ರಾಜಕೀಯ ಶತ್ರುಗಳ ಸಂಹಾರಕ್ಕಾಗಿ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ನಗರದಲ್ಲಿ ಪ್ರತ್ಯಂಗಿರಾ ಹೋಮ-ವಿಶೇಷ ಪೂಜೆ ನಡೆಸಿದರು. ನಗರದ ಉತ್ತರಹಳ್ಳಿಯಲ್ಲಿನ ಪ್ರತ್ಯಂಗಿರಾ ದೇವಾಲಯದಲ್ಲಿ ಬುಧವಾರ ಹೋಮ ನಡೆಸಲಾಯಿತು. ಶತ್ರು ಸಂಹಾರಕ್ಕಾಗಿ ನಡೆಯುವ ಹೋಮ ಇದಾಗಿದ್ದು, ನವರಾತ್ರಿಯ ಆರನೇ ದಿನ ವಿಶೇಷವಾಗಿ ಹೋಮವನ್ನು ಮಾಡಲಾಗುತ್ತದೆ.
ಬೆಂಗಳೂರು: ರಾಜಕೀಯ ಶತ್ರುಗಳ ಸಂಹಾರಕ್ಕಾಗಿ ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ನಗರದಲ್ಲಿ ಪ್ರತ್ಯಂಗಿರಾ ಹೋಮ-ವಿಶೇಷ ಪೂಜೆ ನಡೆಸಿದರು.
ನಗರದ ಉತ್ತರಹಳ್ಳಿಯಲ್ಲಿನ ಪ್ರತ್ಯಂಗಿರಾ ದೇವಾಲಯದಲ್ಲಿ ಬುಧವಾರ ಹೋಮ ನಡೆಸಲಾಯಿತು. ಶತ್ರು ಸಂಹಾರಕ್ಕಾಗಿ ನಡೆಯುವ ಹೋಮ ಇದಾಗಿದ್ದು, ನವರಾತ್ರಿಯ ಆರನೇ ದಿನ ವಿಶೇಷವಾಗಿ ಹೋಮವನ್ನು ಮಾಡಲಾಗುತ್ತದೆ.
ಕಾಳರಾತ್ರಿಯ ಅವತಾರದ ದಿನ ಹೋಮ ನಡೆಸಿದರೆ ಶತ್ರುಗಳ ಸಂಹಾರವಾಗಲಿದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ಹೋಮ ನಡೆಸಿದರು. ದೇವಾಲಯಕ್ಕೆ ಭೇಟಿ ನೀಡಿದ ಈಶ್ವರಪ್ಪ ಪೂಜೆ ಸಲ್ಲಿಸಿ ಸಂಕಲ್ಪ ಮಾಡಿ ತೆರಳಿದರು. ಬಳಿಕ ಪ್ರತ್ಯಂಗಿರಾ ಹೋಮ ನಡೆಸಲಾಯಿತು. ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುವಲ್ಲ. ಆದರೆ, ಯಾರು ಶತ್ರುಗಳಿದ್ದಾರೋ ಅವರ ಸಂಹಾರವಾಗಲಿ ಎಂದು ಈಶ್ವರಪ್ಪ ಅವರು ಹೋಮ ನಡೆಸಿದರು ಎಂದು ಹೇಳಲಾಗಿದೆ.
ಈಶ್ವರಪ್ಪ ಅವರಿಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ಮಾಧ್ಯಮ ಸಂಚಾಲಕ ವಿನಯ್, ಮಾಜಿ ಮೇಯರ್ ವೆಂಕಟೇಶಮೂರ್ತಿ ಸಾಥ್ ನೀಡಿದರು.
ಇತ್ತೀಚೆಗೆ ಈಶ್ವರಪ್ಪ ಅವರು ವಿನಯ್ ತಮ್ಮ ಆಪ್ತ ಸಹಾಯಕನಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಬುಧವಾರ ನಡೆದ ವಿಶೇಷ ಪೂಜೆಯಲ್ಲಿ ಈಶ್ವರಪ್ಪ ಅವರೊಂದಿಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
