Asianet Suvarna News Asianet Suvarna News

ಇಂದು ಈ ರಾಶಿಯವರಿಗೆ ಹೆಚ್ಚಿನ ಸಂತೋಷ ಇರಲಿದೆ

ಶುಕ್ರವಾರ ಡಿಸೆಂಬರ್ 27, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ಭವಿಷ್ಯ.
 

Daily Astrology in Kannada 27 Dec 2019 Horoscope
Author
Bengaluru, First Published Dec 27, 2019, 7:05 AM IST
  • Facebook
  • Twitter
  • Whatsapp

ಮೇಷ : ಹಣದಿಂದಲೇ ಎಲ್ಲವೂ ಸಾಧ್ಯವಾಗುವುದಿಲ್ಲ ಎನ್ನುವ ಸತ್ಯ ಇಂದು ನಿಮಗೆ ತಿಳಿಯಲಿದೆ. ಸ್ನೇಹಕ್ಕೆ ಬೆಲೆ ನೀಡಲಿದ್ದೀರಿ. ಗೊಂದಲ ಬೇಡ.

ವೃಷಭ : ನಿಮ್ಮ ಆಪ್ತ ಬಳಗದಲ್ಲಿ ಇರುವವರಿಂದಲೇ ಇಂದು ನಿಮಗೆ ನೋವಾಗಲಿದೆ. ಯಾರ ಮೇಲೆಯೂ ಆರೋಪ ಬೇಡ.

ಮಿಥುನ : ಸಣ್ಣ ಪುಟ್ಟ ವಿಚಾರಗಳಿಂದ ಹೆಚ್ಚು ಸಂತೋಷ ಅನುಭವಿಸಲಿದ್ದೀರಿ. ಆಮಿಷಗಳಿಗೆ ಬಲಿಯಾಗುವುದು ಬೇಡ, ಧೈರ್ಯ  ಹೆಚ್ಚಾಗಲಿದೆ.

ಕಟಕ : ಯಾರು ಏನಾದರು ಅಂದುಕೊಳ್ಳಲಿ ನಿಮ್ಮ ದಾರಿಯಲ್ಲಿ ನೀವು ಸಾಗುತ್ತಿರಿ, ಆರೋಗ್ಯದ ಕಡೆಗೆ ಗಮನವಿರಲಿ.

ಸಿಂಹ : ಆದಾಯದಲ್ಲಿ ಇಂದು ಸ್ವಲ್ಪ ಏರಿಕೆ ಕಂಡು ಬರಲಿದೆ. ಮನೆಯ ಖರ್ಚಿನಲ್ಲಿ ಏರಿಕೆ. ವೃತ್ತಿಯಲ್ಲಿ ಕಿರಿಕಿರಿ ಅನುಭವಿಸುವ ಸಾಧ್ಯತೆ.

ಕನ್ಯಾ : ಕೊಟ್ಟ ಮಾತನ್ನು ಯಾವುದೇ ಕಾರಣಕ್ಕೂ ಮರೆಯುವುದು ಬೇಡ, ಬೇರೆಯವರ ತಪ್ಪಿಗೆ ನೀವು ದಂಡ ತೆರಬೇಕಾಗಿ ಬರಬಹುದು.

ತುಲಾ : ತಾಳ್ಮೆಯಿಂದ ಇದ್ದರೆ ನಿಮಗೆ ಹೆಚ್ಚು ಅನುಕೂಲವಾಗುವುದು. ಚಿಂತೆ ನಿಮ್ಮನ್ನ ಬಾಧಿಸದು. ಸಕಲ ಕಾರ್ಯಗಳೂ ಆಗಲಿವೆ. 

ವೃಶ್ಚಿಕ : ನೆರೆ ಮನೆಯವರ ಕಷ್ಟಕ್ಕೆ ನೆರವಾಗಲಿದ್ದೀರಿ. ನಿತ್ಯದ ಚಟುವಟಿಕೆಗಳಲ್ಲಿ ಸ್ವಲ್ಪ ಬದಾವಣೆ ಕಂಡು ಬರಲಿದೆ. ಕಣ್ಣಿನ ಸಮಸ್ಯೆಗೆ ಪರಿಹಾರ.

ಧನಸ್ಸು : ಉಂಡುಹೋದ ಕೊಂಡು ಹೋದ ಎನ್ನುವಂತೆ ಮಾಡದಿರಿ. ದೇವರಲ್ಲಿ ಹೆಚ್ಚು ನಂಬಿಕೆ ಹುಟ್ಟಲಿದೆ. ತಂದೆಯ ಮಾತಿಗೆ ಬೆಲೆ ನೀಡಿ. 

ಸೂರ್ಯಗ್ರಹಣ: ನಿಮ್ಮ ಊರಿನಲ್ಲಿ ಹೇಗೆ ಕಂಡಿತು? ರಾಶಿಗಳ ಮೇಲೆ ಫಲಾಫಲ

ಮಕರ : ಶತ್ರುಗಳು ಕೂಡ ಇಂದು ನಿಮಗೆ ಅನುಕೂಲವಾಗುವಂತೆ ಕೆಲಸ ಮಾಡಲಿದ್ದಾರೆ. ಸಣ್ಣ ವಿಚಾರಗಳಿಗೆ ಮನಸ್ಸು ಕೆಡಿಸಿಕೊಳ್ಳದಿರಿ.

ಕುಂಭ : ನಿಮ್ಮ ಕಾರ್ಯಗಳಿಗೆ ನಿಮ್ಮ ವಿರುದ್ಧದ ಟೀಕೆಗೆ ಉತ್ತರವಾಗಲಿ. ಮಾತಿನಿಂದ ಮಾನ ಹಾನಿಯಾಗುವ ಸಾಧ್ಯತೆ ಹೆಚ್ಚು.

ಮೀನ : ದುಷ್ಟರನ್ನು ಕಂಡರೆ ದೂರವಿರಿ. ಆಹಾರ ಕ್ರಮದಲ್ಲಿ ವ್ಯತ್ಯಯವಾಗಲಿದೆ. ಇಂದು ಸ್ವಾರ್ಥ ವ್ಯಕ್ತಿಗಳಿಗೆ ತಕ್ಕ ಉತ್ತರ ನೀಡಲಿದ್ದೀರಿ.

Follow Us:
Download App:
  • android
  • ios