ಬೆಂಗಳೂರು (ಸೆ.4): ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆಗೆ ಮೂರನೇ ದಿನವೂ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ರೈತರ 5 ಲಕ್ಷ ರೂಪಾಯಿವರೆಗಿನ ಸಾಲಮನ್ನಾ ಮಾಡುವಂತೆ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಬಿಗಿಪಟ್ಟು ಹಿಡಿದಿದ್ದಾರೆ. ರಾಜ್ಯದ 190 ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ. ಹೀಗಾಗಿ ರೈತರರಿಗೆ ವಿಶೇಷ ನೆರವು ಅಗತ್ಯವಾಗಿದೆ.ಕೃಷಿಕರ ಸಮಸ್ಯೆ ಚರ್ಚೆಗೆ ಅಧಿವೇಶನ ಕರೆಯಿರಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್ ಇಲ್ಲಿದೆ.
11:51 PM (IST) Sep 04
11:13 PM (IST) Sep 04
10:37 PM (IST) Sep 04
ಪ್ರಪಂಚದ ಅನೇಕ ಭಾಗಗಳು ಈಗಾಗಲೇ ಪ್ರವಾಹ ಮತ್ತು ತೀವ್ರ ಬರಗಾಲದಿಂದ ನಲುಗುತ್ತಿರುವಾಗ, ಪೆಸಿಫಿಕ್ ಮಹಾಸಾಗರದಲ್ಲಿ ರೂಪುಗೊಳ್ಳುತ್ತಿರುವ ಒಂದು ದೊಡ್ಡ ಹವಾಮಾನ ಬದಲಾವಣೆಯು ಇಡೀ ಜಗತ್ತನ್ನೇ ಅಸ್ತವ್ಯಸ್ತಗೊಳಿಸಲು ಸಜ್ಜಾಗಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
10:28 PM (IST) Sep 04
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಗಡಿಗೆಯೊಳಗೆ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. 54.8 ಗ್ರಾಂ ತೂಕದ ಈ ನಾಣ್ಯಗಳ ಮೌಲ್ಯ ಸುಮಾರು 8.27 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
09:52 PM (IST) Sep 04
ಸಂಪೂರ್ಣ ಫಿಟ್‌ನೆಸ್ ಹೊಂದಿಲ್ಲದ ಆಟಗಾರರನ್ನು ಪದೇ ಪದೇ ತಂಡಕ್ಕೆ ಆಯ್ಕೆ ಮಾಡಲಾಗುತ್ತಿದೆ ಎಂಬ ಟೀಕೆ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ತಂಡದ ನಾಯಕ ಹಾಗೂ ದಂತಕಥೆ ಬ್ಯಾಟ್ಸಮನ್ ರೋಹಿತ್ ಶರ್ಮಾ ಅವರನ್ನೇ ಗುರಿಯಾಗಿಸಿಕೊಂಡು ಅಪಪ್ರಚಾರ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ವ್ಯಕ್ತವಾಗಿವೆ.
09:04 PM (IST) Sep 04
ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಕಲಿಕೆಯಲ್ಲಿ ಆತ್ಮವಿಶ್ವಾಸ ಮೂಡಿಸಿರುವ ಶಿಕ್ಷಕ ಕವನ್ ಕುಮಾರ್. ಕಳೆದ ಆರು ವರ್ಷಗಳಿಂದ ಪ್ರತಿದಿನ ಬೆಳಗ್ಗೆ ಸ್ಪೋಕನ್ ಇಂಗ್ಲಿಷ್ ತರಗತಿ ನಡೆಸುತ್ತಿದ್ದಾರೆ.
08:19 PM (IST) Sep 04
ಅಂಡಮಾನ್‌ನ ಬರಟಾಂಗ್ ದ್ವೀಪದಲ್ಲಿರುವ ಮಣ್ಣಿನ ಜ್ವಾಲಾಮುಖಿಗಳು ಅಪರೂಪದ ಭೌಗೋಳಿಕ ವಿಸ್ಮಯಗಳಲ್ಲಿ ಒಂದಾಗಿದೆ. ಲಾವಾ ಅಥವಾ ಉರಿಯುವ ಶಿಲಾಪದಾರ್ಥದ ಬದಲು ಭೂಗರ್ಭದಲ್ಲಿನ ಅನಿಲ, ನೀರು ಮತ್ತು ಕೆಸರು ಮೇಲ್ಮೈಗೆ ಹೊರಹೊಮ್ಮಿ ಜ್ವಾಲಾಮುಖಿಯಂತಹ ರಚನೆಯನ್ನು ಸೃಷ್ಟಿಸುತ್ತವೆ.
08:02 PM (IST) Sep 04
ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ವಿಶ್ವಕಪ್ ಇತಿಹಾಸದ ದಾಖಲೆ ಏನು? ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ!
07:32 PM (IST) Sep 04
ಕರ್ನಾಟಕ ಜನತೆಗೆ ಬಸ್ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಸಾರಿಗೆ ಸಚಿವ ಬೈರತಿ ಸುರೇಶ್ ಬಸ್ ಪ್ರಯಾಣ ದರಿಕೆ ಸೂಚನೆ ನೀಡಿದ್ದಾರೆ. ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ದರ ಏರಿಕೆ ಅನಿವಾರ್ಯ ಎಂದಿದ್ದಾರೆ.
07:17 PM (IST) Sep 04
ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಅವರ ಹೊಸ ಟ್ರೆಂಡಿ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ‘ಅಮಿಗೋಸ್’, ‘ನಾ ಸಾಮಿ ರಂಗ’ ಸಿನಿಮಾಗಳ ಮೂಲಕ ಟಾಲಿವುಡ್ ಪ್ರೇಕ್ಷಕರಿಗೂ ಪರಿಚಿತರಾಗಿರುವ ಆಶಿಕಾ.
06:13 PM (IST) Sep 04
06:04 PM (IST) Sep 04
ಬಿಗ್ ಬಾಸ್ ಖ್ಯಾತಿಯ ಕಿರುತೆರೆ ನಟಿ ಸ್ಪಂದನಾ ಸೋಮಣ್ಣ ಅವರು ಹಳದಿ ಸೀರೆಯಲ್ಲಿ ಮಾಡಿರುವ ಹೊಸ ಫೋಟೋಶೂಟ್ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನದಿ ತೀರದ ಪ್ರಕೃತಿ ಸೌಂದರ್ಯದ ನಡುವೆ ಸ್ಪಂದನಾ ನೀಡಿರುವ ಸಿಂಪಲ್ ಆ್ಯಂಡ್ ಕ್ಲಾಸಿಕ್ ಪೋಸ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಪಡೆಯುತ್ತಿವೆ.
05:36 PM (IST) Sep 04
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರ ಟಿಕೆಟ್ ಪಾತ್ರದ ಹಲವು ಕಷ್ಟಕರ ಆ್ಯಕ್ಷನ್ ಮತ್ತು ಸ್ಟಂಟ್ ದೃಶ್ಯಗಳಿಗೆ ಶಾಕ್ಯಾ ಶರ್ಮಾ ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿದ್ದಾರೆ. ‘ಗೋಟ್’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು.
05:18 PM (IST) Sep 04
ನಿರಂಜನ್ ಸುಧೀಂದ್ರ, ರಚನಾ ಇಂದರ್ ಅಭಿನಯದ ‘ಸ್ಪಾರ್ಕ್’ ಸಿನಿಮಾದ ‘ಮಧುರ ಮುಗುಳುನಗೆ’ ಹಾಡು ಬಿಡುಗಡೆಯಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾರ್ಲಿಂಗ್ ಕೃಷ್ಣ, ನಿರಂಜನ್ ಅವರ ಡ್ಯಾನ್ಸ್ ಹಾಗೂ ಆ್ಯಕ್ಷನ್ ಪ್ರತಿಭೆಯನ್ನು ಮೆಚ್ಚಿ ಅವರನ್ನು ‘ಕನ್ನಡದ ಹೃತಿಕ್ ರೋಷನ್’ ಎಂದು ಕರೆದಿದ್ದಾರೆ.
04:48 PM (IST) Sep 04
ಕೊಟ್ಟೂರು ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವ ಘೋಷಣೆ ಪ್ರಕಟವಾಗಿದೆ. ಮೈಸೂರಿನಿಂದ ಹೊರಡುವ ರೈಲು ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ತಲುಪಿ ಅಜ್ಮೀರ್‌ನತ್ತ ಸಂಚರಿಸಲಿದೆ.
04:31 PM (IST) Sep 04
ನ್ಯೂಯಾರ್ಕ್‌ನ ಸುಂದರ ರಸ್ತೆಯ ಝೀಬ್ರಾ ಕ್ರಾಸಿಂಗ್ ಮೇಲೆ ಅತ್ಯಂತ ಆತ್ಮವಿಶ್ವಾಸದಿಂದ ನಡೆದು ಬರುತ್ತಿದ್ದಾರೆ. ಅವರ ಈ 'ವಾಕ್' ನೋಡುಗರನ್ನು ಸೆಳೆಯುತ್ತಿದ್ದು, ಯಾವುದೋ ಹಾಲಿವುಡ್ ಸಿನಿಮಾದ ದೃಶ್ಯದಂತೆ ಕಾಣುತ್ತಿದೆ. ಅಲ್ಲಿ ಅವರ ವಿಡಿಯೋ ಮಾಡಿದ್ದು ಯಾರು? ಈ ಸ್ಟೋರಿ ನೋಡಿ..
04:16 PM (IST) Sep 04
ಚಿಕ್ಕಮಗಳೂರಿನಲ್ಲಿ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಸಚಿವೆ ಮೋಟಮ್ಮ, ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯ ಮತ್ತು ಮನೆಯಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದರು.
04:10 PM (IST) Sep 04
04:09 PM (IST) Sep 04
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ‘ಇಂಡಿಯಾ ಟುಡೇ’ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯಲ್ಲಿ ದೇಶದ ನಂಬರ್ 1 ಜನಪ್ರಿಯ ನಟಿಯಾಗಿ ಹೊರಹೊಮ್ಮಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ದೀಪಿಕಾ ಪಡುಕೋಣ್‌ರನ್ನು ಹಿಂದಿಕ್ಕಿ ರಶ್ಮಿಕಾ ಈ ಸಾಧನೆ ಮಾಡಿದ್ದಾರೆ.
04:05 PM (IST) Sep 04
ಭಾರತೀಯ ಕ್ರಿಕೆಟರ್ ಸ್ಮೃತಿ ಮಂಧನಾ, ಹಾಂಗ್ ಕಾಂಗ್ ವಿರುದ್ಧ 124 ರನ್‌ಗಳ ಸ್ಫೋಟಕ ಶತಕ ಬಾರಿಸಿದ್ದಾರೆ. ಈ ಇನ್ನಿಂಗ್ಸ್ ಮೂಲಕ ಅಂತರಾಷ್ಟ್ರೀಯ ಶತಕಗಳನ್ನು ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಷ್ಟಕ್ಕೂ ಆ ದಾಖಲೆ ಏನು ಎನ್ನುವುದನ್ನು ನೋಡೋಣ ಬನ್ನಿ.
03:44 PM (IST) Sep 04
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಕುರಿತು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮಾತನಾಡಿದ್ದಾರೆ. ತಾನು ಇನ್ನೂ ಸಿನಿಮಾ ನೋಡಿಲ್ಲ ಎಂದಿರುವ ರಮ್ಯಾ, ಯಶ್‌ರನ್ನು ಇಷ್ಟಪಡುತ್ತೇನೆ ಹಾಗೂ ಅವರು ಅತ್ಯಂತ ಜೆಂಟಲ್‌ಮನ್ ಎಂದು ಹೇಳಿದ್ದಾರೆ.
03:26 PM (IST) Sep 04
02:45 PM (IST) Sep 04
01:25 PM (IST) Sep 04
'ಮಗನೇ ಆದ್ರೂ ತಪ್ಲು ಮಾಡಿದ್ರೂ ತಪ್ಪು ತಪ್ಪೇ.. ಕಾನೂನು ಅದನ್ನು ನೋಡಿಕೊಳ್ಳುತ್ತದೆ.. ನಾನು ವಿಷಕಂಠ, ಎಲ್ಲವನ್ನೂ ನುಂಗಿ ಸಹಿಸಿಕೊಳ್ಳುತ್ತೇನೆ.. ಮಗನ ಜೊತೆ ಮಾತಾಡಿದ್ದೇನೆ, ಬುದ್ಧಿ ಹೇಳಿದ್ದೇನೆ. ಮಕ್ಕಳು ಅಂದಾಗ ಜಗಳ ಇರುತ್ತೆ.. ಇನ್ನೇನು ಅಂದ್ರು ದುನಿಯಾ ವಿಜಯ್?
12:19 PM (IST) Sep 04
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ವಾಲ್ಮೀಕಿ ನಿಗಮ ಹಗರಣ ಖಂಡಿಸಿ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಗೆ ಪ್ರತಿಯಾಗಿ, ಕಾಂಗ್ರೆಸ್ ಈ ಕಾರ್ಯಕ್ರಮವನ್ನು ಬೃಹತ್ ಶಕ್ತಿ ಪ್ರದರ್ಶನವನ್ನಾಗಿ ಮಾಡಲು ಸಜ್ಜಾಗಿದೆ.
12:06 PM (IST) Sep 04
11:27 AM (IST) Sep 04
‘ಆರ್‌ಆರ್‌ಆರ್’ ಸಿನಿಮಾದಲ್ಲಿ ಕೇವಲ ಕೆಲವೇ ನಿಮಿಷಗಳ ಕಾಲ ಕಾಣಿಸಿಕೊಂಡರೂ ಆಲಿಯಾ ತನ್ನ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದರು. ಆದರೆ ಈಗ ಕಾಲ ಬದಲಾಗಿದೆ. ದಕ್ಷಿಣದ ನಿರ್ದೇಶಕರು ಆಲಿಯಾ ಅವರ ನಟನಾ ಕೌಶಲ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಮುಂದಾಗಿದ್ದಾರೆ.
11:10 AM (IST) Sep 04
Shri Krishna Janmashtami 2026 ಕೃಷ್ಣ ನಗರಿ ಉಡುಪಿಯಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರದ ಸಿದ್ಧತೆ ನಡೆದಿದೆ. ಕೃಷ್ಣ ಭಕ್ತರು ಗುರುವಾರ ಉಪವಾಸ ವ್ರತ, ಜಪ, ಪಾರಾಯಣಗಳನ್ನು ನಡೆಯಲಿದೆ..
10:51 AM (IST) Sep 04
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ನಿರ್ಮಿಸಿದ ಕಟ್ಟಡಕ್ಕೆ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' ದಿನಕ್ಕೆ ₹1 ಲಕ್ಷ ಬಾಡಿಗೆ ನಿಗದಿಪಡಿಸಿದೆ. ಈ ದುಬಾರಿ ಶುಲ್ಕದಿಂದಾಗಿ ಬಡ ಹೋರಾಟಗಾರರು ಮಳೆ-ಬಿಸಿಲಿನಲ್ಲಿ ಪ್ರತಿಭಟಿಸುವಂತಾಗಿದೆ.
10:32 AM (IST) Sep 04
10:25 AM (IST) Sep 04
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ, ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆಂಬ ಕಾರಣಕ್ಕೆ ಅತಿಥಿ ಶಿಕ್ಷಕಿಯೊಬ್ಬರು ನಾಲ್ವರು ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿದ್ದಾರೆ. ಈ ಹಲ್ಲೆಯಿಂದ ಮಕ್ಕಳ ಬೆನ್ನ ಮೇಲೆ ಬಾಸುಂಡೆಗಳು ಮೂಡಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
10:23 AM (IST) Sep 04
ಬೆಂಗಳೂರಿನ ಯಡಿಯೂರು ಕೆರೆ ಬಳಿಯ ಭೂ ವಿವಾದಕ್ಕೆ ಸಂಬಂಧಿಸಿದಂತೆ, ದಶಕಗಳಷ್ಟು ಹಳೆಯ ಭೂ ದಾಖಲೆಗಳನ್ನು ಮರುಪರಿಶೀಲಿಸಲು ಅಧಿಕಾರಿಗಳಿಗೆ ಅವಕಾಶ ನೀಡಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂ ರದ್ದುಗೊಳಿಸಿದೆ. ಕಾನೂನಿನಲ್ಲಿ ನಿಗದಿಪಡಿಸಿದ ಕಾಲಮಿತಿಯನ್ನು ಮೀರಿ ಕಂದಾಯ ಅಧಿಕಾರಿಗಳು ಮರುಪರಿಶೀಲನೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಈ ತೀರ್ಪು ಭೂ ಮಾಲೀಕರಿಗೆ ಮಹತ್ವದ ಕಾನೂನು ಭದ್ರತೆಯನ್ನು ಒದಗಿಸಿದೆ.
10:18 AM (IST) Sep 04
ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿದ್ದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಸಾಂವಿಧಾನಿಕ ಹುದ್ದೆಯಲ್ಲಿದ್ದು ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿತು.
10:14 AM (IST) Sep 04
09:47 AM (IST) Sep 04
ವಾಲ್ಮೀಕಿ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯು ಸೆಪ್ಟೆಂಬರ್ 4 ರಂದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕನ್ನು ಪ್ರವೇಶಿಸಲಿದೆ.
09:40 AM (IST) Sep 04
ಬೆಂಗಳೂರು ಉಪನಗರ ರೈಲು ಯೋಜನೆಗೆ ಮಹತ್ವದ ಚಾಲನೆ ಸಿಕ್ಕಿದ್ದು, ಕೆ-ರೈಡ್ ಸಂಸ್ಥೆಯು ಚೆನ್ನೈನ ಐಸಿಎಫ್ ಜೊತೆ 153 ಹವಾನಿಯಂತ್ರಿತ ಕೋಚ್‌ಗಳ ಪೂರೈಕೆಗೆ ಒಪ್ಪಂದ ಮಾಡಿಕೊಂಡಿದೆ. ₹1513.75 ಕೋಟಿ ವೆಚ್ಚದ ಈ ಬೋಗಿಗಳನ್ನು ಮಲ್ಲಿಗೆ ಮತ್ತು ಕನಕ ಮಾರ್ಗಗಳಲ್ಲಿ ಬಳಸಲಾಗುವುದು. ಈ ಯೋಜನೆಯು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಗುರಿ ಹೊಂದಿದ್ದು, 2028ರ ವೇಳೆಗೆ ಮಲ್ಲಿಗೆ ಮಾರ್ಗದಲ್ಲಿ ಮೊದಲ ರೈಲು ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.
09:11 AM (IST) Sep 04
09:03 AM (IST) Sep 04
08:44 AM (IST) Sep 04
ನಿನ್ನೆಯಷ್ಟೇ ಮುಗಿಲ ಹಕ್ಕಿಯಂತೆ ಗಗನದಲ್ಲಿ ವಿಮಾನ ಹಾರಿಸುತ್ತಿದ್ದ ಪೈಲಟ್ ಪ್ರಾರ್ಥನಾ ಛಾಬ್ರಿಯಾ, ಈಗ ಬೆಳ್ಳಿತೆರೆಯಲ್ಲಿ ತಮ್ಮ ಹೊಸದೊಂದು ಕ್ಯೂಟ್ ಬ್ಯೂಟಿ ಜರ್ನಿ ಆರಂಭಿಸಿದ್ದಾರೆ. ಆಗಸದ ಎತ್ತರದಿಂದ ನೇರವಾಗಿ ಪ್ರೇಕ್ಷಕರ ಹೃದಯಕ್ಕೆ ಸಾಫ್ಟ್ ಆಗಿ ಲ್ಯಾಂಡ್ ಆಗುತ್ತಿರುವ ಈ ನವನಾಯಕಿ, ತನ್ನ ಸಿಹಿ ನಗುವಿನೊಂದಿಗೆ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದ್ದಾರೆ.
08:38 AM (IST) Sep 04
ಶ್ರೀಕೃಷ್ಣ ಜನ್ಮಾಷ್ಟಮಿಯು ಕೇವಲ ಹಬ್ಬವಲ್ಲ, ಅದು ನಮ್ಮೊಳಗಿನ ಅಜ್ಞಾನ, ಭಯ ಮತ್ತು ಅಧರ್ಮದ ಕಾರಾಗೃಹದಲ್ಲಿ ವಿವೇಕ ಮತ್ತು ಧರ್ಮ ಹುಟ್ಟಬೇಕಾದ ದಿನ. ಕೃಷ್ಣನ ಜೀವನವು ಸಂಕೀರ್ಣತೆಯ ಮಧ್ಯೆ ಧರ್ಮವನ್ನು ಹುಡುಕುವ ದರ್ಶನವನ್ನು ನೀಡುತ್ತದೆ.