ಇಂದಿನ ನಿಮ್ಮ ರಾಶಿ ಫಲಾಫಲಗಳು ಹೇಗಿವೆ? ಪರಿಹಾರವೇನು?

26 th june horoscope
Highlights

ಮೇಷ ರಾಶಿ : ಮೇಷ ರಾಶಿಯವರಿಗೆ ಸ್ವಲ್ಪ ದುಡುಕಿನ ಸ್ವಭಾವ, ಚಂದ್ರ ಅಷ್ಟಮದಲ್ಲಿ ನೀಚನಾಗಿದ್ದಾನೆ ಹಾಗಾಗಿ ಸ್ವಲ್ಪ ಆರೋಗ್ಯವ್ಯತ್ಯಯ ಆಗಬಹುದು. ವೆದರ್ ಕೂಡ ಹಾಗೇ ಇದೆ ನೋಡಿ ಹಾಗಾಗಿ ಜಾಗ್ರತೆ ಇರಲಿ. ಆದಷ್ಟು ಬಿಸಿ ಆಹಾರವನ್ನೇ ಸೇವಿಸಿ. ಇದರ ಜೊತೆಗೆ ಓಂ ಕಾರ್ತಿಕೇಯಾಯ ನಮ: ಮಂತ್ರವನ್ನು ಮೂರುಬಾರಿ ಪಠಣ ಮಾಡಿ.  


ದೋಷ ಪರಿಹಾರ - ಸಾಧ್ಯವಾದರೆ 1 ಕೆಜಿಯಷ್ಟು  ತೊಗರಿಬೇಳೆ ದಾನ ಮಾಡಿ
 

ಮೇಷ ರಾಶಿ : ಮೇಷ ರಾಶಿಯವರಿಗೆ ಸ್ವಲ್ಪ ದುಡುಕಿನ ಸ್ವಭಾವ, ಚಂದ್ರ ಅಷ್ಟಮದಲ್ಲಿ ನೀಚನಾಗಿದ್ದಾನೆ ಹಾಗಾಗಿ ಸ್ವಲ್ಪ ಆರೋಗ್ಯವ್ಯತ್ಯಯ ಆಗಬಹುದು. ವೆದರ್ ಕೂಡ ಹಾಗೇ ಇದೆ ನೋಡಿ ಹಾಗಾಗಿ ಜಾಗ್ರತೆ ಇರಲಿ. ಆದಷ್ಟು ಬಿಸಿ ಆಹಾರವನ್ನೇ ಸೇವಿಸಿ. ಇದರ ಜೊತೆಗೆ ಓಂ ಕಾರ್ತಿಕೇಯಾಯ ನಮ: ಮಂತ್ರವನ್ನು ಮೂರುಬಾರಿ ಪಠಣ ಮಾಡಿ.  

ದೋಷ ಪರಿಹಾರ - ಸಾಧ್ಯವಾದರೆ 1 ಕೆಜಿಯಷ್ಟು  ತೊಗರಿಬೇಳೆ ದಾನ ಮಾಡಿ

ವೃಷಭ : ಮನೆಯಲ್ಲಿ ಸ್ವಲ್ಪ ಲಗುಬಗೆ ಜೀವನ, ಆತುರಾತುರವಾಗಿ ಹೊರಡಬೇಕಾದ ಅನಿವಾರ್ಯತೆ, ಕೆಲ ಅಗತ್ಯ ವಸ್ತುಗಳನ್ನ ಮರೆತುಹೋಗುವ ಸಾಧ್ಯತೆ ಇರತ್ತೆ. ಅದರ ಬಗ್ಗೆ ಗಮನವಹಿಸಿ. ಅಮ್ಮ ಹೇಳಿದ ಮಾತು ಅಥವಾ ತಂದೆ ಹೇಳಿದ ಮಾತನ್ನ ತಾತ್ಸಾರ ಮಾಡುವುದು ಬೇಡ. ನಿಮ್ಮ ಬುದ್ಧಿಶಕ್ತಿ ಸೂಪರ್ ಫಾಸ್ಟ್ ಇದ್ದರೂ ಸ್ವಲ್ಪ ನಿಧಾನತೆ ಮುಖ್ಯ. 

ದೋಷ ಪರಿಹಾರ : ಓಂ ಭೃಗುನಂದನಾಯ ನಮ: ಎಂಬ ಮಂತ್ರವನ್ನು ಆರುಬಾರಿ ಪಠಿಸಿ. 

ಮಿಥುನ : ನಿಮ್ಮ ಮನಸ್ಸಿಗೆ ಸ್ವಲ್ಪ ದು:ಖ, ಹೆಚ್ಚು ಕೊರಗುವ ಅವಶ್ಯಕತೆ ಇಲ್ಲ. ಹೋದುದ್ದರ ಬಗ್ಗೆ ಹೆಚ್ಚು ಯೋಚನೆ ಬೇಡ. ಇಂದು ಹೊಸ ಕಾರ್ಯದಲ್ಲಿ ತೊಡಗುವ ದಿನ. ನಿಮ್ಮ ಮನಸ್ಸನ್ನು ಸಮಾಧಾನಪಡಿಸಲು ಇಂದು ರಾತ್ರಿ ಚಂದ್ರನನ್ನು 20 ನಿಮಿಷಗಳಕಾಲ ನೋಡಿ. ತಮಾಷೆಗೆ ಹೇಳುತ್ತಿಲ್ಲ. ನೋಡಿ ಆನಂತರ ನೀವೇ ಅದರ ಮೌಲ್ಯ ತಿಳಿಯುತ್ತೀರಿ. 

ದೋಷ ಪರಿಹಾರ : ಚಂದ್ರಗ್ರಹವನ್ನು ಸ್ಮರಿಸಿ, ಇಲ್ಲ ಬಿಳಿ ತಾವರೆ ಹೂವನ್ನು ಲಕ್ಷ್ಮೀ ದೇವಸ್ಥಾನಕ್ಕೆ ಕೊಟ್ಟುಬನ್ನಿ. 

ಕಟಕ : ರಾಶಿ ಪ್ರತಿಯೊಬ್ಬರೂ ಇಂದು ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿಬಂದು ಆನಂತರ ಕಾರ್ಯ ಪ್ರಾರಂಭಮಾಡಿದರೆ ಶುಭದಾಯಕ, ಅಥವಾ ದೇವಸ್ಥಾನಕ್ಕೆ ಹೋಗಲು ಆಗಲಿಲ್ಲ ಎಂದ ಪಕ್ಷದಲ್ಲಿ ಅನನ್ಯ ಮನಸ್ಸಿನಿಂದ ಮನಸ್ಸಿನಲ್ಲೇ ಲಕ್ಷ್ಮಿಯನ್ನು ಪ್ರಾರ್ಥಿಸಿ ಮುಂದಿನ ಕೆಲಸ ಮಾಡಿ. ಯಾಕೆ ಅಂದ್ರೆ ರಾಶ್ಯಾಧಿಪತಿಯಾದ ಚಂದ್ರ ಇಂದು ನೀಚ ರಾಶಿಯಲ್ಲಿದ್ದಾನೆ. ಹಾಗಾಗಿ ಸ್ವಲ್ಪ  ತಾಯಿಯ ಅನುಗ್ರಹ ಬೇಕು. ಇಲ್ಲವಾದರೆ ಮನಸ್ಸಿಗೆ ನೋವಾಗುವ ಸಾಧ್ಯತೆ ಹೆಚ್ಚು. 

ದೋಷ ಪರಿಹಾರ : ಲಕ್ಷ್ಮೀ ಸ್ಮರಣೆ ಮಾಡಿ. ಸಾಧ್ಯವಾದರೆ ಶ್ರೀಸೂಕ್ತ ಪಠಿಸಿ

ಸಿಂಹ :  ತಂದೆಯಿಂದ ಪ್ರೀತಿ ಮಾತುಗಳನ್ನು ಕೇಳುತ್ತೀರಿ. ಉದ್ಯೋಗ ಸ್ಥಳದಲ್ಲಿ ಸಹಕಾರ ಮನೋಭಾವ, ಆತ್ಮೀಯರಿಂದ ಸಮಾಧಾನಕರ  ಮಾತುಗಳು. ನಿಮ್ಮೊಡನೆ ಹಂಚಿಕೊಂಡ ಗುಟ್ಟು ಹೊರಹಾಕುವ ಮನೋಭಾವ ಉಕ್ಕಬಹುದು. 

ದೋಷ ಪರಿಹಾರ : ಓಂ ಈಶಾನಾಯ ನಮ: ಎಂಬ ಮಂತ್ರವನ್ನು 5 ಬಾರಿ ಪಠಿಸಿ 

ಕನ್ಯಾ : ಆತ್ಮೀಯರೇ ನಿಮ್ಮ ಮನೆಯಲ್ಲಿ ಓರ್ವ ಹಿರಿಯರು ನಿಮಗೆ ಧನ ಸಹಾಯ ಮಾಡುತ್ತಾರೆ. ನೀವು ನಂಬಿದ ಸ್ತ್ರೀಯರು ನಿಮಗೆ ಸಂತಸವನ್ನು ತರುತ್ತಾರೆ. ವಿದ್ಯಾರ್ಥಿನಿಯರಿಗೆ ಹಸ್ಯದ ದಿನ, ವಾದದಲ್ಲೆ ಗೆಲುವು ನಿಮ್ಮದೇ ಆಗಿರುತ್ತದೆ.

ದೋಷ ಪರಿಹಾರ : ಓಂ ಬುಧಾಯ ನಮ: ಎಂಬ ಮಂತ್ರ ಪಠಿಸಿದರೆ ಸಾಕು. ಎಷ್ಟುಬಾರಿಯಾದರೂ ಪಠಿಸಿ.

ತುಲಾ :   ಪ್ರೀತಿ ಪಾತ್ರರಿಂದ ತಿಳಿವಳಿಕೆ, ನಿಮ್ಮ ಮನಸಿನ ಅಪೇಕ್ಷೆ ಈಡೇರುವುದಿಲ್ಲ. ಆದರೆ ನಿಮಗೆ ಸೋಲಾಗಲಿ, ಸಮಸ್ಯೆಯಾಗಲಿ ಇಲ್ಲ. ಯೋಚಿಸುವ ಅಗತ್ಯ ಇಲ್ಲ. ನಿಮ್ಮ ತಾಯಿಗೆ ನಮಸ್ಕಾರ ಮಾಡಿ ದಿನವನ್ನು ಪ್ರಾರಂಭಿಸಿ.

ದೋಷ ಪರಿಹಾರ : ಶುಭ್ರ ವರ್ಣದ ವಸ್ತ್ರ ಧರಿಸಿ.

ವೃಶ್ಚಿಕ : ನೀವು ಅಂದುಕೊಂಡ ಕಾರ್ಯದಲ್ಲಿ ಅಡೆತಡೆಗಳೇ ಹೆಚ್ಚು. ಯಾರೋ ಒಬ್ಬರು ನಿಮ್ಮನ್ನು ಕಾಲು ಹಿಡಿದು ಎಳೆಯುತ್ತಾರೆ. ಆದರೆ ನೀವು ಕುಗ್ಗುವ ಸ್ವಭಾವದವರಲ್ಲ. ನಂಬಿಕೆ ಇದ್ದರೆ ಗಣಪತಿಗೆ  21 ಗರಿಕೆ ಸಮರ್ಪಿಸಿ ಕಾರ್ಯ ನೆರವೇರುತ್ತದೆ. 

ದೋಷ ಪರಿಹಾರ : ಓಂ ಗಂ ಗಣಪತಯೇ ನಮ: ಮಂತ್ರವನ್ನು 21 ಬಾರಿ ಪಠಿಸಿ

ಧನಸ್ಸು : ಕವಿ ಮನಸ್ಸುಗಳಿಗೆ ಆಹ್ಲಾದದ ದಿನ ಅಂತೆಯೇ ದೇಹ ಬಾಧೆಯೂ ಇದೆ, ಒಣ ಕೆಮ್ಮು ನಿಮ್ಮನ್ನು ಬಾಧಿಸಲಿದೆ. ಇಂದು ನಿಮ್ಮ ಪಾಲಿಗೆ ಆಶ್ಚರ್ಯವೆನಿಸುವ ಒಂದು ಘಟನೆ ನಡೆಯುತ್ತದೆ. 

ದೋಷ ಪರಿಹಾರ : ಓಂ ಗುರವೇ ನಮ: ಮಂತ್ರವನ್ನು 5 ಬಾರಿ ಪಠಿಸಿ ಸಾಕು.  

ಮಕರ : ಈ ದಿನ ನಿಮಗೆ ಮಾನಸಿಕ ಬೇಸರ. ನೀವು ನಂಬಿದ ವ್ಯಕ್ತಿ ನಿಮಗೆ ಮುಖ ಭಂಗ ಮಾಡಿದರೂ ಅಚ್ಚರಿ ಇಲ್ಲ. ನಿಮಗೆ ನೀವೇ ಆಸರೆ ಎಂಬ ಭಾವನೆ ಮೂಡುವುದು. ನಿಮ್ಮ ಮನೋ ಸ್ಥೈರ್ಯ ಇಮ್ಮಡಿಯಾಗಲಿಕ್ಕೆ ಗಣಪತಿಗೆ ಕೆಂಪು ಹೂವನ್ನು ಕೊಟ್ಟು ಅನನ್ಯ ಭಕ್ತಿಯಿಂದ ಪ್ರಾರ್ಥನೆ ಮಾಡಿ.  

ದೋಷ ಪರಿಹಾರ : ಓಂ ವಿಘ್ನವಿನಾಶಕಾಯ ನಮ: ಮಂತ್ರವನ್ನು 21 ಬಾರಿ ಹೇಳಿಕೊಳ್ಳಿ.

ಕುಂಭ : ಮನೆಯಿಂದ ಹೊರಡುವಾಗ ಆರ್ತರಿಗೆ ಸಹಾಯ ಮಾಡುವ ಮನಸ್ಸು. ಆರ್ತರು ಅಂದ್ರೆ ಕಷ್ಟದಲ್ಲಿರುವವರು ಅಂತ. ತಾಯಿಯ ಮಾತಿಗೆ ಗೌರವ ಕೊಡುವಿರಿ. ಸಂಗಾತಿ ನಿಮ್ಮ ಮನೋಬಯಕೆಯನ್ನು ಅರ್ಥಮಾಡಿಕೊಳ್ಳುವ ಸಮಯ.   

ದೋಷ ಪರಿಹಾರ : ಓಂ ಭಯಕೃದ್ಭಯನಾಶನ: ಎಂಬ ಮಂತ್ರವನ್ನು 5 ಬಾರಿ ಪಠಿಸಿ. 

ಮೀನ : ಓಂ ನಮೋ ಅವ್ಯಯಾಯ ನಮ: ಎಂಬ ಮಂತ್ರ ಪಠಿಸುವುದರಿಂದ ನಿಮ್ಮ ದಿನವನ್ನು ಪ್ರಾರಂಭಿಸಿ. ಇಂದು ಒಂದು ವಿಶಿಷ್ಟ ದಿನವಾಗಿ ಮಾರ್ಪಡಲಿದೆ. ಗೊಂದಲದ ಮನಸ್ಸಿನಿಂದ ಹೊರಬನ್ನಿ. ಸಾಧ್ಯವಾದರೆ ನಿಮ್ಮ ಹಿತೈಷಿಗಳ ಸಲಹೆ ಪಡೆಯಿರಿ. 

ದೋಷ ಪರಿಹಾರ : ವಿಷ್ಣು ಸ್ಮರಣೆ ಮಾಡಿ.
 

loader