ಸಂಪೂರ್ಣ ನೆಮ್ಮದಿ ನೆಲೆಸಿ ಶುಭವೊಂದು ಎದುರಾಗಲಿದೆ : ಉಳಿದ ರಾಶಿ ? 

ಮೇಷ
ನಾಳಿನ ಚಿಂತೆಯನ್ನು ಬಿಟ್ಟು, ಇಂದಿಗೆ ಏನು
ಬೇಕು ಎನ್ನುವುದನ್ನು ಅರಿತುಕೊಂಡು
ಮುಂದೆ ಸಾಗಿ. ನೆಮ್ಮದಿ ಹೆಚ್ಚಾಗಲಿದೆ.

ವೃಷಭ
ಮಾತನಾಡಿಕೊಂಡೇ ಇದ್ದರೆ ಕೆಲಸ ಮಾಡಲು
ಸಮಯ ಸಾಕಾಗುವುದಿಲ್ಲ. ಮಾತಿಗಿಂತ
ಮಾಡುವ ಕೆಲಸವೇ ಫಲ ನೀಡುವುದು.

ಮಿಥುನ
ಇಡೀ ದಿನ ನೆಮ್ಮದಿಯಿಂದ ಇರಲಿದ್ದೀರಿ.
ಬಂಧುಗಳು ಇಂದು ಮನೆಗೆ ಭೇಟಿ
ನೀಡಲಿದ್ದಾರೆ. ಗೆಲುವು ನಿಮ್ಮದಾಗಲಿದೆ.

ಈ ರಾಶಿಯವರಿಗೆ ಕಷ್ಟ ಮುಗಿದು ಸುಖದ ದಿನಗಳು ಬರಲಿವೆ: ವಾರ ಭವಿಷ್ಯ... 

ಕಟಕ
ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ನಿಮ್ಮ
ಆತ್ಮ ವಂಚನೆ ಮಾಡಿಕೊಳ್ಳದ ರೀತಿಯಲ್ಲಿ
ಕೊಟ್ಟ ಕಾರ್ಯಗಳನ್ನು ಮಾಡಿ ಮುಗಿಸಿ.

ಸಿಂಹ
ಹಬ್ಬದ ಸಂಭ್ರಮ ಮನೆ, ಮನಗಳಲ್ಲಿ
ನೆಲೆಯಾಗಲಿದೆ. ಎಲ್ಲದಕ್ಕೂ ಕಾರಣ
ಹುಡುಕುತ್ತಾ ಕೂರುವುದು ಬೇಡ.

ಕನ್ಯಾ
ನಿಮ್ಮದಲ್ಲದ ಜವಾಬ್ದಾರಿಗಳು ಇಂದು ನಿಮ್ಮ
ಹೆಗಲೇರಲಿವೆ. ಆಗುವುದೆಲ್ಲವೂ ಒಳ್ಳೆಯದಕ್ಕೆ
ಎಂದುಕೊಂಡು ಮುಂದೆ ಸಾಗಿ. ಶುಭ ಫಲ.

ತುಲಾ 
ನಡೆಯುವ ದಾರಿಯಲ್ಲಿ ಕಲ್ಲು ಮುಳ್ಳು
ಇರುವುದು ಸಹಜ. ಅದನ್ನು ಸರಿಸಿ ಮುಂದೆ
ಸಾಗುವುದನ್ನು ಕಲಿಯಬೇಕು. ಧೈರ್ಯವಿರಲಿ.

ವೃಶ್ಚಿಕ
ಹಣಕಾಸಿನ ತೊಂದರೆಯಾದರೂ ಅದು ಸಂಜೆ
ವೇಳೆಗೆ ಇಲ್ಲವಾಗುವುದು. ಸಮಯಕ್ಕೆ
ಸರಿಯಾಗಿ ಅಂದುಕೊಂಡ ಕಾರ್ಯ ಮಾಡಿ. 

ಧನುಸ್ಸು
ಬದುಕು ತುಂಬಾ ಪಾಠಗಳನ್ನು ಕಲಿಸುತ್ತದೆ.
ನೀವು ಒಮ್ಮೆ ಕಲಿತ ಪಾಠವನ್ನು ನೆನಪಿನಲ್ಲಿ
ಇಟ್ಟುಕೊಂಡು ಸಾಗಿದರೆ ಒಳಿತಾಗಲಿದೆ.

ಮಕರ
ತಪ್ಪು ನಿಮ್ಮದಿದ್ದಾಗ ಅದನ್ನು ಒಪ್ಪಿಕೊಂಡು
ಸುಮ್ಮನೆ ಇದ್ದು ಬಿಡಿ. ವಾದ ಮಾಡುವು
ದರಿಂದ ಏನೂ ಪ್ರಯೋಜನವಾಗುವುದಿಲ್ಲ.

ಕುಂಭ
ಧನಾಗಮನವಾಗಲಿದೆ. ತಾಯಿಯ
ಆರೋಗ್ಯದಲ್ಲಿ ಚೇತರಿಕೆ. ಖರ್ಚು ಕಡಿಮೆ
ಮಾಡಿ, ಹೊಸ ಚಿಂತನೆಗಳು ಹುಟ್ಟಲಿವೆ.

ಮೀನ 
ಸಂಬಂಧಗಳ ಅರ್ಥ ತಿಳಿದುಕೊಳ್ಳಿ. ಯಾರಿಗೂ
ನಿಮ್ಮಿಂದ ನೋವಾಗದಂತೆ ಎಚ್ಚರ ವಹಿಸಿ.
ದೂರದ ಪ್ರಯಾಣ ಮಾಡಬೇಕಾದೀತು.