ಮೇಷ

ದಾರಿಯಲ್ಲಿ ನಡೆಯುವಾಗ ಕಲ್ಲು ಮುಳ್ಳು
ಸಹಜ. ಹಾಗೆಂದುಕೊಂಡು ನಡೆಯುವುದನ್ನೇ
ಬಿಟ್ಟರೆ ಹೇಗೆ, ಧೈರ್ಯವಾಗಿ ಮುಂದೆ ಸಾಗಿ.

ವೃಷಭ
ಮತ್ತೊಬ್ಬರ ಮೇಲೆ ಅವಲಂಬಿತರಾಗಿ ಕೂರು
ವುದಕ್ಕೆ ಬದಲಾಗಿ ಸ್ವಂತ ಬಲದಿಂದ ಮುಂದೆ
ಸಾಗಿ. ಬಂಧುಗಳು ಜೊತೆಗೆ ಬರುವರು.

ಮಿಥುನ
ಕೋರ್ಟು, ಕಚೇರಿ ವ್ಯವಹಾರಗಳು
ಸುಲಭದಲ್ಲಿ ಮುಗಿಯಲಿವೆ. ಎಲ್ಲವೂ ನೀವು
ಅಂದುಕೊಂಡಂತೆ ನೆರವೇರಲಿವೆ. ಶುಭಫಲ.

ಕಟಕ
ಆತ್ಮೀಯರು ಇಂದು ನಿಮ್ಮಿಂದ ದೂರವಾಗಲಿ
ದ್ದಾರೆ. ಇಂದಿನ ಕಾರ್ಯಗಳನ್ನು ಇಂದೇ
ಮಾಡಿ ಮುಗಿಸಿ. ಧನಾಗಮನವಾಗಲಿದೆ.

ಸಿಂಹ
ಆದ ಸಣ್ಣ ತಪ್ಪಿನಿಂದ ಬುದ್ಧಿ ಕಲಿಯದೇ ಇದ್ದರೆ
ಮುಂದೆ ಇದೇ ತಪ್ಪು ಇನ್ನೊಂದು ದೊಡ್ಡ
ತಪ್ಪಿಗೆ ದಾರಿ ಮಾಡಿ ಕೊಡಲಿದೆ. ಎಚ್ಚರವಿರಲಿ.

ಕನ್ಯಾ
ಎಲ್ಲರೂ ನಿಮ್ಮ ಒಳಿತನ್ನೇ ಬಯಸುತ್ತಿದ್ದಾರೆ
ಎಂದುಕೊಳ್ಳುವುದು ಮೂರ್ಖತನ. ನಿಮ್ಮ
ಹಿತೈಷಿಗಳು ಯಾರೆಂದು ಮೊದಲು ತಿಳಿಯಿರಿ.

ತುಲಾ
ಶುಭ ಸಮಾರಂಭಗಳಲ್ಲಿ ನಿಮ್ಮದೇ ಓಡಾಟ
ಇರಲಿದೆ. ಮನೆಯ ಎಲ್ಲಾ ಜವಾಬ್ಧಾರಿಗಳೂ
ನಿಮ್ಮ ಹೆಗಲಿಗೆ ಬೀಳಲಿವೆ. ಶುಭ ಫಲವಿದೆ.

ವೃಶ್ಚಿಕ
ಸುಮ್ಮನೆ ಕಾಯುತ್ತಾ ಕುಳಿತುಕೊಳ್ಳುವುದಕ್ಕಿಂತ
ನಿಮ್ಮಂದ ಸಾಧ್ಯವಾಗುವ ಕಾರ್ಯಗಳನ್ನು
ಮಾಡಿ ಮುಗಿಸಿ. ಆರೋಗ್ಯದಲ್ಲಿ ಚೇತರಿಕೆ. 

ಧನುಸ್ಸು
ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.
ಕಚೇರಿ ಕೆಲಸಗಳಲ್ಲಿ ವ್ಯತ್ಯಯ. ಬೈದವರನ್ನು
ಬಂಧುಗಳು ಎಂದುಕೊಂಡು ಮುಂದೆ ಸಾಗಿ.

ಮಕರ
ಸತ್ಯದ ಮಾರ್ಗದಲ್ಲಿ ನಡೆದರೆ ಖಂಡಿತ ಜಯ
ಸಿಕ್ಕೇ ಸಿಕ್ಕುತ್ತದೆ. ಇರುವುದರಲ್ಲಿ ಸಂತೋಷ
ಪಡುವುದನ್ನು ರೂಢಿ ಮಾಡಿಕೊಳ್ಳಿ.

ಕುಂಭ
ಅಪ್ಪ ಅಮ್ಮನ ಮಾತನ್ನು ಕೇಳಿದರೆ ಮುಂದೆ
ಆರ್ಥಿಕವಾಗಿ ಲಾಭವಾಗಲಿದೆ. ಎಲ್ಲದಕ್ಕೂ
ಮಿತಿ ಇದೆ ಎಂದು ತಿಳಿದುಕೊಳ್ಳುವಿರಿ.

ಮೀನ 
ಸಣ್ಣ ವ್ಯಾಪಾರಿಗಳಿಗೆ ಇದು ಒಳ್ಳೆಯ ದಿನ.
ಲಾಭದಲ್ಲಿ ಹೆಚ್ಚಳ ಕಂಡುಬರಲಿದೆ.
ಚಿನ್ನಾಭರಣ ಕೊಳ್ಳುವ ಸಾಧ್ಯತೆಯೂ ಇದೆ.