ಇಂದು ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ ?

ಈ ರಾಶಿಯವರು ದೊಡ್ಡ ಸಮಸ್ಯೆಯಿಂದ ಹೊರ ಬರಲಿದ್ದೀರಿ

ಮೇಷ
ಮನಸ್ಸನ್ನು ಗಟ್ಟಿ ಮಾಡಿಕೊಂಡು ಮುಂದೆ
ಸಾಗಿ. ಅಪವಾದಗಳು ಸಹಜ. ಇಟ್ಟ
ಹೆಜ್ಜೆಯನ್ನು ಹಿಂದೆ ಇಡುವುದು ಬೇಡ.

ವೃಷಭ
ನೀವು ಬೀಸಿದ ಕಲ್ಲು ಮತ್ತೆ ನಿಮ್ಮ ಕಡೆಯೇ
ಬಂದು ಬೀಳಲಿದೆ. ಎಲ್ಲರಿಗೂ ಒಳ್ಳೆಯವ
ರಾಗಲು ಸಾಧ್ಯವಿಲ್ಲ. ಸರಿ ಎನ್ನಿಸಿದ್ದು ಮಾಡಿ.

ಮಿಥುನ
ಕೋಪ ಬಂದಾಗ ಯಾರೊಂದಿಗೂ
ಮಾತನಾಡದೇ ಸುಮ್ಮನೆ ಇದ್ದು ಬಿಡಿ. ಒಳ್ಳೆಯ
ಸುದ್ದಿ ಕೇಳಲಿದ್ದೀರಿ. ಕೆಲಸ ಒತ್ತಡ ಹೆಚ್ಚಲಿದೆ.

ಕಟಕ
ಮತ್ತೊಬ್ಬರಿಗಾಗಿ ಕಾಯುತ್ತಾ ಕೂರುವುದು
ಬೇಡ. ನಿಮ್ಮ ದಾರಿಯಲ್ಲಿ ನೀವು ಸಾಗಿ.
ಒಳ್ಳೆಯ ಕೆಲಸಗಳು ನಿಮ್ಮಿಂದ ಆಗಲಿವೆ.

ಸಿಂಹ
ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳಿ. ಹೊಸ ಬಟ್ಟೆ
ತೆಗೆದುಕೊಳ್ಳುವ ಸಾಧ್ಯತೆ ಇದೆ. ಎಚ್ಚರಿಕೆ
ಯಿಂದ ಹೆಜ್ಜೆ ಇಡಿ. ನೆಮ್ಮದಿ ಹೆಚ್ಚಾಗಲಿದೆ.

ಕನ್ಯಾ
ಹಣ ಸಂಪಾದನೆಗಿಂತ ಗುಣ ಸಂಪಾದನೆಗೆ
ಒತ್ತು ನೀಡಿ. ಅತಿಯಾದ ಆಸೆ ಒಳ್ಳೆಯದಲ್ಲ.
ದೊಡ್ಡ ಸಮಸ್ಯೆಯಿಂದ ಹೊರ ಬರಲಿದ್ದೀರಿ.

ತುಲಾ 
ಹಲವು ದಿನಗಳ ಬಯಕೆ ಈಡೇರಲಿದೆ.
ಮೌನವೇ ನಿಮ್ಮ ಸಮಸ್ಯೆಗೆ ಪರಿಹಾರವಾ
ಗಲಿದೆ. ಹಿಡಿದ ಕಾರ್ಯ ಸಿದ್ಧಿಯಾಗಲಿದೆ.

ವೃಶ್ಚಿಕ
ಅತಿಯಾದ ಆತುರ ಬೇಡ. ತಂದೆ ತಾಯಿಯ
ಮಾತಿಗೆ ಬೆಲೆ ನೀಡಿ. ಸಹೋದರರ ಜೊತೆಗೆ
ವ್ಯವಹಾರದಲ್ಲಿ ಹೊಂದಾಣಿಕೆಯಾಗಲಿದೆ.

 ಧನುಸ್ಸು
ನಿಮ್ಮ ಕಾರ್ಯವನ್ನು ಎಲ್ಲರೂ ಮೆಚ್ಚಿಕೊಳ್ಳಲಿ
ದ್ದಾರೆ. ಹೊಸ ವಸ್ತುಗಳನ್ನು ಕೊಳ್ಳಲಿದ್ದೀರಿ.
ಹಿಡಿದ ಕಾರ್ಯ ಸುಗಮವಾಗಿ ನಡೆಯಲಿದೆ.

ಮಕರ
ಚಿನ್ನಾಭರಣ ಕೊಳ್ಳುವ ಅವಕಾಶ ಇದೆ.
ಮೆಚ್ಚಿಕೊಂಡ ವಸ್ತು ಕೈ ಸೇರಲಿದೆ. ತಾಳ್ಮೆ
ಯಿಂದ ಸಾಗಿದರೆ ಎಲ್ಲವೂ ಒಳಿತಾಗಲಿದೆ.

ಕುಂಭ
ಅಧಿಕಾರದ ಸ್ಥಾನದಲ್ಲಿ ಇರುವವರಿಂದ
ಅನುಕೂಲವಾಗಲಿದೆ. ನಿಮ್ಮದಲ್ಲದ
ವಿಷಯದಲ್ಲಿ ತಲೆ ಹಾಕುವುದು ಬೇಡ.

ಮೀನ 
ಗೊತ್ತಿಲ್ಲದ ವಿಚಾರಗಳನ್ನು ಕೇಳಿ ತಿಳಿದುಕೊಳ್ಳಿ.
ಸಂಬಂಧಗಳಿಗೆ ಹೆಚ್ಚು ಬೆಲೆ ನೀಡಲಿದ್ದೀರಿ.
ಅಂದುಕೊಂಡದ್ದು ಎಲ್ಲವೂ ಆಗಲಿದೆ.