LIVE NOW
Published : Jul 19, 2026, 07:23 AM ISTUpdated : Jul 19, 2026, 09:40 PM IST

State News Live: Channamma - ದೇವೆಗೌಡರ ಕೈ ಹಿಡಿದೇ ಪ್ರಾಣ ಬಿಟ್ಟ ಚನ್ನಮ್ಮ; ಹಾಸನ ಟು ದಿಲ್ಲಿವರೆಗೆ ಜತೆಯಾಗಿದ್ದ ಜೀವ ಕೊನೆ ಕ್ಷಣದಲ್ಲಿ ಬಯಸಿದ್ದೇನು?

ಸಾರಾಂಶ

ಬೆಂಗಳೂರು (ಜು.19): ರಾಜ್ಯದಲ್ಲಿ ಶೇ.30ರಷ್ಟು ಮುಂಗಾರು ಮಳೆ ಕೊರತೆ ಕಾಣಿಸಿದ್ದು, ರಾಜ್ಯ ಭೀಕರ ಬರಗಾಲದತ್ತ ಹೆಜ್ಜೆ ಹಾಕಿದೆ. ಈ ಹಿನ್ನೆಲೆಯಲ್ಲಿ ಅಖಾಡಕ್ಕೆ ಇಳಿದಿರುವ ಸಿಎಂ ಡಿ.ಕೆ.ಶಿವಕುಮಾರ್ ಭಾನುವಾರ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆ ವಿಡಿಯೋ ಕಾನ್ಸರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಬಳಿಕ ಈ ವಿಷಯ ಸಂಪುಟ ಸಭೇಲಿ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

09:40 PM (IST) Jul 19

Channamma - ದೇವೆಗೌಡರ ಕೈ ಹಿಡಿದೇ ಪ್ರಾಣ ಬಿಟ್ಟ ಚನ್ನಮ್ಮ; ಹಾಸನ ಟು ದಿಲ್ಲಿವರೆಗೆ ಜತೆಯಾಗಿದ್ದ ಜೀವ ಕೊನೆ ಕ್ಷಣದಲ್ಲಿ ಬಯಸಿದ್ದೇನು?

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ, 72 ವರ್ಷಗಳ ದಾಂಪತ್ಯದ ನಂತರ ನಿಧನರಾದರು. ಹಾಸನ ಟು ದಿಲ್ಲಿವರೆಗೆ ಜತೆಯಾದ ಜೀವ ಕೊನೆಗೆ ಬಯಸಿದ ಆ ಆಸೆ ಏನಾಗಿತ್ತು? ಇಲ್ಲಿದೆ ಎಲ್ಲದರ ಸಂಪೂರ್ಣ ವಿವರ.

Read Full Story

08:59 PM (IST) Jul 19

ENG vs IND - ಭಾರತದ ಹೀನಾಯ ಪ್ರದರ್ಶನಕ್ಕೆ ಇವರೇ ಹೊಣೆ ಎಂದ ಫ್ಯಾನ್ಸ್! ಇಬ್ಬರು ಸ್ಟಾರ್ ಆಟಗಾರರನ್ನು ಬೇಕೆಂದೇ ಹೊರಹಾಕಿದರಾ?

ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಸಂಪೂರ್ಣ ವಿಫಲರಾದರು, ಇದರಿಂದ ಇಂಗ್ಲೆಂಡ್ 387 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಕಳಪೆ ಪ್ರದರ್ಶನವು ತಂಡದ ಆಯ್ಕೆಯ ಬಗ್ಗೆ, ವಿಶೇಷವಾಗಿ ಆ ಇಬ್ಬರು ಅನುಭವಿ ಆಟಗಾರರನ್ನು ಕೈಬಿಟ್ಟಿರುವ ಕುರಿತು ತೀವ್ರ ಚರ್ಚೆ ಹುಟ್ಟುಹಾಕಿದೆ.

Read Full Story

08:14 PM (IST) Jul 19

ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ - 'ಟಾಕ್ಸಿಕ್' ಟ್ರೇಲರ್‌ ಬಗ್ಗೆ ಬಂತು ದೊಡ್ಡ ಅಪ್‌ಡೇಟ್!

ಆಗಸ್ಟ್‌ 26ರಂದು ವಿಶ್ವದಾದ್ಯಂತ ತೆರೆಗೆ ಬರಲಿರುವ ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಚಿತ್ರದ ಟ್ರೇಲರ್‌ ಬಿಡುಗಡೆ ಕುರಿತು ಹೊಸ ಮಾಹಿತಿ ಹರಿದಾಡಿದ್ದು, ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

Read Full Story

08:08 PM (IST) Jul 19

ವಿದೇಶಕ್ಕೆ ಹೋದ ಪತ್ನಿಯ ರಂಗಿನಾಟ - ವಿಡಿಯೋ ಕಳಿಸಿದ ವ್ಯಕ್ತಿ - ಮಗುವೂ ಸಿಗದೆ ಪ್ರಾಣ ಬಿಟ್ಟ ವ್ಯಕ್ತಿ!

ಕೇರಳದ ರಂಜೀಶ್ ಎಂಬುವವರು, ಪತ್ನಿ ತೊರೆದು ಹೋದ ನಂತರ ಮಗುವನ್ನು ಸಾಕಿ ಸಲಹಿದ್ದರು. ಆದರೆ, ಮುಂದೆ ಆಗಿದ್ದೇ ಬೇರೆ. ಹಾಗಾದರೆ ಆಗಿದ್ದಾದರೂ ಏನು? ಪ್ರಕರಣ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ ನೋಡಿ.

Read Full Story

06:44 PM (IST) Jul 19

ಡಾಲಿ ಧನಂಜಯ 'ಮದರ್ ಪ್ರಾಮಿಸ್' 8 ದಿನಗಳ ಕಲೆಕ್ಷನ್ ಎಷ್ಟು? ಇಲ್ಲಿದೆ ಸಂಪೂರ್ಣ ವರದಿ

ನಿರ್ದೇಶಕ ಪೂರ್ಣಚಂದ್ರ ಮೈಸೂರು, ನಟ ರಾಕ್ಷಸ ಡಾಲಿ ಧನಂಜಯ ಅವರ ಅಪರಾಧ ಹಾಸ್ಯ (ಕ್ರೈಂ ಕಾಮಿಡಿ) ಚಿತ್ರ 'ಮದರ್ ಪ್ರಾಮಿಸ್' ಬಿಡುಗಡೆಯಾದ ಎಂಟನೇ ದಿನವೂ ಚಿತ್ರಮಂದಿರಗಳಲ್ಲಿ ತನ್ನ ಪ್ರದರ್ಶನವನ್ನು ಮುಂದುವರಿಸಿದೆ.

Read Full Story

06:35 PM (IST) Jul 19

ENG VS IND - 54 ವರ್ಷಗಳ ಏಕದಿನ ಇತಿಹಾಸದಲ್ಲೇ ಇದೇ ಮೊದಲು! ಲಾರ್ಡ್ಸ್‌ನಲ್ಲಿ ವಿಶ್ವ ದಾಖಲೆಗಳ ಸುರಿಮಳೆ!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಏಕದಿನ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಯೇ ಪ್ರಾರಂಭವಾಗಿದೆ. ಅಷ್ಟಕ್ಕೂ ಆ ದಾಖಲೆಗಳು ಏನು? ಎನ್ನುವುದರ ಸಂಪೂರ್ಣ ವಿವರವನ್ನು ನೋಡಿ ಬರೋಣ ಬನ್ನಿ.

Read Full Story

05:57 PM (IST) Jul 19

ಲಿಫ್ಟ್‌ಗಳಲ್ಲಿ ಕನ್ನಡಿ ಯಾಕಿರುತ್ತೆ ಗೊತ್ತಾ? ಇದರ ಹಿಂದಿರುವ ಅಸಲಿ ರಹಸ್ಯ ಇಲ್ಲಿದೆ

ಶಾಪಿಂಗ್ ಮಾಲ್ ಅಥವಾ ಹೋಟೆಲ್‌ಗಳ ಲಿಫ್ಟ್‌ನಲ್ಲಿ ಕನ್ನಡಿ ಇರುವುದು ಕೇವಲ ಸೌಂದರ್ಯ ವೀಕ್ಷಣೆಗಾಗಿ ಅಲ್ಲ. ಇದು ಬೇರೆಯದ್ದೆ  ಉದ್ದೇಶ ಹೊಂದಿದೆ. ಅದು ಏನು ಎನ್ನುವುದನ್ನು ನೋಡೋಣ ಬನ್ನಿ.

Read Full Story

05:10 PM (IST) Jul 19

ಸಪ್ತಮಿ ಗೌಡ ರೆಸಾರ್ಟ್​ 'ಕಾಜಾಣಾ' ಓಪನ್​ - ವಿಶೇಷತೆಗಳ ಆಗರ- ಫ್ಯಾನ್ಸ್​ಗೆ ಆಹ್ವಾನ; ಕ್ಯೂಟ್​ ಫೋಟೋಸ್​ ಇಲ್ಲಿವೆ

'ಕಾಂತಾರ' ಖ್ಯಾತಿಯ ನಟಿ ಸಪ್ತಮಿ ಗೌಡ ಮಲೆನಾಡಿನಲ್ಲಿ ಫಾರ್ಮ್‌ಹೌಸ್ ಖರೀದಿಸಿದ್ದಾರೆ. ಇದು ತಮ್ಮ ತಂದೆಯ ಕನಸಿನ ಪ್ರಾಜೆಕ್ಟ್ ಆಗಿದ್ದು, 'ಕಾಜಾಣಾ' ಎಂದು ಹೆಸರಿಡಲಾಗಿದೆ. ಇದರ ಗೃಹಪ್ರವೇಶದ ವಿಡಿಯೋಗಳನ್ನು ನಟಿ ಹಂಚಿಕೊಂಡಿದ್ದಾರೆ.
Read Full Story

05:07 PM (IST) Jul 19

‘Ms Mandre’ಯಿಂದ ‘Mrs Sundaram’ವರೆಗೆ.. - ಶರ್ಮಿಳಾ ಮಾಂಡ್ರೆ ಮದುವೆಯ ಫೋಟೋಸ್ ವೈರಲ್

Sharmiela Mandre Wedding Photos: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂದರಂ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Read Full Story

04:38 PM (IST) Jul 19

ಕಾಂಜೀವರಂ ಸೀರೆ, ಟೆಂಪಲ್ ಜ್ಯುವೆಲ್ಲರಿಯಲ್ಲಿ ದೈವಿಕ ಕಳೆ ಚೆಲ್ಲಿದ ಸಾಯಿ ಪಲ್ಲವಿ - ಫೋಟೋಸ್ ವೈರಲ್

ರಾಮಾಯಣದಲ್ಲಿ ದೇವಿ ಸೀತೆಯ ಪಾತ್ರ ನಿರ್ವಹಿಸುತ್ತಿರುವ ಸಾಯಿ ಪಲ್ಲವಿ, ಕಾರ್ಯಕ್ರಮದಲ್ಲಿ ತಮ್ಮ ಸಾಂಪ್ರದಾಯಿಕ ಉಡುಗೆಯ ಮೂಲಕ ಎಲ್ಲರ ಗಮನ ಸೆಳೆದರು. ಅವರು ಗುಲಾಬಿ ಹಾಗೂ ಚಿನ್ನದ ಬಣ್ಣದ ಕಾಂಜೀವರಂ ಸೀರೆ ಧರಿಸಿದ್ದರು.

Read Full Story

04:16 PM (IST) Jul 19

Ramayana - ‘ಸೀತಾ ತಾಯಿ, ನನ್ನ ಮೂಲಕ ನೀವೇ ಅಭಿನಯಿಸಿ’ - ಸಾಯಿ ಪಲ್ಲವಿ ಭಾವನಾತ್ಮಕ ಮಾತು

ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯ ‘ರಾಮಾಯಣ’ ಚಿತ್ರದಲ್ಲಿ ದೇವಿ ಸೀತೆಯ ಪಾತ್ರವನ್ನು ನಿರ್ವಹಿಸಿರುವ ನಟಿ ಸಾಯಿ ಪಲ್ಲವಿ, ಆ ಪಾತ್ರಕ್ಕಾಗಿ ತಾವು ಹೇಗೆ ಸಿದ್ಧತೆ ಮಾಡಿಕೊಂಡರು ಎಂಬುದನ್ನು ಹಂಚಿಕೊಂಡಿದ್ದಾರೆ.

Read Full Story

03:35 PM (IST) Jul 19

ಅನ್ನ ಹಾಕಿದ ಯಜಮಾನಿಯ ಉಳಿಸಿ ತನ್ನ ಪ್ರಾಣವನ್ನೇ ಅರ್ಪಿಸಿದ ಪ್ರೀತಿಯ ಶ್ವಾನ

ಕನ್ಯಾಕುಮಾರಿಯಲ್ಲಿ, 'ಚಿನ್-ಚಾನ್' ಎಂಬ ಸಾಕು ನಾಯಿಯು ತನ್ನ ಯಜಮಾನಿಯತ್ತ ನುಗ್ಗಿ ಬಂದ 7 ಅಡಿ ಉದ್ದದ ನಾಗರಹಾವಿನೊಂದಿಗೆ ಹೋರಾಡಿದೆ. ಹಾವನ್ನು ಕೊಂದು ಯಜಮಾನಿಯನ್ನು ರಕ್ಷಿಸಿದರೂ, ಹಾವಿನ ವಿಷವೇರಿದ ಪರಿಣಾಮವಾಗಿ ಚಿನ್-ಚಾನ್ ತನ್ನ ಪ್ರಾಣವನ್ನು ತ್ಯಾಗ ಮಾಡಿದೆ. ಈ ಘಟನೆಯು ಶ್ವಾನದ ಅಚಲ ನಿಷ್ಠೆಗೆ ಸಾಕ್ಷಿಯಾಗಿದೆ.
Read Full Story

03:14 PM (IST) Jul 19

ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ - ವಿಸ್ತರಣೆಯಾಗುತ್ತಾ ಹುಬ್ಬಳ್ಳಿ ಟ್ರೈನ್?

ಕುಷ್ಟಗಿಯಿಂದ ಬೆಂಗಳೂರಿಗೆ ನಿತ್ಯ ರೈಲು ಸಂಚಾರ ಆರಂಭಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ. ಶಾಸಕ ದೊಡ್ಡನಗೌಡ ಪಾಟೀಲರ ಒತ್ತಡವನ್ನೂ ಉಲ್ಲೇಖಿಸಿ, ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Read Full Story

02:54 PM (IST) Jul 19

Karwar - 8 ಶತಮಾನಗಳ ಲಿಪಿಪರಂಪರೆಯ ರೂಪಗಳನ್ನು ಹೊಂದಿರೋ ಕನ್ನಡದ ಒಂದೇ ಶಾಸನ ಪತ್ತೆ

ಕ್ರಿ.ಶ. 750ರ ಕಾಲದ, ಅಪರೂಪದ ಮಿಶ್ರಲಿಪಿ ಕನ್ನಡ ಶಾಸನವೊಂದು ಪತ್ತೆಯಾಗಿದೆ. 8 ಶತಮಾನಗಳ ಲಿಪಿ ವೈವಿಧ್ಯತೆಯನ್ನು ಹೊಂದಿರುವ ಈ ಶಾಸನವು, ಅಂದಿನ ಕೃಷಿ, ನೀರಾವರಿ ಮತ್ತು ಗ್ರಾಮೀಣ ಆಡಳಿತದ ಬಗ್ಗೆ ಮಹತ್ವದ ಮಾಹಿತಿ ನೀಡುತ್ತದೆ. ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅವರು ಈ ಶಾಸನದ ಅಧ್ಯಯನ ನಡೆಸಿ, ಇಂದಿನ ಗ್ರಾಮದ ಹೆಸರುಗಳೊಂದಿಗೆ ಇರುವ ಐತಿಹಾಸಿಕ ಸಂಬಂಧವನ್ನು ಗುರುತಿಸಿದ್ದಾರೆ.

Read Full Story

02:40 PM (IST) Jul 19

Flowering Plants - ವರ್ಷವಿಡೀ ನಿಮ್ಮ ಗಾರ್ಡನ್ ಬಣ್ಣಬಣ್ಣದ ಹೂವಿನಿಂದ ತುಂಬಿರಲು ಈ ಗಿಡಗಳನ್ನು 'ಹೀಗೆ' ಬೆಳೆಸಿ!

ಮನೆಯ ಮುಂದಿನ ಹೂದೋಟದಲ್ಲಿ ವರ್ಷವಿಡೀ ಹೂವು ತುಂಬಿಕೊಂಡಿರಲು ನೀವು ಈ ಮೂರು ಗಿಡಗಳನ್ನು ನೆಟ್ಟು, ಇಲ್ಲಿ ಹೇಳಿದಂತೆ ತಕ್ಕಮಟ್ಟಿಗೆ ಆರೈಕೆ ಮಾಡಿದರೆ ಸಾಕು.. ನಿಮ್ಮ ಕೈದೋಟದಲ್ಲಿ ಬಣ್ಣಬಣ್ಣದ ಹೂವು ಅರಳಿ, ನಿಮ್ಮ ಮನೆಯ ಸೌಂದರ್ಯದ ಜೊತೆಗೆ ನಿಮ್ಮ ಮನಸ್ಸಿನ ನೆಮ್ಮದಿಗೂ ಕಾರಣವಾಗುತ್ತವೆ.

Read Full Story

02:38 PM (IST) Jul 19

ಉಡುಪಿಯ 9 ಗ್ರಾಮ ಪಂಚಾಯ್ತಿಗಳಲ್ಲಿ ಭಾರತ್ ಪಂಪ್, ಭಾರತ್ ಕೆಫೆ, ಇವಿ ಸ್ಟೇಷನ್ ಆರಂಭ

ಉಡುಪಿ ಜಿಲ್ಲೆಯ 9 ಗ್ರಾಮ ಪಂಚಾಯಿತಿಗಳ ಹೆದ್ದಾರಿ ಬದಿಯಲ್ಲಿ ಭಾರತ್ ಪೆಟ್ರೋಲ್ ಬಂಕ್, ಇವಿ ಚಾರ್ಜಿಂಗ್ ಸ್ಟೇಷನ್ ಹಾಗೂ ಭಾರತ್ ಕೆಫೆಗಳನ್ನು ಸ್ಥಾಪಿಸಲಾಗುತ್ತಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಿಸಿದ ಈ ಯೋಜನೆಯು, ಬಾಡಿಗೆ ಮತ್ತು ಕಮಿಷನ್ ಮೂಲಕ ಪಂಚಾಯಿತಿಗಳ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಗುರಿ ಹೊಂದಿದೆ.
Read Full Story

02:23 PM (IST) Jul 19

ಜಪಾನ್‌ ದೈತ್ಯ ಕಂಪನಿಗೆ ತಾಂತ್ರಿಕ ಸಲಹೆಗಾರರಾಗಿ ಮಂಗಳೂರಿನ ಪ್ರೊ.ಡಾ. ಗೋಪಾಲ್ ಮುಗೇರಾಯ ನೇಮಕ

ಮಂಗಳೂರಿನ ಖ್ಯಾತ ಎಂಜಿನಿಯರಿಂಗ್ ಶಿಕ್ಷಣ ತಜ್ಞ ಪ್ರೊ.ಡಾ. ಗೋಪಾಲ್ ಮುಗೇರಾಯ ಅವರು ಜಪಾನ್‌ನ ಪ್ರತಿಷ್ಠಿತ ಟಕಾವೊ ಕೋಗ್ಯೋ ಎಂಜಿನಿಯರಿಂಗ್ ಕಂಪನಿಯ ವಿಶೇಷ ತಾಂತ್ರಿಕ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಈ ನೇಮಕಾತಿಯು ಭಾರತ-ಜಪಾನ್ ನಡುವಿನ ತಾಂತ್ರಿಕ ಮತ್ತು ಶೈಕ್ಷಣಿಕ ಸಹಕಾರವನ್ನು ಬಲಪಡಿಸುವ ನಿರೀಕ್ಷೆಯಿದೆ.
Read Full Story

02:12 PM (IST) Jul 19

ಪೊಲೀಸರ ಮೇಲೆ ಅನುಮಾನ.. 3 ತಿಂಗಳ ಹಿಂದೆ ಹೂತಿಟ್ಟಿದ್ದ ಅಮ್ಮನ ಶವ ತೆಗೆದು ಆಸ್ಪತ್ರೆಗೆ ಬಂದ ಅಣ್ಣ, ತಮ್ಮ!

ತಾಯಿಯ ಸಾವಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಆಕ್ರೋಶ.. ಪೊಲೀಸರು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ ಎಂಬ ಸಂಶಯ.. ಕೊನೆಗೆ ನ್ಯಾಯಕ್ಕಾಗಿ ಹಂಬಲಿಸಿದ ಮಕ್ಕಳು ಇಡೀ ದಾವಣಗೆರೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದಾರೆ. ಏನದು ಸ್ಟೋರಿ? ಓದಿ..

Read Full Story

01:46 PM (IST) Jul 19

2027 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾಗೆ ಮತ್ತೊಂದು ಅವಕಾಶ ಸಿಗಬೇಕಾ? ದಾಖಲೆಗಳೇ ಹೇಳುತ್ತಿವೆ ಉತ್ತರ!

2027ರ ವಿಶ್ವಕಪ್ ವೇಳೆಗೆ ರೋಹಿತ್ ಶರ್ಮಾಗೆ 40 ವರ್ಷ ತುಂಬುವುದರಿಂದ ಅವರ ಆಯ್ಕೆ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು 7 ಶತಕಗಳು, 2019ರ ಟೂರ್ನಿಯೊಂದರಲ್ಲೇ 5 ಶತಕಗಳು ಹಾಗೂ 7 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿರುವ ಅವರ ಅಸಾಧಾರಣ ದಾಖಲೆಗಳು ಮತ್ತು ಮೂರು ಆವೃತ್ತಿಗಳಲ್ಲಿನ ನಿರಂತರ ಸ್ಥಿರತೆಯನ್ನು ವಯಸ್ಸಿನ ಕಾರಣಕ್ಕೆ ಕಡೆಗಣಿಸುವುದು ಭಾರತ ತಂಡಕ್ಕೆ ಸುಲಭವಲ್ಲ.

Read Full Story

12:47 PM (IST) Jul 19

ಕಣ್ಣೀರು ತರಿಸುತ್ತೆ ಚೆನ್ನಮ್ಮರ ಕೊನೆಯ ನಮಸ್ಕಾರ.. ಆಸ್ಪತ್ರೆ ಸೇರುವ 3 ದಿನದ ಹಿಂದೆ ದೇವೇಗೌಡರ ಕೈಹಿಡಿದು ಹೇಳಿದ್ದರು 'ಮೌನ ಸಂದೇಶ'

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನದ ಬೆನ್ನಲ್ಲೇ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೆನ್ನಮ್ಮ ಆಸ್ಪತ್ರೆ ಸೇರುವ ಮೂರು ದಿನಗಳ ಹಿಂದಿನ ವಿಡಿಯೋ ಅದಾಗಿದ್ದು, ನೋಡುಗರ ಕಣ್ಣಾಲೆಗಳನ್ನ ಒದ್ದೆ ಮಾಡುತ್ತಿದೆ...

Read Full Story

11:56 AM (IST) Jul 19

ಧಾರವಾಡ ಟು ಬೆಂಗಳೂರು - ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ!

ಧಾರವಾಡದಲ್ಲಿ 100ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿ ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ, ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿ ಗೋವುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
Read Full Story

11:21 AM (IST) Jul 19

ಐದು ತಿಂಗಳಿಂದ ಸಂಬಳ ಇಲ್ಲ -ಆಸ್ಪತ್ರೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತು ಗೋಳಾಡಿದ ಮಹಿಳಾ ಅಧಿಕಾರಿ -Video

ಜಮ್‌ಶೆಡ್‌ಪುರದ ಎಂಜಿಎಂ ಆಸ್ಪತ್ರೆಯ ಮಹಿಳಾ ಹೋಂಗಾರ್ಡ್ ಸಿಬ್ಬಂದಿಯೊಬ್ಬರು ಕಳೆದ ಐದು ತಿಂಗಳಿಂದ ಸಂಬಳವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಾರೋಗ್ಯ ಮತ್ತು ಸಾಲದ ಬಾಧೆಯಿಂದ ಕಂಗೆಟ್ಟು, ಆಸ್ಪತ್ರೆಯ ಆವರಣದಲ್ಲೇ ಕಣ್ಣೀರು ಹಾಕುತ್ತಿರುವ ಅವರ ವಿಡಿಯೋ ವೈರಲ್ ಆಗಿದೆ.

Read Full Story

10:45 AM (IST) Jul 19

ತವರೂರು ಅಂದರೆ ಚೆನ್ನಮ್ಮಗೆ ತಾಯಿಯಂಥ ಪ್ರೀತಿ.. 3 ದೇವಸ್ಥಾನ, ಹೈಸ್ಕೂಲ್, ಆಸ್ಪತ್ರೆ ಏನೆಲ್ಲ ಕಟ್ಟಿಸಿಕೊಟ್ಟಿದ್ದರು?

ನಾವು ಅನಾಥರಾದೇವು ಅಂತಾ ಮುತ್ತಿಗೆ ಹಿರೇಹಳ್ಳಿ ಗ್ರಾಮದ ಜನರು ಚೆನ್ನಮ್ಮ ಅವರನ್ನು ಕಳೆದುಕೊಂಡು ಕಣ್ಣೀರು ಇಡುತ್ತಿದ್ದಾರೆ. ಗ್ರಾಮದ ಜನರ ಈ ಕಣ್ಣೀರಿಗೆ ಚೆನ್ನಮ್ಮ ಜೊತೆಗಿನ ಭಾವನಾತ್ಮಕ ಸಂಬಂಧ ಇದೆ. ಅದೇ ಕಾರಣಕ್ಕೆ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.. ಈ ಕುರಿತ ಸ್ಟೋರಿ ಇಲ್ಲಿದೆ.

Read Full Story

10:06 AM (IST) Jul 19

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಎಂಟ್ರಿ-ಎಕ್ಸಿಟ್‌ ಪಾಯಿಂಟ್‌ ಬಂದ್ - NHAI ನಿರ್ಧಾರಕ್ಕೆ ಸ್ಥಳೀಯರ ತೀವ್ರ ಆಕ್ರೋಶ!

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ತಪ್ಪಿಸುವುದನ್ನು ತಡೆಯಲು ಎನ್‌ಎಚ್‌ಎಐ ಹಲವು ಪ್ರವೇಶ-ನಿರ್ಗಮನ ದ್ವಾರಗಳನ್ನು ಮುಚ್ಚಿದೆ. ಈ ನಿರ್ಧಾರದಿಂದ ಸ್ಥಳೀಯ ನಿವಾಸಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ತೀವ್ರ ಅನಾನುಕೂಲವಾಗಿದೆ.

Read Full Story

10:00 AM (IST) Jul 19

'ನನ್ನ ದೇವ್ರನ್ನ ಕಳ್ಕೊಂಡೆ ಸಾರ್..' ಅಮ್ಮನ ನೆನೆದು ಬಿಕ್ಕಿ ಬಿಕ್ಕಿ ಅತ್ತ ರೇವಣ್ಣ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದಿಂದ ಆಘಾತಕ್ಕೊಳಗಾಗಿರುವ ಹೆಚ್.ಡಿ. ರೇವಣ್ಣ, 'ಆಕೆ ನನ್ನ ತಾಯಿಯಷ್ಟೇ ಅಲ್ಲ, ದೇವತೆ ಸಮಾನ' ಎಂದು ಹೇಳುತ್ತಾ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ತಾಯಿಗೆ ತಿರುಪತಿ ಪ್ರಸಾದ ನೀಡಿದ್ದ ಕೊನೆಯ ಕ್ಷಣವನ್ನು ನೆನೆದು ಅವರು ಕಣ್ಣೀರಿಟ್ಟರು.
Read Full Story

09:29 AM (IST) Jul 19

ಅಜ್ಜಿ ಅಗಲಿಕೆ ಸುದ್ದಿ ತಿಳಿದು ಜೈಲಿನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ..

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ಸುದ್ದಿ ಕೇಳಿ ಜೈಲಿನಲ್ಲಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ ಭಾವುಕರಾಗಿದ್ದಾರೆ. ಅಜ್ಜಿಯ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೋರಿ ಅವರು ತುರ್ತು ಪೆರೋಲ್‌ಗಾಗಿ ಅರ್ಜಿ ಸಲ್ಲಿಸಿದ್ದು, ಜೈಲು ಅಧಿಕಾರಿಗಳ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.

Read Full Story

09:13 AM (IST) Jul 19

ನಾಡಗೀತೆಗೆ ‘ಬೌದ್ಧರುದ್ಯಾನ’ ಪದ ಸೇರ್ಪಡೆಗೆ ಸಂಘ-ಸಂಸ್ಥೆ ಬೆಂಬಲ

ಕುವೆಂಪು ವಿರಚಿತ ನಾಡಗೀತೆಗೆ ‘ಬೌದ್ಧರುದ್ಯಾನ’ ಪದ ಸೇರಿಸುವ ಶಿಫಾರಸಿಗೆ ಸಾಹಿತಿ, ಕಲಾವಿದರ ಒಕ್ಕೂಟ ಬೆಂಬಲ ಸೂಚಿಸಿದೆ. ಸರ್ವಜನಾಂಗದ ಶಾಂತಿಯ ಹರಿಕಾರರಾದ ಕುವೆಂಪು ಅವರು ಬದುಕಿದ್ದರೆ ಇದನ್ನು ಒಪ್ಪುತ್ತಿದ್ದರು ಮತ್ತು ಸಂವಿಧಾನದ ಆಶಯದಂತೆ ಮೂಲ ಧರ್ಮಕ್ಕೆ ಸ್ಥಾನ ಸಿಗಬೇಕು ಎಂದು ಒಕ್ಕೂಟ ಪ್ರತಿಪಾದಿಸಿದೆ.
Read Full Story

08:43 AM (IST) Jul 19

ಮಹಾರಾಜ ಟ್ರೋಫಿ - ಶಿವಮೊಗ್ಗಕ್ಕೆ ಬರಲಿದ್ದಾರೆ ಚಾಂಪಿಯನ್ ತಂಡದ ಮೂವರು ಕ್ರಿಕೆಟಿಗರು! ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತ

ಬೆಂಗಳೂರಿನಲ್ಲಿ ನಡೆದ ಮಹಾರಾಜ ಟ್ರೋಫಿ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ್ ತಂಡ ಚಾಂಪಿಯನ್ ಆಗಿದೆ. ಈ ಹಿನ್ನೆಲೆಯಲ್ಲಿ, ತಂಡದಲ್ಲಿದ್ದ ಕೆಎಸ್‌ಸಿಎ ಶಿವಮೊಗ್ಗ ವಲಯದ ಮೂವರು ಆಟಗಾರರನ್ನು ಜು.20ರಂದು ಮೆರವಣಿಗೆಯ ಮೂಲಕ ಸ್ವಾಗತಿಸಿ, ನವುಲೆ ಕ್ರೀಡಾಂಗಣದಲ್ಲಿ ಸನ್ಮಾನಿಸಲಾಗುವುದು. ಅಲ್ಲದೆ, ತಂಡವು ಬಹುಮಾನದ ಮೊತ್ತದಲ್ಲಿ ದಿವಂಗತ ಕ್ರಿಕೆಟಿಗ ಎಚ್.ಸಿ. ಅಕ್ಷಯ್ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಿದೆ.
Read Full Story

08:30 AM (IST) Jul 19

ಡಿಕೆ, ಬಿಕೆ, ಸಿದ್ದು, ವೇಣು, ರಣದೀಪ್‌ರಿಂದ ಪ್ರತ್ಯೇಕ ಪಟ್ಟಿ; ಸಂಪುಟಕ್ಕೆ ಈಗ ಕೋಟಾ ಸಂಕಟ!

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯು ಹಲವು ನಾಯಕರು ಪ್ರತ್ಯೇಕ ಪಟ್ಟಿಗಳನ್ನು ಸಲ್ಲಿಸಿರುವುದರಿಂದ ವಿಳಂಬವಾಗಿದೆ. ರಾಜ್ಯ ನಾಯಕರು ಮತ್ತು ಹೈಕಮಾಂಡ್ ನಡುವೆ ಹೆಸರುಗಳ ಬಗ್ಗೆ ಒಮ್ಮತ ಮೂಡದ ಕಾರಣ, ಪರಿಷ್ಕೃತ ಪಟ್ಟಿ ಸಲ್ಲಿಸುವಂತೆ ಹೈಕಮಾಂಡ್ ಸೂಚಿಸಿದೆ.

Read Full Story

08:18 AM (IST) Jul 19

ಆಸ್ತಿ ಕೊಡದ ತಂದೆಯನ್ನೇ ಕೊಂದ ಮಗ! ಮುಂದೇನು ತೋಚದೇ ಮಗನ ಈ ನಿರ್ಧಾರದಿಂದ ಆಸ್ತಿ ಯಾರಿಗೆ ಸಿಕ್ತು?

ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ಆಸ್ತಿ ಕೊಡುವಂತೆ ಪೀಡಿಸುತ್ತಿದ್ದ ಮಗನೊಬ್ಬ ತನ್ನ ತಂದೆಯನ್ನೇ ಕೊಂದು ಕಡೆಗೆ ತಾನೂ ಕೂಡ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಪಟ್ಟಣದ ಗುರನಹಳ್ಳಿಯಲ್ಲಿ ಶನಿವಾರ ನಡೆದಿದೆ.

Read Full Story

08:16 AM (IST) Jul 19

ರಾಷ್ಟ್ರೀಯ ಸಿನಿಮಾ ಪುರಸ್ಕಾರ - ಕನ್ನಡಕ್ಕೆ 4, ತುಳು ಭಾಷೆಗೆ 1 ಗೌರವ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಸುಮಂತ್ ಭಟ್ ನಿರ್ದೇಶನದ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದ 'ಮಿಥ್ಯ' 3 ಪ್ರಶಸ್ತಿ ಗೆದ್ದುಕೊಂಡಿದೆ. ಈ ಪೈಕಿ, ರೂಪಶ್ರೀ ವರ್ಕಾಡಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದು, ಕನ್ನಡ ಚಿತ್ರರಂಗದಲ್ಲಿ ಈ ಗೌರವ ಪಡೆದ ಮೊದಲ ನಟಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.

Read Full Story

07:44 AM (IST) Jul 19

ಮುಂಗಾರು ಮಳೆ ಕೊರತೆ - ಬರದ ನಾಡಿಗೆ ಸಿಎಂ ಸಿದ್ಧತೆ | ಇಂದು ಸರಣಿ ಸಭೆ ನಡೆಸಲಿರುವ ಡಿಕೆ ಶಿವಕುಮಾರ್

ರಾಜ್ಯದ ಬರ ಪರಿಸ್ಥಿತಿ ಸಂಬಂಧ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿ ಪಂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಲಾಗುತ್ತಿದ್ದು, ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Read Full Story

07:28 AM (IST) Jul 19

Credit war: ಕವಲುದಾರಿ ಹಿಡಿದ ಮೈತ್ರಿ: ಜೆಡಿಎಸ್ - ಬಿಜೆಪಿ ದೋಸ್ತಿಗಳ ಮಧ್ಯೆ ಕ್ರೆಡಿಟ್ ವಾರ್

ಬಿಡದಿ ಟೌನ್ ಶಿಪ್) ಯೋಜನೆ ಪರವಾಗಿ ಮತ್ತು ವಿರೋಧಿಸಿ ರೈತರು ನಡೆಸುತ್ತಿರುವ ಚಳವಳಿ ತಾರಕಕ್ಕೇರಿದೆ. ಮತ್ತೊಂದೆಡೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.

 

Read Full Story

07:26 AM (IST) Jul 19

ನೀಟ್: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡೋವರೆಗೆ ಹೋರಾಟ ನಿಲ್ಲಿಸಲ್ಲ: ಹರಿಪ್ರಸಾದ್‌

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದರು.

 

Read Full Story

07:26 AM (IST) Jul 19

ಆಸ್ಪತ್ರೆ, ಶಾಲಾ ಆವರಣ ಕ್ಯಾಂಟೀನ್‌ಗಳಲ್ಲಿ ಜಂಕ್‌ ಫುಡ್‌ ನಿಷೇಧ: ಆರೋಗ್ಯ ಸಚಿವ ಯುಟಿ ಖಾದರ್ ಮತ್ತೊಂದು ಖಡಕ್ ನಿರ್ಧಾರ

ರಾಜ್ಯದ ಎಲ್ಲ ಆಸ್ಪತ್ರೆ ಹಾಗೂ ಶಾಲೆಗಳ ಆವರಣದಲ್ಲಿರುವ ಕ್ಯಾಂಟೀನ್‌ಗಳಲ್ಲಿ ಆರೋಗ್ಯಕರ ಆಹಾರಗಳನ್ನು ಮಾತ್ರ ಕನಿಷ್ಠ ದರದಲ್ಲಿ ಮಾರಾಟ ಮಾಡಬೇಕು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಜಂಕ್ ಫುಡ್‌ಗಳನ್ನು ಮಾರಾಟ ಮಾಡುವಂತಿಲ್ಲ. ರಾಜ್ಯಾದ್ಯಂತ ಈ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.

 

Read Full Story

07:25 AM (IST) Jul 19

JDS V BJP Credit war: ಬಿಡದಿಯಿಂದ ಬೆಂಗಳೂರಿಗೆ ದಳ ಪ್ರತ್ಯೇಕ ಪಾದಯಾತ್ರೆ! ತನ್ನ ಕೇಳದೆ ಪಾದಯಾತ್ರೆ ಘೋಷಿಸಿದ್ದ ಬಿಜೆಪಿಗೆ ಸೆಡ್ಡು

ಬಿಡದಿ ಟೌನ್‌ಶಿಪ್‌ ಯೋಜನೆ(Bidadi township project) ವಿರೋಧಿಸಿ ಬಿಜೆಪಿ ಬಿಡದಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವ ಘೋಷಣೆ ಮಾಡಿದ ಮರುದಿನವೇ ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿ ದಿನಾಂಕ ಸಮೇತ ತನ್ನ ಪಾದಯಾತ್ರೆಯನ್ನು ಪ್ರಕಟಿಸಿದೆ.

 

Read Full Story

07:25 AM (IST) Jul 19

ಅಮ್ಮನ ನೆನೆದು ಹೆಚ್‌ಡಿಕೆ ಕಣ್ಣೀರು: ಇಂದು ಮಾವಿನಕೆರೆ ಹರದನಹಳ್ಳಿಯಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ, ಸ್ಥಳ, ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ

Channamma final rites ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ಶಿವೈಕ್ಯರಾಗಿದ್ದಾರೆ .ಅವರ ಅಂತ್ಯಕ್ರಿಯೆ ಇಂದು ಭಾನುವಾರ ಮಾವಿನಕೆರೆ ಹರದನಹಳ್ಳಿಯಲ್ಲಿ ನಡೆಸಲಾಗುವುದು ಎಂದು ಪುತ್ರ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.

 

Read Full Story

07:24 AM (IST) Jul 19

Karnataka Cabinet expansion: ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಬಯಲು! ರಾಜ್ಯ ನಾಯಕರು ಕೊಟ್ಟ ಆ ಹೆಸರುಗಳಿಗೆ ಹೈಕಮಾಂಡ್ ಆಕ್ಷೇಪ ಏಕೆ?

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌(DK Shivakumar) ಅವರ ಎರಡನೇ ಹಂತದ ಸಚಿವ ಸಂಪುಟವೆಂಬ ಖಾದ್ಯ ಸಿದ್ಧಪಡಿಸಲು ಹಲವು ಬಾಣಸಿಗರು ಅತ್ಯುತ್ಸಾಹ ತೋರುತ್ತಿರುವ ಪರಿಣಾಮ ಇಡೀ ಪ್ರಕ್ರಿಯೆಗೆ ಸೋಮವಾರದಿಂದ ಮತ್ತೊಂದು ಹಂತದ ಚಾಲನೆ ನೀಡಬೇಕಾದ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿ ಉಂಟಾಗಿದೆ.

 

Read Full Story

More Trending News