ವೈಕುಂಠ ಏಕಾದಶಿಯ ದಿನ ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ನಿಮ್ಮ ರಾಶಿಗಳ ಫಲಾ ಫಲ? 

ವೈಕುಂಠ ಏಕಾದಶಿ: ಯಾರಿಗೆ ಭಾಗ್ಯದ ಬಾಗಿಲು ತೆರೆಯಲಿದೆ..? ಇಂದಿನ ರಾಶಿಫಲ

Add Asianetnews Kannada as a Preferred SourcegooglePreferred

ಮೇಷ
ದೂರದ ಬೆಟ್ಟ ಯಾವಾಗಲೂ ನುಣ್ಣಗೆ
ಕಾಣುವುದು. ಇರುವುದರಲ್ಲಿ ತೃಪ್ತಿ ಕಾಣಿ.
ಮನೆಯಲ್ಲಿಯೇ ಸಮಯ ಕಳೆಯುವಿರಿ.

ಈ ಮನೆಯಲ್ಲಿ ರಾಹು ಇದ್ದರೆ ದಾಂಪತ್ಯ ಸುಖ ಕನಸಷ್ಟೇ!... 

ವೃಷಭ
ಬಾಲ್ಯದ ಸ್ನೇಹಿತನೊಂದಿಗೆ ಹೆಚ್ಚು ಸಮಯ
ಕಳೆಯುವಿರಿ. ಕಷ್ಟಕ್ಕೆ ನೆರವು ನೀಡುವ ನಿಮ್ಮ
ಗುಣಕ್ಕೆ ಎಲ್ಲರಿಂದಲೂ ಮೆಚ್ಚುಗೆ ಸಿಗಲಿದೆ.

ಮಿಥುನ
ದಾರಿಯಲ್ಲಿ ಸಿಕ್ಕುವ ಕಲ್ಲು, ಮುಳ್ಳುಗಳ ಬಗ್ಗೆ
ಚಿಂತೆ ಬೇಡ. ನಿಮ್ಮ ಗುರಿ ದೂರವಿದೆ.
ಅದರತ್ತ ಮುಖ ಮಾಡಿ ಸಾಗುವುದು ಒಳಿತು.

ಕಟಕ
ಸಮಚಿತ್ತದಿಂದ ಬರುವ ಸವಾಲುಗಳನ್ನು
ಎದುರಿಸಲಿದ್ದೀರಿ. ಹತ್ತಿರ ಬಂದವರನ್ನು
ಪ್ರೀತಿಯಿಂದ ಮಾತನಾಡಿಸಿ. ಒಳಿತಾಗಲಿದೆ.

ಸಿಂಹ
ನಿತ್ಯದ ರಗಳೆಗಳು ಇದ್ದದ್ದೇ. ಒಳ್ಳೆಯ ಸಂಗೀತ
ಕೇಳಿ. ಸಾಧ್ಯವಾದರೆ ಏಕಾಂತದಲ್ಲಿ ಹಾಡಿ.
ಸಂಜೆ ವೇಳೆಗೆ ಮನಸ್ಸು ಹಗುರವಾಗುವುದ

ಕನ್ಯಾ
ನಿಮ್ಮ ಶಕ್ತಿಯನ್ನು ಕೆಲಸದಲ್ಲಿ ವ್ಯಯ ಮಾಡಿ.
ಸಂಜೆ ವೇಳೆಗೆ ಬಂಧುಗಳ ಭೇಟಿಯಾಗಲಿದೆ.
ಯಾರಿಗೂ ನೋವು ನೀಡುವುದು ಬೇಡ.

ತುಲಾ
ಅತಿಯಾದ ಭಾವೋದ್ವೇಗದಲ್ಲಿ ಮಾತಿಗೆ
ಕಡಿವಾಣ ಹಾಕಿ. ಇಂದು ನಿಮಗೆ ಮೌನವೇ
ಹೆಚ್ಚು ಉಪಕಾರಿಯಾಗಲಿದೆ. ಶುಭ ಫಲ.

ವೃಶ್ಚಿಕ
ದೇವರ ಬಗ್ಗೆ ಚರ್ಚೆ ಬೇಡ. ಒಂದು ಶಕ್ತಿ ಇದೆ
ಎಂದು ನಂಬಿ ಅದಕ್ಕೆ ಭಕ್ತಿ ತೋರಿಸಿ. ನಿಮ್ಮ
ಪಾಂಡಿತ್ಯ ಪ್ರದರ್ಶನಕ್ಕೆ ವೇದಿಕೆ ದೊರೆಯಲಿದೆ.

ಧನುಸ್ಸು
ಹೆಚ್ಚು ಆಸೆಗಳನ್ನು ಇಟ್ಟುಕೊಳ್ಳುವುದು ಬೇಡ.
ಅನಿರೀಕ್ಷಿತ ಘಟನೆಗಳಿಂದ ಸಂತೋಷದಿಂದ
ಇರುವಿರಿ. ಸಂಗಾತಿಯಿಂದ ಸಹಾಯ.

ಮಕರ
ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದು ಬೇಡ.
ನಿಮ್ಮ ದಾರಿಯಲ್ಲಿ ನೀವು ಆನೆ ನಡೆದಂತೆ
ಸಾಗುತ್ತಿರಿ. ದಿನಾಂತ್ಯಕ್ಕೆ ಫಲಿತಾಂಶ ಸಿಗಲಿದೆ.

ಕುಂಭ
ನೀವು ಹನುಮಂತನ ಹಾಗೆ. ನಿಮ್ಮ ಶಕ್ತಿಯನ್ನು
ಮೊದಲು ತಿಳಿದುಕೊಳ್ಳಿ. ಅನಾರೋಗ್ಯ
ಪೀಡಿತರಿಗೆ ಹೆಚ್ಚಿನ ಆರೈಕೆ ದೊರೆಯಲಿದೆ.

ಮೀನ 
ಪಾಲಿಗೆ ಬಂದದ್ದು ಪಂಚಾಮೃತ ಎಂದು
ತಿಳಿದು ಮುಂದೆ ಸಾಗಿ. ಖರ್ಚು ಕಡಿಮೆ
ಇರಲಿ. ಸಂಸಾರದಲ್ಲಿ ಸಂತೋಷ ಇರಲಿದೆ