ಈ ರಾಶಿಗೆ ಒಳ್ಳೆಯ ಲಾಭ ಬರುವ ದಿನವಿದು : ಶುಭಫಲವೂ ಲಭ್ಯ

ಮೇಷ
ಕೆಲಸಕ್ಕೆ ಬಾರದ ಮಾತುಗಳಿಗೆ ತಲೆ
ಕೆಡಿಸಿಕೊಳ್ಳುತ್ತಾ ಕೂರದಿರಿ. ನಿಮ್ಮಿಂದ
ಆಗಬೇಕಾದರ ಕಾರ್ಯಗಳು ತುಂಬಾ ಇವೆ.

ವೃಷಭ
ಹೆಚ್ಚು ಉತ್ಸಾಹದಿಂದ ಕೆಲಸ ಕಾರ್ಯಗಳಲ್ಲಿ
ತೊಡಗಿಕೊಳ್ಳಲಿದ್ದೀರಿ. ಚಿಕ್ಕ ನೋವನ್ನೇ
ದೊಡ್ಡದು ಎಂದು ಬಿಂಬಿಸಿಕೊಳ್ಳುವುದು ಬೇಡ.

ಮಿಥುನ
ಇಂದು ನಿಮ್ಮಂದ ಸಾಧ್ಯವಾದರೆ ಮತ್ತೊಬ್ಬರಿಗೆ
ಸಹಾಯ ಮಾಡಿ. ಇಲ್ಲದೇ ಇದ್ದರೆ ಸುಮ್ಮನೆ
ಇದ್ದು ಬಿಡುವುದು ಒಳ್ಳೆಯದು.

ಕಟಕ
ಆಸ್ತಿಯ ವಿಚಾರಕ್ಕಾಗಿ ಸಹೋದರರ ನಡುವೆ
ವಿರಸ ಉಂಟಾಗಲಿದೆ. ಎಲ್ಲವೂ ನೀವು
ಅಂದುಕೊಂಡಂತೆಯೇ ಆಗದು. ಎಚ್ಚರ ಇರಲಿ.

ಸಿಂಹ
ಕೃಷಿ ಚಟುವಟಿಕೆಯಲ್ಲಿ ಇಡೀ ದಿನ
ಕಳೆಯಲಿದ್ದೀರಿ. ವ್ಯಾಪಾರಸ್ಥರಿಗೆ ಒಳ್ಳೆಯ
ಲಾಭ ಬರುವ ದಿನವಿದು. ಶುಭ ಫಲ ಲಭ್ಯ

ಕನ್ಯಾ
ನೀವು ಮಾಡಿದ ಕರ್ಮದ ಫಲವನ್ನು ನೀವೇ
ಅನುಭವಿಸಬೇಕು. ಸಣ್ಣ ವಿಚಾರಗಳಿಗೂ ತಲೆ
ಕೆಡಿಸಿಕೊಳ್ಳುವುದು ಬೇಡ. ಧೈರ್ಯ ಹೆಚ್ಚಲಿದೆ.

ತುಲಾ 
ನೀವು ಕಷ್ಟ ಪಟ್ಟು ಸಂಪಾದನೆ ಮಾಡಿದ ಹಣ
ಇಂದು ಒಳ್ಳೆಯ ಕಾರ್ಯಕ್ಕೆ ವಿನಿಯೋಗ
ವಾಗಲಿದೆ. ಹೆಚ್ಚು ಆಸೆ ಇಟ್ಟುಕೊಳ್ಳದಿರಿ.

ವೃಶ್ಚಿಕ
ಇಡೀ ದಿನ ಮನೆಯಲ್ಲೇ ಇದ್ದು ವಿಶ್ರಾಂತಿ
ಪಡೆಯಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ
ಕಂಡು ಬರಲಿದೆ. ಮಕ್ಕಳಿಂದ ಸಹಾಯ. 

ಧನುಸ್ಸು
ನಂಬಿಕೆ ದ್ರೋಹಿಗಳಿಂದ ಅಂತರ ಕಾಯ್ದು
ಕೊಳ್ಳಿ. ದೂರದ ಪ್ರಯಾಣ ರದ್ದಾಗುವ
ಸಾಧ್ಯತೆ ಇದೆ. ಪರ ನಿಂದನೆ ಬೇಡವೇ ಬೇಡ.

ಮಕರ
ಮತ್ತೊಬ್ಬರ ಮುಂದೆ ಸಹಾಯಕ್ಕಾಗಿ ಕೈ
ಚಾಚಬೇಕಾದ ಅನಿವಾರ್ಯತೆ ಉಂಟಾಗ
ಲಿದೆ. ಬಣ್ಣದ ಮಾತುಗಳಿಗೆ ಮರುಳಾಗದಿರಿ.

ಕುಂಭ
ಯಾರಿಗೂ ನೋವು ಮಾಡುವುದಕ್ಕೆ
ಹೋಗದಿರಿ. ನಿಮ್ಮ ಪಾಲಿಗೆ ಬಂದ ಕಾರ್ಯ
ಗಳನ್ನು ಮನಸಾರೆ ಮಾಡಿ ಮುಗಿಸಿ.

ಮೀನ 
ಪಡೆದ ಸಹಾಯಕ್ಕೆ ಬದಲಿಯಾಗಿ ನೀವು
ಇಂದು ಸಹಾಯ ಮಾಡಬೇಕಾಗುತ್ತದೆ.
ತಂದೆಯ ಆರೋಗ್ಯದಲ್ಲಿ ತುಸು ವ್ಯತ್ಯಾಸ.