ಸ್ವತಂತ ಯತ್ನಕ್ಕೆ ಒಂದು ರಾಶಿಗಿದೆ ಲಾಭ : ಉಳಿದ ರಾಶಿಗಳ ಫಲಾ ಫಲವೇನು? 

ಮೇಷ
ಅನಿರಿಕ್ಷಿತ ಲಾಭಗಳು ನಿಮ್ಮನ್ನು ಹುಡುಕಿ
ಬರಲಿದೆ. ಬಾಕಿ ಇರುವ ಹಣವು ನಿಮ್ಮನ್ನು
ಸೇರಲಿದೆ. ನಿಮಗಿದು ಒಳ್ಳೆಯ ದಿನವಾಗಿದೆ.

ವೃಷಭ
 ನೀವು ನಿಮ್ಮತನವನ್ನು ಕಳೆದುಕೊಳ್ಳಬೇಡಿ.
ಗಲಭೆಗಳಿಂದ ದೂರವಿರಿ. ಅದಕ್ಕಾಗಿ ಸ್ವಲ್ಪ
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ.

ಮಿಥುನ
ಮೊದಲ ಪ್ರಯತ್ನವಾಗಿ ನೀವು ನಿಮ್ಮದೇ ಸ್ವಂತ
ಬ್ಯುಸಿನೆಸ್ ಶುರು ಮಾಡಲಿದ್ದೀರಿ. ಲಾಭ
ಸಿಗಲಿದೆ. ಶ್ರಮವೇ ನಿಮ್ಮನ್ನು ಗೆಲ್ಲಿಸಲಿದೆ.

ವಾರ ಭವಿಷ್ಯ: ಈ ಒಂದು ರಾಶಿಯವರ ಮನಸ್ಸಿಗೆ ಕಿರಿಕಿರಿ ಹೆಚ್ಚಿರುತ್ತೆ.

ಕಟಕ
ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.
‘ಆರೋಗ್ಯವೇ ಭಾಗ್ಯ’ಎನ್ನುವ ಮಾತನ್ನು
ನೆನಪಿಡಿ. ಎಂದೂ ದುಡ್ಡಿನ ಹಿಂದೆ ಬೀಳದಿರಿ.

ಸಿಂಹ
ನಿಮಗಿಂದು ಮಹತ್ವದ ದಿನ. ಒಳ್ಳೆಯ
ಮನಸ್ಸಿನಿಂದ ಅಂದುಕೊಂಡ ಕಾರ್ಯಕ್ಕೆ ಕೈ
ಹಾಕಿ. ನಿಮ್ಮ ಮೇಲೆ ನಿಮಗೆ ವಿಶ್ವಾಸ ಇರಲಿ.

ಕನ್ಯಾ
ಕಷ್ಟವು ನಿಮ್ಮನ್ನು ಕಾಡಲು ಬಂದರೂ ಅದಕ್ಕೆ
ಸರಿಯಾದ ಪರಿಹಾರವು ನಿಮ್ಮಲ್ಲಿರುತ್ತದೆ.
ನಿಮ್ಮಲ್ಲಿನ ಆತ್ಮಶಕ್ತಿಯೇ ನಿಮಗೆ ಸಹಕಾರಿ.

ತುಲಾ
ಮನೆಯಲ್ಲಿನ ಖುಷಿಯ ವಾತಾವರಣವು
ನಿಮ್ಮಲ್ಲಿ ಹೊಸ ಹುರುಪನ್ನು ತರಲಿದೆ. ನಿಮ್ಮ
ಹಳೆಯ ನೋವುಗಳು ದೂರಾಗಲಿದೆ.

ವೃಶ್ಚಿಕ
ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣ
ಗಳು ಕಂಡು ಬರುತ್ತಿವೆ. ಕೂಡಿಟ್ಟ ಹಣವು
ವೈದ್ಯರ ಪಾಲಾಗಲಿದೆ. ವಿಶ್ರಾಂತಿ ಬೇಕಾಗಿದೆ. 

ಧನುಸ್ಸು
ಬೇಡದ ವಿಚಾರಗಳಿಗೆ ಮನಸ್ಸು ಕೆಡಿಸಿ
ಕೊಳ್ಳುವುದು ಬೇಡ. ಪರರ ಚಿಂತೆಯನ್ನು
ಮರೆತು ನಿಮ್ಮ ಪಾಡಿಗೆ ನೀವಿರುವುದು ಲೇಸು.

ಮಕರ
ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.
ನಯವಾಗಿ ಮಾತನಾಡುವವರಿಂದ ಅಂತರ
ಕಾಯ್ದುಕೊಳ್ಳಿ. ವ್ಯವಹಾರದಲ್ಲಿ ಲಾಭ ಸಿಗಲಿದೆ.

ಕುಂಭ
ತಾಯಿ ಕೂಡಿಟ್ಟ ಹಣ ಇಂದು ನಿಮ್ಮ
ಉಪಯೋಗಕ್ಕೆ ಬರಲಿದೆ. ಆವೇಶದ ಕೈಗೆ
ಬುದ್ದಿ ಕೊಡಬೇಡಿ. ಹೆಚ್ಚು ನಿರೀಕ್ಷೆ ಬೇಡ.

ಮೀನ 
ಮನಸ್ಸು ಹೇಳಿದಂತೆ ಕೇಳಿರಿ. ಅತಿ ಆಸೆ
ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ. ಪ್ರೀತಿ,
ವಿಶ್ವಾಸವೇ ನಿಮ್ಮನ್ನು ಗೆಲ್ಲಿಸಲಿದೆ. ಶುಭಫಲ.