ಮಿಥುನ ರಾಶಿಗೆ ಇಂದು ವಿಶೇಷ ದಿನ : ಉಳಿದ ರಾಶಿ?

ಮೇಷ
ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಇಂದು
ಮನಸ್ತಾಪ ಉಂಟಾಗಲಿದೆ. ಸೂಕ್ಷ್ಮ ವಿಚಾರ
ಗಳ ಬಗ್ಗೆ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿ.

ವೃಷಭ
ನೀವು ಮಾಡುವ ಎಲ್ಲಾ ಕೆಲಸಗಳೂ
ಸರಿಯಾಗಬೇಕು ಎಂದೇನು ಇಲ್ಲ. ಕೆಲವು
ಅಡೆತಡೆಗಳು ಆಗುತ್ತವೆ. ಸಂಜೆಗೆ ಶುಭ ಫಲ.

ಮಿಥುನ
ನಿಮ್ಮ ಉತ್ಸಾಹಕ್ಕೆ ತಕ್ಕಂತೆ ನಿಮ್ಮ
ಸಹೋದ್ಯೋಗಿಗಳು ಬೆಂಬಲ ನೀಡುವುದಿಲ್ಲ.
ಸ್ನೇಹಿತರ ಏಳಿಗೆ ನಿಮ್ಮಲ್ಲಿ ಸ್ಫೂರ್ತಿ ತುಂಬಲಿದೆ.

ಕಟಕ
ದೊಡ್ಡ ಪಟ್ಟಿ ರೆಡಿ ಮಾಡಿಕೊಂಡು ಹೊರಟ
ಕೆಲಸ ಅರ್ಧದಲ್ಲಿಯೇ ನಿಲ್ಲಲಿದೆ. ಸ್ವಂತ
ಬಲದ ಮೇಲೆ ಹೊಸ ಕೆಲಸ ಹಿಡಿಯಲಿದ್ದೀರಿ.

ಸಿಂಹ
ಯಾವುದೇ ತೊಂದರೆ ಇಲ್ಲದೇ ನೀವು
ಮಾಡುವ ಕೆಲಸ ಸಮಯಕ್ಕೆ ಸರಿಯಾಗಿ
ಮುಗಿಯಲಿದೆ. ಎಲ್ಲವೂ ಒಳಿತಾಗಲಿದೆ.

ಕನ್ಯಾ
ಸಣ್ಣ ಸಣ್ಣ ವಿಚಾರಕ್ಕೂ ಕಿರಿ ಕಿರಿ ಹೆಚ್ಚಾಗಲಿದೆ.
ಹಣಕಾಸಿನ ವಿಚಾರದಲ್ಲಿ ಏರಿಕೆ ಕಾಣಲಿದ್ದೀರಿ.
ವ್ಯಾಪಾರದಲ್ಲಿ ಹೆಚ್ಚು ಲಾಭ ನಿಮ್ಮದಾಗಲಿದೆ.

ತುಲಾ 
ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬಗ್ಗೆ
ನಿಗಾ ಇರಲಿ. ಯಾರನ್ನೂ ಸುಲಭಕ್ಕೆ
ನಂಬುವುದು ಬೇಡ. ಒತ್ತಡ ಹೆಚ್ಚಾಗಲಿದೆ.

ವೃಶ್ಚಿಕ
ಮತ್ತೊಬ್ಬರ ಬಗ್ಗೆ ವಿಮರ್ಶೆ ಮಾಡುವ
ಮೊದಲು ಪೂರ್ಣ ಸಂಗತಿಯನ್ನು ತಿಳಿದು
ಕೊಂಡಿರಿ. ಸ್ನೇಹಿತರಿಗೆ ಸಹಾಯ ಮಾಡುವಿರಿ. 

ಧನುಸ್ಸು
ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಒಳಿತು.
ನಿಮ್ಮ ಬಗ್ಗೆ ಕೆಟ್ಟದಾಗಿ ಟೀಕೆ ಮಾಡುವವರಿಗೆ
ನಿಮ್ಮ ಕೆಲಸದ ಮೂಲಕ ಉತ್ತರ ನೀಡಿ.

ಮಕರ
ಎಲ್ಲರ ಮೇಲೂ ಅನುಮಾನ ಪಡುವುದು
ಒಳಿತಲ್ಲ. ಬಂಧುಗಳೆಲ್ಲಾ ಒಂದೆಡೆ
ಸೇರಲಿದ್ದೀರಿ. ಖ್ಯಾತಿ ಹೆಚ್ಚಾಗಲಿದೆ.

ಕುಂಭ
ನಿಗದಿತ ಕಾರ್ಯಕ್ರಮಗಳು ಎಂದಿನಂತೆ
ಸಾಗಲಿವೆ. ಗಾಳಿ ಮಾತುಗಳಿಗೆ ಕಿವಿ
ಕೊಡುವುದು ಬೇಡ. ಮಾತು ಕಡಿಮೆ ಮಾಡಿ.

ಮೀನ 
ಮೂರನೇ ವ್ಯಕ್ತಿಯ ಮಾತಿಗೆ ತಲೆ
ಕೆಡಿಸಿಕೊಂಡು ಕೂರುವುದು ಬೇಡ. ಕೆಲಸದ
ಒತ್ತಡ ಹೆಚ್ಚಾಗಲಿದೆ. ಆದಾಯದಲ್ಲಿ ಏರಿಕೆ.