ವೇಶ್ಯೆಯರು ಇವರನ್ನು ಶತ್ರುಗಳಂತೆ ಕಾಣ್ತಾರೆ; ಯಾಕೆ ಗೊತ್ತಾ? ಚಾಣಕ್ಯ ನೀತಿಯಲ್ಲಿದೆ ವಿವರ
ಚಾಣಕ್ಯ ನೀತಿಯಲ್ಲಿ ವೇಶ್ಯೆಯ ಬದುಕಿನ ಬಗ್ಗೆ ಹೇಳಲಾಗಿದೆ. ಪರ ಪುರುಷರನ್ನು ಸೆಳೆಯೋದು ವೇಶ್ಯೆಯ ಕೆಲಸ ಆಗಿತ್ತು. ಆಕೆಯ ಹಣಕ್ಕಾಗಿ ಅಥವಾ ತನ್ನ ಉದರ ಪೋಷಣೆಗಾಗಿ ಸುಳ್ಳು ಸಹ ಹೇಳುತ್ತಿದ್ದಳು.
ಆರ್ಥಿಕ ತಜ್ಞ ಆಚಾರ್ಯ ಚಾಣಕ್ಯ ಅವರು ಹಾಕಿಕೊಟ್ಟ ನೀತಿಗಳು ಕೇವಲ ಹಣಕಾಸಿನ ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಆಚಾರ್ಯ ಚಾಣಕ್ಯರು ಸಾಮಾಜಿಕ ವ್ಯವಸ್ಥೆಗಳ ಬಗ್ಗೆಯೂ ವಿವರವಾಗಿ ಉಲ್ಲೇಖಿಸಿದ್ದಾರೆ. ವೃತ್ತಿ ಬದುಕು, ಸಂಬಂಧಗಳ ಮಹತ್ವ , ಮಾನವೀಯ ಮೌಲ್ಯಗಳು, ಆರೋಗ್ಯ ಸಲಹೆ, ಪ್ರಯಾಣ, ಆಸ್ತಿ ಸಂಗ್ರಹ, ರಾಜಕೀಯ ಕುರಿತು ಸಹ ಕೌಟಿಲ್ಯರು ತಮ್ಮ ನೀತಿಗಳಲ್ಲಿ ವಿವರಿಸಿದ್ದಾರೆ.
ವಿದ್ಯಾರ್ಜನೆ, ಜೀವನದಲ್ಲಿ ಹೇಗೆ ಯಶಸ್ಸು ಕಾಣಬೇಕು ಎಂಬುದನ್ನು ಚಾಣಕ್ಯ ನೀತಿಯಲ್ಲಿ ವಿವರಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಸಮಾಜದಲ್ಲಿ ಪ್ರತಿಯೊಂದು ವೃತ್ತಿಯ ಬಗ್ಗೆಯೂ ತಿಳಿಸಲಾಗಿದೆ. ರಾಜ, ಮಂತ್ರಿಯಿಂದ ಹಿಡಿದು ಸೇವಕನ ಜೀವನದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಈ ಹಿಂದೆ ವೈಶ್ಯಾವಟಿಕೆಯನ್ನು ಒಂದು ವೃತ್ತಿಯೆಂದು ಪರಿಗಣಿಸಲಾಗುತ್ತಿತ್ತು ಎಂಬ ವಿಚಾರ ಚಾಣಕ್ಯ ನೀತಿಯಿಂದ ಗೊತ್ತಾಗುತ್ತದೆ.
ಚಾಣಕ್ಯ ನೀತಿಯಲ್ಲಿ ವೇಶ್ಯೆಯ ಬದುಕಿನ ಬಗ್ಗೆ ಹೇಳಲಾಗಿದೆ. ಪರ ಪುರುಷರನ್ನು ಸೆಳೆಯೋದು ವೇಶ್ಯೆಯ ಕೆಲಸ ಆಗಿತ್ತು. ಆಕೆಯ ಹಣಕ್ಕಾಗಿ ಅಥವಾ ತನ್ನ ಉದರ ಪೋಷಣೆಗಾಗಿ ಸುಳ್ಳು ಸಹ ಹೇಳುತ್ತಿದ್ದಳು. ವೇಶ್ಯೆಗೆ ಇವರನ್ನು ಮಾತ್ರ ಅಸೂಯೆಯಿಂದ ಕಾಣೋದರ ಜೊತೆಗೆ ಶತ್ರುಗಳಂತೆ ನೋಡುತ್ತಾಳೆ ಎಂದು ಹೇಳಲಾಗಿದೆ.
ಶ್ಲೋಕ
ಲುಬ್ಧಾನಂ ಯಾಚಕಃ ಶತ್ರುಮೂರ್ಖಾಣಂ ಭೋದಕಃ ರಿಪುಃ|
ಜಾರಸ್ತ್ರೀಣಾಂ ಪತಿಃ ಶತ್ರುಶ್ಚೋರಾಣಂ ಚಂದ್ರಮಾ ರಿಪುಃ||
ಶ್ಲೋಕದ ಅರ್ಥ
ಲೋಭಿಗೆ ಭಿಕ್ಷುಕ ಶತ್ರು ಆಗುತ್ತಾನೆ. ಮೂರ್ಖರಿಗೆ ಉಪದೇಶ ನೀಡುವ ಗುರು ಅಥವಾ ಜಾಣ ಶತ್ರು ಆಗತ್ತಾರೆ. ವೇಶ್ಯೆಯರಿಗೆ ಗೃಹಿಣಿ, ಕಳ್ಳರಿಗೆ ಬೆಳದಿಂಗಳು ಶತ್ರು ಆಗುತ್ತದೆ.
ಶ್ಲೋಕದ ವಿವರಣೆ
ಜಿಪುಣನ ಬಳಿ ಭಿಕ್ಷುಕ ಬಂದು ಭಿಕ್ಷೆ ಕೇಳಿದ್ರೆ ಅಥವಾ ಆಪ್ತರು ಸಾಲ ನೀಡುವಂತೆ ಸಹಾಯ ಕೇಳಿದರೆ ಆತನಿಗೆ ಸಂಕಟವಾಗುತ್ತದೆ. ಜಿಪುಣ ತನ್ನ ಬಳಿ ಹಣ ಕೇಳುವ ಜನರನ್ನು ಶತ್ರುಗಳಂತೆ ಕಾಣುತ್ತಾನೆ. ಅದೇ ರೀತಿ ಮೂರ್ಖನಿಗೆ ಯಾರೂ ಉಪದೇಶ ನೀಡಬಾರದು. ಅದು ಅವನಿಗೆ ಇಷ್ಟ ಆಗಲ್ಲ. ಮೂರ್ಖ ಸದಾ ಮೂರ್ಖನಾಗಿರಲು ಇಷ್ಟಪಡುತ್ತಾನೆ. ಹಾಗಾಗಿ ಗುರು, ಶಿಕ್ಷಕ ಅಥವಾ ತಿಳಿ ಹೇಳುವ ಜನರನ್ನು ಶತ್ರುಗಳಂತೆ ಕಾಣುತ್ತಾನೆ.
ಗಂಡು ಮಕ್ಕಳ ತಂದೆಯಾಗಿರೋರು ಈ ತಪ್ಪು ಮಾಡಬಾರದು ಅಂತಾರೆ ಚಾಣಕ್ಯ
ಅದೇ ರೀತಿ ವೇಶ್ಯೆ ಪತಿ ಜೊತೆ ಪ್ರಾಮಾಣಿಕವಾಗಿ ಚೆನ್ನಾಗಿ ಜೀವನ ನಡೆಸುವ ಗೃಹಿಣಿಯನ್ನು ಶತ್ರುವಿನಂತೆ ಕಾಣುತ್ತಾರೆ. ಒಳ್ಳೆಯ ಗೃಹಿಣಿಯರು ಹೆಚ್ಚಾದರೆ ತನಗೆ ಗ್ರಾಹಕರ ಸಂಖ್ಯೆ ಕಡಿಮೆ ಆಗುತ್ತೆ ಅನ್ನೋದು ವೇಶ್ಯೆಯ ಚಿಂತೆ ಆಗಿರುತ್ತದೆ. ಅದೇ ರೀತಿ ಸಮಾಜದಲ್ಲಿ ಎಲ್ಲ ಗೌರವಗಳನ್ನು ಪಡೆಯುವ ಗೃಹಿಣಿಯರನ್ನು ಕಂಡು ವೇಶ್ಯೆ ಅಸೂಯೆಪಡುತ್ತಾಳೆ. ತನಗೆ ಸಮಾಜದಲ್ಲಿ ಗೃಹಿಣಿಗೆ ಸಿಗುವ ಗೌರವ ಸಿಗಲ್ಲವಲ್ಲಾ ಎಂದು ವೇಶ್ಯೆ ನೊಂದುಕೊಳ್ಳುತ್ತಾಳೆ.
ಈ ಬಾರಿ ಶನಿ ಜಯಂತಿಯಂದು ಐದು ರಾಶಿಯವರು ಸಾಡೇಸಾತಿ ನಿವಾರಣೆಗೆ ಈ ಕೆಲಸಗಳನ್ನ ಮಾಡಿ!
ಇನ್ನು ಕಳ್ಳನಿಗೆ ಎಂದಿಗೂ ಬೆಳದಿಂಗಳು ಹಿತವಲ್ಲ. ಈ ಹಿಂದೆ ರಾತ್ರಿ ಲೈಟ್‌ಗಳು ಇರುತ್ತಿರಲಿಲ್ಲ. ಅಮವಾಸ್ಯೆಯಂದು ಕಳ್ಳತನ ಮಾಡಿದ್ರೆ ಕಗ್ಗತ್ತಲಿನಲ್ಲಿ ಮಿಂಚಿನಂತೆ ಮಾಯವಾಗಬಹುದು ಎಂಬುವುದು ಕಳ್ಳನ ಯೋಜನೆ ಆಗಿರುತ್ತದೆ. ಈ ಕಾರಣಕ್ಕಾಗಿ ಬೆಳದಿಂಗಳನ್ನು ಕಳ್ಳ ಶತ್ರುವಿನಂತೆ ಕಾಣುತ್ತಾನೆ.