ಮೇಷ: ಕಾಲಮಿತಿಯಲ್ಲಿ ಒಪ್ಪಿಕೊಂಡ ಕೆಲಸಗಳನ್ನುಮಾಡಿ ಮುಗಿಸಿ. ನಿಧಾನ ಮಾಡುವುದು ಬೇಡ. ಮನೆಯಲ್ಲಿ ಶಾಂತಿ ನೆಲೆಸಲಿದೆ.

ವೃಷಭ: ಹಿರಿಯ ಅಧಿಕಾರಿಗಳೊದಿಗೆ ಸ್ನೇಹದಿಂದ ವರ್ತಿಸಿ. ನನ್ನಿಂದಲೇ ಎಲ್ಲವೂ ಎನ್ನುವ ಅಹಂ ಬೇಡ. ಆದಾಯದಲ್ಲಿ ಏರಿಕೆ ಕಾಣಲಿದೆ.

ಮಿಥುನ: ಸತ್ಯ ಮಾರ್ಗದಲ್ಲಿ ನಡೆದರೆ ಯಾರಿಗೋ ಹೆದರಬೇಕಾದ ಅವಶ್ಯಕತೆ ಇಲ್ಲ. ಸಾಧನೆಗೆ ಕಠಿಣವಾದ ಪ್ರರಿಶ್ರಮವೊಂದೇ ದಾರಿ. 

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಟಕ: ಸುಮ್ಮನೆ ನಿಮ್ಮಷ್ಟಕ್ಕೆ ನೀವೇ ಏನೇನೋ ಊಹೆ ಮಾಡಿಕೊಳ್ಳುತ್ತಾ ಕೂರುವ ಬದಲಿಗೆ ಸತ್ಯವನ್ನು ತಿಳಿಯುವ ಪ್ರಯತ್ನ ಮಾಡಿ.

ಸಿಂಹ: ಮತ್ತೊಬ್ಬರಿಗೆ ಇಂದು ನೆರವಾಗಿ ನಿಲ್ಲಲಿದ್ದೀರಿ.ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರ ಇದ್ದರೆ ಒಳಿತು. ತಂದೆಯ ಮಾತಿನಂತೆ ನಡೆಯಿರಿ.

ಕನ್ಯಾ: ಮತ್ತೊಬ್ಬರಿಂದ ಏನನ್ನು ಬಯಸುತ್ತಿರೋ ಅದನ್ನೇ ನೀವೂ ಮಾಡಿ. ಮಾತಿನಲ್ಲಿ ಹೇಳುವುದಕ್ಕಿಂತ ಕೃತಿಯಲ್ಲಿ ತೋರುವುದು ಸೂಕ್ತ.

ತುಲಾ: ಮನೆಯಲ್ಲಿ ಕೆಲಸಗಳು ಹೆಚ್ಚಾಗಲಿವೆ.ಧಾರ್ಮಿಕ ಕಾರ್ಯಗಳಲ್ಲಿ ತೊಡಗಿ ತುಲಾ ಕೊಳ್ಳಲಿದ್ದೀರಿ. ಕೆಲಸದಲ್ಲಿ ಶ್ರದ್ಧೆ ಇರಲಿ.

ಈ ರಾಶಿಗೆ ಭಾರೀ ಸಿಹಿ ಸುದ್ದಿಯೊಂದು ಬರಲಿದೆ : ವಾರ ಭವಿಷ್ಯ

ವೃಶ್ಚಿಕ: ನಿಮ್ಮ ತಪ್ಪುಗಳನ್ನು ಮತ್ತೊಬ್ಬರ ಮೇಲೆ ಹೇರುವುದು ಬೇಡ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಗೆಲುವು ನಿಮ್ಮದೇ.

ಧನಸ್ಸು: ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಮಹತ್ವದ ಜವಾಬ್ದಾರಿ ಇಂದು ನಿಮ್ಮ ಹೆಗಲಿಗೆ ಬೀಳಲಿದೆ. ಶುಭ ಫಲ. 

ಮಕರ: ಸಂದರ್ಭಕ್ಕೆ ತಕ್ಕಂತೆ ವರ್ತಿಸಿ. ಆವೇಶದ ಕೈಗೆ ಬುದ್ಧಿ ಕೊಟ್ಟು ಅನಾಹುತ ಮಾಡಿಕೊಳ್ಳುವುದು ಬೇಡ. ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ.

ಕುಂಭ: ನಿಮಗೆ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾ ಕೂರುವುದು ಬೇಡ. ಹೊಸದನ್ನು ತಿಳಿದುಕೊಳ್ಳಲಿದ್ದೀರಿ.

ಮೀನ: ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ. ಸಾಲಕ್ಕೆ ಕೈ ಹಾಕದೇ ಇದ್ದರೆ ಒಳ್ಳೆಯದು. ಏಕಾಂಗಿಯಾಗಿ ಹೆಚ್ಚು ಸಮಯ ಕಳೆಯಲಿದ್ದೀರಿ. ಶುಭ ಫಲ.