2025ರಲ್ಲಿ ಇಬ್ಬರು ನಟಿಯರು ಮತ್ತು ಒಬ್ಬ ನಟ ಸಾವನ್ನಪ್ಪಲಿದ್ದಾರೆ, ಪ್ರಧಾನಿ ಮೋದಿ ರಾಜೀನಾಮೆ ನೀಡಲಿದ್ದಾರೆ ಮತ್ತು 11 ದೇಶಗಳು ಭಾರತದ ಮೇಲೆ ಯುದ್ಧ ಸಾರುವ ಸಾಧ್ಯತೆಗಳಿವೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮ ಭವಿಷ್ಯ ನುಡಿದಿದ್ದಾರೆ. ಸೂರ್ಯ ರಶ್ಮಿ ಗವಿ ಗಂಗಾಧರೇಶ್ವರನಿಗೆ ಸ್ಪರ್ಶಿಸದಿರುವುದು ದೇಶಕ್ಕೆ ಗಂಡಾಂತರದ ಸೂಚನೆ ಎಂದು ಹೇಳಿದ್ದಾರೆ.

ಬೆಂಗಳೂರು (ಜ.19): ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಪಾದ ಸ್ಪರ್ಶ ಮಾಡದ ಹಿನ್ನೆಲೆಯಲ್ಲಿ ದೇಶ ಮತ್ತು ರಾಜ್ಯಕ್ಕೆ ಭಾರೀ ಗಂಡಾಂತರ ಕಾದಿದೆ. 2025ನೇ ಸಾಲಿನಲ್ಲಿ ಇಬ್ಬರು ಖ್ಯಾತ ನಟಿಯರು, ಒಬ್ಬ ಖ್ಯಾತ ನಟನ ಸಾವಾಗಲಿದೆ. ಮುಂದಿನ 2 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಲಿದ್ದು, 11 ದೇಶಗಳು ಸೇರಿ ಭಾರತದ ಮೇಲೆ ಯುದ್ಧ ಮಾಡಲಿವೆ. ಇನ್ನು ಕರ್ನಾಟಕದಲ್ಲಿ ಸಿದ್ದರಾಮಯ್ಯಗೆ ಅನಾರೋಗ್ಯ ಕಾಡಲಿದ್ದು, ಡಿ.ಕೆ ಶಿವಕುಮಾರ್‌ಗೆ ಉನ್ನತ ಹುದ್ದೆ ಲಭಿಸಲಿದೆ ಎಂದು ನರೇಂದ್ರ ಶರ್ಮ ಅಲಿಯಾಸ್ ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.

2025ನೇ ವರ್ಷದ ಬಗ್ಗೆ ವಿಶ್ಲೇಷಣೆ ಮಾಡಿದ ಅವರು, ಈ ವರ್ಷದಲ್ಲಿ ನಡೆಯುವ ಕೆಲವು ಗಂಡಾಂತರಗಳನ್ನು ಪತ್ತೆಮಾಡಿದ್ದು, 2025ರಿಂದ 2027ರವರೆಗೆ ದೇಶಾದ್ಯಾಂತ ಹಾಗೂ ಜಾಗತಿಕ ಮಟ್ಟದಲ್ಲೇ ಭಾರಿ ಬದಲಾವಣೆಗಳು ನಡೆಯಲಿವೆ ಎಂದು ಸೂಚಿಸಿದ್ದಾರೆ. 'ಈ ಬಾರಿ ಸೂರ್ಯ ರಶ್ಮಿ ಗಂಗಾಧರೇಶ್ವರನನ್ನು ಸ್ಪರ್ಶಿಸಲಿಲ್ಲ, ಕರೋನಾ ವ್ಯವಸ್ಥೆಯ ಸಮಯದಲ್ಲೂ ಈ ರಶ್ಮಿ ಸ್ಪರ್ಶವಾಗಿರಲಿಲ್ಲ. ಈ ಬಾರಿಯೂ ಈಶ್ವರನನ್ನು ಸೋಕೋದು ಇರಲಿಲ್ಲ, ಇದು ಗಂಡಾಂತರದ ಸೂಚನೆಯಾಗಿದೆ. ಮೋಡ ಬಂದಿದ್ದರೂ ಕೂಡ ಈಶ್ವರನನ್ನು ಸ್ಪರ್ಶಿಸಲಿಲ್ಲ ಎಂದು ಹೇಳುವುದು ತಪ್ಪು. ಗಂಡಾಂತರ ಬಹುಶಃ ಇದೇ ಸಮಯದಲ್ಲಿ ಆಗಬಹುದು ಎಂದು ಗುರೂಜಿ ಹೇಳಿದ್ದಾರೆ. 

ಸ್ಟಾರ್ ನಟರ ಸಾವು:  'ಈ ವರ್ಷದಲ್ಲಿ ಕರ್ನಾಟಕದ 2 ಸ್ಟಾರ್ ನಟಿಯರು ಹಾಗೂ 1 ಸ್ಟಾರ್ ನಟರಿಗೆ ಮ್ಯತ್ಯು ಗಂಡಾಂತರವಿದೆ. ಮತ್ತು ಈ ಹಿಂದೆಯೇ ನಾನು ತಿರುಪತಿಯಲ್ಲಿ ಕಾಲ್ತುಳಿತದ ಬಗ್ಗೆ ಭವಿಷ್ಯ ಹೇಳಿದ್ದೇನೆ, ಅದು ಈಗ ನಿಜವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ 7 ದೇಶಗಳು ನಶಿಸಿ ಹೋಗಲಿವೆ. ಇನ್ನೊಂದೆಡೆ ಸುನಾಮಿ ಉಂಟಾಗುವ ಮೂಲಕ ಭಾರೀ ಗಂಡಾಂತರಗಳು ಸಂಭವಿಸಲಿದೆ, ಎಂದೂ ಹೇಳಿದರು.

ಇದನ್ನೂ ಓದಿ: 2025-26ಕ್ಕೆ ಮೂರನೇ ಮಹಾಯುದ್ಧ ಶಿವನಾಣೆ ಸತ್ಯ; ಭಾರತ ಇಬ್ಭಾಗವಾಗಲಿದೆ: ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ!

ರಾಜಕೀಯ ಬದಲಾವಣೆ: ಮಿಥುನ ರಾಶಿಯಲ್ಲಿ ಹೆಸರಾಂತ ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ಅವರ ಸಂಬಂಧಗಳು ಬಹಿರಂಗವಾಗಲಿವೆ. ಡೈವರ್ಸ್ ಕೇಸ್ ಗಳ ಸಂಖ್ಯೆ ಹೆಚ್ಚಾಗಲಿವೆ. 2025ರಿಂದ 2027ರವರೆಗೆ 13 ದೇಶಗಳು ಭಾರತ ದೇಶದ ಮೇಲೆ ದಾಳಿ ನಡೆಸಲಿವೆ, ಎಂಬ ಭವಿಷ್ಯವು ಭಾರಿ ಚರ್ಚೆಗೆ ಕಾರಣವಾಗಿದೆ. ಮಾರ್ಚ್ ತಿಂಗಳಲ್ಲಿ ಶನಿ, ಏಪ್ರಿಲ್‌ನಲ್ಲಿ ಗುರು, ಮೇ ತಿಂಗಳಲ್ಲಿ ರಾಹು-ಕೇತು ಗ್ರಹಗಳು ಬದಲಾಗುವುದರಿಂದ, ದೊಡ್ಡ ಗ್ರಹಗಳ ಪ್ರಭಾವದಿಂದ 2025 ರಿಂದ 2027 ರವರೆಗೆ ರಾಜಕೀಯ ಸನ್ನಿವೇಶದಲ್ಲಿ ಮಹತ್ವಪೂರ್ಣ ತಿರುವುಗಳನ್ನು ಕಾಣಬಹುದು.

ಪ್ರಧಾನಿ ಮೋದಿ ರಾಜೀನಾಮೆ, ಡಿಕೆಶಿಗೆ ಉನ್ನತ ಹುದ್ದೆ: ಪ್ರಧಾನಿ ನರೇಂದ್ರ ಮೋದಿ ರಾಜಿನಾಮೆ ನೀಡುವ ಸಾಧ್ಯತೆ ಹೆಚ್ಚಿನದಾಗಿದೆ. ಶೇ.80ರಷ್ಟು ಮೋದಿ ರಾಜಿನಾಮೆ ನೀಡುವ ಭವಿಷ್ಯವು ಗ್ಯಾರಂಟಿಯಾಗಿದೆ. ಜೊತೆಗೆ, 2025 ರಿಂದ 2027 ರವರೆಗೆ ಡಿಕೆ ಶಿವಕುಮಾರ್ ಅವರಿಗೆ ಹೊಸ ಅವಕಾಶಗಳು ಬರಲಿವೆ. ಇನ್ನು ಸಿದ್ದರಾಮಯ್ಯ ಅವರಿಗೆ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಮುಂದಿನ 3 ವರ್ಷಗಳಲ್ಲಿ 3 ಸಿಎಂ ಅಥವಾ 3 ಗವರ್ನರ್‌ಗಳು ನೇಮಕವಾಗುವ ಮೂಲಕ ರಾಜ್ಯವು 3 ಭಾಗವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೊಗಳುವ ನಾಯಿ ಕಚ್ಚಲ್ಲ, ಅಪಹಾಸ್ಯ ಮಾಡಿದ್ರೆ ದುರಂಕಾರ; ಟ್ರೋಲಿಗರಿಗೆ ಬ್ರಹ್ಮಾಂಡ ಗುರೂಜಿ ತಿರುಗೇಟು