ರಾಜ್ಯ ರಾಜಕೀಯದಲ್ಲಿ ಸಂಪುಟ ಪುನಾರಚನೆಯ ಚರ್ಚೆಗಳು ಬಿರುಸುಗೊಂಡಿದ್ದು, ಡಿಸಿಎಂ ಹುದ್ದೆಗೆ ಸ್ಪೀಕರ್ ಯು.ಟಿ. ಖಾದರ್ ಹೆಸರು ಕೇಳಿಬರುತ್ತಿದೆ. ಈ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಖಾದರ್, 'ಮುಂದೇನಾಗುತ್ತೋ ಗೊತ್ತಿಲ್ಲ, ಸಮಯವೇ ನಿರ್ಧರಿಸುತ್ತದೆ' ಎಂದು ನಿಗೂಢವಾಗಿ ಉತ್ತರಿಸಿದರು.

ಮಂಗಳೂರು (ಮೇ.28): ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಗದ್ದಲದ ನಡುವೆಯೇ ಹೊಸ ಸಂಪುಟ ರಚನೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ, ಬಿರುಸಿನ ಚಟುವಟಿಕೆಗಳು ನಡೆಯಲಾರಂಭಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮುಂದಿನ ಹೊಸ ಮುಖ್ಯಮಂತ್ರಿಯ ಸಂಪುಟ ಪುನಾರಚನೆಯಲ್ಲಿ ಯಾರಾರಿಗೆ ಸಚಿವ ಸ್ಥಾನ ಸಿಗಲಿದೆ, ಯಾರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಲೆಕ್ಕಾಚಾರ, ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ಜೋರಾಗಿ ನಡೆಯತ್ತಿವೆ. ಮೂಲಗಳ ಪ್ರಕಾರ ಪ್ರಿಯಾಂಕ್ ಖರ್ಗೆ(Priyank Kharge) ಹಾಗೂ ಯತೀಂದರ ಸಿದ್ದರಾಮಯ್( Yathindra Siddaramaiah) ಅವರ ಹೆಸರುಗಳ ಜೊತೆ ಇದೀಗ ಹಾಲಿ ಸ್ಪೀಕರ್ ಯುಟಿ ಖಾದರ್ ( UT Khader) ಹೆಸರು ಕೂಡ ಡಿಸಿಎಂ ಹುದ್ದೆಗೆ ಕೇಳಿಬರುತ್ತಿದೆ.

ಏನಾಗುತ್ತೋ ನನಗೂ ಗೊತ್ತಿಲ್ಲ ಎಂದ ಸ್ಪೀಕರ್

ಈ ವಿಚಾರವಾಗಿ ಮಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯುಟಿ ಖಾದರ್ ಅವರು, 'ಈಗ ನಾನು ಸ್ಪೀಕರ್ ಆಗಿದ್ದೇನೆ. ಮುಂದೆ ಏನಾಗುತ್ತದೆ ಎಂಬುದು ನನಗೂ ಗೊತ್ತಿಲ್ಲ. ಸಮಯ ಅದನ್ನು ನಿರ್ಧರಿಸುತ್ತದೆ' ಎಂದು ಪ್ರತಿಕ್ರಿಯಿಸಿದರು. ರಾಜಕೀಯ ಬೆಳವಣಿಗೆಗಳ ಬಗ್ಗೆ ಹೆಚ್ಚು ಮಾತನಾಡಲು ನಿರಾಕರಿಸಿದ ಅವರು, 'ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮಯ ಬಂದಾಗ ಎಲ್ಲವೂ ಗೊತ್ತಾಗುತ್ತದೆ' ಎಂದರು.

'ಡಿಸಿಎಂ ಪೋಸ್ಟ್‌ ಹಾಕಬೇಡಿ’ ಎಂದ ಸ್ಪೀಕರ್

ಸರ್ಕಾರ ಯಾವಾಗ ಅಧಿವೇಶನ ನಡೆಸಲು ತೀರ್ಮಾನಿಸುತ್ತೆ ಆಗ ಮಾತ್ರ ಸುಸೂತ್ರವಾಗಿ ಸದನ ನಡೆಸುತ್ತೇವೆ. ಯಾರು ಯಾರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಆಡಳಿತ ಪಕ್ಷದ ಪ್ರಮುಖರು ತೀರ್ಮಾನ ಮಾಡ್ತಾರೆ. ಹೀಗಾಗಿ ನಾನು ಡಿಸಿಎಂ ಆಗಬೇಕೆಂಬ ಪೋಸ್ಟ್ ಅನ್ನು ಯಾರೂ ಸೋಷಿಯಲ್ ಮೀಡಿಯಾ ಪೋಸ್ಟ್‌ ಹಾಕಬೇಡಿ. ಯಾರು ಸಿಎಂ ಆಗಬೇಕು, ಯಾರು ಮಂತ್ರಿಗಳಾಗದೇಕು ಎಲ್ಲವೂ ಪಕ್ಷದ ನಿರ್ಧಾರಕ್ಕೆ ಬಿಟ್ಟಿದ್ದು. ಎಲ್ಲ ವಿಚಾರಗಳನ್ನ ನಾನು ನಿಮ್ಮ ಮುಂದೆ ಹೇಳಿದ್ರೆ ಗುಟ್ಟು ಉಳಿಯುತ್ತದ ಎಂದು ಲಘುವಾಗಿ ನಕ್ಕರು.

ಎಲ್ಲಾ ವಿಚಾರಗಳು ಪಕ್ಷಕ್ಕೂ ಪಕ್ಷದ ಮುಖಂಡರಿಗೆ ಬಿಟ್ಟಿದ್ದು, ಏನು ಬರ್ತದೆ ಅಂತ ನೋಡುವ. ಇವತ್ತು ಸಂತೋಷದಿಂದ ಹಬ್ಬ ಆಚರಿಸುವ. ನಿಮಗೆ ನಿಮ್ಮ ಮೂಲಕವೇ ಸಿಹಿ ಸುದ್ದಿ ಬರಲಿದೆ. ನಾನು ಬೆಂಗಳೂರಿಗೆ ಹೋಗುವ ಬಗ್ಗೆ ತೀರ್ಮಾನಿಸಿಲ್ಲ. ಇವತ್ತು ಹಬ್ಬ ಇರೋದ್ರಿಂದ ಸಂತೋಷದಿಂದ ಹಬ್ಬ ಆಚರಿಸೋದು ನನ್ನ ಕರ್ತವ್ಯ ಎಂದರು