Asianet Suvarna News Asianet Suvarna News

ಒಂದು ರಾಶಿಗೆ ಉದ್ಯೋಗದಲ್ಲಿ ಭಾರೀ ಲಾಭ : ವಾರ ಭವಿಷ್ಯ

ನವೆಂಬರ್ 3 ಭಾನುವಾರ, ಈ ವಾರ ಯಾವ ರಾಶಿಗೆ ಯಾವ ಫಲ, ಹೇಗಿದೆ ಈ ವಾರಗಳ ಫಲಾ ಫಲ ತಿಳಿದುಕೊಳ್ಳಿ 

Weekly Horoscope 03 November 2019
Author
Bengaluru, First Published Nov 3, 2019, 7:16 AM IST

ಮೇಷ
ಉದ್ಯೋಗದಲ್ಲಿ ಲಾಭ ಹೆಚ್ಚಲಿದೆ. ನೆಮ್ಮದಿ
ನೆಲೆಸಲಿದೆ. ಹಣಕಾಸಿನ ವ್ಯವಹಾರದಲ್ಲಿ
ಎಚ್ಚರಿಕೆಯ ನಡೆ ಅಗತ್ಯ. ಹಣಕ್ಕಾಗಿ ಸ್ನೇಹ
ಬಯಸುವವರೂ ನಿಮಗೆ ಸಿಗಲಿದ್ದಾರೆ. ಮತ್ತೆ ಹಳೇ ಕೆಲಸಕ್ಕೆ
ಮರಳುವ ಸಾಧ್ಯತೆ. ಕಳೆದ ವಾರ ತೆಗೆದುಕೊಂಡ ರೆಸ್ಟ್‌ನಿಂ
ದಾಗಿ ಈ ವಾರ ಹೊಸ ಚೈತನ್ಯದಿಂದ ಕೆಲಸ ಮಾಡುವಿರಿ.

ವೃಷಭ
ನಿಮ್ಮ ಕಟು ಮಾತುಗಳು ಇನ್ನೊಬ್ಬರನ್ನು ನೋವು
ಮಾಡದಿರಲಿ. ಒಬ್ಬರಿಗೆ ಒಳ್ಳೆಯದು ಮಾಡಲು
ಆಗುವುದಿಲ್ಲವೆಂದಲ್ಲಿ ಸುಮ್ಮನಿರುವುದು ಲೇಸು.
ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ ನಿಮ್ಮದಾಗಿರಲಿ.
ಉದ್ಯೋಗ ಅರಸುತ್ತಿರುವ ಮಹಿಳೆಯರಿಗೆ ಈ ವಾರ ಶುಭ
ಸುದ್ದಿ ಸಿಗಲಿದೆ. ಅಂದುಕೊಂಡಿದ್ದು ನೆರವೇರಲಿದೆ

ಮಿಥುನ
ತಂತ್ರಜ್ಞಾನಕ್ಕೆ ಹೆಚ್ಚು ಅಡಿಕ್ಟ್ ಆದಂತಿದೆ.
ಇದರಿಂದ ಕೆಲ ಸಮಸ್ಯೆಗಳು ನಿಮ್ಮ ಬೆನ್ನೇರಲಿದೆ.
ಅದು ಮೊಬೈಲ್, ಕಂಪ್ಯೂಟರ್ ಕೆಲಸವೇ
ಇರಬಹುದು. ಸ್ವಲ್ಪ ಆರೋಗ್ಯದ ಕಡೆ ಗಮನ ಇರಲಿ
ನೆಗ್ಲೆಕ್ಟ್ ಬೇಡ. ಕಾಡುತ್ತಿದ್ದ ಎಷ್ಟೋ ಪ್ರಶ್ನೆಗಳಿಗೆ ಈ ವಾರ
ಉತ್ತರ ಸಿಗಲಿದ್ದು, ನಿರಾಳರಾಗುವಿರಿ. ಶುಭಫಲ.

ಕಟಕ
ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ.
ಕಷ್ಟ ನಷ್ಟಗಳು ಎಲ್ಲರಿಗೂ ಇದ್ದದ್ದೆ. ಅದರಿಂದ
ಕೊರಗುವುದು ಬೇಡ. ಆತ್ಮೀಯರೊಂದಿಗೆ
ಮಾತನಾಡುವಾಗ ಎಚ್ಚರಿಕೆ ಇರಲಿ. ಹೆಚ್ಚು ಇಷ್ಟ ಪಡುವ
ವಸ್ತು ಈ ವಾರ ನಿಮ್ಮ ಕೈಯಿಂದ ಜಾರಿ ಹೋಗಲಿದೆ. ಗಣ್ಯ
ವ್ಯಕ್ತಿಗಳ ಭೇಟಿ ಸಾಧ್ಯತೆ. ಲಾಭ ಹೆಚ್ಚಾಗಲಿದೆ.

ಸಿಂಹ
ನೆರೆ ಮನೆಯವರೊಂದಿಗೆ ವಿನಾಕಾರಣ
ಮನಸ್ಥಾಪ ಬೇಡ. ಆರೋಗ್ಯದಲ್ಲಿ ಚೇತರಿಕೆ
ಕಾಣಲಿದೆ. ದುರ್ಬಲರಿಗೆ ನೆರವಾಗಲಿದ್ದೀರಿ.
ನಿಮ್ಮ ಆದಾಯಕ್ಕೆ ತಕ್ಕಂತೆ ಖರ್ಚು ಇರಲಿದೆ. ಈ ವಾರ
ಜವಾಬ್ದಾರಿ ಹೆಚ್ಚಾಗಲಿದ್ದು, ಅದಕ್ಕೆ ಸೂಕ್ತ ತಯಾರಿ ನಡೆಸಿ
ಮುನ್ನಡೆಯುವುದು ಒಳಿತು. ಬಂಧುಗಳ ಆಗಮನ. 

ಕನ್ಯಾ
ಕೆಲಸದೊತ್ತಡದಿಂದ ಈ ವಾರ ಮನಸ್ಸಿಗೆ ಕಿರಿಕಿರಿ
ಹೆಚ್ಚಿರುತ್ತೆ. ಮನಸ್ಸಿನಲ್ಲಿ ಉಂಟಾದ
ಕಿರಿಕಿರಿಯಿಂದಾಗಿ ಏಕಾಂತ ಬಯಸುವಿರಿ. ಈ
ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ಕ್ರಮೇಣ ಆ
ಗೊಂದಲಗಳಿಗೆ ಉತ್ತರ ಸಿಗುವ ಸಾಧ್ಯತೆ ಹೆಚ್ಚಿದೆ. ಪುಸ್ತಕ
ಓದಿದಷ್ಟು ನಿರಾಳರಾಗುವಿರಿ. ದೂರ ಪ್ರಯಾಣ ಸಾಧ್ಯತೆ.

ತುಲಾ
ಭಯ ಎನ್ನುವುದು ವಿಷದ ಸರ್ಪದಂತೆ. ಒಮ್ಮೆ
ಮನಸ್ಸಿಗೆ ಹೊಕ್ಕಿದರೆ ಅದು ನಮ್ಮಲ್ಲಿನ ಆತ್ಮ
ವಿಶ್ವಾಸವನ್ನು, ಧೈರ್ಯವನ್ನು ಕುಗ್ಗಿಸುತ್ತೆ.
ಸಕಾರಾತ್ಮಕ ಚಿಂತನೆಗಳು, ವಿಚಾರಗಳು, ಪುಸ್ತಕ ಓದುವು
ದರಿಂದ ಆತ್ಮಬಲವು ನಮ್ಮಲ್ಲಿ ಮೂಡುತ್ತೆ. ಈ ನಿಟ್ಟಿನಲ್ಲಿ
ನೀವು ಪ್ರಯತ್ನಿಸಿದರೆ ಅಂದುಕೊಂಡ ಕೆಲಸವಾಗುತ್ತೆ.

ವೃಶ್ಚಿಕ
ಮಾಡಿದ್ದುಣ್ಣೋ ಮಹರಾಯ ಎನ್ನುವಂತೆ
ಮಾಡಿದ ತಪ್ಪಿಗೆ ಪಶ್ಚತ್ತಾಪ ಅನುಭವಿಸುವ ಕಾಲ
ದೂರವಿಲ್ಲ. ಆದ ತಪ್ಪನ್ನು ಸಮರ್ಥಿಸಿಕೊಳ್ಳದೆ,
ಅದರಿಂದ ತಿದ್ದಿ ನಡೆದರೆ ಉತ್ತಮ. ಒತ್ತಡದ ಜೀವನದಿಂದ
ಹೊರಬರಲು ಮೊದಲು ಒಂದಷ್ಟು ಸಮಯ ಮನೆಯ
ವರಿಗಾಗಿ ಮೀಸಲಿಡಿ. ಮನಸ್ಸಿಗೆ ಹಾಯ್ ಎನಿಸುತ್ತೆ. 

ಧನಸ್ಸು
ಎಷ್ಟೋ ದಿನ ಕೈಬಿಟ್ಟ ಕೆಲಸವನ್ನು ಮತ್ತೆ
ಕೈಗೆತ್ತಿಕೊಳ್ಳಲು ಇದು ಸರಿಯಾದ ಸಮಯ.
ಒಮ್ಮೆ ಗಟ್ಟಿ ಮನಸ್ಸು ಮಾಡಿ ಹೊಸ ರೂಪದಲ್ಲಿ
ಆ ಕೆಲಸದಲ್ಲಿ ಮುನ್ನಡೆಯಿರಿ. ತೀರಾ ತಳಮಳ ಎನಿಸಿದರೆ
ನಿಮ್ಮ ಹಿರಿಯರಿಂದ ಸೂಕ್ತ ಮಾರ್ಗದರ್ಶನ ಪಡೆಯಿರಿ. 

ಮಕರ
ಹುಡುಕಿದರೆ ಬಹಳಷ್ಟು ವಿಷಯ ಸಿಗುತ್ತದೆ.
ಇಲ್ಲಿ ಶ್ರಮ ಪಡಬೇಕಿರುವುದು ಹುಡುಕು
ವುದರಲ್ಲಿ ಅಷ್ಟೇ. ಅದಕ್ಕೆ ವಿಚಾರ ವಿಷಯಗಳ
ಬಗ್ಗೆ ಆಸಕ್ತಿ ಇರಬೇಕು. ಸುಮ್ಮಣೇ ಹುಡುಕುತ್ತಾ ಕುಳಿತರೆ
ಪ್ರಯೋಜನ ಇರದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭ
ಸದಾ ಒಂದಿಲ್ಲೊಂದು ಕಾರ್ಯ ಚಟುವಟಿಕೆ
ಗಳಲ್ಲಿ ತೊಡಗಿಕೊಂಡಲ್ಲಿ ನಿಮ್ಮಲ್ಲಾಗುವ
ಬದಲಾವಣೆಯಿಂದಾಗಿ ಬಾಕಿ ಉಳಿದ
ಕೆಲಸಗಳು ಶೀಘ್ರದಲ್ಲಿ ಮುಗಿದು ಹೋಗಲಿದೆ. ಹೊಸ
ಕೆಲಸಗಳಿಗೆ ಮನೆಯವರ ನೆರವು ಸಿಗಲಿದೆ. ಮಹಿಳೆಯರು
ಕ್ರಿಯಾಶೀಲ ಚಟುವಟಿಗಳಲ್ಲಿ ತೊಡಗಲಿದ್ದಾರೆ.

ಮೀನ
ಮೂರನೆಯವರು ಏನೋ ಹೇಳುತ್ತಾರಂತೆ
ಮನಸ್ಸಿಗೆ ತಂದುಕೊಳ್ಳದೆ, ಅದನ್ನು ಧೈರ್ಯ
ವಾಗಿ ಎದುರಿಸುವ ಮಾರ್ಗವನ್ನು ಸ್ವತಃ ನೀವೇ
ಕಂಡುಕೊಳ್ಳಬೇಕು. ಇದರಿಂದ ನಿಮ್ಮಲ್ಲಿ
ಆತ್ಮವಿಶ್ವಾಸ ಹೆಚ್ಚಲಿದ್ದು, ಏನೇ ಸಮಸ್ಯೆ ಬಂದರೂ
ಅದನ್ನು ಸಮರ್ಥವಾಗಿ ಎದುರಿಸಲು ಪಾಠವಾಗಲಿದೆ.

Follow Us:
Download App:
  • android
  • ios