ಹೊಸವರ್ಷದಲ್ಲಿ ಶುಭವಾರ್ತೆಯೊಂದಿಗೆ ಶುಭಕಾಲ ಆರಂಭ 

ಮೇಷ
ಹೊಸ ತಯಾರಿಗಳೊಂದಿಗೆ ನೂತನ ಕೆಲಸ
ಆರಂಭಿಸಲಿದ್ದೀರಿ. ಬೆಳಿಗ್ಗೆಯೇ ಶುಭ ವಾರ್ತೆ
ಕೇಳಲಿದ್ದೀರಿ. ಹೆಣ್ಣು ಮಕ್ಕಳಿಗೆ ಶುಭದಿನ.

ವೃಷಭ
ದೀರ್ಘ ಕಾಲದ ಸಮಸ್ಯೆಗಳಿಗೆ ಶಾಸ್ವತವಾದ
ಪರಿಹಾರ ದೊರೆಯಲಿದೆ. ಅಸ್ಥವ್ಯಸ್ತವಾಗಿರು
ವ ಬದುಕಿನಲ್ಲಿ ಒಂದು ಲಯ ಏರ್ಪಡಲಿದೆ.

ಮಿಥುನ
ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಲಿದ್ದೀರಿ.
ಸಾಧ್ಯವಾದಷ್ಟು ತಾಳ್ಮೆಯಿಂದಿರಿ. ಹೊಸ
ವರ್ಷಕ್ಕೆ ಹರುಷ ಹೆಚ್ಚಾಗಲಿದೆ. ಶುಭಫಲ.

ಕಟಕ
ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂದುಕೊಂಡು
ಹೊಸ ಪ್ರಯತ್ನಗಳನ್ನು ಆರಂಭಿಸಿ,
ಸ್ನೇಹಿತರೊಂದಿಗೆ ಇಡೀ ದಿನ ಕಳೆಯಲಿದ್ದೀರಿ.

ಸಿಂಹ
ದಿನ ಪೂರ್ತಿ ಸಂತೋಷದಿಂದ ಇರುವಿರಿ.
ಮುಂದಿನ ದಿನಗಳ ಬಗ್ಗೆ ಹೆಚ್ಚು ಪ್ಲ್ಯಾನ್
ಮಾಡಿಕೊಳ್ಳಲಿದ್ದೀರಿ. ಕೆಲಸಗಳು ಹೆಚ್ಚಲಿವೆ.

ಕನ್ಯಾ
ಹೆಚ್ಚು ಜವಾಬ್ದಾರಿ ಇಂದು ನಿಮ್ಮ ಹೆಗಲ
ಮೇಲೆ ಬೀಳಿದೆ. ಗೃಹಿಣಿಯರ ಪಾಲಿಗೆ ಹೆಚ್ಚು
ಲಾಭದಾಯಕ ದಿನವಿದು. ಶುಭವಾಗಲಿದೆ.

ತುಲಾ 
ಹೆಚ್ಚು ಸಂತೋಷದಿಂದ ಈ ದಿನ ಇರಲಿದ್ದೀರಿ.
ಆತ್ಮೀಯರ ಸಂಭ್ರಮದಲ್ಲಿ ನಿಮ್ಮ ಸಂತೋಷ
ಕಾಣಲಿದ್ದೀರಿ. ನಾಳಿನ ಚಿಂತೆ ಬೇಡ.

ವೃಶ್ಚಿಕ
ಮಹಿಳೆಯರಿಗೆ ಹತ್ತಿರದ ಬಂಧುಗಳಿಂದ
ಉಡುಗೊರೆ ದೊರೆಯಲಿದೆ. ಮೋಜು,
ಮಜಾ ಮಸ್ತಿ ಇಂದೂ ಮುಂದುವರೆಯಲಿದೆ. 

ಧನುಸ್ಸು
ದಿನಪೂರ್ತಿ ಒಳ್ಳೆಯ ಸಂಗೀತ ಕೇಳಲಿದ್ದೀರಿ.
ಹೊಸ ವರ್ಷಾಚರಣೆ ಪ್ರಯುಕ್ತ ಸ್ನೇಹಿತರು,
ಬಂಧುಗಳ ಜೊತೆ ಸಮಯ ಕಳೆಯಲಿದ್ದೀರಿ.

ಮಕರ
ದೇವಾಸ್ಥಾನಕ್ಕೆ ಕುಟುಂಬ ಸಮೇತವಾಗಿ
ಹೋಗಿ ಬರಲಿದ್ದೀರಿ. ಮಹಿಳೆಯರ ಪಾಲಿಗೆ
ಇಂದು ಉತ್ಸಾಹದ ದಿನವಾಗಿರಲಿದೆ.

ಕುಂಭ
ನಿಮ್ಮ ಮನಸ್ಸಿಗೆ ಒಪ್ಪಿತವಾದ ಕೆಲಸವನ್ನು
ಯಾರಿಗೂ ಅಂಜದೇ ಮಾಡಿ ಮುಗಿಸಿ.
ಸ್ನೇಹಿತರೊಂದಿಗೆ ನಿಷ್ಠೂರವಾಗಿ ಇರಿ.

ಮೀನ 
ಸಂಜೆ ವೇಳೆಗೆ ನೀವು ಅಂದುಕೊಂಡ ಎಲ್ಲಾ
ಕಾರ್ಯಗಳೂ ನೆರವೇರಲಿವೆ. ಹೊಸ ದಂಪತಿ
ಗಳಿಗೆ ಇಂದು ಪ್ರವಾಸ ಹೋಗುವ ಅವಕಾಶ.