ಬೆಂಗಳೂರು: ಬಿಎಂಟಿಸಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ ನೌಕರರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ನಗದು ಬಹುಮಾನ ನೀಡಲು ಮುಂದಾಗಿದೆ. 313 ನೌಕರರಿಗೆ 500 ರೂಪಾಯಿ ನಗದು ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲು ಬಿಎಂಟಿಸಿ ಮುಂದಾಗಿದೆ. ಇಷ್ಟು ಕಡಿಮೆ ಮೊತ್ತ ಬಹುಮಾನ ನೀಡುತ್ತಿರೋದಕ್ಕೆ ನಿಗಮದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯುಧ ಪೂಜೆ ಸಂದರ್ಭದಲ್ಲಿಯೂ ನಿಗಮ ಅತ್ಯಂತ ಕಡಿಮೆ ಹಣವನ್ನು ನೀಡುತ್ತದೆ. ಬಿಎಂಟಿಸಿ ನೀಡುತ್ತಿರೋ ನಗದು ಬಹುಮಾನದಲ್ಲಿ ಸದ್ಯ 2 ಕೆಜಿ ಸೇಬು ಹಣ್ಣು ಸಹ ಬರಲ್ಲ. ಸದ್ಯ ಮಾರುಕಟ್ಟೆಯಲ್ಲಿ 1 ಕೆಜಿ ಸೇಬು ಬೆಲೆ 280 ರೂ.ಗಳಿಂದ 300 ರೂ. ಆಗಿದೆ
11:20 PM (IST) Aug 08
10:57 PM (IST) Aug 08
10:56 PM (IST) Aug 08
ಸವದತ್ತಿ ತಾಲೂಕಿನಾದ್ಯಂತ ಭಾರೀ ಮಳೆ ಹಿನ್ನೆಲೆ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೂ ಹಳ್ಳದ ನೀರು ನುಗ್ಗಿದೆ. ಗರ್ಭಗುಡಿಯಲ್ಲಿ 3 ಅಡಿಯಷ್ಟು ನೀರು ತುಂಬಿಕೊಂಡಿದೆ.
10:08 PM (IST) Aug 08
ಸಿಲಿಂಡರ್ ಬದಲಿಸಿ ಸ್ಟವ್ ಹಚ್ಚಿದ್ದಾರೆ. ದಿಢೀರ್ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಕೆಲವೇ ಕ್ಷಣದಲ್ಲಿ ಬೆಂಕಿ ಮನೆಗೆ ಆವರಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ.
09:33 PM (IST) Aug 08
WCL ಟೂರ್ನಿ ಬಿಡುವಿನ ವೇಳೆ ಕ್ರಿಕೆಟಿಗರು ತಮ್ಮ ಮಕ್ಕಳ ಜೊತೆ ಆಟವಾಡುವಾಗ ನನ್ನ ಮಗನ ನೆನಪಾಯಿು. ಮಗ ನನ್ನ ಜೊತೆಗಿದ್ದರೆ ಆ ಖುಷಿಯೇ ಬೇರೆ ಇತ್ತು. ಆದರೆ..ಶಿಖರ್ ಧವನ್ ತನ್ನ ಮಗನ ನೆನೆದು ಭಾವುಕರಾಗಿದ್ದಾರೆ. ಮಗನ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ.
09:21 PM (IST) Aug 08
08:54 PM (IST) Aug 08
ಬೆಂಗಳೂರು ಪುಣೆ ರಸ್ತೆ ಸಂಚಾರ ಇನ್ನು ಕೇವಲ 5 ಗಂಟೆ ಮಾತ್ರ. ಕೇಂದ್ರ ಸಚಿವ ನಿತಿಕ್ ಗಡ್ಕರಿ ಹೊಸ ಎಕ್ಸ್‌ಪ್ರೆಸ್‌ವೇ ಘೋಷಿಸಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿ ಅತೀ ವೇಗದ ರಸ್ತೆ ದಾಖಲೆಗೆ ಭಾರತ ಸಜ್ಜಾಗಿದೆ.
08:29 PM (IST) Aug 08
ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲುಗಳನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸುವಂತೆ ರೈಲ್ವೆ ಸಂಘಟನೆಗಳು ಒತ್ತಾಯಿಸಿವೆ. ಹಲವು ರೈಲುಗಳ ವಿಸ್ತರಣೆ, ಹೊಸ ರೈಲುಗಳ ಆರಂಭ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳನ್ನು ಮನವಿಯಲ್ಲಿ ಸಲ್ಲಿಸಲಾಗಿದೆ.
08:26 PM (IST) Aug 08
ವಿಷ್ಣುವರ್ಧನ್ ಸಮಾಧಿ ನೆಲಸಮದ ವಿಚಾರವಾಗಿ ಮಾತನಾಡಿರುವ ನಟ ವಿಜಯ ರಾಘವೇಂದ್ರ ಅವರು ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೇಗೆ? ಅವ್ರ ಕೆಲಸ ಅವ್ರಿಗೆ ಮಾಡಲು ಬಿಟ್ಟುಬಿಡಿ ಎಂದು ಹೇಳಿದ್ದೇಕೆ?
08:26 PM (IST) Aug 08
ಧರ್ಮಸ್ಥಳದಲ್ಲಿನ ಶವ ಹೂತಿಟ್ಟ ಪ್ರಕರಣದ ತನಿಖೆ ನಡುವೆ ಮಹತ್ವದ ಬೆಳವಣಿಗೆ ಆಗಿದೆ. ತನಿಖೆ ನಡೆಸುತ್ತಿರುವ ಎಸ್ಐಟಿಗೆ ಇದೀಗ ರಾಜ್ಯ ಸರ್ಕಾರ ಪೊಲೀಸ್ ಠಾಣೆ ಪವರ್ ನೀಡಿದೆ.
08:12 PM (IST) Aug 08
08:08 PM (IST) Aug 08
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಕೊಲೆ ಪ್ರಕರಣದ ವರದಿಗೆ ನಿರ್ಬಂಧ ಹೇರಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ದೇವಾಲಯದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಅವರ ಅರ್ಜಿಯನ್ನು ತಿರಸ್ಕರಿಸಿದೆ.
07:46 PM (IST) Aug 08
07:32 PM (IST) Aug 08
ಲೈಂಗಿಕ ಸಮ್ಮತಿ ವಯಸ್ಸನ್ನು 18 ರಿಂದ 16ಕ್ಕೆ ಇಳಿಸುವ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ತನ್ನ ಅಭಿಪ್ರಾಯ ಹೇಳಿದೆ. ಇಷ್ಟೇ ಅಲ್ಲ ಕೆಲ ಆತಂಕ ವ್ಯಕ್ತಪಡಿಸಿದೆ.
07:17 PM (IST) Aug 08
07:17 PM (IST) Aug 08
06:52 PM (IST) Aug 08
06:27 PM (IST) Aug 08
06:26 PM (IST) Aug 08
ಅಮರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಸ್ಯಾಲರಿಯನ್ನು ವೈಟ್ ಹೌಸ್ ನವೀಕರಣಕ್ಕೆ ನೀಡಿದ್ದಾರೆ. ಹೀಗಾಗಿ ಅಮೆರಿಕ ಅಧ್ಯಕ್ಷರ ತಿಂಗಳ ವೇತನ ಚರ್ಚೆಯಾಗುತ್ತಿದೆ. ಎಷ್ಟಿದೆ ಅಮೆರಿಕ ಅಧ್ಯಕ್ಷರ ವೇತನ ಗೊತ್ತಾ?
06:14 PM (IST) Aug 08
06:04 PM (IST) Aug 08
05:55 PM (IST) Aug 08
ಡಾ.ವಿಷ್ಣುವರ್ಧನ್ ಸಮಾಧಿ ತೆರವು ವಿಚಾರಕ್ಕೆ ವಿಷ್ಣು ಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಕುಟುಂಬದವರು ಮತ್ತು ನ್ಯಾಯಾಲಯದ ತೀರ್ಪಿನಿಂದಾಗಿ ಸಮಾಧಿ ತೆರವು ಅನಿವಾರ್ಯವಾಯಿತು ಎಂದು ಸಮಿತಿ ಹೇಳಿದೆ.
05:34 PM (IST) Aug 08
ಮತಗಳ್ಳತನದ ಆರೋಪದ ಬಗ್ಗೆ ಪ್ರಿಯಾಂಕ್ ಖರ್ಗೆ ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆಯೋಗವು ಬಿಜೆಪಿಯ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.
05:13 PM (IST) Aug 08
Dr Vishnuvardhan Memorial: ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ನಟ ಬಾಲಣ್ಣನ ಕುಟುಂಬಸ್ಥರಿಗೆ ಸೇರಿದ ಈ ಅಭಿಮಾನ್ ಸ್ಟುಡಿಯೋದಲ್ಲಿ ಈಗ ವಿಷ್ಣು ಸಮಾಧಿ ಇಲ್ಲ.
05:07 PM (IST) Aug 08
ಕೇಂದ್ರ ಸರ್ಕಾರ ಮುಂಡಿಸಿದ ಆದಾಯ ತೆರಿಗೆ ಕಾಯ್ದೆ 2025ನ್ನು ಹಿಂಪಡೆಯಲಾಗಿದೆ. ಫೆಬ್ರವರಿ ತಿಂಗಳಲ್ಲಿ ಬಿಲ್ ಮಂಡಿಸಲಾಗಿತ್ತು. ದಿಢೀರ್ ಬಿಲ್ ವಾಪಾಸ್ ಪಡೆಯಲಾಗಿದೆ. ಮುಂದೇನು?
04:59 PM (IST) Aug 08
04:54 PM (IST) Aug 08
04:35 PM (IST) Aug 08
ಕರ್ನಾಟಕದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉದ್ಯೋಗಾವಕಾಶಗಳು ಕುಸಿದಿವೆ, ವಿಶೇಷವಾಗಿ ಟೈಯರ್-2 ಮತ್ತು ಟೈಯರ್-3 ಸಂಸ್ಥೆಗಳಲ್ಲಿ. ದೊಡ್ಡ ಕಂಪನಿಗಳ ನೇಮಕಾತಿ ಕಡಿಮೆಯಾಗಿದೆ ಮತ್ತು ಕಂಪ್ಯೂಟರ್ ಸೈನ್ಸ್‌ನಂತಹ ಕ್ಷೇತ್ರಗಳಲ್ಲಿಯೂ ಸಹ ಉದ್ಯೋಗಗಳು ಕಡಿಮೆ ಇವೆ.
04:31 PM (IST) Aug 08
04:26 PM (IST) Aug 08
04:18 PM (IST) Aug 08
ನಿಮ್ಗೆ ಅನಾಮಿಕರಿಂದ ಅಥವಾ ಗೆಳೆಯರ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬರುತ್ತಿದೆಯಾ, ಹತ್ತು ಬಾರಿ ಯೋಚಿಸಿ, ಪರಿಶೀಲಿಸಿ ಆಕ್ಸೆಪ್ಟ್ ಮಾಡಿ. ಇಲ್ಲೊಬ್ಬ ವೃದ್ಧ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
04:02 PM (IST) Aug 08
Coming Soon ಎನ್ನುತ್ತಲೇ ವೀಕ್ಷಕರ ತಲೆಯಲ್ಲಿ ಹುಳುಬಿಟ್ಟ ಶ್ರೀರಸ್ತು ಶುಭಮಸ್ತು ಅಕ್ಕ-ತಂಗಿ ಪೂರ್ಣಿ ಮತ್ತು ದೀಪಿಕಾ ಅರ್ಥಾತ್ ಲಾವಣ್ಯ ಭಾರದ್ವಾಜ್ ಮತ್ತು ದರ್ಶಿನಿ ಡೆಲ್ಟಾ. ಏನಿದು?
04:02 PM (IST) Aug 08
Dr Vishnuvardhan Memorial: ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ನಟ ವಿಷ್ಣುವರ್ಧನ್ ಅವರಿಗೆ ಕನ್ನಡ ನಾಡಿನಲ್ಲಿ ಆರು-ಮೂರು ಅಡಿ ಜಾಗ ಕೊಡಲು ಸರ್ಕಾರ ವಿಫಲವಾಗಿದೆ. ಬಾಲಣ್ಣ ಅವರ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿ ನೆಲಸಮವಾಗಿದೆ.
03:59 PM (IST) Aug 08
03:24 PM (IST) Aug 08
03:22 PM (IST) Aug 08
ಕಪಿಲ್ ಶರ್ಮಾ ಕೆಫೆ ಮೇಲೆ 25 ಸುತ್ತಿನ ಗುಂಡು ಹಾರಿಸಿ ದಾಳಿ ಮಾಡಲಾಗಿದೆ. ದಾಳಿಯ ಹೊಣೆ ಹೊತ್ತುಕೊಂಡಿರುವ ಬಿಷ್ಣೋಯ್ ಗ್ಯಾಂಗ್ ಮುಂದಿನ ದಾಳಿ ಮುಂಬೈನಲ್ಲೇ ನಡೆಯಲಿದೆ ಎಂದು ಎಚ್ಚರಿಸಿದೆ. ಕಾರಣ ಸಲ್ಮಾನ್ ಖಾನ್ ಎಂದಿದೆ.
03:18 PM (IST) Aug 08
ನಟ ಬಾಲಣ್ಣ ಅಲಿಯಾಸ್ ಬಾಲಕೃಷ್ಣ ಅವರು ಬೆಂಗಳೂರಿನ ಹೊರವಲಯದಲ್ಲಿ ಅಭಿಮಾನ್ ಸ್ಟುಡಿಯೋ ಆರಂಭಿಸಿದ್ದರು. ಇದೇ ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ ಅವರ ಸಮಾಧಿಯಿದೆ. ಈ ಸಮಾಧಿ ವಿಚಾರವಾಗಿ ಸಾಕಷ್ಟು ಸಮಸ್ಯೆಗಳು ಸೃಷ್ಟಿ ಆಗಿತ್ತು. ಈಗ ಸಮಾಧಿಯೇ ಇಲ್ಲವಂತಾಗಿದೆ.
03:04 PM (IST) Aug 08
ಬೆಂಗಳೂರಿನ ಚಲ್ಲಘಟ್ಟದಲ್ಲಿ ರಾತ್ರಿ ವೇಳೆ ವಿಚಿತ್ರ ಧ್ವನಿಗಳು ಕೇಳಿಬರುತ್ತವೆ. ಅಧಿಮನೋವಿಜ್ಞಾನಿ ಡಾ. ರಾಹುಲ್ ಕುಮಾರ್ ಈ ಪ್ರದೇಶದಲ್ಲಿ ಅತೀಂದ್ರಿಯ ಶಕ್ತಿಯಿದೆ ಎಂದು ಹೇಳುತ್ತಾರೆ.
03:03 PM (IST) Aug 08
ಧರ್ಮಸ್ಥಳ ಸೌಜನ್ಯ ಪ್ರಕರಣದ ತನಿಖೆಯಲ್ಲಿ ಹೊಸ ತಿರುವು ಪಡೆದುಕೊಂಡಿದ್ದು, ಅನಾಮಿಕ ದೂರುದಾರ ಬೋಳಿಯಾರ್‌ನಲ್ಲಿ ಶಾಲಾ ಬಾಲಕಿಯ ಶವ ಹೂತಿರುವ ಸ್ಥಳವನ್ನು ಗುರುತಿಸಿದ್ದಾನೆ ಎನ್ನಲಾಗಿದೆ. ಈ ಘಟನೆಯು ಪ್ರಕರಣಕ್ಕೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.
02:35 PM (IST) Aug 08
ಸೌಜನ್ಯ ಪ್ರಕರಣದ ತನಿಖೆ ರಾಜಕೀಯ ಪ್ರೇರಿತವಾಗಿದ್ದು, ಧರ್ಮಾಧಿಕಾರಿಯವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಸೌಜನ್ಯಾ ಕೇಸಿನಲ್ಲಿ ಈಗಾಗಲೇ 3 ತನಿಖಾ ಸಂಸ್ಥೆಗಳು ತನಿಖೆ ನಡೆಸಿವೆ. ಅವರ ಅಮ್ಮ ಬೇರಾವುದೇ ತನಿಖೆ ಬೇಕಿದ್ದರೆ ಹೇಳಲಿ, ನಾವೇ ಅರ್ಜಿ ಹಾಕುತ್ತೇವೆ ಎಂದರು.