Asianet Suvarna News Asianet Suvarna News

ಯಾವ ತಾರೀಖಿನಂದು ಹುಟ್ಟಿದ ವ್ಯಕ್ತಿ ನಿಮ್ಮ ಸಂಗಾತಿಯಾಗಬಹುದು? ಸುಖ ಸಂಸಾರಕ್ಕೆ ಸಂಖ್ಯಾಶಾಸ್ತ್ರ ಸೂತ್ರ...

ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಯಾವ ತಾರೀಖಿನಂದು ಹುಟ್ಟಿದ ವ್ಯಕ್ತಿ ನಿಮ್ಮ ಸಂಗಾತಿಯಾಗಬಹುದು? ಸುಖ ಸಂಸಾರಕ್ಕೆ ಸಂಖ್ಯಾಶಾಸ್ತ್ರ ಸೂತ್ರ...
 

A person born on which date can be your partner Numerology formula for happy family suc
Author
First Published Aug 24, 2024, 10:42 PM IST | Last Updated Aug 25, 2024, 10:51 AM IST

ಐದೂ ಬೆರಳುಗಳು ಸಮ ಇರುವುದಿಲ್ಲ ಎನ್ನುವ ಗಾದೆ ಮಾತಿನಂತೆ, ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ವಿಭಿನ್ನ ಗುಣಗಳು ಇರುತ್ತವೆ. ಇದೇ ಕಾರಣಕ್ಕೆ  ಹುಟ್ಟಿದ ದಿನಾಂಕದ ಪ್ರಕಾರ ಮದುವೆ ಸಂಖ್ಯಾಶಾಸ್ತ್ರವು ನಮ್ಮನ್ನು ಒಂಬತ್ತು ವಿಭಿನ್ನ ಪ್ರಕಾರಗಳಾಗಿ ವಿಂಗಡಿಸುತ್ತದೆ. 1 ರಿಂದ 9ರ ಅಂಕೆಯೇ ಇದರ ಮೂಲಾಧಾರ. ಈ ಒಂಬತ್ತು ಅಂಕೆಗೆ ತಕ್ಕಂತೆ ಕೆಲವರು ಭಾವುಕರಾಗಿರುತ್ತಾರೆ, ಕೆಲವರು ಪ್ರೇಮದಲ್ಲಿ ಪ್ರಾಕ್ಟಿಕಲ್ ಆಗಿದ್ದರೆ, ಇನ್ನು ಕೆಲವರು ಸೌಂದರ್ಯದ ಹುಡುಕಾಟದಲ್ಲಿರುತ್ತಾರೆ, ಮತ್ತೆ ಕೆಲವರು ಪ್ರೀತಿಗೆ ಹಂಬಲಿಸಿದರೆ, ಕೆಲವರು ದುಡ್ಡಿನ ವ್ಯಾಮೋಹಕ್ಕೆ ಒಳಗಾಗಿರುತ್ತಾರೆ.  ಇದು ನೀವು ಯಾವಾಗ ಜನಿಸಿದಿರಿ ಎಂಬುದರ ಮೇಲೆ ಅವಲಂಬಿತವಾಗಿದೆ.  ವ್ಯಕ್ತಿಯ ಹುಟ್ಟಿದ ದಿನಾಂಕದಿಂದ ಸಂಖ್ಯಾಶಾಸ್ತ್ರವನ್ನು ಕಲಿತ ನಂತರ ನೀವೇ ವಿಶ್ಲೇಷಿಸಬಹುದು.

ವ್ಯಕ್ತಿಯ ಗುಣಲಕ್ಷಣಗಳು ಅವರ ಅತೀಂದ್ರಿಯ ಸಂಖ್ಯೆ, ಡೆಸ್ಟಿನಿ ಸಂಖ್ಯೆ, ಹೆಸರು ಸಂಖ್ಯೆ, ರಾಶಿಚಕ್ರ, ತಿಂಗಳು ಮತ್ತು ಹುಟ್ಟಿದ ವರ್ಷವನ್ನು ಅವಲಂಬಿಸಿರುತ್ತದೆ. ಸಂಖ್ಯಾಶಾಸ್ತ್ರವನ್ನು ಜ್ಯೋತಿಷ್ಯಕ್ಕೆ ಉತ್ತಮ ಒಡನಾಡಿ ಎಂದು ಪರಿಗಣಿಸಲಾಗಿದೆ. ನಿಮ್ಮ  ಜನ್ಮ ದಿನಾಂಕವನ್ನು ವಿಶ್ಲೇಷಿಸುವುದು ಈಗ ಸುಲಭ. ನೀವು ಹುಟ್ಟಿದ ದಿನವನ್ನು 1 ರಿಂದ 9 ಸಂಖ್ಯೆಗೆ ಇಳಿಸಿ ಅದರ ಅನ್ವಯ ನಿಮಗೆ ಯಾವ ದಿನಾಂಕದಲ್ಲಿ ಹುಟ್ಟಿದ ವ್ಯಕ್ತ ಸೂಕ್ತ ಸಂಗಾತಿಯಾಗಬಲ್ಲ ಎನ್ನುವುದನ್ನು ಸಂಖ್ಯಾಶಾಸ್ತ್ರದಲ್ಲಿ ಹೇಳಲಾಗಿದೆ.  

ನಿಮ್ಮ ಗಾಡಿಯಲ್ಲಿ ಈ ನಂಬರ್ಸ್​ ಇವೆಯಾ? ಹುಟ್ಟಿದ ದಿನಾಂಕಕ್ಕೆ ಸರಿಯಾಗಿ ಹೀಗಿದ್ದರೆ ಲಕ್ ನಿಮ್ಮದೇ ಬಿಡಿ!

ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 1, 10 ಅಥವಾ 19 ಆಗಿದ್ದರೆ ನಿಮ್ಮ ಜನ್ಮ ದಿನಾಂಕವು 1 ಎಂದು ಪರಿಗಣಿಸಲಾಗುತ್ತದೆ.  ನಿಮ್ಮ ಜನ್ಮ ಸಂಖ್ಯೆ 1 ಆಗಿದ್ದರೆ, ನಿಮ್ಮಂತೆಯೇ ಅದೇ ಸಂಖ್ಯೆಯನ್ನು ಹೊಂದಿರುವ ಯಾರನ್ನಾದರೂ ಮದುವೆಯಾಗುವುದನ್ನು ತಪ್ಪಿಸಿ. ನೀವಿಬ್ಬರೂ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವುದರಿಂದ, ಇದು ಅಹಿತಕರ ಜಗಳಗಳು, ತಪ್ಪು ತಿಳಿವಳಿಕೆ ಮತ್ತು ಜಗಳಗಳಿಗೆ ಕಾರಣವಾಗುತ್ತದೆ.

ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 2, 11 ಅಥವಾ 20 ಆಗಿದ್ದರೆ ನಿಮ್ಮ ಜನ್ಮ ದಿನಾಂಕವು 2 ಎಂದು ಪರಿಗಣಿಸಲಾಗುತ್ತದೆ.   ನಿಮ್ಮ ಜನ್ಮ ಸಂಖ್ಯೆ 2 ಆಗಿದ್ದರೆ,  ನೀವು  1, 2, 3, ಅಥವಾ 5 ರಂತಹ ವ್ಯಕ್ತಿಯನ್ನು ಮದುವೆಯಾಗಬಹುದು, ಏಕೆಂದರೆ ಅವರು ಜೀವನದಲ್ಲಿ ನಿಮ್ಮನ್ನು ಬೆಂಬಲಿಸಲು ಸಾಧ್ಯವಾಗುತ್ತದೆ, ಇದು ಸಂತೋಷದ ವೈವಾಹಿಕ  ಜೀವನಕ್ಕೆ ಕಾರಣವಾಗುತ್ತದೆ. 

ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 3, 12 ಅಥವಾ 21 ಆಗಿದ್ದರೆ ನಿಮ್ಮ ಜನ್ಮ ದಿನಾಂಕವು 3 ಎಂದು ಪರಿಗಣಿಸಲಾಗುತ್ತದೆ.  ನಿಮ್ಮ ಜನ್ಮ ಸಂಖ್ಯೆ 3 ಆಗಿದ್ದರೆ, ನಿಮ್ಮ ಜನ್ಮ ಸಂಖ್ಯೆಯನ್ನು ಹೊಂದಿರುವ ವ್ಯಕ್ತಿಯನ್ನು ಮದುವೆಯಾಗುವುದು ಉತ್ತಮ, ಏಕೆಂದರೆ ಇದು ಶಾಂತ, ಆಹ್ಲಾದಕರ ಮತ್ತು ಶಾಂತಿಯುತ ಜೀವನಕ್ಕೆ ಕಾರಣವಾಗುತ್ತದೆ.

ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 4, 13 ಅಥವಾ 22 ಆಗಿದ್ದರೆ ನಿಮ್ಮ ಜನ್ಮ ದಿನಾಂಕವು 4 ಎಂದು ಪರಿಗಣಿಸಲಾಗುತ್ತದೆ.   ನಿಮ್ಮ ಜನ್ಮ ಸಂಖ್ಯೆ 4 ಆಗಿದ್ದರೆ,  4 ಅಥವಾ 8 ರಂತೆ ಹೊಂದಿರುವ ಯಾರನ್ನಾದರೂ ನೀವು ಮದುವೆಯಾಗುವುದನ್ನು ತಪ್ಪಿಸಬೇಕು.

 ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 5, 14 ಅಥವಾ 23 ಆಗಿದ್ದರೆ, ನಿಮ್ಮ ಜನ್ಮ ದಿನಾಂಕವು 5 ಎಂದು ಪರಿಗಣಿಸಲಾಗುತ್ತದೆ. ಜನನ ಸಂಖ್ಯೆ 5 ಆಗಿದ್ದರೆ 5 ಸಂಖ್ಯೆಯಲ್ಲಿ ಹುಟ್ಟಿದ ವ್ಯಕ್ತಿಯನ್ನು ಮದುವೆಯಾಗುವುದನ್ನು ತಪ್ಪಿಸುವುದು ಉತ್ತಮ, ಏಕೆಂದರೆ ಇದು ಮಕ್ಕಳನ್ನು ಹೊಂದುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
 
ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 6, 15 ಅಥವಾ 24 ಆಗಿದ್ದರೆ, ನಿಮ್ಮ ಜನ್ಮ ದಿನಾಂಕವು 6 ಎಂದು ಪರಿಗಣಿಸಲಾಗುತ್ತದೆ.  ಇಂಥವರು 4, 5, 6, 7 ಅಥವಾ 8 ರಂತೆ ಹೊಂದಿರುವ ವ್ಯಕ್ತಿಯನ್ನು ಮದುವೆಯಾಗಲು ಪ್ರಯತ್ನಿಸಬೇಕು.

ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 7, 16 ಅಥವಾ 25 ಆಗಿದ್ದರೆ ನಿಮ್ಮ ಜನ್ಮ ದಿನಾಂಕವು 7 ಎಂದು ಪರಿಗಣಿಸಲಾಗುತ್ತದೆ. ಇಂಥವರು,  4, 5, 6 ಅಥವಾ 8 ರಂತೆ ಹೊಂದಿರುವ ವ್ಯಕ್ತಿಯನ್ನು ಮದುವೆಯಾಗಲು ಪ್ರಯತ್ನಿಸಬೇಕು.
 
ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 8, 17 ಮತ್ತು 26 ಆಗಿದ್ದರೆ ನಿಮ್ಮ ಜನ್ಮ ದಿನಾಂಕವು 8 ಎಂದು ಪರಿಗಣಿಸಲಾಗುತ್ತದೆ.  ಜನನ ಸಂಖ್ಯೆ 8 ಹೊಂದಿರುವ ಜನರು, ಅವರು  5, 6 ಅಥವಾ 7 ರಂತೆ ಹೊಂದಿರುವ ವ್ಯಕ್ತಿಯನ್ನು ಮದುವೆಯಾಗಲು ಪ್ರಯತ್ನಿಸಬೇಕು.


 ನೀವು ಹುಟ್ಟಿರುವ ದಿನಾಂಕ ಯಾವುದೇ ತಿಂಗಳ 9, 18, 27 ರಂದು ಹುಟ್ಟಿದ್ದರೆ, ನಿಮ್ಮ ಜನ್ಮ ದಿನಾಂಕವು 9 ಎಂದು ಪರಿಗಣಿಸಲಾಗುತ್ತದೆ.  ಜನನ ಸಂಖ್ಯೆ 9 ಹೊಂದಿರುವ ಜನರು, ಅವರು  1, 3, 5 ಅಥವಾ 7 ರಂತೆ ಹೊಂದಿರುವ ವ್ಯಕ್ತಿಯನ್ನು ಮದುವೆಯಾದರೆ ಉತ್ತಮ. 
 

ನಿಮ್ಮ ಮದ್ವೆ ಡೇಟ್ಸ್​ ಹೇಳತ್ತೆ ಸಂಸಾರದ ಗುಟ್ಟು! ಯಾವ ದಿನ ಮದ್ವೆಯಾದ್ರೆ ಸಂಖ್ಯಾಶಾಸ್ತ್ರದಲ್ಲಿ ಏನೇನಿದೆ?

Latest Videos
Follow Us:
Download App:
  • android
  • ios