ಮೇಷ: ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವುದು ಬೇಡ. ಹೊಸ ವಸ್ತುಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಶುಭ ಫಲ.

ವೃಷಭ: ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ. ಆರೋಗ್ಯದಲ್ಲಿ ಸ್ಥಿರತೆ. ಸಣ್ಣ ಸಣ್ಣ ವಿಚಾರಗಳನ್ನು ಕಡೆಗಣನೆ ಮಾಡಬೇಡಿ.

ಮಿಥುನ: ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹರಸಿ ಬರಲಿವೆ. ಆರ್ಥಿಕವಾಗಿ ಒಳ್ಳೆಯ ದಿನವಿದು.

ಕಟಕ: ಸಿಗದ ವಸ್ತುಗಳ ಬಗ್ಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ನಿಮ್ಮ ಪಾಲಿನ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಿ ಮುಗಿಸಿ.

ಸಿಂಹ: ಆಪ್ತರು ನೆರವಿಗೆ ಬರುತ್ತಾರೆ ಎನ್ನುವ ಧೈರ್ಯವೇ ನಿಮ್ಮನ್ನು ಮುಂದೆ ನಡೆಸುತ್ತದೆ. ಸಂಸಾರದೊಂದಿಗೆ ಇಡೀ ದಿನ ಕಳೆಯಲಿದ್ದೀರಿ.

ಮಹಿಳೆಯರಿಗೆ ಅತ್ಯಂತ ಶುಭ ಕಾಲ : ಉಳಿದ ರಾಶಿಯ ವಾರ ಭವಿಷ್ಯವೇನು?

ಕನ್ಯಾ: ಮಕ್ಕಳ ಆರೋಗ್ಯದಲ್ಲಿ ಸಣ್ಣ ವ್ಯತ್ಯಯ ಉಂಟಾಗಲಿದೆ. ನಿಮ್ಮ ಪ್ರಾಮಾಣಿಕತೆಗೆ ಒಳ್ಳೆಯ ಅವಕಾಶ ಒದಗಿಬರಲಿದೆ.

ತುಲಾ: ನೀವು ಬದುಕುವುದು ನಿಮ್ಮ ಖುಷಿಗಾಗಿಯೇ ಹೊರತು ಮತ್ತೊಬ್ಬರನ್ನು ಮೆಚ್ಚಿಸುವುದಕ್ಕೆ ಅಲ್ಲ ಎಂಬುದನ್ನು ತಿಳಿದು ಮುನ್ನೆಡೆಯಿರಿ.

ವೃಶ್ಚಿಕ: ಆರಂಭ ಶೂರತ್ವ ಬೇಡ. ಹಿಡಿದ ಕಾರ್ಯ ವನ್ನು ಕಡೆಯವರೆಗೂ ಮಾಡಿ. ದೊಡ್ಡವರ ಆಶೀರ್ವಾದ ನಿಮ್ಮ ಮೇಲೆ ಇರಲಿ.

ಧನುಸ್ಸು: ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುವುದು ಬೇಡ. ದೇಹದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಲಿದ್ದೀರಿ.

ಮಕರ: ಹಳೆ ಸ್ನೇಹಿತರ ಮೂಲಕ ಹೊಸ ಸ್ನೇಹಿತರ ಕೂಟ ಸೇರಿಕೊಳ್ಳಲಿದ್ದೀರಿ. ಮಾತಿನ ಮೇಲೆ ಹಿಡಿತವಿರಲಿ. ಆತ್ಮವಿಶ್ವಾಸದಿಂದ ಸಾಗಿ.

ಕುಂಭ:ನಿಮ್ಮ ಮೇಲೆ ನಿಮಗೆ ಅಭಿಮಾನ ಇರಲಿ. ಕೀಳರಿಮೆಯನ್ನು ಕಳೆದು ಮುಂದುವರೆಯಲಿ ದ್ದೀರಿ. ಸ್ವಂತ ಬಲದ ಮೇಲೆ ನಂಬಿಕೆ ಇರಲಿ.

ಮೀನ: ದೊಡ್ಡ ಉದ್ಯಮ ಮಾಡುವ ಮನಸ್ಸು ಇದ್ದರೂ, ಸಣ್ಣದರಿಂದ ಪ್ರಾರಂಭ ಮಾಡಿ. ಅನುಭವವೇ ಒಳ್ಳೆಯ ಗುರು. ಶುಭಫಲ.