ನಡುರಾತ್ರಿ ಮನುಷ್ಯನಾಗಿ ನಾಯಿಯೊಂದು ಬದಲಾಗಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗ್ತಿದೆ. ಏನಿದು ವಿಷ್ಯ? 

ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. ಅದೇ ನಂಬಿಕೆಯನ್ನು ಇಟ್ಟುಕೊಂಡೇ ಇಂಥ ವಿಡಿಯೋಗಳನ್ನು ಹರಿಬಿಡುವುದು ಮಾಮೂಲಾಗಿದೆ.

ದೆವ್ವ ಭೂತ ಪ್ರೇತಾತ್ಮಗಳನ್ನೇ ಇಟ್ಟುಕೊಂಡು ಸೋಷಿಯಲ್​​ ಮೀಡಿಯಾಗಳಲ್ಲಿ ಹರಿದಾಡ್ತಿರೋ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ಇಂಥವುಗಳ ಸಕತ್​ ವೈರಲ್​ ಆಗತ್ತೆ ಎನ್ನುವುದು ಕಂಟೆಂಟ್​ ಕ್ರಿಯೇಟರ್​ಗೆ ಗೊತ್ತಿವೆ. ಇದೇ ಕಾರಣಕ್ಕೆ ಸೀರಿಯಲ್​ಗಳಲ್ಲಿ ಕೂಡ ಆತ್ಮ, ಪ್ರೇತ, ಭೂತಗಳಿಗೆ ಹೆಚ್ಚು ಡಿಮಾಂಡ್​. ಅದೇನೇ ಇದ್ದರೂ ಕೆಲವೊಮ್ಮೆ ಇಂಥ ವಿಡಿಯೋಗಳನ್ನು ನೋಡಿದಾಗ ಮೈಯೆಲ್ಲಾ ಝುಂ ಎನ್ನುವುದು ಸಾಮಾನ್ಯ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗ್ತಿದೆ. ಇದರಲ್ಲಿ, ನಾಯಿಯೊಂದು ಮನುಷ್ಯನಾಗಿ ಪರಿವರ್ತನೆ ಆಗ್ತಿರೋ ವಿಡಿಯೋ ಆಗಿದೆ. ಮಧ್ಯರಾತ್ರಿ ವ್ಯಕ್ತಿಯೊಬ್ಬ ಕೆಳಗಡೆ ಕುಳಿತುಕೊಂಡಿದ್ದಾನೆ. ಅವನ ಹಿಂದೆ ಬರುವ ನಾಯಿಯೊಂದು ಮನುಷ್ಯನಾಗಿ ಪರಿವರ್ತನೆ ಆಗಿದೆ. ಅಲ್ಲಿಯೇ ಮತ್ತೊಂದು ನಾಯಿ ಹಾದು ಹೋಗುತ್ತಿದೆ.

ಈ ವಿಡಿಯೋ ನಿಜವಾದದ್ದು ಎಂದು ಹೇಳುತ್ತಲೇ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋ ಒಬ್ಬರೇ ಇದ್ದಾಗ ನೋಡಿದರೆ ಎಂಥವರೂ ಭಯ ಬೀಳುವಂತಿದೆ. ಆದರೆ ಇದು ಅಸಲಿಯೋ, ನಕಲಿಯೋ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಏಕೆಂದರೆ ಈಗ ಹೇಳಿಕೇಳಿ ಕೃತಕ ಬುದ್ಧಿಮತ್ತೆ AI ಯುಗ. ಅಸಲಿಯನ್ನೂ ನಾಚಿಸುವ ರೀತಿಯಲ್ಲಿ ನಕಲಿ ವಿಡಿಯೋಗಳು ವೈರಲ್​ ಆಗುತ್ತಿವೆ. ಅದೇ ರೀತಿ ಈ ವಿಡಿಯೋ ಕೂಡ ಆಗಿರುವ ಸಾಧ್ಯತೆ ಹೆಚ್ಚಿದೆ. ಇದು ನೆಟ್ಟಿಗರೂ ತಿಳಿಯದೇ ಇರುವ ವಿಷಯವೇನಲ್ಲ. ಕಮೆಂಟ್​ ಸೆಕ್ಷನ್​ಗಳಲ್ಲಿ ಬರುವ ಹಾಸ್ಯದ ಕಮೆಂಟ್ಸ್​ ನೋಡಿದರೆ ಇಂಥ ವಿಡಿಯೋ ಯಾರೂ ನಂಬುವುದಿಲ್ಲ ಎನ್ನುವುದು ತಿಳಿಯುತ್ತದೆ.

ಆದರೂ, ಕೆಲವರು ತಮಗೆ ಆಗಿರುವ ಅನುಭವಗಳನ್ನೂ ಹೇಳಿಕೊಂಡಿದ್ದು, ಭೂತ-ಪ್ರೇತಗಳನ್ನು ತಾವು ನೋಡಿರುವುದಾಗಿ ತಿಳಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಮೆರಿಕದ ಓಕ್‌ಬ್ರಿಡ್ಜ್ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಘಟನೆ ವೈರಲ್​ ಆಗಿತ್ತು. 9 ವರ್ಷದ ಬಾಲಕಿ ಎಮಿಲಿ ಹಾಲೋವೇ ಅನಾರೋಗ್ಯದ ನಿಮಿತ್ತ ದಾಖಲಾಗಿದ್ದಳು. ಆದರೆ ಹೃದಯಸ್ತಂಭನ ಆಗಿದ್ದರಿಂದ ಆಕೆ ಮೃತಪಟ್ಟಳು. ಅವಳ ಹಾರ್ಟ್​ಬೀಟ್​ ನಿಲ್ಲುತ್ತಿದ್ದಂತೆಯೇ ಅವಳಿಗೆ ಅಳವಡಿಸಿದ್ದ ಯಂತ್ರವನ್ನು ತೆಗೆದುಹಾಕಲಾಗಿತ್ತು. ಆದರೆ ಆಗಲೂ ಬೀಪ್​ ಶಬ್ದ ಕೇಳಿಸುತ್ತಲೇ ಇತ್ತು. ಪ್ರತಿವರ್ಷ ಆಕೆಯ ಹುಟ್ಟುಹಬ್ಬದಂದು ಅಲ್ಲಿ ಅದೇ ಬೀಪ್​ ಸೌಂಡ್​​ ಕೇಳಿಸುತ್ತಿರುವುದಾಗಿ ಖುದ್ದು ವೈದ್ಯರೇ ಹೇಳುತ್ತಿದ್ದಾರೆ. ಆದ್ದರಿಂದ ಅಗೋಚರ ಶಕ್ತಿಗಳ ಬಗ್ಗೆ ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ.

View post on Instagram