್ಲಿ
ಚೇತರಿಕೆ. ಅಂದುಕೊಂಡದ್ದು ಆಗಲಿದೆ.

Follow Us:
Download App:
  • android
  • ios