ಕಟಕ ರಾಶಿಯವರಿಂದು ಕಠಿಣ ಹಾದಿ ದಾಟಬೇಕು : ಉಳಿದ ರಾಶಿ ?

ಮೇಷ
ತುಂಬಾ ಹಿಂದಿನಿಂದ ಅಂದುಕೊಂಡಿದ್ದ
ಕಾರ್ಯಗಳು ಇಂದು ನೆರವೇರಲಿವೆ. ಆತ್ಮೀ
ಯರು ಇಂದು ನಿಮ್ಮಿಂದ ದೂರಾಗಲಿದ್ದಾರೆ.

ವೃಷಭ
ಹೆಚ್ಚು ಇಷ್ಟಪಟ್ಟಿದ್ದ ವಸ್ತು ಇಂದು ಕೈ
ಸೇರಲಿದೆ. ಮತ್ತೊಬ್ಬರ ಮೇಲಿನ ಭಯಕ್ಕೆ ಸತ್ಯ
ಮುಚ್ಚಿಡುವುದು ಬೇಡ. ಧೈರ್ಯ ಹೆಚ್ಚಲಿದೆ.

ಮಿಥುನ
ಮಾಡಿದ್ದುಣ್ಣೋ ಮಹರಾಯ ಎನ್ನುವಂತೆ
ನೀವು ಮಾಡಿದ ಪುಣ್ಯಕ್ಕೆ ಇಂದು ಪ್ರತಿಫಲ
ದೊರೆಯಲಿದೆ. ಸ್ನೇಹಿತರಿಂದ ಸಹಾಯ.

ಕಟಕ
ಗುಣಕೆ ಮತ್ಸರ ಉಂಟೆ ಎನ್ನುವ ಹಾಗೆ
ಮತ್ತೊಬ್ಬರ ಗುಣವನ್ನು ಮನಸಾರೆ
ಮೆಚ್ಚಿಕೊಳ್ಳಲಿದ್ದೀರಿ. ಸಾಧನೆ ಹಾದಿ ಕಠಿಣ.

ಸಿಂಹ
ವಿನಾಕಾರಣ ಕಾಲು ಕೆರೆದುಕೊಂಡು ಜಗಳಕ್ಕೆ
ಹೋಗುವುದು ಬೇಡ. ಜಾತ್ರೆಯಲ್ಲಿ
ತಪ್ಪಿಸಿಕೊಂಡ ಮಗುವಿನಂತಾಗುವಿರಿ ಇಂದು.

ಕನ್ಯಾ
ಉತ್ಸಾಹ ಹೆಚ್ಚಲಿದೆ. ಅದೇ ಕಾರಣದಿಂದ
ಕೆಲವು ಲೋಪಗಳೂ ನಿಮ್ಮಿಂದ ಆಗಲಿವೆ.
ಯಾವುದಕ್ಕೂ ಹೆದರದೇ ಮುಂದೆ ಸಾಗಿ.

ತುಲಾ 
ಬೈದವರನ್ನು ಬಂಧುಗಳು ಎಂದುಕೊಂಡು
ಮುಂದೆ ಸಾಗಿ. ನಿಮ್ಮ ಶಕ್ತಿಯ ಅರಿವು ಇಂದು
ನಿಮಗಾಗಲಿದೆ. ವಸ್ತುವಿನ ಮೋಹ ಬೇಡ.

ವೃಶ್ಚಿಕ
ರಾಜಕೀಯ ಚಟುವಟಿಕೆಯಲ್ಲಿ ಇಡೀ ದಿನ
ಪಾಲ್ಗೊಳ್ಳುವಿರಿ. ಬೇಡದ ವಿಚಾರಕ್ಕೆ ತಲೆ
ಕೆಡಿಸಿಕೊಳ್ಳುವುದು ಬೇಡ. ಶುಭ ಫಲವಿದೆ.

ಧನುಸ್ಸು
ಸಂಜೆ ವೇಳೆಗೆ ಎಲ್ಲಾ ಒತ್ತಡಗಳೂ ನಿವಾರಣೆ
ಯಾಗಿ ನೆಮ್ಮದಿಯಾಗಲಿದ್ದೀರಿ. ಯಾರನ್ನೂ
ದ್ವೇಷಿಸುತ್ತಿದ್ದಿರೋ ಅವರೇ ಹತ್ತಿರವಾಗಲಿದ್ದಾರೆ.

ಮಕರ
ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ.
ಹಣಕಾಸಿನ ವಿಚಾರದಲ್ಲಿ ಹೆಚ್ಚು ಹಿಡಿತ
ಸಾಧಿಸುವಿರಿ. ಕಚೇರಿ ಕಾರ್ಯಗಳು ಆಗಲಿವೆ.

ಕುಂಭ
ಆತ್ಮೀಯರೊಂದಿಗೆ ಇಡೀ ದಿನ ಕಳೆಯಲಿ
ದ್ದೀರಿ. ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯ ಅಲ್ಲ. ಸುಳ್ಳು
ಮಾಹಿತಿಯಿಂದ ಮೋಸವಾಗಬಹುದು.

ಮೀನ 
ನೀವು ಮೋಸ ಹೋಗುವವರೆಗೂ ಮೋಸ
ಮಾಡುವವರು ಇದ್ದೇ ಇರುತ್ತಾರೆ. ಪತಿಯ
ಆರೋಗ್ಯದಲ್ಲಿ ಸ್ಥಿರತೆ ಕಂಡು ಬರಲಿದೆ.