ಶ್ರೀ ದುರ್ಗಾ ಪ್ರತ್ಯಂಗಿರಾ ದೇವಿ ಹೋಮಕ್ಕೆ ಮೆಣಸಿನಕಾಯಿ!
- ಶ್ರೀ ದುರ್ಗಾ ಪ್ರತ್ಯಂಗಿರಾ ದೇವಿ ಹೋಮಕ್ಕೆ ಮೆಣಸಿನಕಾಯಿ, ಮೆಣಸಿನ ಹೋಮ
- ತಮಿಳುನಾಡು ನಂತರ ಗಂಗಾವತಿಯಲ್ಲಿ ದೇವಸ್ಥಾನ ನಿರ್ಮಾಣ
ಗಂಗಾವತಿ (ಅ.9) : ತಾಲೂಕಿನ ಸಂಗಾಪುರ-ಮಲ್ಲಾಪುರ ಮಾರ್ಗದಲ್ಲಿ ಶ್ರೀ ದುರ್ಗಾ ಪ್ರತ್ಯಂಗಿರಾ ದೇವಿ ದೇವಸ್ಥಾನ ನಿರ್ಮಾಣಗೊಂಡಿದ್ದು, ವಿಶೇಷ ಕಾರ್ಯಕ್ರಮಗಳು ಜರುಗಿದವು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮೊಟ್ಟಮೊದಲಿಗೆ ಶ್ರೀಚಕ್ರ ಸಮೇತ ನಿರ್ಮಾಣಗೊಂಡಿರುವ ದೇವಸ್ಥಾನದಲ್ಲಿ ಶ್ರೀ ಜಗನ್ಮಾತ ದುರ್ಗಾ ಪ್ರತ್ಯಂಗಿರಾದೇವಿಯ ಮೂರ್ತಿ ಸ್ಥಾಪನೆಯಾಗಿದೆ. ವಿವಿಧ ಜಿಲ್ಲೆಗಳಿಂದ ನೂರಾರು ಭಕ್ತರು ಭಾಗವಹಿಸಿ ದರ್ಶನ ಪಡೆದರು.
ಮಂಜುನಾಥ ಗುರೂಜಿ ಮತ್ತು ರಂಜೀತಾ ಅಮ್ಮನವರ ನೇತೃತ್ವದಲ್ಲಿ ವಿಶೇಷ ಹೋಮ ಹವನಗಳು ಜರುಗಿದವು. ಈ ಸಂದರ್ಭದಲ್ಲಿ ಸುರೇಶ ಕುಟಂಬದವರು ಭಾಗವಹಿಸಿದ್ದರು. ಇಲ್ಲಿ ದಿನನಿತ್ಯ ಅನ್ನ ದಾಸೋಹ ನಡೆಯುತ್ತಿದ್ದು, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ.
ಲಕ್ಷ್ಮೀ ದೇವಿಗೆ ವಿವಿಧ ಹೆಸರುಗಳಿರುವುದನ್ನು ಕೇಳುತ್ತೇವೆ. ಅದರಂತೆ ದುರ್ಗಾದೇವಿಗೂ ವಿಶೇಷವಾಗಿರುವ ಹೆಸರುಗಳು ಇರುವುದು ಸಾಮಾನ್ಯವಾಗಿದೆ. ತಮಿಳುನಾಡು ರಾಜ್ಯದ ಕುಂಭಕೋಣಂನಲ್ಲಿ ಶ್ರೀ ಜಗನ್ಮಾತ ದುರ್ಗಾ ಪ್ರತ್ಯಂಗಿರಾದೇವಿಯ ಮೂರ್ತಿ ಇದೆ. ಆದಾದ ಬಳಿಕ ಈಗ ಗಂಗಾವತಿ ತಾಲೂಕಿನ ಸಂಗಾಪುರ ಮತ್ತು ಮಲ್ಲಾಪುರ ರಸ್ತೆಯ ಮಾರ್ಗದಲ್ಲಿ ಶ್ರೀ ಜಗನ್ಮಾತ ದುರ್ಗಾ ಪ್ರತ್ಯಂಗಿರಾದೇವಿಯ ದೇವಸ್ಥಾನ ನಿರ್ಮಿಸಲಾಗಿದೆ.
ಹೋಮ ಹವನಗಳಿಗೆ ದವಸ-ಧಾನ್ಯ, ತುಪ್ಪ ಸೇರಿದಂತೆ ವಸ್ತ್ರಗಳು, ತೆಂಗಿನಕಾಯಿ, ನಾಣ್ಯಗಳನ್ನು ಹಾಕಿ ಹೋಮ ಹವನ ನಡೆಸುತ್ತಾರೆ. ಆದರೆ, ಇಲ್ಲಿರುವ ಶ್ರೀ ಜಗನ್ಮಾತ ದುರ್ಗಾ ಪ್ರತ್ಯಂಗಿರಾದೇವಿಯ ದೇವಸ್ಥಾನದಲ್ಲಿ ಒಣ ಕೆಂಪು ಮೆಣಸಿನಕಾಯಿ, ಮೆಣಸು ಸಮರ್ಪಿಸಿ ಹೋಮ ನಡೆಯುತ್ತಿರುವುದು ವಿಶೇಷವಾಗಿದೆ. ಭಕ್ತರು ತಮ್ಮ ಬೇಡಿಕೆ ಈಡೇರಿಕೆ ಮತ್ತು ತಮಗೆ ಬಿದ್ದ ಕೆಟ್ಟದೃಷ್ಟಿಗಳು ನಾಶವಾಗಲಿ ಎಂಬ ಬೇಡಿಕೊಳ್ಳಲು ಭಕ್ತರು ಆಗಮಿಸುತ್ತಿದ್ದಾರೆ. ಪರಿಹಾರ ಕಂಡುಕೊಂಡ ಭಕ್ತರು ಚೀಲಗಟ್ಟಲೆ ಮಣಸಿನಕಾಯಿ ಸಮರ್ಪಿಸುತ್ತಿದ್ದಾರೆ. ಆದರೆ, ಈ ಹೋಮ ಹವನದಿಂದ ಯಾವುದೇ ಮೆಣಸಿನಕಾಯಿಯ ಘಾಟು ಬರುವುದಿಲ್ಲ. ಇದೊಂದು ಪವಾಡವೇ ಎನ್ನುವುದು ಭಕ್ತರಲ್ಲಿ ನಂಬಿಕೆ ಹುಟ್ಟಿದೆ .
ರಾಜಕೀಯ ಶತ್ರುಗಳ ಸಂಹಾರಕ್ಕೆ ಈಶ್ವರಪ್ಪ ಪ್ರತ್ಯಂಗಿರಾ ಹೋಮ
ಗಂಗಾವತಿ ಸಮೀಪವಿರುವ ಶ್ರೀ ಜಗನ್ಮಾತ ದುರ್ಗಾ ಪ್ರತ್ಯಂಗಿರಾದೇವಿ ದೇವಸ್ಥಾನ ಜಾಗೃತ ಸ್ಥಳವಾಗಿದೆ. ಈ ಸ್ಥಳದಲ್ಲಿ ಪ್ರತಿ ಅಮಾವಾಸೆ ಮತ್ತು ಹುಣ್ಣಿಮೆಯಂದು ವಿಶೇಷವಾದ ಕಾರ್ಯಕ್ರಮಗಳು ನಡೆಯುತ್ತವೆ. ಈ ದೇವಸ್ಥಾನ ತಮಿಳುನಾಡಿನ ಕುಂಭಕೋಣಂನಲ್ಲಿದೆ. ಈಗ ಕರ್ನಾಟಕದ ಗಂಗಾವತಿ ತಾಲೂಕಿನಲ್ಲಿ ಈ ದೇವಸ್ಥಾನ ನಿರ್ಮಾಣಗೊಂಡಿದೆ. ಇಲ್ಲಿ ಹೋಮಕ್ಕೆ ಒಣ ಮೆಣಸಿನಕಾಯಿ ಮತ್ತು ಮೆಣಸು ಸಮರ್ಪಿಸಿ ಭಕ್ತರು ತಮಗೆ ಬಿದ್ದ ಕೆಟ್ಟದೃಷ್ಟಿಯನ್ನು ಪರಿಹರಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.
ಶ್ರೀನಿವಾಸ ಸಣ್ಣಾಪುರ ದೇವಿ ಭಕ್ತ