ಇಂದು ಈ ರಾಶಿಯವರು ಕೊಟ್ಟ ಮಾತಿಗೆ ತಪ್ಪದ ರೀತಿ ನಡೆದುಕೊಳ್ಳಿ
ನವೆಂಬರ್ 7 ಗುರುವಾರ ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ ?
ಮೇಷ: ಹಳೆಯ ನೋವುಗಳನ್ನು ಮರೆತು ಹೊಸ ಸಂತೋಷವನ್ನು ಪಡೆಯಲಿದ್ದೀರಿ. ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ.
ವೃಷಭ: ಓಡಾಟದಲ್ಲಿಯೇ ಇಡೀ ದಿನ ಕಳೆಯಲಿದ್ದೀರಿ. ಹೆಣ್ಣು ಮಕ್ಕಳಿಗೆ ಇದು ಶುಭ ದಿನ. ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಿ.
ಮಿಥುನ: ಮನಸ್ಸು ಶಾಂತವಾಗಿ ಇರಲಿದೆ. ಒಳ್ಳೆಯ ಕಾರ್ಯ ಶುರು ಮಾಡಲು ಇದು ಸಕಾಲ. ಮನಸ್ಸಿಗೆ ಬಂದದ್ದನ್ನು ಮಾಡಿ ಮುಗಿಸಿ.
ಕಟಕ: ಮತ್ತೊಬ್ಬರ ಬಗ್ಗೆ ಚಿಂತೆ ಮಾಡುತ್ತಾ, ನಿಮ್ಮ ಸಂತೋಷವನ್ನು ಹಾಳು ಮಾಡಿಕೊಳ್ಳಬೇಡಿ. ಸುಂದರ ಕ್ಷಣಗಳು ಅಧಿಕವಾಗಲಿವೆ.
ಸಿಂಹ: ಮಾಡಿದ ತಪ್ಪನ್ನು ಒಪ್ಪಿಕೊಳ್ಳಲಿದ್ದೀರಿ. ಅಲ್ಲದೇ ಮುಂದೆ ತಪ್ಪುಗಳು ಆಗದಂತೆ ಎಚ್ಚರ ವಹಿಸಲಿದ್ದೀರಿ. ಗುರು ಬಲ ನಿಮ್ಮ ಪರವಾಗಿದೆ.
ಒಂದು ರಾಶಿಗೆ ಉದ್ಯೋಗದಲ್ಲಿ ಭಾರೀ ಲಾಭ : ವಾರ ಭವಿಷ್ಯ
ಕನ್ಯಾ: ದೀರ್ಘ ಕಾಲದ ಉಳಿತಾಯದ ಕಡೆಗೆ ಮನಸ್ಸು ಹರಿಯಲಿದೆ. ನಿಮ್ಮ ಸ್ವಾಭಿಮಾನಕ್ಕೆ ಸರಿಯಾದ ಬೆಲೆ ಸಿಕ್ಕಲಿದೆ. ನೆಮ್ಮದಿ ಇರಲಿದೆ.
ತುಲಾ: ನೀವು ಕಂಡ ಒಳ್ಳೆಯದನ್ನು ನಿಮ್ಮ ಸ್ನೇಹಿತರಿಗೂ ತಿಳಿಸಲಿದ್ದೀರಿ. ಧಾರ್ಮಿಕ ಕ್ಷೇತ್ರಗಳ ಭೇಟಿ ಹೆಚ್ಚಾಗಲಿದೆ. ನಂಬಿಕೆ ಇದ್ದರೆ ಫಲ.
ವೃಶ್ಚಿಕ: ಎಂತಹ ಕಷ್ಟದ ಸ್ಥಿತಿ ಬಂದರೂ ಕೊಟ್ಟ ಮಾತಿಗೆ ತಪ್ಪದ ರೀತಿ ನಡೆದುಕೊಳ್ಳಿ. ನಿಮ್ಮ ಸ್ವಭಾವವೇ ನಿಮಗೆ ವರವಾಗಿ ಪರಿಣಮಿಸಲಿದೆ.
ಧನಸ್ಸು: ಗೊತ್ತಿಲ್ಲದೆ ವಿಚಾರಗಳನ್ನು ಕೇಳಿ ತಿಳಿದು ಕೊಳ್ಳುವುದರಲ್ಲಿ ತಪ್ಪಿಲ್ಲ. ಹೊಸ ಸಾಧ್ಯತೆಗಳ ಕಡೆಗೆ ಮನಸ್ಸು ತುಡಿಯಲಿದೆ. ಶುಭಫಲ.
ಮಕರ: ಆಹಾರದ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಿ. ಸಂಜೆ ವೇಳೆಗೆ ಶುಭ ವಾರ್ತೆ ಕೇಳಲಿದ್ದೀರಿ. ಮನೆಯಲ್ಲಿ ಸಣ್ಣ ಗೊಂದಲ ಏರ್ಪಡಲಿದೆ.
ಕುಂಭ: ಹಿಂದೆ ಮಾಡಿದ ಉಳಿತಾಯ ಇಂದು ನಿಮ್ಮ ಸಹಾಯಕ್ಕೆ ಬರಲಿದೆ. ಸಣ್ಣ ತಲೆ ನೋವಿಗೆ ಬೆಟ್ಟ ಬಿದ್ದ ರೀತಿ ಆಡುವುದು ತರವಲ್ಲ.
ಮೀನ: ಆಗುವುದೆಲ್ಲವೂ ಒಳ್ಳೆಯದ್ದಕ್ಕೇ ಆಗಲಿದೆ. ಹಾಗಾಗಿ ನೀವು ಹೆಚ್ಚು ಚಿಂತೆ ಮಾಡುತ್ತಾ ಕೂರುವುದು ಬೇಡ. ಮುಂದೆ ಸಾಗುತ್ತಿರಿ.