Astrology Prediction: ಕೇತು ನಾಳೆ (April 12) ತುಲಾ ರಾಶಿಯನ್ನು ಪ್ರವೇಶಿಸಲಿದೆ. ಮೊದಲ ನಾಲ್ಕು ರಾಶಿಗಳ ಮೇಲೆ ಇದರಿಂದ ಯಾವ ಪರಿಣಾಮ ಉಂಟಾಗಬಹುದು, ಪರಿಹಾರವೇನು?
ಕೇತುವಿನದು ಹಿಮ್ಮುಖ ಚಲನೆ. ಜ್ಯೋತಿಷ್ಯದಲ್ಲಿ ಕೇತುವಿನ ಚಲನೆ ಬಹಳ ಪ್ರಾಮುಖ್ಯತೆ ಇದೆ. ಈ ಗ್ರಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವುದು ಬಹಳ ನಿಧಾನವಾಗಿ. ಕೇತು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಲು ವರ್ಷಗಳ ಮೇಲೆ ಆರು ತಿಂಗಳು ತೆಗೆದುಕೊಳ್ಳುತ್ತದೆ. ಈ ಚಲನೆ ವಿವಿಧ ರಾಶಿಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಒಳಿತು ಉಂಟು ಮಾಡಿದರೆ ಇನ್ನು ಕೆಲ ರಾಶಿಗಳಿಗೆ ದೋಷ ಉಂಟು ಮಾಡುವುದು. ಆ ಪ್ರಭಾವ ಒಂದೂವರೆ ವರ್ಷ ಇರುವುದು.
ಈ ಕೇತು ತುಲಾ ರಾಶಿಗೆ ಪ್ರವೇಶಿಸಿದಾಗ ಮೊದಲ 4 ರಾಶಿಗಳ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತೆ ಎಂದು ನೋಡೋಣ.
ಮೇಷ (Aries)
ಕೇತುವಿನ ಈ ಚಲನೆಯಿಂದ (Ketu Transit) ನಿಮಗೆ ಕೆಲವೊಂದು ವಿಚಾರಗಳಲ್ಲಿ ಒಳಿತಿದೆ. ನಾಳೆ ಕೇತು ನಿಮ್ಮ ಏಳನೇ ಮನೆಯ ಕಡೆ ಸಾಗುತ್ತದೆ. ಈ ಸ್ಥಾನದಿಂದ ನಿಮಗೆ ಒಳಿತಾಗುತ್ತದೆ. ಯಾವುದೇ ಸಂಸ್ಥೆಯಿಂದ ಕೆಲಸದ ಆಫರ್ ಬರಬಹುದು. ವ್ಯವಹಾರದಲ್ಲಿ ಪಾಲುದಾರಿಕೆಯ ಪ್ರಸ್ತಾಪ ಬರಬಹುದು. ಆದರೆ ಅಡ್ವೆಂಚರ್ (Adventure) ಗೆ ಸಂಬಂಧಿಸಿದ ವಹಿವಾಟಿನಲ್ಲಿ ವಂಚನೆ ಆಗಬಹುದು. ಎಚ್ಚರಿಕೆಯಿಂದಿರಿ. ಪಾಲುದಾರಿಕೆ ವ್ಯವಹಾರದಲ್ಲಿದ್ದರೆ, ಪಾಲುದಾರರೊಂದಿಗಿನ ನಿಮ್ಮ ಸಂಬಂಧದಲ್ಲಿ ಘರ್ಷಣೆಗಳು ಉಂಟಾಗಬಹುದು, ಅದು ನಿಮ್ಮ ವ್ಯವಹಾರದ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಬೆನ್ನು ನೋವು ಮತ್ತು ಕಾಲುಗಳಲ್ಲಿ ನೋವು ಅನುಭವಿಸುವ ಸಾಧ್ಯತೆಯಿದೆ. ವೈವಾಹಿಕ ಜೀವನದಲ್ಲಿ ಮೂರನೇ ವ್ಯಕ್ತಿಯ ಮೂಗು ತೂರಿಸುವಿಕೆ ಸಮಸ್ಯೆ ಸೃಷ್ಟಿಸಬಹುದು.
ಪರಿಹಾರ: ಮಂಗಳವಾರ, ಶನಿವಾರ ಎಳ್ಳನ್ನು ದಾನ ಮಾಡಿ.
Jupiter Transit: 12 ವರ್ಷಗಳ ಬಳಿಕ ಗುರು ಮೀನಕ್ಕೆ, ಈ 5 ರಾಶಿಗಳಿಗಿನ್ನು ಪರ್ವ ಕಾಲ
ವೃಷಭ (Taurus)
ಕೇತು ನಿಮ್ಮ ಆರನೇ ಮನೆಯಲ್ಲಿ (sixth house) ಇರಲಿದೆ. ಈ ಅವಧಿಯಲ್ಲಿ ಒಂದಿಷ್ಟು ಸಮಸ್ಯೆಗಳು ಕಂಡುಬಂದರೂ ಅದರ ವಿರುದ್ಧ ಹೋರಾಡುವ ಶಕ್ತಿ ನಿಮ್ಮಲ್ಲಿರುತ್ತದೆ. ಶತ್ರುಗಳನ್ನು ಗೆಲ್ಲುವಲ್ಲಿ ಯಶಸ್ಸು ಸಾಧಿಸಬಹುದು. ತುಂಬಾ ಸಮಯದಿಂದ ಕಾಡುತ್ತಿದ್ದ ಕಾಯಿಲೆಯಿಂದ ಮುಕ್ತರಾಗುವಿರಿ. ಆದರೆ ಕೆಲವು ಚರ್ಮ ಸಂಬಂಧಿತ ಸಮಸ್ಯೆಗಳನ್ನು ಸಹ ಎದುರಿಸಬಹುದು. ವಾಹನ ಚಾಲನೆಯಲ್ಲಿ ಹುಷಾರಾಗಿರಿ. ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರಬಹುದು. ಅದರಲ್ಲಿ ಕೆಲವು ಸಮಸ್ಯೆಗಳು ಪರಿಹಾರ ಆಗುವವು. ನ್ಯಾಯಾಲಯದಲ್ಲಿ ನಿಮ್ಮ ಮೇಲೆ ಏನಾದರೂ ಪ್ರಕರಣವಿದ್ದರೆ ಜಯ ಗಳಿಸುವಿರಿ. ಆದರೆ ನಿಮ್ಮ ಅನಾರೋಗ್ಯಕರ ಜೀವನಶೈಲಿಯಿಂದ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ವೈದ್ಯರು (doctors) ಮತ್ತು ವಕೀಲ ವೃತ್ತಿಯವರಿಗೆ ಈ ಚಲನೆಯಿಂದ ಅನುಕೂಲವಾಗಲಿದೆ. ಇವರು ವೃತ್ತಿಜೀವನದಲ್ಲಿ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಕಾಣಬಹುದು.
ಪರಿಹಾರ: ಆರ್ಥಿಕ ಅಭಿವೃದ್ಧಿಗೆ ಬೆಳ್ಳಿಯ ವಸ್ತು ಧರಿಸಿ.
Weekly Horoscope: ಸಿಂಹಕ್ಕೆ ಈ ವಾರ ಆರೋಗ್ಯ ಸಮಸ್ಯೆ, ಮಕರಕ್ಕೆ ಮಾನಭಂಗ
ಮಿಥುನ (Gemini)
ಐದನೇ ಮನೆಯಲ್ಲಿರುವ ಕೇತುವಿನಿಂದ ಪ್ರೇಮ ಜೀವನದಲ್ಲಿ ನೆಗೆಟಿವ್ ಪರಿಣಾಮಗಳು ಉಂಟಾಗಬಹುದು. ಸಂಬಂಧದ (Relationship) ಮಧ್ಯದಲ್ಲಿ ಮೂರನೇ ವ್ಯಕ್ತಿಯಿಂದಾಗಿ ಮನಸ್ತಾಪ ಉಂಟಾಗಬಹುದು. ಕೆಲವರು ಸಂಗಾತಿಯಿಂದ ಮೋಸ ಹೋಗಬಹುದು. ವಿದ್ಯಾರ್ಥಿಗಳ ಏಕಾಗ್ರತೆಯನ್ನು ತಗ್ಗಿಸಬಹುದು. ಆದರೆ ಈ ಸಮಯ ಸಂಶೋಧನೆಯಲ್ಲಿರುವವರಿಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಡುವ ಸಾಧ್ಯತೆ ಇದೆ. ಮಾನಸಿಕವಾಗಿ ಕೆಲವು ಸಮಸ್ಯೆಗಳು ನಿಮ್ಮ ಆತ್ಮಸ್ಥೈರ್ಯ ಕುಂದಿಸಬಹುದು. ಆದರೆ ಒಂದು ಸಮಯದ ಬಳಿಕ ಇವೆಲ್ಲ ಸಮಸ್ಯೆ ಪರಿಹಾರವಾಗಿ ನೆಮ್ಮದಿ ನೆಲೆಸಲಿದೆ. ಮನೆಗೆ ಹೊಸ ಅತಿಥಿಯ ಆಗಮನ ಆಗಬಹುದು. ಅದರಿಂದ ಒಂದಿಷ್ಟು ಸಮಸ್ಯೆಗಳು ಬಂದರೂ ಸಂತೋಷ ಹೆಚ್ಚಾಗುವುದು ಖಂಡಿತಾ. ಕೆಲವು ಸಮಸ್ಯೆಗಳ ನಿವಾರಣೆಗೆ ಬೀದಿ ನಾಯಿಗಳಿಗೆ ಆಹಾರ ಹಾಕಿ.
ಕಟಕ (Cancer)
ಕೇತುವು ನಿಮ್ಮ ನಾಲ್ಕನೇ ಮನೆಯಲ್ಲಿ ಇರಲಿದೆ, ಇದರಿಂದ ವಿದ್ಯಾರ್ಥಿಗಳಿಗೆ (Students) ಅಧ್ಯಯನದಲ್ಲಿ ಅಡಚಣೆ, ಏಕಾಗ್ರತೆ ಕೊರತೆ ಉಂಟಾಗಬಹುದು. ಮನೆಯ ವಾತಾವರಣವೂ ಅಷ್ಟೊಂದು ಸಂತೋಷದಿಂದ ಕೂಡಿರುವುದಿಲ್ಲ. ನಿಮ್ಮ ಕುಟುಂಬದ ಸದಸ್ಯರ ನಡುವೆ ಕೆಲವು ವಿವಾದಗಳು ಮತ್ತು ಜಗಳಗಳು ಸಹ ಇರಬಹುದು, ಅದು ನಿಮ್ಮ ಮನೆಯ ಶಾಂತಿಯನ್ನು ಕದಡಬಹುದು. ಈ ಅವಧಿಯಲ್ಲಿ ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದಲ್ಲ. ಒಂದುವೇಳೆ ಹೂಡಿಕೆ ಮಾಡಿದರೆ ಮೋಸವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ತಾಯಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಇದರಿಂದಾಗಿ ನೀವು ತುಂಬಾ ಒತ್ತಡಕ್ಕೆ ಒಳಗಾಗಬಹುದು. ಕೆಲವು ಹೊಸ ವಿಷಯಗಳನ್ನು ಕಲಿಯಲು ಒಲವು ತೋರಬಹುದು. ಸಾಧ್ಯವಾದಷ್ಟು ಧ್ಯಾನ, ಯೋಗ (Yoga) ದಲ್ಲಿ ತೊಡಗಿಸಿಕೊಳ್ಳಿ. ಸಮಸ್ಯೆಗೆ ಚಿಂತೆಯಿಂದ ಪರಿಹಾರ ಇಲ್ಲ, ಚಿಂತನೆಯಿಂದ ಪರಿಹಾರ ಇದೆ ಎಂಬುದು ತಿಳಿದಿರಲಿ. ಹುಬ್ಬಿನ ನಡುವೆ ಕುಂಕುಮ ಇಡುವುದು, ಮನೆ ದೇವರ ಪೂಜೆಯಿಂದ ನೆಮ್ಮದಿ.
Diseases and Planets: ಮತ್ತೆ ಮತ್ತೆ ಕಾಡುವ Acidityಗೆ ಈ ಗ್ರಹವೇ ಕಾರಣ!
