ಹಿಂದೂ ಧರ್ಮದಲ್ಲಿ ಮಾತೃ ಸ್ಥಾನ ನೀಡಿರುವ ಗಂಗೆಯೊಂದಿಗೆ ಭಾರತೀಯರಿಗೇ ವಿಶೇಷ ಬಾಂಧವ್ಯವಿದೆ. 'ಗಂಗಾ ಸ್ನಾನ ತುಂಗಾ ಪಾನ..' ಎಂಬ ಗಾದೆಯೊಂದು ಚಾಲ್ತಿಯಲ್ಲಿದ್ದು, ಗಂಗೆಯಲ್ಲಿ ಸ್ನಾನ ಮಾಡಿದರೆ, ಮಾಡಿದ ಪಾಪವೆಲ್ಲವೂ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಪಿತೃ ದೇವತೆಗಳ ದೋಷಕ್ಕೂ ಗಂಗೆಯೇ ಪರಿಹಾರ. ಈ ನೀರು ಎಲ್ಲಾ ವಸ್ತುಗಳನ್ನೂ ಶುದ್ಧ ಮಾಡುತ್ತದೆ. ಇದರಿಂದ ಯಾವೆಲ್ಲಾ ದೋಷ ಪರಿಹಾರವಾಗುತ್ತದೆ? 

ನಲ್ಲೀಲಿ ಹನಿ ನೀರು, ಪರಿಸರಕ್ಕೂ ಹಾನಿ, ಮನೆಗೂ ಅಶುಭ

ವಾಸ್ತು ದೋಷ: ಮನೆಯಲ್ಲಿ ನಿಯಮಿತವಾಗಿ ಗಂಗಾಜಲವನ್ನು ಪ್ರೋಕ್ಷಿಸಿದರೆ ವಾಸ್ತು ದೋಷ ದೂರವಾಗುತ್ತದೆ. ಸಕರಾತ್ಮಕ ಶಕ್ತಿಯೂ ಹೆಚ್ಚುತ್ತದೆ. 

ಕೆಟ್ಟ ಕನಸು: ಮಕ್ಕಳಿಗೆ ಭಯ ಬೀಳುವಂಥ ಕನಸು ಕಾಣುತ್ತಿದ್ದರೆ, ಮಲಗುವ ಮೊದಲು ಹಾಸಿಗೆ ಮೇಲೆ ಗಂಗಾ ಜಲವನ್ನು ಸಿಂಪಡಿಸಿ. ಇದರಿಂದ ಮಗು ಚೆನ್ನಾಗಿ ನಿದ್ರಿಸುತ್ತದೆ. 

ಸುಖ ಸಂಪತ್ತು: ಗಂಗಾ ಜಲವನ್ನು ಮನೆಯಲ್ಲಿಟ್ಟರೆ, ಯಾವಾಗಲೂ ಸುಖ ಸಂಪತ್ತು ನಿಮ್ಮದಾಗುತ್ತದೆ. 

ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!

ಶಿವನಿಗೆ: ಗಂಗಾ ಜಲ ಅರ್ಪಿಸಿದರೆ ಶಿವ ಪ್ರಸನ್ನನಾಗುತ್ತಾನೆ. ಇದರಿಂದ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ. 

ಮನೆಯಲ್ಲಿ ಸಮಸ್ಯೆ: ಮನೆಯಲ್ಲಿ ಸಮಸ್ಯೆಗಳು ಹೆಚ್ಚಾದರೆ ಒಂದು ತಾಮ್ರದ ಪಾತ್ರೆಯಲ್ಲಿ ಗಂಗಾ ಜಲವನ್ನು ತುಂಬಿ ಈಶಾನ್ಯ ದಿಕ್ಕಿನಲ್ಲಿಡಿ. ಮುಂಜಾನೆ ಮನೆ ಬಾಗಿಲು ತೆರೆಯುವಾಗ ಈ ಜಲವನ್ನು ಅಂಗಳಕ್ಕೆ ಪ್ರೋಕ್ಷಿಸಿ. 

ಕಿಟಕಿ ಪರದೆ ಮನೆ, ಮನಸ್ಸಿನ ಕತೆ ಹೇಳುತ್ತೆ!