ಮೇಷ: ಗುಟ್ಟುಗಳನ್ನು ಕಾಪಾಡಿಕೊಳ್ಳಿ. ಸಂಸಾರದಲ್ಲಿ ಸಣ್ಣ ಪುಟ್ಟ ಗೊಂದಲ ಸಹಜ. ಎಲ್ಲವನ್ನೂ ಸರಿಯಾಗಿ ನಿಭಾಯಿಸಿಕೊಂಡು ಹೋಗಿ.

ವೃಷಭ: ವ್ಯಕ್ತಿಗಳೊಂದಿಗೆ ಸ್ನೇಹ ಮಾಡುವಾಗ ಸರಿಯಾಗಿ ಅಳೆದು ತೂಗಿ ನಿರ್ಧಾರ ಮಾಡಿ. ಇಡೀ ದಿನ ಕೆಲಸದಲ್ಲಿ ನಿರತರಾಗಲಿದ್ದೀರಿ.

ಮಿಥುನ: ಅತಿ ಅವಸರ ಬೇಡ. ವಾಹನ ಚಾಲನೆ ಮಾಡುವಾಗ ಎಚ್ಚರ ಇರಲಿ. ನಿಮಗೆ ಗೊತ್ತಿಲ್ಲದೇ ಇದ್ದ ವಿಚಾರಗಳು ಇಂದು ತಿಳಿಯಲಿವೆ.

ಕಟಕ: ಹೊಸ ಸ್ನೇಹ ಬೆಳೆಯಲಿದೆ. ಹಳೆ ಸ್ನೇಹಕ್ಕೂ ಬೆಲೆ ಕೊಡುವುದನ್ನು ಮರೆಯಬೇಡಿ. ಹಣಕಾಸಿನ ವಿಚಾರದಲ್ಲಿ ಹಿಡಿತ ಸಾಧಿಸಿ.

ಸಿಂಹ: ಮತ್ತ್ಯಾರದ್ದೋ ಕೈಗೊಂಬೆ ರೀತಿ ವರ್ತಿಸಬೇಕಾದ ಸಂದರ್ಭ ಬರಲಿದೆ. ಸತ್ಯವಾದ ದಾರಿಯಲ್ಲಿ ನಿಮ್ಮ ನಡೆ ಇರಲಿ.

ಕನ್ಯಾ: ವ್ಯವಹಾರದಲ್ಲಿ ಲಾಭ ಸಿಗಲಿದೆ. ಎಲ್ಲವೂ ನೀವು ಅಂದುಕೊಂಡಂತೆಯೇ ನಡೆಯಲಿದ್ದು, ಮನೆಯಲ್ಲಿ ಸಂತಸ ನೆಲೆಗೊಳ್ಳಲಿದೆ.

ಈ ರಾಶಿಯವರಿಗೆ ಕಷ್ಟ ಮುಗಿದು ಸುಖದ ದಿನಗಳು ಬರಲಿವೆ: ವಾರ ಭವಿಷ್ಯ

ತುಲಾ: ಹೊಸ ವಸ್ತುಗಳನ್ನು ಕೊಂಡುಕೊಳ್ಳುವ ಸಾಧ್ಯತೆ ಇದೆ. ಮತ್ತೊಬ್ಬರ ಕಷ್ಟಗಳಿಗೆ ನೀವು ಕಣ್ಣೀರು ಹಾಕುವುದರಲ್ಲಿ ಅರ್ಥವಿಲ್ಲ. 

ವೃಶ್ಚಿಕ: ನೊಂದವರಿಗೆ ದನಿಯಾಗಿ ನಿಲ್ಲಲಿದ್ದೀರಿ. ಯಾವುದಕ್ಕೂ ಅಂಜದೇ ಮುಂದೆ ಸಾಗುತ್ತಿರಿ. ದೊಡ್ಡ ಯಶಸ್ಸಿನತ್ತ ಕಾಲಿಡಲಿದ್ದೀರಿ.

ಧನಸ್ಸು: ಕೋಪ ಅತಿಯಾದರೆ ಅದರಿಂದ ಅನಾಹುತವೇ ಹೆಚ್ಚು. ಗಡಿಬಿಡಿಯಲ್ಲಿ ಯಾವುದೇ ಕೆಲಸವನ್ನು ಮಾಡಬೇಡಿ. ತಾಳ್ಮೆ ಇರಲಿ.

ಮಕರ: ನಿಮ್ಮ ಗುಣಕ್ಕೆ ಹೊಂದುವಂತಹ ಕೆಲಸವೇ ಇಂದು ದೊರೆಯಲಿದೆ. ಸಹಾಯ ಮಾಡಿದವರಿಗೆ ಕೃತಜ್ಞತೆಯಿಂದ ನಡೆದುಕೊಳ್ಳಿ.

ಕುಂಭ: ನಿಮ್ಮಿಂದ ಮತ್ತೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಒಳ್ಳೆಯ ಗುಣಕ್ಕೆ ಬೆಲೆ ಇದ್ದೇ ಇರುತ್ತದೆ. ನೆಮ್ಮದಿಯಾಗಿ ಇರಲಿದ್ದೀರಿ.

ಮೀನ: ಸೂಕ್ತ ಸಂದರ್ಭ ನೋಡಿಕೊಂಡು ಒಳ್ಳೆಯ ಕಾರ್ಯ ಮಾಡಲು ಮುಂದಾಗಿ. ನಿಮ್ಮ ಗೆಲುವು ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿದೆ.