ಹುಟ್ಟಿದ ದಿನ, ರಾಶಿ, ನಕ್ಷತ್ರ...ಹೀಗೆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆಯೋ ಅದೇ ರೀತಿ ಹುಟ್ಟಿದ ತಿಂಗಳೂ ವ್ಯಕ್ತಿಯ ಬಗ್ಗೆ ಹೇಳುತ್ತದೆ. ಜನವರಿಯಲ್ಲಿ ಹುಟ್ಟಿದವರಾಗಿದ್ದರೆ ವ್ಯಕ್ತಿತ್ವ ಹೇಗಿರುತ್ತೆ ಅನ್ನೋದರ ವಿವರ ಇಲ್ಲಿದೆ...

  • ಈ ತಿಂಗಳಲ್ಲಿ ಹುಟ್ಟಿದವರು ತಮಾಷೆ ಸ್ವಭಾವದವರಾಗಿರುತ್ತಾರೆ. ತುಂಬಾ ಸ್ನೇಹಿತರ ನಡುವಿದ್ದರೆ ಇವರೇ ಮನರಂಜನೆಯ ಕೇಂದ್ರ ಬಿಂದುವಾಗಿರುತ್ತಾರೆ.
  • ಇವರ ಸ್ವಭಾವ ವ್ಯಕ್ತಿತ್ವಕ್ಕೆ ಪ್ರತಿಯೊಬ್ಬರೂ ಮಾರು ಹೋಗುತ್ತಾರೆ. ಜೊತೆಗೆ ತಾವು ಅವರಂತೆ ಆಗಬೇಕೆಂದು ಕೊಳ್ಳುತ್ತಾರೆ.
  • ತುಂಬಾ ಬೋಲ್ಡ್ ಆಗಿರುವ ಇವರು, ಯಾವುದೇ ಕೆಲಸವಿರಲಿ ಅಥವಾ ಸಮಸ್ಯೆಯೇ ಇರಲಿ ಅದನ್ನು ಒಬ್ಬಂಟಿಯಾಗಿ ಎದುರಿಸಲು ಸದಾ ಸಿದ್ಧ. ಯಾವುದಕ್ಕೂ ಭಯ ಪಡೋದಿಲ್ಲ.
  • ಬಾಲ್ಯದಿಂದಲೇ ಇವರು ತುಂಬಾ ಪ್ರೌಢರಾಗಿರುತ್ತಾರೆ, ಪ್ರತಿಯೊಂದೂ ನಿರ್ಧಾರವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಬೆಳೆಯುತ್ತಿದ್ದಂತೆ ಇವರು ಯುವಕರಾಗುತ್ತಾರೆ.
  • ಜನವರಿಯಲ್ಲಿ ಹುಟ್ಟಿದವರು ಬೆಸ್ಟ್ ಕಿಸ್ಸರ್ ಸಹ ಹೌದು. ಜೊತೆಗೆ ರಸಿಕತೆ ತುಂಬಿದ ಮನುಷ್ಯ, ಅದರ ಎಲ್ಲವನ್ನೂ ಎಕ್ಸ್‌ಪ್ರೆಸ್ ಮಾಡೋದು ಮಾತ್ರ ಕಡಿಮೆ.
  • ಯಾವಾಗ ಅವರಿಗೆ ಬೋರ್ ಎನಿಸುವುದೋ ಏನೋ ವಿಚಿತ್ರವಾಗಿ ವರ್ತಿಸಲು ಆರಂಭಿಸುತ್ತಾರೆ.
  • ಪಾರ್ಟಿ ಮಾಡೋದು ಎಂದರೆ ಇವರಿಗೆ ತುಂಬಾ ಇಷ್ಟ. ಫ್ರೆಂಡ್ಸ್ ಜೊತೆ ಎಂಜಾಯ್ ಮಾಡುವುದೂ ಅಚ್ಚುಮೆಚ್ಚು. ಅದಕ್ಕಾಗಿ ಪಾರ್ಟಿ ಮಾಡುತ್ತಿರುತ್ತಾರೆ.
  • ಸಂದರ್ಭ ಯಾವುದೇ ಇರಲಿ ಯಾರಿಗೂ ಹೆದರದೇ ಮುಂದಾಳತ್ವ ವಹಿಸಲು ಇವರು ಇಚ್ಛಿಸುತ್ತಾರೆ. ಆದರೆ ಏನೇ ಮಾಡಿದರೂ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.