ಮೇಷ: ಸುಲಭದ ದಾರಿಯಲ್ಲಿ ಸಾಗುವುದಕ್ಕೆ
ಬದಲಾಗಿ ಸತ್ಯದ ದಾರಿಯಲ್ಲಿ ಸಾಗಿ. ಗೆಲುವು
ಪಡೆಯಲು ಸಾಕಷ್ಟು ಶ್ರಮ ಪಡೆಬೇಕು.

ವೃಷಭ: ಎಲ್ಲರನ್ನೂ ಮೆಚ್ಚಿಸಿ ಬದುಕುವುದಕ್ಕೆ
ಆಗುವುದಿಲ್ಲ. ನಿಮಗೆ ಸರಿ ಎನ್ನಿಸದನ್ನು ಆಪ್ತರ
ಬಳಿ ಚರ್ಚಿಸಿ ಮಾಡಿ. ಧೈರ್ಯ ಇರಲಿ.

ಮಿಥುನ: ತಾಂತ್ರಿಕವಾಗಿ ಹೊಸ ವಿಚಾರಗಳನ್ನು ಇಂದು
ತಿಳಿದುಕೊಳ್ಳಲಿದ್ದೀರಿ. ದೇಶ ಸುತ್ತು, ಕೋಶ
ಓದು ಎನ್ನುವ ಮಾತಿನ ಅರಿವು ಇಂದಾಗಲಿದೆ.

ಕಟಕ : ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗೃತೆ
ವಹಿಸಿ. ಯಾರೊಂದಿಗೂ ವಿರಸ ಬೇಡ.
ಆಗದು ಎಂದು ಕೈ ಕಟ್ಟಿ ಕೂರುವುದು ಬೇಡ.

ಸಿಂಹ : ನಿಮ್ಮ ಮುಂದೆ ದಾರಿಗಳು ಹತ್ತಾರಿವೆ. ನೀವು
ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳು
ತ್ತೀರಿ ಎನ್ನುವುದರ ಮೇಲೆ ಭವಿಷ್ಯ ನಿಂತಿದೆ.

ಈ ವಾರ ಒಂದು ರಾಶಿಗೆ ಸಿಹಿ ಸುದ್ಧಿ, ಭಾರೀ ಯಶಸ್ಸು: ಉಳಿದ ರಾಶಿ?...

ಕನ್ಯಾ :  ನಿಮಗೆ ವಹಿಸಿದ ಜವಾಬ್ಧಾರಿಗಳನ್ನು
ಅಚ್ಚುಕಟ್ಟಾಗಿ ಮಾಡಿ ಮುಗಿಸಿ. ಪ್ರತಿಫಲಕ್ಕೆ
ಅವರಸಪಡುವುದು ಬೇಡ. ಶುಭ ಫಲ.

ತುಲಾ:  ಅಸಮರ್ಥರ ಬಗ್ಗೆ ಚಿಂತೆ ಮಾಡುತ್ತಾ ಕೂತರೆ
ನಿಮ್ಮ ಸಾಮರ್ಥ್ಯವೇ ವ್ಯರ್ಥವಾಗುವುದು.
ನಿಮ್ಮ ಬಗ್ಗೆ ನಿಮಗೆ ಮೊದಲು ತಿಳಿದಿರಲಿ.

ವೃಶ್ಚಿಕ : ಇನ್ನೊಬ್ಬರಿಗೆ ಒಳ್ಳೆಯದ್ದು ಮಾಡಲು ಆಗದೇ
ಇದ್ದರೂ ಸರಿಯೇ, ಕೇಡನ್ನು ಬಯಸುವುದು
ಬೇಡ. ಮನಸ್ಸಿಗೆ ಅನ್ನಿಸಿದಂತೆ ನಡೆಯಿರಿ. 

ಮನೆ ಹಾಗೂ ಕಚೇರಿಗೆ ಸಂತೋಷ -ಸಮೃದ್ಧಿ ತರೋ ಸಸ್ಯಗಳಿವು!...

ಧನುಸ್ಸು : ಕೋಪ ಮಾಡಿಕೊಳ್ಳುವುದರಿಂದ ಯಾವುದೇ
ಪ್ರಯೋಜನವಾಗುವುದಿಲ್ಲ. ಶಾಂತ
ಮನಸ್ಸಿನಿಂದ ಎಲ್ಲವನ್ನೂ ಬಗೆ ಹರಿಸಿಕೊಳ್ಳಿ.

ಮಕರ :  ಅರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರಲಿ.
ಮೋಸ ಹೋಗುವ ಅಪಾಯದಿಂದ
ಪಾರಾಗಲಿದ್ದೀರಿ. ಹಿರಿಯರ ಮಾತು ಕೇಳಿ.

ಕುಂಭ : ನೀವು ಅಂದುಕೊಂಡಂತೆ ಎಲ್ಲವೂ ಆಗುತ್ತದೆ
ಎನ್ನುವ ಭ್ರಮೆ ಬೇಡ. ಚಿಂತೆ ಮಾಡುತ್ತಾ
ಕೂತರೆ ಆರೋಗ್ಯ ಕೆಡುತ್ತದೆ. ನೆಮ್ಮದಿ ಇದೆ.

ಮೀನ : ಜಾಣತನದಿಂದ ಬಂದ ಸಮಸ್ಯೆಯನ್ನು
ಬಗೆಹರಿಸಿಕೊಳ್ಳಿ. ಎಲ್ಲದಕ್ಕೂ ಮೊಂಡುತನ
ಮಾಡುವುದು ಬೇಡ. ಸೂಕ್ಷ್ಮ ಪ್ರಜ್ಞೆ ಇರಲಿ