ಮಹಿಳೆಯರಿಗೆ ಅತ್ಯಂತ ಶುಭ ಕಾಲ : ಉಳಿದ ರಾಶಿಯ ವಾರ ಭವಿಷ್ಯವೇನು?

ಭಾನುವಾರ ಜನವರಿ 5 2020ರ ಒಂದು ವಾರದ ಭವಿಷ್ಯ, ನಿಮ್ಮ ರಾಶಿಗಳಿಗೆ ಈ ವಾರದ ಫಲಾ ಫಲವು ಹೇಗಿದೆ. ಇಲ್ಲಿ ತಿಳಿಯಿರಿ

Weekly Astrology in Kannada 5-12 Jan 2020 Horoscope

ಮಹಿಳೆಯರಿಗೆ ಅತ್ಯಂತ ಶುಭ ಕಾಲ : ಉಳಿದ ರಾಶಿಯ ವಾರ ಭವಿಷ್ಯವೇನು?

ಮೇಷ
ಕುಟುಂಬದ ಮುಖ್ಯಸ್ಥರ ಆರೋಗ್ಯದಲ್ಲಿ
ಚೇತರಿಕೆ ಕಂಡು ಬರಲಿದೆ. ಮಹಿಳೆಯರ ಪಾಲಿಗೆ
ವಾರ ಪೂರ್ತಿ ಸಂತಸ ಹೆಚ್ಚಾಗಲಿದೆ. ಚಿನ್ನ, ಬೆಳ್ಳಿ
ಖರೀದಿಗೆ ಇದು ಸಕಾಲವಲ್ಲ. ಆತ್ಮೀಯರೊಂದಿಗೆ
ವ್ಯವಹಾರ ಮಾಡುವಾಗ ಅಗತ್ಯವಾಗಿ ಮುನ್ನೆಚ್ಚರಿಕೆ ಕ್ರಮ
ಗಳನ್ನು ಮಾಡಿಕೊಳ್ಳುವುದು ಸೂಕ್ತ. ಶುಭಫಲ.

ವೃಷಭ
ಮಾಡಿದ್ದುಣ್ಣೋ ಮಹರಾಯ ಎನ್ನುವಂತೆ ಹಿಂದೆ
ಮಾಡಿದ್ದ ತಪ್ಪಿಗೆ ಈ ವಾರದಲ್ಲಿ ಬೆಲೆ
ತೆರಬೇಕಾದೀತು. ಸುತ್ತಾಟಗಳು ಹೆಚ್ಚಾಗಲಿವೆ.
ಮಾಡುವ ಕೆಲಸದಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ಹಿತ್ತಾಳೆ
ಕಿವಿಯಿಂದ ನಿಮಗೆ ಹೆಚ್ಚು ಸಮಸ್ಯೆಯಾಗುವುದು. ದುಂದು
ವೆಚ್ಚದಿಂದ ಸಾಧ್ಯವಾದಷ್ಟು ದೂರವಿರುವುದು ಒಳಿತು.

ಮಿಥುನ
ಕೆಲಸ ಕಾರ್ಯಗಳ ನಡುವಲ್ಲೂ ಆರೋಗ್ಯದ
ಕಡೆಗೆ ಹೆಚ್ಚು ಗಮನ ನೀಡಿ. ಗಂಡ ಮತ್ತು ಮಕ್ಕಳ
ಬಗ್ಗೆ ಹೆಚ್ಚು ಚಿಂತೆ ಮಾಡಲಿದ್ದೀರಿ. ರಿಯಲ್
ಎಸ್ಟೇಟ್ ಉದ್ಯಮಿಗಳಿಗೆ ಹೊಸ ವ್ಯವಹಾರದ ಬಾಗಿಲು
ತೆರೆಯಲಿದೆ. ಆತಂಕ ಪಡಬೇಕಾಗಿಲ್ಲ. ವಾರದ ಕಡೆಯಲ್ಲಿ
ಹಳೆಯ ಸಾಲಗಳು ವಾಪಸ್ ಆಗುವ ಸಾಧ್ಯತೆ ಇದೆ.

ಕಟಕ
ಹಿಡಿದ ಕೆಲಸ ಒಂದೇ ಬಾರಿಗೆ ಮುಗಿದು
ಹೋಗಬೇಕು ಎನ್ನುವ ಆತುರ ಬೇಡ.
ಯಾವುದೇ ಕೆಲಸವಾದರೂ ಅಗತ್ಯವಾದ
ಸಮಯವನ್ನು ಬೇಡಿಯೇ ಬೇಡುತ್ತದೆ. ತಾಳ್ಮೆಯಿಂದ
ಮುಂದೆ ಸಾಗಿದರೆ ಕೆಲಸದಲ್ಲಿ ಪೂರ್ಣತೆ ಸಾಧ್ಯವಾಗಲಿದೆ.
ಮನೆಯಲ್ಲಿ ಪ್ರೀತಿ ಹೆಚ್ಚಾಗಲಿದೆ. ಶುಭ ಫಲ

ಸಿಂಹ
ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ
ನಿಮ್ಮ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ. ದೇವ
ಸ್ಥಾನಗಳಿಗೆ ಭೇಟಿ ನೀಡಲಿದ್ದೀರಿ. ಹಳೆಯ
ನೆನಪುಗಳನ್ನು ನೆನೆದು ದುಃಖಪಡುವುದು ಬೇಡ. ಹೆಂಡತಿ
ಯಿಂದ ಉಳಿತಾಯ ಮಾಡಲ್ಪಟ್ಟ ಹಣ ಈ ವಾರದಲ್ಲಿ
ನಿಮ್ಮ ಸಹಾಯಕ್ಕೆ ಬರಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ.

ಕನ್ಯಾ
ನಿಮ್ಮನ್ನು ತುಳಿಯುವವರ ಬಗ್ಗೆ ಹೆಚ್ಚು ಚಿಂತೆ
ಮಾಡುವುದು ಬೇಡ. ಯಾಕೆಂದರೆ ಅವರು
ಯಾವಾಗಲೂ ನಿಮ್ಮ ಕಾಲ ಕೆಳಗೇ ಇರುತ್ತಾರೆ.
ಪ್ರಗತಿಯತ್ತ ಮನಸ್ಸು ಹರಿಯಲಿದೆ. ಮಕ್ಕಳ ಸಾಧನೆ
ಕಂಡು ತೃಪ್ತ ಭಾವ ಮೂಡಲಿದೆ. ಆರ್ಥಿಕವಾಗಿ ಕೊಂಚ
ಏರುಪೇರು ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ತುಲಾ
ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಆರೋಗ್ಯದಲ್ಲಿ ಕೊಂಚ ಏರುಪೇರು. ಮನೆ
ಮದ್ದಿನಿಂದ ಎಲ್ಲವೂ ನಾಲ್ಕು ದಿನದಲ್ಲಿ
ಸರಿಯಾಗಲಿದೆ. ಬಾಳ ಸಂಗಾತಿಯ ಆಯ್ಕೆ ವಿಚಾರದಲ್ಲಿ
ದುಡುಕುವುದು ಬೇಡ. ಗಂಡ ಹೆಂಡತಿಯ ವಿರಸ ವಾರದ
ವೇಳೆಗೆ ಸರಿಯಾಗಿ ಸಂಸಾರದಲ್ಲಿ ಸಂತೋಷ ಹೆಚ್ಚಲಿದೆ.

ವೃಶ್ಚಿಕ
ಮಕ್ಕಳ ವಿಚಾರದಲ್ಲಿ ಕೋಪಗೊಳ್ಳುವುದು ಬೇಡ.
ಉತ್ತರಿಸಲು ಕಷ್ಟವಾಗುವ ಪ್ರಶ್ನೆಗಳು ಈ ವಾರ
ನಿಮ್ಮ ಮುಂದೆ ಬರಲಿವೆ. ಎಂತಹ ಸಂದರ್ಭ
ಬಂದರೂ ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳದಿರಿ.
ಆರೋಗ್ಯ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆಯಲಿದೆ.
ಎಲ್ಲವನ್ನು ನಾನೇ ಮಾಡಿದೆ ಎನ್ನುವ ಭಾವ ಬೇಡ.

ಧನಸ್ಸು
ಹತ್ತು ಕಟ್ಟುವುದಕ್ಕಿಂತ ಒಂದು ಮುತ್ತುಕಟ್ಟು
ಎನ್ನುವ ಮಾತಿದೆ. ಅದೇ ರೀತಿ ಹತ್ತು ಕೆಲಸವನ್ನು
ಸ್ವಲ್ಪ ಸ್ವಲ್ಪ ಮಾಡುವುದಕ್ಕಿಂತ ಒಂದು ಕೆಲಸದ
ಕಡೆ ಗಮನ ಹರಿಸಿ ಅದರಲ್ಲಿ ಪ್ರಗತಿ ಸಾಧಿಸಿ. ತಂದೆಯ
ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ನೆಮ್ಮದಿ ಇರಲಿ

ಮಕರ
ನಿಮ್ಮ ಗುಣವೇ ನಿಮಗೆ ಈ ವಾರ ಒಳ್ಳೆಯ
ಅವಕಾಶಗಳನ್ನು ತಂದುಕೊಡಲಿದೆ. ಆತ್ಮೀಯರು
ಮತ್ತಷ್ಟು ಹತ್ತಿರವಾಗುವರು. ಕೆಲಸದ ಒತ್ತಡ
ಹೆಚ್ಚಾದರೂ ಅದನ್ನು ಉತ್ಸಾಹದಿಂದ ಮಾಡಲಿದ್ದೀರಿ. ಸಿಕ್ಕ
ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳಿ

ಕುಂಭ
ನೆರೆ ಮನೆಯ ದುಃಖಕ್ಕೆ ನೀವು ಚಿಂತೆ
ಮಾಡುವುದು ಬೇಡ. ನಿಮ್ಮಂದ ಆಗಬಹುದಾದ
ಸಹಾಯ ಮಾಡಿ ಸುಮ್ಮನಿದ್ದು ಬಿಡಿ. ಅನಾವಶ್ಯಕ
ವಿಚಾರಗಳಲ್ಲಿ ತಲೆಹಾಕದಿರಿ. ಮಹಿಳೆಯರ ಪಾಲಿಗೆ ಈ
ವಾರ ಹೆಚ್ಚು ಅನುಕೂಲಕರವಾಗಿರಲಿದೆ. ಉಳಿತಾಯದ
ಕಡೆಗೆ ಹೆಚ್ಚು ಗಮನ ನೀಡಲಿದ್ದೀರಿ. ಗೆಲುವು ನಿಮ್ಮದೆ.

ಮೀನ
ಸುಲಭಕ್ಕೆ ಆಗುವ ಕೆಲಸವನ್ನು ಆತುರ ಮಾಡಿ
ಕಗ್ಗಂಟು ಮಾಡಿಕೊಳ್ಳಲಿದ್ದೀರಿ. ಅನಾವಶ್ಯಕವಾಗಿ
ಸಮಯ ವ್ಯರ್ಥ ಮಾಡಿಕೊಳ್ಳದಿರಿ. ಆರ್ಥಿಕ
ಚಟುವಟಿಕೆಗಳು ಹೆಚ್ಚಾದರೂ ಅದರ ಫಲವನ್ನು
ಅನುಭವಿಸಲು ಹೆಚ್ಚು ಸಮಯ ಬೇಕಾಗುತ್ತದೆ.
ಆಮಿಷದ ಮಾತುಗಳಿಗೆ ಬಲಿಯಾಗುವುದು ಬೇಡ.

Latest Videos
Follow Us:
Download App:
  • android
  • ios