ಈ ರಾಶಿಗೆ ಬಹುದಿನ ಆಸೆ ಈಡೇರಲಿದೆ 

ಮೇಷ
ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು
ಮುಂದೆ ಸಾಗಿ. ಒಳ್ಳೆಯದರ ಕಡೆಗೆ ಹೆಚ್ಚು
ಗಮನ ನೀಡಲಿದ್ದೀರಿ. ಶುಭ ಫಲ.

ವೃಷಭ
ಬಹಳ ಕಾಲದಿಂದ ಜೊತೆಯಲ್ಲಿ ಬರುತ್ತಿದ್ದ
ಗೆಳೆಯ ಇಂದು ದೂರವಾಗಲಿದ್ದಾನೆ. ಸೂಕ್ಷ್ಮ
ವಿಚಾರಗಳ ಬಗ್ಗೆ ಹೆಚ್ಚು ಗಮನ ಇರಲಿ.

ಮಿಥುನ
ನಿಮಗೆ ವಹಿಸಿದ ಜವಾಬ್ದಾರಿಗಳನ್ನು ಬೇಗ
ಮಾಡಿ ಮುಗಿಸಲಿದ್ದೀರಿ. ಸಾಮಾಜಿಕ ಮತ್ತು
ಧಾರ್ಮಿಕ ಕಾರ್ಯದಲ್ಲಿ ತೊಡಗುವಿರಿ.

ಕಟಕ
ಧನಾಗಮನವಾಗಲಿದೆ. ಹೆಚ್ಚು ನಿರೀಕ್ಷೆ
ಇಟ್ಟುಕೊಂಡು ಕೆಲಸ ಮಾಡದಿರಿ. ಹೊಸ
ವ್ಯಕ್ತಿಗಳ ಪರಿಚಯ, ಹೊಸ ಕಾರ್ಯಾರಂಭ.

ಸಿಂಹ
ಮೌನವಾಗಿ ಇದ್ದುಕೊಂಡೇ ಅಂದುಕೊಂಡ
ಕಾರ್ಯ ಸಾಧನೆ ಮಾಡಿಕೊಳ್ಳಲಿದ್ದೀರಿ.
ತುಂಬಾ ದಿನಗಳ ಆಸೆ ಈಡೇರಲಿದೆ. 

ಕನ್ಯಾ
ಮನೆಯಲ್ಲಿ ನೆಮ್ಮದಿಯ ವಾತಾವರಣ
ಕಂಡಬರಲಿದೆ. ದೇವಸ್ಥಾನಗಳಿಗೆ ಭೇಟಿ
ನೀಡಲಿದ್ದೀರಿ. ವ್ಯಾಪಾರದಲ್ಲಿ ಲಾಭವಿದೆ.

ತುಲಾ 
ದಿನವಿಡೀ ಬೇಸರ. ಹತ್ತಿರದ ಸ್ನೇಹಿತರು
ದೂರವಾಗಲಿದ್ದಾರೆ. ಸಂತೋಷವನ್ನು
ಹುಡುಕಿ ಹೊರಡಲಿದ್ದೀರಿ. ಧೈರ್ಯ ಇರಲಿ.

ವೃಶ್ಚಿಕ
ಅತ್ತೆಯ ಮೇಲಿನ ಕೋಪವನ್ನು ಕತ್ತೆಯ ಮೇಲೆ
ತೋರಿಸುವುದು ಬೇಡ. ಒಳ್ಳೆಯ ಮನಸ್ಸಿನಿಂದ
ಸಂತೋಷ ಪ್ರಾಪ್ತಿಯಾಗುವುದು. 

ಧನುಸ್ಸು
ಆಹಾರದ ವಿಚಾರದಲ್ಲಿ ಹೆಚ್ಚು ನಿಗಾ ಇರಲಿ.
ಮತ್ತೊಬ್ಬರ ಮಾತು ಕೇಳಿ ಕೈ ಸುಟ್ಟು
ಕೊಳ್ಳುವುದು ಬೇಡ. ತಿಳವಳಿಕೆ ಬರಲಿದೆ.

ಮಕರ
ಕೆಟ್ಟದನ್ನು ದೂರ ಮಾಡಿ ಒಳ್ಳೆಯ
ವಿಚಾರಗಳನ್ನು ಮನನ ಮಾಡಿ. ಉತ್ತಮ
ವಾದುದ್ದರ ಕಡೆಯೇ ನಿಮ್ಮ ಆಯ್ಕೆ ಇರಲಿ.

ಕುಂಭ
ನಿಮ್ಮ ಅಸಮಾಧಾನಕ್ಕೆ ಮತ್ತೊಬ್ಬರು
ಬಲಿಯಾಗದಿರಲಿ. ಹಾಡುತ್ತಾ ಹಾಡುತ್ತಾ
ರಾಗ, ನರಳುತ್ತಾ ನರಳುತ್ತಾ ರೋಗ.

ಮೀನ 
ಚಿಂತೆ ಇಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ
ಎನ್ನುವ ಹಾಗೆ ಇಡೀ ದಿನ ಆರಾಮವಾಗಿ,
ಚಿಂತೆ ಇಲ್ಲದೆ ಕಳೆಯಲಿದ್ದೀರಿ. ಶುಭ ಫಲ.