ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಾಜೀನಾಮೆ ನೀಡಲು ಸಜ್ಜಾಗಿರುವ ಸಂದರ್ಭದಲ್ಲೇ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಬುಧವಾರ ರಾತ್ರಿ ದಿಢೀರ್ ತಮ್ಮ ತವರು ರಾಜ್ಯ ಮಧ್ಯಪ್ರದೇಶದ ಇಂದೋರ್‌ಗೆ ತೆರಳಿದ್ದಾರೆ. ಅಲ್ಲಿಂದ ಈಗ ಮುಂಬೈಗೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ. ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ತಮ್ಮ ತವರಿಗೆ ತೆರಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರು ಬರುವವರೆಗೆ ಕಾಯುತ್ತಾರೋ ಅಥವಾ ಲೋಕಭವನಕ್ಕೆ ತೆರಳಿ ರಾಜೀನಾಮೆ ಕೊಟ್ಟು ಬರುತ್ತಾರೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಇದರ ಜೊತೆಗೆ ವರದಿ ಪ್ರಕಾರ ದಿಢೀರ್ ರಾಜ್ಯಪಾಲರ ಇಂದೋರ್ ಪ್ರವಾಸದಿಂದ ಅವರು ವಾಪಸ್ ಬರುವ ಬಗ್ಗೆ ಇನ್ನೂ ವೇಳಾಪಟ್ಟಿ ಖಚಿತವಾಗಿಲ್ಲ. ರಾಜ್ಯಪಾಲರು ಬಂದರೆ ಮಾತ್ರವೇ ಇಂದು ರಾಜಿನಾಮೆ. ಇಲ್ಲದೆ ಇದ್ದರೆ ರಾಜಿನಾಮೆ ಕೊಡುವ ಸಮಯ ಮುಂದಕ್ಕೆ ಹೋಗಲಿದೆ. ಲೋಕಭವನಕ್ಕೆ ರಾಜೀನಾಮೆ ಪತ್ರ ನೀಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ರಾಜ್ಯಪಾಲರನ್ನು ಭೇಟಿಯಾಗೇ ರಾಜೀನಾಮೆ ಸಲ್ಲಿಸಬೇಕು.
10:30 PM (IST) May 28
ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಸರ್ವೇ ಸಾಮಾನ್ಯ. ಮುಖ್ಯಮಂತ್ರಿ ಯಾರೇ ಆಗಲಿ ಆಡಳಿತದಲ್ಲಿ ಅಸಮತೋಲನವಾಗದಂತೆ, ಆರ್ಥಿಕ ಕುಸಿತ ಕಾಣದ ರೀತಿಯಲ್ಲಿ ಆಡಳಿತ ನಡೆಯಬೇಕಷ್ಟೇ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
09:07 PM (IST) May 28
08:43 PM (IST) May 28
ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಪತನಕ್ಕೆ ಕಾರಣವಾಗಲಿದೆ. ಪಕ್ಷ ಅಧಃಪತನದ ದಾರಿಗೆ ಹೋಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭವಿಷ್ಯ ನುಡಿದರು.
08:24 PM (IST) May 28
07:09 PM (IST) May 28
06:19 PM (IST) May 28
1ನೇ ತರಗತಿ ದಾಖಲಾತಿ ವಯೋಮಿತಿ ಸಡಿಲಿಕೆ ಕುರಿತು ಹೈಕೋರ್ಟ್ ನಿರ್ದೇಶನ ನೀಡಿ ವಾರ ಕಳೆದರೂ ಸರ್ಕಾರ ಆದೇಶ ಹೊರಡಿಸಿಲ್ಲ. ಇದರಿಂದಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ಮುಗಿಸಿರುವ 5 ಲಕ್ಷಕ್ಕೂ ಅಧಿಕ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಈ ಆದೇಶದಿಂದ ಮಕ್ಕಳ ಒಂದು ಶೈಕ್ಷಣಿಕ ವರ್ಷ ವ್ಯರ್ಥವಾಗುವ ಭೀತಿ ಎದುರಾಗಿದೆ.
05:53 PM (IST) May 28
05:23 PM (IST) May 28
ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದರೂ ಅದು ಕೇವಲ ತಾತ್ಕಾಲಿಕವಾಗಿದ್ದು, ಅವಧಿ ಪೂರ್ವ ಚುನಾವಣೆ ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.
05:09 PM (IST) May 28
04:45 PM (IST) May 28
04:29 PM (IST) May 28
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಹೈಕಮಾಂಡ್ ನೀಡಿದ್ದ ರಾಜ್ಯಸಭೆ ಆಫರ್ ಅನ್ನು ತಿರಸ್ಕರಿಸಿ, ಕೊನೆ ಉಸಿರಿರುವವರೆಗೂ ರಾಜ್ಯ ರಾಜಕಾರಣದಲ್ಲೇ ಉಳಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
03:58 PM (IST) May 28
ಡಿಕೆ ಶಿವಕುಮಾರ್ ಅವರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಗುರೂಜಿ, ಡಿಕೆಶಿ ಸೋಮವಾರದೊಳಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದು, 8 ವರ್ಷಗಳ ಕಾಲ ಅವರ ಅಧಿಕಾರ ಅಬಾಧಿತವಾಗಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
03:24 PM (IST) May 28
03:15 PM (IST) May 28
03:05 PM (IST) May 28
ಬೆಂಗಳೂರು ಮತ್ತು ತುಮಕೂರು ನಡುವೆ ನಮ್ಮ ಮೆಟ್ರೋ ವಿಸ್ತರಣೆಗೆ ಯೋಜನೆ ಸಿದ್ಧವಾಗಿದ್ದು, ಇದು ರಾಜ್ಯದ ಮೊದಲ ಅಂತರ್-ಜಿಲ್ಲಾ ಮೆಟ್ರೋ ಆಗಲಿದೆ. ಹಸಿರು ಮಾರ್ಗದ ವಿಸ್ತರಣೆಯಾಗಿ ಮಾದಾವರದಿಂದ ಸಿರಾ ಗೇಟ್‌ವರೆಗೆ 60 ಕಿ.ಮೀ ಉದ್ದದ ಈ ಮಾರ್ಗದಲ್ಲಿ 16 ನಿಲ್ದಾಣ ನಿರ್ಮಿಸಲು BMRCL ಯೋಜನಾ ವರದಿ ಸಲ್ಲಿಸಿದೆ.
02:06 PM (IST) May 28
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆ ಚರ್ಚೆಗಳ ಹಿನ್ನೆಲೆಯಲ್ಲಿ, ಅಹಿಂದ ಒಕ್ಕೂಟವು ಕಾಂಗ್ರೆಸ್ ಹೈಕಮಾಂಡ್‌ಗೆ ತೀವ್ರ ಎಚ್ಚರಿಕೆ ನೀಡಿದೆ. ಸಿದ್ದರಾಮಯ್ಯರನ್ನು ಇನ್ನೂ ಎರಡು ವರ್ಷ ಮುಂದುವರಿಸಬೇಕು, ಇಲ್ಲದಿದ್ದರೆ ಹಿಂದೆ ಹಿಂದಿನ ಘಟನೆ ಪಕ್ಷಕ್ಕೆ ಮರುಕಳಿಸಲಿದೆ ಎಂದು ಎಚ್ಚರಿಕೆ ನೀಡಿದರು.
01:57 PM (IST) May 28
ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ರಾಜೀನಾಮೆ ಸಲ್ಲಿಸಲಿದ್ದು, ಈ ಬೆಳವಣಿಗೆಯನ್ನು ಅವರು ಈ ಹಿಂದೆ ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ತಿರಸ್ಕರಿಸಿದ ಘಟನೆಗೆ ಹೋಲಿಸಲಾಗುತ್ತಿದೆ. ರಾಯರನ್ನು ಅವಮಾನಿಸಿದವರಿಗೆ ಅಧಿಕಾರ ಯೋಗ ಕೊನೆಯಾಗುತ್ತದೆ ಎಂದು ನಟ ಜಗ್ಗೇಶ್ ಅಂದು ನುಡಿದಿದ್ದ ಭವಿಷ್ಯ ವೈರಲ್ ಆಗಿದೆ.
01:43 PM (IST) May 28
ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಾಹಾರ ಕೂಟದಲ್ಲಿ ತಮ್ಮ ರಾಜೀನಾಮೆಯನ್ನು ಘೋಷಿಸಿ, ಡಿ.ಕೆ. ಶಿವಕುಮಾರ್ ಅವರನ್ನು ನೂತನ ಮುಖ್ಯಮಂತ್ರಿ ಎಂದು ಉಲ್ಲೇಖಿಸಿದರು. ಈ ಭಾವುಕ ಸಭೆಯಲ್ಲಿ, ತಮ್ಮ ಅಧಿಕಾರಾವಧಿಯ ಕೆಲಸಗಳನ್ನು ಸ್ಮರಿಸಿ, ಪಕ್ಷದ ಸಿದ್ಧಾಂತವನ್ನು ಪಾಲಿಸುವಂತೆ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದರು.
01:18 PM (IST) May 28
12:30 PM (IST) May 28
ತಮಿಳುನಾಡು ಮತ್ತು ಕೇರಳದಲ್ಲಿ ಹೊಸ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಂಡಿರುವ ಕಾಂಗ್ರೆಸ್, ಇದೀಗ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮುಂದುವರಿಸಬೇಕೇ ಅಥವಾ ಡಿಕೆ ಶಿವಕುಮಾರ್‌ಗೆ ಅವಕಾಶ ನೀಡಬೇಕೇ ಎಂಬ ಜಿಜ್ಞಾಸೆ ಪಕ್ಷದೊಳಗೆ ತೀವ್ರ
11:35 AM (IST) May 28
ರಾಜ್ಯ ರಾಜಕೀಯದಲ್ಲಿ ಸಂಪುಟ ಪುನಾರಚನೆಯ ಚರ್ಚೆಗಳು ಬಿರುಸುಗೊಂಡಿದ್ದು, ಡಿಸಿಎಂ ಹುದ್ದೆಗೆ ಸ್ಪೀಕರ್ ಯು.ಟಿ. ಖಾದರ್ ಹೆಸರು ಕೇಳಿಬರುತ್ತಿದೆ. ಈ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಖಾದರ್, 'ಮುಂದೇನಾಗುತ್ತೋ ಗೊತ್ತಿಲ್ಲ, ಸಮಯವೇ ನಿರ್ಧರಿಸುತ್ತದೆ' ಎಂದು ನಿಗೂಢವಾಗಿ ಉತ್ತರಿಸಿದರು.
11:09 AM (IST) May 28
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಸಿದ್ದರಾಮಯ್ಯನವರ ರಾಜೀನಾಮೆ ನಿರೀಕ್ಷಿಸಲಾಗಿದ್ದು, ಪ್ರಬಲ ಆಕಾಂಕ್ಷಿ ಡಿ.ಕೆ. ಶಿವಕುಮಾರ್ ಅವರ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರ ನಡುವೆ ಪರಮೇಶ್ವರ್ ಕೂಡ ಸಿಎಂ ಆಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
10:59 AM (IST) May 28
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಉಪಾಹಾರ ಕೂಟದಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಕಾಲಿಗೆ ನಮಸ್ಕರಿಸಿ, ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು. ನಾಯಕತ್ವ ಬದಲಾವಣೆಯ ತೀವ್ರ ಕುತೂಹಲದ ನಡುವೆ, ಸಚಿವರು ಮತ್ತು ಶಾಸಕರು ಹೈಕಮಾಂಡ್ ನಿರ್ಧಾರಕ್ಕಾಗಿ ಕಾಯುತ್ತಿದೆ.
10:18 AM (IST) May 28
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ಸಿದ್ಧರಾಗಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅನಿರೀಕ್ಷಿತ ಪ್ರಯಾಣದಿಂದಾಗಿ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿದೆ. ರಾಜ್ಯಪಾಲರ ಅನುಪಸ್ಥಿತಿಯಲ್ಲಿ, ರಾಜೀನಾಮೆ ಪತ್ರ ಸಲ್ಲಿಸಲು ಇರುವ ನಿಯಮಗಳೇನು?
09:32 AM (IST) May 28
09:26 AM (IST) May 28
07:40 AM (IST) May 28
07:40 AM (IST) May 28
07:39 AM (IST) May 28
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಆದೇಶದಂತೆ ರಾಜೀನಾಮೆ ನೀಡುವ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ತಮ್ಮ ರಾಜೀನಾಮೆಯನ್ನು ತಡೆಯಲು ಆಪ್ತ ಸಚಿವರು ಮತ್ತು ಶಾಸಕರು ನಡೆಸಿದ ಸಹಿ ಸಂಗ್ರಹದಂತಹ ಪ್ರಯತ್ನಗಳನ್ನು ಅವರು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.