ಮನೆಯ ವಾಸ್ತು ನಮ್ಮ ಜೀವನದ ಮೇಲೆ ಗಾಢ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ವಾಸ್ತುವಿನಲ್ಲಿ ಕಂಡು ಬರುವ ಸಣ್ಣ ಪುಟ್ಟ ದೋಷಗಳೂ ನಿಮ್ಮ ಮೇಲೆ ಲಕ್ಷ್ಮಿ ಕೃಪೆ ಇರದಂತೆ ಮಾಡುತ್ತದೆ. ಇದರಿಂದ ಸಮಸ್ಯೆಗಳು ಒಂದೊಂದಾಗಿ ಕಾಣುತ್ತವೆ. ಆದುದರಿಂದ ಸಣ್ಣಪುಟ್ಟ ದೋಷ ನಿವಾರಿಸಿ, ಲಕ್ಷ್ಮಿ ಸದಾ ಮನೆಯಲ್ಲಿ ನೆಲೆಸುವಂತೆ ಮಾಡಿ. 

ದೌರ್ಭಾಗ್ಯ ದೂರವಾಗಬೇಕೆಂದ್ರೆ ಹೀಗ್ ಮಾಡಿ

- ವಾಸ್ತು ಪ್ರಕಾರ ಮನೆಯಲ್ಲಿ ಜೇಡರ ಬಲೆ ಇದ್ದರೆ ಅಶುಭ ಎನ್ನಲಾಗುತ್ತದೆ. ಆದುದರಿಂದ ಜೇಡ ಬಲೆ ಕಟ್ಟದಂತೆ ನೋಡಿಕೊಳ್ಳಿ. 
- ತುಂಡಾದ ಕನ್ನಡಿ ಯಾವಾಗಲೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ಯಾವತ್ತಾದರೂ ಕನ್ನಡಿ ತುಂಡಾದರೆ ಅದನ್ನು ಮನೆಯಲ್ಲಿ ಇಡದೆ ಬಿಸಾಕಿ. 
- ಮನೆಯೊಳಗೇ ಬಾವಲಿ ಪ್ರವೇಶಿಸುವುದು ಸಹ ಅಶುಭ. ಇದರಿಂದ ಮನೆಯಲ್ಲಿ ವಿನಾಶ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. 
- ಮನೆಯ ಗೋಡೆಗಳಲ್ಲಿ ಬಿರುಕು ಮೂಡುವುದು ಸಹ ಶುಭ ಶಕುನ ಅಲ್ಲ. ಆದುದರಿಂದ ಬಿರುಕು ಬಿಟ್ಟ ಕೂಡಲೇ ಅದನ್ನು ಸರಿ ಪಡಿಸಿ. 
- ನಲ್ಲಿ ನೀರು ಹನಿ ಹನಿಯಾಗಿ ಬೀಳುತ್ತಿರುವುದು ಅಶುಭ. ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ. ನಲ್ಲಿಯಿಂದ ನೀರು ಹನಿ ಹನಿ ಬೀಳಲು ಆರಂಭಿಸಿದರೆ ಬೇಗ ಅದನ್ನು ಸರಿ ಪಡಿಸಿ. 
- ಮನೆಯಲ್ಲಿ ಬೇಡವಾದ ವಸ್ತುಗಳನ್ನು ಒಟ್ಟಾಗಿ ಇಡಬೇಡಿ. ಇದು ಅಶುಭ. 
- ದೇವರ ಕೋಣೆಯಲ್ಲಿ ಬಾಡಿದ ಹೂವುಗಳನ್ನು ಶೇಖರಿಸಬೇಡಿ.
- ಹಾಳಾದ ವಿದ್ಯುತ್ ಉಪಕರಣಗಳನ್ನು ಕೂಡಲೇ ಬಿಸಾಕಿ. 
- ಮನೆಯಲ್ಲಿ ಪಾರಿವಾಳ ಗೂಡು ಕಟ್ಟುವುದು ಹಾಗೂ ಜೇನು ಗೂಡು ಕಟ್ಟುವುದೂ ಅಶುಭ. ಇದರಿಂದ ಸಮಸ್ಯೆಗಳು ಹೆಚ್ಚುತ್ತವೆ. 

ವಾಸ್ತು ಸುದ್ದಿಗಳಿಗೆ ಇಲ್ಲಿವೆ ಕ್ಲಿಕ್ ಮಾಡಿ