LIVE NOW
Published : Sep 06, 2026, 06:28 AM ISTUpdated : Sep 06, 2026, 11:48 PM IST

State News Live: 'ಆಕ್ಷನ್‌ಗೆ ಪಕ್ಕಾ ರಿಯಾಕ್ಷನ್' - ತಾಂಡವ್ ರಾಮ್ ಎಂಟ್ರಿಗೆ ಬಿಗ್‌ ಬಾಸ್ ಮನೆಯಲ್ಲಿ ಶುರುವಾಯ್ತು ಹೊಸ ಆಟ!

ಸಾರಾಂಶ

ಬೆಂಗಳೂರು (ಸೆ.6): ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರಕ್ಕೆ ಮನುಷ್ಯತ್ವವೇ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿ ಅವರು ಹೆಲಿಕಾಪ್ಟರ್‌ನಲ್ಲಿ ಬಂದು ಬರ ಪರಿಸ್ಥಿತಿ ವೀಕ್ಷಣೆ ಮಾಡುವುದು ಸರಿಯಲ್ಲ. ಇದೇ ಮೊದಲ ಬಾರಿಗೆ ಅವರು ಹಸಿರು ಶಾಲು ಹಾಕಿಕೊಂಡು ಉತ್ತರ ಕರ್ನಾಟಕ ಭಾಗಕ್ಕೆ ಬಂದಿದ್ದಾರೆ. ಇದು ನಮ್ಮ ಪಾದಯಾತ್ರೆಗೆ ಸಿಕ್ಕ ದೊಡ್ಡ ಜಯ ಎಂದಿದ್ದಾರೆ. ಅಲ್ಲದೆ, ಬಿಜೆಪಿ ಹಮ್ಮಿಕೊಂಡಿರುವ ಹೋರಾಟ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಜನರ ಸಮಸ್ಯೆಗಳಿಗೆ ಧ್ವನಿಯಾಗಲಿದೆ ಎಂದೂ ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

11:48 PM (IST) Sep 06

'ಆಕ್ಷನ್‌ಗೆ ಪಕ್ಕಾ ರಿಯಾಕ್ಷನ್' - ತಾಂಡವ್ ರಾಮ್ ಎಂಟ್ರಿಗೆ ಬಿಗ್‌ ಬಾಸ್ ಮನೆಯಲ್ಲಿ ಶುರುವಾಯ್ತು ಹೊಸ ಆಟ!

‘ಜೋಡಿ ಹಕ್ಕಿ’ ಧಾರಾವಾಹಿಯ ಪೈಲ್ವಾನ್ ರಾಮು ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟ ತಾಂಡವ್ ರಾಮ್ ಬಿಗ್‌ ಬಾಸ್ ಕನ್ನಡ ಸೀಸನ್ 13ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹಾಸನದಿಂದ ಬೆಂಗಳೂರಿಗೆ ಬಂದು ಕಿರುತೆರೆ, ಹಿರಿತೆರೆ..

Read Full Story

11:06 PM (IST) Sep 06

'ಅದೇ ಆಕೆಗೆ ಮೈನಸ್ ಆಗಬಹುದು' - ಕಿಚ್ಚನ ಮುಂದೆ ಆಸಿಯಾ ಅಮ್ಮ ಹೇಳಿದ ಆ ಮಾತಿನ ಅರ್ಥವೇನು?

‘ಕನ್ಯಾಕುಮಾರಿ’ ಹಾಗೂ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಆಸಿಯಾ ಫಿರ್ದೋಸ್ ‘ಬಿಗ್‌ಬಾಸ್ ಕನ್ನಡ ಸೀಸನ್ 13’ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ ಬಾಸ್ ಮನೆಯಲ್ಲಿ ಅವರ ಆಟ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Read Full Story

10:24 PM (IST) Sep 06

Gill ಬೆಂಚ್‌ಗೆ ಕೂರಿಸಿದ್ದಕ್ಕೆ ಇಷ್ಟೊಂದು ಕೋಪನಾ? ಇಂಗ್ಲೆಂಡ್‌ನಲ್ಲಿ 'W,W,W,W,W' ಬೌಲಿಂಗ್ ಅಬ್ಬರ; 20 ರನ್‌ಗೆ ಎದುರಾಳಿ ಕಥೆ ಮುಗಿಸಿದ ಯುವ ತಾರೆ!

ಐಪಿಎಲ್‌ನಲ್ಲಿ ಅವಕಾಶ ವಂಚಿತರಾಗಿದ್ದ ಆ ಸ್ಪಿನ್ನರ್ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ತಮ್ಮ ಸ್ಪಿನ್ ಜಾದು ಪ್ರದರ್ಶಿಸಿದ್ದಾರೆ. ಗ್ಲೌಸೆಸ್ಟರ್‌ಶೈರ್ ಪರ ಆಡಿ, ಡರ್ಬಿಶೈರ್ ವಿರುದ್ಧ 20 ರನ್‌ಗಳಿಗೆ 5 ವಿಕೆಟ್ ಕಬಳಿಸಿ ತಮ್ಮ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story

10:21 PM (IST) Sep 06

‘ಆಂಟಿ’ ಎಂದ ಕಿರಣ್‌ಗೆ ಪ್ರಥಮ ಕೊಟ್ರು ತಿರುಗೇಟು - ಕೆರ್ಕೊಂಡು ಇರುವುದರಲ್ಲೇ ನೆಮ್ಮದಿ ಎಂದ ಓಂ ಪ್ರಕಾಶ್ ರಾವ್

ಬಿಗ್‌ ಬಾಸ್ ಕನ್ನಡ ಸೀಸನ್ 13ಕ್ಕೆ ನಿರ್ದೇಶಕ ಎನ್. ಓಂ ಪ್ರಕಾಶ್ ರಾವ್ ಹಾಗೂ ‘ಅಗ್ನಿ ಪರೀಕ್ಷೆ’ ಕಾರ್ಯಕ್ರಮದ ಮೂಲಕ ವೀಕ್ಷಕರ ವೋಟಿಂಗ್‌ನಲ್ಲಿ ಆಯ್ಕೆಯಾದ ಕಿರಣ್ ಶಾಸ್ತ್ರಿ ಎಂಟ್ರಿ ಕೊಟ್ಟಿದ್ದಾರೆ. ಅವರ ಹೊಸ ಜರ್ನಿ ಈ ಸೀಸನ್‌ನಲ್ಲಿ ಹೇಗೆ ಸಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Read Full Story

09:45 PM (IST) Sep 06

ಡಿಕೆಶಿ ಸರ್ಕಾರದ ವಿರುದ್ಧ ಜನಾರ್ದನ್ ರೆಡ್ಡಿ ಪತ್ನಿ ತೀವ್ರ ವಾಗ್ದಾಳಿ - ಕಾರಣ ಏನು ಗೊತ್ತಾ?

ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆಯ 6ನೇ ದಿನದಂದು ಲಕ್ಷ್ಮಿ ಅರುಣಾ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಉಚಿತ ಬಸ್ ಯೋಜನೆ ಮಹಿಳೆಯರಿಗೆ 'ಸಾವಿನ ಭಾಗ್ಯ'ವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದರು.

Read Full Story

09:36 PM (IST) Sep 06

ಪತ್ನಿಯ ಆ ಸ್ವಭಾವ ಬಯಲು ಮಾಡಿದ ಸುದರ್ಶನ್ - ಸಂಗೀತಾ ಭಟ್‌ಗೆ ಸುದೀಪ್ ಕೊಟ್ಟ ವಾರ್ನಿಂಗ್ ಏನು?

ಸಂಗೀತಾ ಭಟ್ ಅವರನ್ನು ಬಿಗ್‌ ಬಾಸ್ ವೇದಿಕೆಗೆ ಕಳುಹಿಸಲು ಅವರ ಪತಿ ಹಾಗೂ ನಟ ಸುದರ್ಶನ್ ಕೂಡ ಆಗಮಿಸಿದ್ದರು. ಇದೇ ವೇಳೆ ಪತ್ನಿಯ ವ್ಯಕ್ತಿತ್ವದ ಬಗ್ಗೆ ಸುದರ್ಶನ್ ಹೇಳಿದ ಕೆಲವು ಮಾತುಗಳು ವೇದಿಕೆಯಲ್ಲಿ ನಗುವಿನ ವಾತಾವರಣ ಸೃಷ್ಟಿಸಿದವು.

Read Full Story

09:18 PM (IST) Sep 06

ಸರ್, ನಾನು ಮನೆ ಕಟ್ಟಬೇಕು ಎಂದ ಗಗನ್ ಚಿನ್ನಪ್ಪ - ಶುಭ ಹಾರೈಸಿ ಬಿಗ್‌ ಬಾಸ್ ಮನೆಗೆ ಕಳಿಸಿಕೊಟ್ಟ ಕಿಚ್ಚ!

‘ಸೀತಾ ರಾಮ’ ಧಾರಾವಾಹಿಯ ರಾಮ್‌ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿರುವ ನಟ ಗಗನ್ ಚಿನ್ನಪ್ಪ ‘ಬಿಗ್‌ ಬಾಸ್ ಕನ್ನಡ ಸೀಸನ್ 13’ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕೊಡಗಿನಿಂದ ನಟನೆಯತ್ತ ಬಂದ ಗಗನ್, ಜರ್ಮನಿ ಮತ್ತು ಓಮನ್‌ನಲ್ಲಿ ಕೆಲಸ ಮಾಡಿದ ಬಳಿಕ ಕಿರುತೆರೆಗೆ ಕಾಲಿಟ್ಟಿದ್ದರು.

Read Full Story

09:03 PM (IST) Sep 06

ಕಿಚ್ಚ ಸುದೀಪ್ ಮುಂದೆ ಖಡಕ್ಕಾಗಿ 'ಜನರ ಸಿಂಪತಿ ಬೇಡ' ಎಂದ ರಂಗಭೂಮಿ ಕಲಾವಿದ ಅವಿನಾಶ್!

‘ಬಿಗ್‌ ಬಾಸ್ ಕನ್ನಡ ಸೀಸನ್ 13’ರ ಮೂರನೇ ಸ್ಪರ್ಧಿಯಾಗಿ ರಂಗಭೂಮಿ ಕಲಾವಿದ ಹಾಗೂ ನಟ ಅವಿನಾಶ್ ಷಠಮರ್ಶನ್ ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬಿಗ್‌ ಬಾಸ್ ವೇದಿಕೆಯಲ್ಲಿ ‘ನನಗೆ ಜನರ ಸಿಂಪತಿ ಬೇಡ’ ಎಂದು ಖಡಕ್ ಹೇಳಿಕೆ ನೀಡಿದ್ದಾರೆ.

Read Full Story

08:58 PM (IST) Sep 06

46 ಲಕ್ಷ ರೂ ಸಂಬಳದ ಕೆಲಸ ಬಿಟ್ಟ ಇಂಜಿನಿಯರ್; ಕಾರಣ ಗೊತ್ತಾದ್ರೆ ಸೆಲ್ಯೂಟ್ ಹೊಡೀತಿರಿ

ಅಮೆಜಾನ್ ಕಂಪನಿಯಲ್ಲಿ ವಾರ್ಷಿಕ 46 ಲಕ್ಷ ರೂಪಾಯಿ ಸಂಬಳದ ಕೆಲಸ ಬಿಟ್ಟು, ದೇಶ ಸೇವೆಗಾಗಿ ಭಾರತೀಯ ಸೇನೆಗೆ ಸೇರಿದ ಲಕ್ನೋದ ಎಂಜಿನಿಯರ್ ಶಾರ್ದೇಂದು ತಿವಾರಿ ಯುವ ಜನತೆಗೆ ಸ್ಫೂರ್ತಿಯಾಗಿದ್ದಾರೆ. ಸತತ ಎಂಟು ಬಾರಿ ವಿಫಲವಾದರೂ ಛಲ ಬಿಡದೆ ಒಂಬತ್ತನೇ ಪ್ರಯತ್ನದಲ್ಲಿ ಯಶಸ್ವಿಯಾದ ಇವರು, ಇದೀಗ ಗಯಾದ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಅಧಿಕಾರಿಯಾಗಿ ದೇಶ ಸೇವೆಗೆ ಸಜ್ಜಾಗಿದ್ದಾರೆ.

Read Full Story

08:48 PM (IST) Sep 06

ಸ್ವಲ್ಪ ಯಾಮಾರಿದರೂ ನೈಟ್‌ ಔಟ್ ಆಗಿಬಿಡುತ್ತೆ - ಸೌಂದರ್ಯ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್!

‘ಬಿಗ್‌ ಬಾಸ್ ಕನ್ನಡ ಸೀಸನ್ 13’ರ ಎರಡನೇ ಸ್ಪರ್ಧಿಯಾಗಿ ಮಾಡೆಲ್ ಹಾಗೂ ‘MTV Splitsvilla Season 16’ ಖ್ಯಾತಿಯ ಸೌಂದರ್ಯ ಶೆಟ್ಟಿ ಅಲಿಯಾಸ್ ಸ್ಯಾಂಡಿ ಎಂಟ್ರಿ ನೀಡಿದ್ದಾರೆ. ಮಂಗಳೂರು ಮೂಲದ ಸೌಂದರ್ಯ..

Read Full Story

08:34 PM (IST) Sep 06

'ನೀವು ನಿಯಮ ಮುರಿದಿದ್ದೀರಿ' ಎಂದ ಸುದೀಪ್ - ಗಾಬರಿಯಾದ ಜಗ್ಗು ಮಮ್ಮಿಗೆ ಬೋರ್ಡಿಂಗ್ ಪಾಸ್ ಸಿಕ್ತಾ?

ಬಿಗ್‌ ಬಾಸ್ ಕನ್ನಡ ಸೀಸನ್ 13ರ ಮೊದಲ ಸ್ಪರ್ಧಿಯಾಗಿ ‘ಲವ್ ಮಾಕ್ಟೆಲ್ 3’ ಖ್ಯಾತಿಯ ಜಗ್ಗು ಮಮ್ಮಿ ಎಂಟ್ರಿ ನೀಡಿದ್ದಾರೆ. ವೇದಿಕೆಯಲ್ಲಿ ಸುದೀಪ್ ಆರಂಭದಲ್ಲೇ ಜಗ್ಗುಗೆ ಶಾಕ್ ನೀಡಿದ್ದು, ಬಳಿಕ ಆತ್ಮವಿಶ್ವಾಸ ತುಂಬಿದ್ದಾರೆ.

Read Full Story

08:21 PM (IST) Sep 06

ಕರ್ನಾಟಕಕ್ಕೆ ಹೂಡಿಕೆ ತರಲು ಸಚಿವ ಎಂ.ಬಿ. ಪಾಟೀಲ ವಿದೇಶ ಪ್ರವಾಸ - ಫ್ರಾನ್ಸ್, ನೆದರ್ಲೆಂಡ್ಸ್‌ನಲ್ಲಿ ರೋಡ್‌ಶೋ

ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಮತ್ತು ಉದ್ಯೋಗಾವಕಾಶಗಳನ್ನು ಆಕರ್ಷಿಸುವ ಗುರಿಯೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದ ನಿಯೋಗ ಫ್ರಾನ್ಸ್ ಮತ್ತು ನೆದರ್ಲೆಂಡ್ಸ್‌ನಲ್ಲಿ ಹೂಡಿಕೆ ರೋಡ್‌ಶೋ ಹಾಗೂ ಮಾತುಕತೆ ನಡೆಸಲಿದೆ.

Read Full Story

08:03 PM (IST) Sep 06

Mandy - ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ವ್ಯಕ್ತಿ ಬಂಧನ; ಆದರೂ ಕೆ.ಆರ್.ಪೇಟೆ ಪೊಲೀಸ್ ಠಾಣೆ ಎದುರು ನಿಲ್ಲದ ಹೈಡ್ರಾಮಾ!

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ವೇದಮೂರ್ತಿ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ, ದಲಿತಪರ ಸಂಘಟನೆಗಳು ಕೆ.ಆರ್.ಪೇಟೆ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಆರೋಪಿಯನ್ನು ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
Read Full Story

07:49 PM (IST) Sep 06

Bigg Boss - ಬಿಗ್ ಬಾಸ್ ವೇದಿಕೆ ಮೇಲೆ 'ವಿಷ್ಣುವರ್ಧನ್' ಸ್ಟೈಲ್‌ನಲ್ಲಿ ಮಿಂಚಿದ ಕಿಚ್ಚ ಸುದೀಪ್‌.. ಇದು ಏಕೆ ಗೊತ್ತಾ?

ಈ ಬಾರಿಯ ಬಿಗ್ ಬಾಸ್ 'ಹೊಸ ಬಾಸ್, ಹೊಸ ರೂಲ್ಸ್' ಮಾತ್ರವಲ್ಲದೆ, ಹೊಸ ಸ್ಟೈಲ್ ಮೂಲಕವೂ ಜನರ ಮನ ಗೆಲ್ಲಲು ಸಜ್ಜಾಗಿದೆ. ಕಿಚ್ಚನ ಖದರ್, ಸುಂದರ ಮನೆ ಮತ್ತು ವಿಭಿನ್ನ ಸ್ಪರ್ಧಿಗಳ ನಡುವೆ ಈ ಸೀಸನ್ 13 ಕನ್ನಡಿಗರಿಗೆ ಪಕ್ಕಾ ಎಂಟರ್ಟೈನ್ಮೆಂಟ್ ನೀಡೋದು ಗ್ಯಾರಂಟಿನಾ?! ನೋಡೋಣ.. ಇನ್ಮೇಲೆ ಶುರುವಾಗಲಿದೆ ಅಸಲಿ ಮಜಾ!

Read Full Story

07:42 PM (IST) Sep 06

Bigg Boss ಶೋ ಆರಂಭದಲ್ಲಿಯೇ ಬಿಗ್ ಟ್ವಸ್ಟ್; ವಿಶೇಷ ವ್ಯಕ್ತಿಗೆ ಸಿಕ್ತು ಕಿಚ್ಚನ ಮೊದಲ ಚಪ್ಪಾಳೆ

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 13ಕ್ಕೆ ಕಿಚ್ಚ ಸುದೀಪ್ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಈ ಬಾರಿ ವಿಶ್ವದ ಅದ್ಭುತಗಳ ಮಾದರಿಯ ಮನೆಯನ್ನು ನಿರ್ಮಿಸಲಾಗಿದ್ದು, ಸ್ಪರ್ಧಿಗಳಿಗೆ ಆರಂಭದಲ್ಲೇ ಸವಾಲೊಂದು ಎದುರಾಗಿದೆ. ಮೊದಲ ಸ್ಪರ್ಧಿಯಾಗಿ ಜಗ್ಗ ಮಮ್ಮಿ ಖ್ಯಾತಿಯ ಜಗದೀಶ್ ಆಗಮಿಸಿದ್ದಾರೆ.
Read Full Story

07:15 PM (IST) Sep 06

Business ಶುರು ಮಾಡೋಕೆ ಲೋನ್ ಬೇಕಾ? 16 ಸರ್ಕಾರಿ ಯೋಜನೆಗಳು ಒಂದೇ ಪೋರ್ಟಲ್‌ನಲ್ಲಿ! ಅರ್ಜಿ ಸಲ್ಲಿಸುವುದು ಹೇಗೆ?

ಸ್ವಂತ ಉದ್ಯಮ ಆರಂಭಿಸಲು ಬಂಡವಾಳ ಮತ್ತು ಸಾಲದ ಗೊಂದಲದಲ್ಲಿರುವವರಿಗೆ ಕೇಂದ್ರ ಸರ್ಕಾರದ 'ಜನ ಸಮರ್ಥ್' ಪೋರ್ಟಲ್ ಒಂದು ಉತ್ತಮ ಪರಿಹಾರವಾಗಿದೆ. ಈ ಡಿಜಿಟಲ್ ವೇದಿಕೆಯು ಕೃಷಿ, ವ್ಯವಹಾರ, ವಸತಿ ಸೇರಿದಂತೆ 16 ಸರ್ಕಾರಿ ಸಾಲ ಯೋಜನೆಗಳನ್ನು ಒಂದೇ ಸೂರಿನಡಿ ತಂದಿದ್ದು, ಬ್ಯಾಂಕ್‌ಗೆ ಅಲೆಯದೆ ಸುಲಭವಾಗಿ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ.
Read Full Story

07:06 PM (IST) Sep 06

ಶತಮಾನದ ಸುರಂಗ; ಬೆಂಗಳೂರಿನಿಂದ ಜಸ್ಟ್ ಎರಡೂವರೆ ಗಂಟೆ ದೂರ! ಮಕ್ಕಳೊಂದಿಗೆ ಹೋಗಲು ಬೆಸ್ಟ್ ಪ್ಲೇಸ್

1928-1931ರ ಅವಧಿಯಲ್ಲಿ ನಿರ್ಮಾಣವಾದ ಐತಿಹಾಸಿಕ ಸುರಂಗ ಕಾಲುವೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸರ್. ಎಂ. ವಿಶ್ವೇಶರಯ್ಯನವರಿಂದ ನಿರ್ಮಿಸಲ್ಪಟ್ಟ ಈ ಸುರಂಗವು ಇಂದಿಗೂ ಕೃಷಿ ಭೂಮಿಗೆ ನೀರುಣಿಸುತ್ತಾ, ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತಿದೆ.

Read Full Story

06:52 PM (IST) Sep 06

90 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಕೃಷಿಗೆ ಇಳಿದ ಯುವಕ; 30000 ಹೂಡಿಕೆಯಲ್ಲಿ ಈ ಕೋಟಿಗಳ ಒಡೆಯ

90 ಲಕ್ಷ ರೂಪಾಯಿ ಸಂಬಳದ ಕೆಲಸ ಬಿಟ್ಟು ಕೇವಲ 30 ಸಾವಿರ ರೂ. ಹೂಡಿಕೆಯೊಂದಿಗೆ ಮೈಕ್ರೋಗ್ರೀನ್ಸ್ ಕೃಷಿ ಆರಂಭಿಸಿದ ಚಂಡೀಗಢದ ಮೋಹಿತ್ ನಿಜ್ಹವನ್, ಇಂದು ಕೋಟಿಗಳ ಒಡೆಯನಾಗಿದ್ದಾರೆ. ವಾರ್ಷಿಕ 1.44 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಇವರು, ಲಾಭದಾಯಕ ಕೃಷಿ ಮಾಡುವುದು ಹೇಗೆಂದು ಇತರ ರೈತರು ಮತ್ತು ಉದ್ಯಮಿಗಳಿಗೆ ತರಬೇತಿ ನೀಡುತ್ತಾ ಸ್ಫೂರ್ತಿಯಾಗಿದ್ದಾರೆ.

Read Full Story

06:44 PM (IST) Sep 06

'ಫಿಲ್ಮ್‌ಮೇಕಿಂಗ್ ಅನ್ನೋದು ರಿಸ್ಕ್' - ಕನ್ನಡ ಚಿತ್ರರಂಗದ ಬಗ್ಗೆ ನಟಿ ಶ್ರುತಿ ಹರಿಹರನ್ ಯಾಕೆ ಹೀಗಂದ್ರು

ನಟಿ ಶ್ರುತಿ ಹರಿಹರನ್‌ಗೆ ಸಿನಿಮಾದಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಅಷ್ಟೇ ಮುಖ್ಯ. ಕೇವಲ ಮನರಂಜನೆ ಎಂಬ ಕಾರಣಕ್ಕೆ ಪರದೆಯ ಮೇಲೆ ಮಹಿಳೆಯರನ್ನು ಹೇಗೆ ಬೇಕಾದರೂ ತೋರಿಸುವುದನ್ನು ಒಪ್ಪಿಕೊಳ್ಳಬಾರದು ಎಂಬುದು ಅವರ ಅಭಿಪ್ರಾಯ.

Read Full Story

06:03 PM (IST) Sep 06

Ind Vs Pak - ನಿಮ್ಮ ವಯಸ್ಸೆಷ್ಟು? ಎಂದು ಕೇಳಿದ ಪಾಕಿಸ್ತಾನಿ ಫ್ಯಾನ್‌! ಭಾರತೀಯ ಅಜ್ಜಿ ಕೊಟ್ಟ ಖಡಕ್ ಉತ್ತರಕ್ಕೆ ಬಾಯಿ ಮುಚ್ಚಿಕೊಂಡ!

ಮಹಿಳಾ ಏಷ್ಯಾಕಪ್ ಟಿ20 ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದ್ದು, ಪಾಕ್ ತಂಡ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯದ ನಂತರ, ಪಾಕ್ ಅಭಿಮಾನಿಯೊಬ್ಬರಿಗೆ ಭಾರತೀಯ ಅಜ್ಜಿಯೊಬ್ಬರು ನೀಡಿದ ಖಡಕ್ ಉತ್ತರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

06:02 PM (IST) Sep 06

'ಉಪೇಂದ್ರ' ನಟಿ ಪ್ರೇಮಾ ನ್ಯೂಜಿಲೆಂಡ್‌ಗೆ ಹೋಗಿದ್ದೇಕೆ? ಕೊನೆಗೂ ಗೊತ್ತಾಯ್ತು ಅಸಲಿ ಕಾರಣ

ಕನ್ನಡ ಚಿತ್ರರಂಗದ 'ಉಪೇಂದ್ರ' ನಟಿ ಪ್ರೇಮಾ ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಪ್ರೇಮಾಗೆ ಕ್ಯಾನ್ಸರ್ ಇದೆ ಮತ್ತು ಚಿಕಿತ್ಸೆಗಾಗಿ ನ್ಯೂಜಿಲೆಂಡ್‌ಗೆ ತೆರಳಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

Read Full Story

05:55 PM (IST) Sep 06

BBK 13 - ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಓಂ ಪ್ರಕಾಶ್ ರಾವ್.. 'ಬೀಪ್‌ ಸೌಂಡ್‌' ಪ್ರಶ್ನೆ ಕೇಳಿದ್ಯಾಕೆ ಕಿಚ್ಚ ಸುದೀಪ್?

ಓಂ ಪ್ರಕಾಶ್ ರಾವ್ ಎಂದರೆ ನೇರ ನಡೆ, ನೇರ ನುಡಿ. ಯಾವುದೇ ವಿಷಯವನ್ನಾದರೂ ಮುಚ್ಚುಮರೆಯಿಲ್ಲದೆ ಮಾತನಾಡುವ ಗುಣ ಅವರದ್ದು. ಹಾಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಟ್ರೋಲ್‌ಗಳು ಶುರುವಾಗಿದ್ದು, "ಇನ್ಮೇಲೆ ಎಡಿಟರ್‌ಗಳಿಗೆ ಬೀಪ್ ಸೌಂಡ್ ಹಾಕೋದೇ ಕೆಲಸ" ಎನ್ನಲಾಗುತ್ತಿದೆ.

Read Full Story

05:28 PM (IST) Sep 06

ಹೀರೋಯಿನ್ ಆಗಿ ಕಾಣಿಸಿಕೊಳ್ಳುವುದಲ್ಲ, ಪಾತ್ರಕ್ಕೆ ಬೆಲೆ ಬೇಕು - ನಟಿ ಶಾನ್ವಿ ಸಂದರ್ಶನ

ನಟಿ ಶಾನ್ವಿ ಶ್ರೀವಾಸ್ತವ ತಮ್ಮ ಹತ್ತು ವರ್ಷಗಳ ಸಿನಿ ಪಯಣ, ಸಿನಿಮಾ ಆಯ್ಕೆ ಮತ್ತು ‘ಅಮೆರಿಕಾ ಅಮೆರಿಕಾ 2’ ಚಿತ್ರದ ಅನುಭವದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪಾತ್ರಕ್ಕೆ ಮೌಲ್ಯ ಸಿಗುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ.

Read Full Story

05:18 PM (IST) Sep 06

Ind vs Pak - ಭಾರತದ ಆರ್ಭಟಕ್ಕೆ ಪಾಕ್ ದೂಳಿಪಟ; ಗೆಲುವಿನ ಬೆನ್ನಲ್ಲೇ ಬಯಲಾಯ್ತು ಟೀಮ್ ಇಂಡಿಯಾದ ಆ 'ಮಾಸ್ಟರ್ ಪ್ಲಾನ್'!

ಮಹಿಳಾ ಏಷ್ಯಾ ಕಪ್ ಟಿ20ಯಲ್ಲಿ, ಭಾರತೀಯ ಸ್ಪಿನ್ನರ್‌ಗಳ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನವು ತನ್ನ ಟಿ20 ಇತಿಹಾಸದ ಕನಿಷ್ಠ ಮೊತ್ತ 55 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ, 3 ವಿಕೆಟ್ ನಷ್ಟಕ್ಕೆ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಆದರೆ ಆ ಒಂದು ಮಾಸ್ಟರ್‌ ಪ್ಲಾನ್‌ ಏನು? ಎನ್ನುವುದನ್ನು ನೋಡೋಣ ಬನ್ನಿ.

Read Full Story

05:07 PM (IST) Sep 06

ಉಡುಪಿ ವಿಟ್ಲಪಿಂಡಿ ಉತ್ಸವದಲ್ಲಿ ಅವಘಡ - ಪರ್ಯಾಯ ಶ್ರೀಗಳ ಕೈಯಿಂದ ಜಾರಿಬಿದ್ದ ಕೃಷ್ಣನ ಮಣ್ಣಿನ ಮೂರ್ತಿ

ಉಡುಪಿ ವಿಟ್ಲಪಿಂಡಿ ಉತ್ಸವದ ವೇಳೆ ಪರ್ಯಾಯ ಶ್ರೀಗಳ ಕೈಯಿಂದ ಕೃಷ್ಣನ ಮಣ್ಣಿನ ಮೂರ್ತಿ ಜಾರಿಬಿದ್ದು ಭಗ್ನಗೊಂಡ ಆಕಸ್ಮಿಕ ಅವಘಡ ಸಂಭವಿಸಿದೆ. ರಥೋತ್ಸವ ಮುಗಿದ ಬಳಿಕ ಮಧ್ವ ಸರೋವರದಲ್ಲಿ ವಿಸರ್ಜನೆಗಾಗಿ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ.

Read Full Story

05:04 PM (IST) Sep 06

Bengaluru - 'ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ', ಅಹಿಂದ ಸಮಾವೇಶದಲ್ಲಿ ಪ್ರದೀಪ್ ಈಶ್ವರ್ ಅಬ್ಬರ!

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಹಿಂದುಳಿದ ಜಾತಿಗಳ ಜನ ಜಾಗೃತಿ ಸಮಾವೇಶದಲ್ಲಿ, ಶಾಸಕ ಪ್ರದೀಪ್ ಈಶ್ವರ್ ಅವರು ಸಿದ್ದರಾಮಯ್ಯ ಅವರನ್ನು 'ಮುಂದಿನ ಮುಖ್ಯಮಂತ್ರಿ' ಎಂದು ಘೋಷಣೆ ಕೂಗಿದರು. ಈ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಸಮಾವೇಶದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಬೆಂಬಲಿಗರು ಆಗ್ರಹಿಸಿದರು.
Read Full Story

04:52 PM (IST) Sep 06

ಹೊಸ ದೃಷ್ಟಿಕೋನದಲ್ಲಿ BGM ಇಲ್ಲದ ಹಾರರ್ - ‘ವಿಡಿಯೋ’ ಜೊತೆ ಬಂದ ನಿರ್ದೇಶಕ ಶ್ರೀನಿಧಿ

‘ಬ್ಲಿಂಕ್’ ಮತ್ತು ‘ಜೆರಾಕ್ಸ್’ ಬಳಿಕ ನಿರ್ದೇಶಕ ಶ್ರೀನಿಧಿ ಬೆಂಗಳೂರು ‘ವಿಡಿಯೋ’ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಫೌಂಡ್ ಫುಟೇಜ್ ಹಾರರ್ ಜಾನರ್‌ನಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ 7ರಿಂದ 12 ಆ್ಯಕ್ಷನ್ ಕ್ಯಾಮೆರಾಗಳನ್ನು ಬಳಸಲಾಗಿದೆ.

Read Full Story

04:25 PM (IST) Sep 06

'ಡಾಕ್ಟರ್ ಅಲ್ಲ, ಡ್ಯಾನ್ಸರ್' - ಡಾಲಿ ಧನಂಜಯ ಪತ್ನಿಯ ಡ್ಯಾನ್ಸ್ ನೋಡಿ ಫ್ಯಾನ್ಸ್ ಫುಲ್ ಖುಷ್

‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಪುಟ್ಟಮಲ್ಲಿ’ ಹಾಡಿಗೆ ಡಾಲಿ ಧನಂಜಯ ಪತ್ನಿ ಧನ್ಯತಾ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಧನ್ಯತಾ ಡ್ಯಾನ್ಸ್ ವಿಡಿಯೋಗೆ ಫ್ಯಾನ್ಸ್ ಫಿದಾ ಆಗಿದ್ದು, ‘ಡಾಕ್ಟರ್ ಅಲ್ಲ, ಡ್ಯಾನ್ಸರ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

04:12 PM (IST) Sep 06

ಹಾಫ್ ಹೆಲ್ಮೆಟ್ ಹಾಕುವವರೇ ಎಚ್ಚರ - ಚಿಕ್ಕಮಗಳೂರಿನಲ್ಲಿ ಟಿಪ್ಪರ್ ಹರಿದು ಬೈಕ್ ಸವಾರ ಸಾವು

ಚಿಕ್ಕಮಗಳೂರು ನಗರದ ಹೊರವಲಯದ ಹಿರೇಮಗಳೂರಿನಲ್ಲಿ ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 55 ವರ್ಷದ ಬೈಕ್ ಸವಾರ ಪಾಂಡುರಂಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಪ್ಪರ್ ಡಿಕ್ಕಿ ಹೊಡೆದ ಬಳಿಕ ಅದರ ಟೈರ್ ತಲೆಯ ಮೇಲೆ ಹರಿದ ಪರಿಣಾಮ ಪಾಂಡುರಂಗ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Read Full Story

04:12 PM (IST) Sep 06

ಪಾಕ್‌ಗೆ ಮತ್ತೆ ಮಣ್ಣು ಮುಕ್ಕಿಸಿದ ಭಾರತ; ಪಠಾಣ್ ವ್ಯಂಗ್ಯದ ಟ್ವೀಟ್ ಭಾರೀ ವೈರಲ್

ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ, ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ಪಾಕಿಸ್ತಾನ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಈ ಭರ್ಜರಿ ಗೆಲುವಿನೊಂದಿಗೆ ಭಾರತವು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
Read Full Story

03:37 PM (IST) Sep 06

Bengaluru - ವಿಜಯಾನಂದ ಟ್ರಾವೆಲ್ಸ್ ನಿಂದ ಹೊಸ ದಾಖಲೆ - ಸಾರಿಗೆಯಲ್ಲಿ ನೂತನ ಮೈಲಿಗಲ್ಲು

ದೇಶದ ಪ್ರಮುಖ ಖಾಸಗಿ ಸಾರಿಗೆ ಸಂಸ್ಥೆಯಾದ ವಿಜಯಾನಂದ ಟ್ರಾವೆಲ್ಸ್, ಹೊಸ ದಾಖಲೆ ನಿರ್ಮಿಸಿದೆ. ಶೌಚಾಲಯ ವ್ಯವಸ್ಥೆ ಹೊಂದಿರುವ ಈ ಬಸ್‌ಗಳು ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುವುದಲ್ಲದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿವೆ.

Read Full Story

03:34 PM (IST) Sep 06

Hanuman Ansh - ಸ್ಮಾಲ್ ಬಜೆಟ್ ಚಿತ್ರದ ಬಿಗ್ ಕಮಾಲ್! 100 ಕೋಟಿ ಕ್ಲಬ್‌ ಸಮೀಪ ಬಂದ 'ಹನುಮಾನ್ ಅಂಶ್'

ಕೇವಲ 2 ಕೋಟಿ ಬಜೆಟ್‌ನ ಈ ಸಿನಿಮಾ ಈಗ ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಮತ್ತು ಇತ್ತೀಚಿನ ಕ್ರೇಜಿ ಸಿನಿಮಾ ‘ಮಿರ್ಜಾಪುರ್: ದಿ ಮೂವೀ’ ಅಂತಹ ದೊಡ್ಡ ಸಿನಿಮಾಗಳಿಗೆ ಕಠಿಣ ಸ್ಪರ್ಧೆ ನೀಡುತ್ತಿದೆ. ಆರಂಭದಲ್ಲಿ ಸಣ್ಣದಾಗಿ ಶುರುವಾದ ಈ ಕಿಡಿ ಈಗ ಬಾಕ್ಸ್ ಆಫೀಸ್‌ನಲ್ಲಿ ಕಾಳ್ಗಿಚ್ಚಿನಂತೆ ಹರಡಿದೆ.

Read Full Story

03:32 PM (IST) Sep 06

ಕಿಚ್ಚನ ಮುಂದೆ ಕನ್ನಡದಲ್ಲಿ ಮಾತಾಡಿದ ವಿಜಯ್ ಸೇತುಪತಿ - ಬಿಗ್ ಬಾಸ್ 13 ಪ್ರೋಮೋ ಫುಲ್ ವೈರಲ್

ಬಿಗ್ ಬಾಸ್ ಕನ್ನಡ ಸೀಸನ್ 13ರ ಗ್ರ್ಯಾಂಡ್ ಪ್ರೀಮಿಯರ್‌ಗೆ ಕ್ಷಣಗಣನೆ ಆರಂಭವಾಗಿದೆ. ಕಿಚ್ಚ ಸುದೀಪ್ ಸಾರಥ್ಯದ ಈ ಸೀಸನ್‌ನಲ್ಲಿ ಮಲಯಾಳಂನ ಮೋಹನ್‌ಲಾಲ್, ತಮಿಳಿನ ವಿಜಯ್ ಸೇತುಪತಿ ಹಾಗೂ ತೆಲುಗಿನ ನಾಗಾರ್ಜುನ ಕೂಡ ಒಂದೇ ವೇದಿಕೆಯಲ್ಲಿ ಕಾಣಿಸಿೊಂಡಿದ್ದಾರೆ.

Read Full Story

03:17 PM (IST) Sep 06

ರಿಯಲ್ ಪತ್ನಿ ಸಂಗೀತಾ ಜೊತೆ, ರೀಲ್ ಪತ್ನಿ ಕಾವ್ಯಾ ಎಂಟ್ರಿ'; ತಲೆ ಚಚ್ಚಿಕೊಂಡ ತಾಂಡವ್

ಕಲರ್ಸ್ ಕನ್ನಡದ ಬಿಗ್‌ಬಾಸ್ ಮನೆಗೆ 'ಭಾಗ್ಯಲಕ್ಷ್ಮೀ' ಖ್ಯಾತಿಯ ತಾಂಡವ್ ಅವರ ರಿಯಲ್ ಪತ್ನಿ ಸಂಗೀತಾ ಭಟ್ ಮತ್ತು ರೀಲ್ ಪತ್ನಿ ಶ್ರೇಷ್ಠಾ (ಕಾವ್ಯಾ ಗೌಡ) ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರನ್ನೂ ಒಟ್ಟಿಗೆ ನೋಡಿ ಸುದರ್ಶನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Read Full Story

03:00 PM (IST) Sep 06

ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನ ಹಾವಾಡಿಗರಿಗೆ ಹೋಲಿಸಿದ ಸಚಿವ ನರೇಂದ್ರಸ್ವಾಮಿ! ಹಾಕಿದ ಸವಾಲೇನು?

ಕೇಂದ್ರ ಸಚಿವ ಕುಮಾರಸ್ವಾಮಿ ಅವರ 'ದೇಶವೇ ಅಲ್ಲೋಲ ಕಲ್ಲೋಲ' ಹೇಳಿಕೆಗೆ ಪ್ರತಿಕ್ರಿಯಿಸಿದ ಕೃಷಿ ಸಚಿವ ನರೇಂದ್ರಸ್ವಾಮಿ, ಕುಮಾರಸ್ವಾಮಿಯವರನ್ನು ಹಾವಾಡಿಗರಿಗೆ ಹೋಲಿಸಿದ್ದಾರೆ. ದಾಖಲೆಗಳಿವೆ ಎಂದು ಹೆದರಿಸುವ ಬದಲು, ತಮ್ಮ ಬುಟ್ಟಿಯಲ್ಲಿರುವುದನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ.
Read Full Story

01:45 PM (IST) Sep 06

ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್‌ ಆಯುಕ್ತರಿಗೆ ಗಾಂಜಾ ಕೇಸ್, ಕೊಲೆ ಆರೋಪಿಗಳಿಂದ ಸನ್ಮಾನ! ಫೋಟೋ ವೈರಲ್

ಹುಬ್ಬಳ್ಳಿ-ಧಾರವಾಡದ ನೂತನ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರಿಗೆ ಗಾಂಜಾ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳು ಸನ್ಮಾನಿಸಿರುವ ಘಟನೆ ನಡೆದಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಗಳು ಆಯುಕ್ತರ ಕಚೇರಿಯನ್ನು ಹೇಗೆ ಪ್ರವೇಶಿಸಿದರು ಎಂಬ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ

Read Full Story

12:53 PM (IST) Sep 06

ಬಿಗ್ ಬಾಸ್ ಕನ್ನಡ 13 ರಂಗು - ಕಿಚ್ಚ ಸುದೀಪ್ ಶೋಗೆ ಎಂಟ್ರಿ ಕೊಡಲಿರುವ ಕನ್ಫರ್ಮ್ ಸ್ಪರ್ಧಿಗಳ ಪಟ್ಟಿ

ಕಿಚ್ಚ ಸುದೀಪ್ ನಿರೂಪಣೆಯ 'ಬಿಗ್ ಬಾಸ್ ಕನ್ನಡ ಸೀಸನ್ 13' ಇಂದು ಆರಂಭವಾಗಲಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಈ ಸೀಸನ್‌ನಲ್ಲಿ ಭಾಗವಹಿಸಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.

Read Full Story

12:52 PM (IST) Sep 06

ಪತ್ನಿ ಸುನೀತಾ ಆರೋಪಗಳ ಬೆನ್ನಲ್ಲೇ ಫ್ಯಾನ್ಸ್‌ ಬೆಂಬಲ ಕೋರಿದ್ದೇಕೆ ಬಾಲಿವುಡ್ ನಟ ಗೋವಿಂದ?

1987ರಲ್ಲಿ ರಹಸ್ಯವಾಗಿ ಶುರುವಾದ ಇವರ ಪ್ರೇಮಕಥೆ, ಈಗ ಅಕ್ಷರಶಃ ಬೀದಿಗೆ ಬಂದಂತಾಗಿದೆ. ನಾಲ್ಕು ವರ್ಷಗಳ ಕಾಲ ತಮ್ಮ ಮದುವೆಯನ್ನು ಗುಟ್ಟಾಗಿಟ್ಟಿದ್ದ ಈ ಜೋಡಿ, ಈಗ ತಮ್ಮ ಜಗಳವನ್ನು ಮುಚ್ಚಿಡಲು ವಿಫಲವಾಗಿದೆ. ಅಭಿಮಾನಿಗಳು ಮಾತ್ರ ತಮ್ಮ ಪ್ರೀತಿಯ 'ಚೀಚಿ' ಮತ್ತೆ ನಗುನಗುತ್ತಾ ಸುನೀತಾ ಅವರ ಜೊತೆ ಒಂದಾಗಲಿ ಎಂದು ಆಶಿಸುತ್ತಿದ್ದಾರೆ. ಆದರೆ.. ಏನಾಗ್ತಿದೆ? ಈ ಸ್ಟೋರಿ ನೋಡಿ..

Read Full Story

12:44 PM (IST) Sep 06

ಗೃಹಸಚಿವರ ತವರು ಜಿಲ್ಲೆ ಕಲಬುರಗಿಯಲ್ಲಿ ಖೋಟಾ ನೋಟು ಜಾಲ ಪತ್ತೆ! ಪೊಲೀಸ್ ದಾಳಿ ವೇಳೆ ಬಾಡಿಗೆ ಮನೆಯಲ್ಲಿ ಕಂಡಿದ್ದೇನು?

ಕಲಬುರಗಿ ವಿಶ್ವವಿದ್ಯಾಲಯ ಪೊಲೀಸರು ಖೋಟಾ ನೋಟು ತಯಾರಿಸುತ್ತಿದ್ದ ಜಾಲವನ್ನು ಪತ್ತೆಹಚ್ಚಿದ್ದಾರೆ. ರಾಜರಾಜೇಶ್ವರಿ ನಗರದ ಬಾಡಿಗೆ ಮನೆಯಲ್ಲಿ ಕಲರ್ ಪ್ರಿಂಟರ್ ಬಳಸಿ ನಕಲಿ ನೋಟು ಮುದ್ರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

Read Full Story

12:13 PM (IST) Sep 06

ಕಾಲಿಗೆ ಬಿದ್ದರೂ ದರ್ಶನ್ ಫ್ಯಾನ್ಸ್ ಕ್ಷಮಿಸಿದ ರಮ್ಯಾ.. 'ಕೇಸ್ ವಾಪಸ್ ಪಡೆಯಲ್ಲ' ಎಂದು ಖಡಕ್ ಸಂದೇಶ ಕೊಟ್ಟ ನಟಿ!

‘ಕೈಯಲ್ಲಿ ಫೋನಿದೆ, ಅಕೌಂಟ್‌ನಲ್ಲಿ ಡೇಟಾ ಇದೆ ಅಂದಮಾತ್ರಕ್ಕೆ ಯಾರ ಬಗ್ಗೆ ಬೇಕಾದರೂ ಹಾದರ-ಬೀದರ ಚರ್ಚೆ ಮಾಡ್ತೀರಾ?" ಎಂಬ ರಮ್ಯಾ ಅವರ ಪ್ರಶ್ನೆ ಅಲ್ಲಿ ನೆರೆದಿದ್ದವರಿಗೆ ಚುರುಕ್ ಮುಟ್ಟಿಸುವಂತಿತ್ತು. ಕ್ಷಮೆ ಕೇಳಲು ಬಂದವರತ್ತ ತಿರುಗಿಯೂ ನೋಡದ ರಮ್ಯಾ, ’ನಾನು ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ' ಎಂದಿದ್ದಾರೆ.

Read Full Story

More Trending News