- Home
- Entertainment
- Sandalwood
- Dr Vishnuvardhan Memorial: ಬಾಲಣ್ಣನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ಡಾ ವಿಷ್ಣುವರ್ಧನ್ ಸಮಾಧಿ ನೆಲಸಮ!
Dr Vishnuvardhan Memorial: ಬಾಲಣ್ಣನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ಡಾ ವಿಷ್ಣುವರ್ಧನ್ ಸಮಾಧಿ ನೆಲಸಮ!
ನಟ ಬಾಲಣ್ಣ ಅಲಿಯಾಸ್ ಬಾಲಕೃಷ್ಣ ಅವರು ಬೆಂಗಳೂರಿನ ಹೊರವಲಯದಲ್ಲಿ ಅಭಿಮಾನ್ ಸ್ಟುಡಿಯೋ ಆರಂಭಿಸಿದ್ದರು. ಇದೇ ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ ಅವರ ಸಮಾಧಿಯಿದೆ. ಈ ಸಮಾಧಿ ವಿಚಾರವಾಗಿ ಸಾಕಷ್ಟು ಸಮಸ್ಯೆಗಳು ಸೃಷ್ಟಿ ಆಗಿತ್ತು. ಈಗ ಸಮಾಧಿಯೇ ಇಲ್ಲವಂತಾಗಿದೆ.

ಬಾಲಣ್ಣ ಅವರ ಮಗಳು ಗೀತಾ ಬಾಲಿ ಅವರು ಈ ಬಗ್ಗೆ ಎರಡು ವರ್ಷದ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಸಮಾಧಿ ಗೊಂದಲದ ಬಗ್ಗೆ ಮಾತನಾಡಿದ್ದರು. “2004ರಿಂದಲೇ ಈ ಜಾಗದ ಸಮಸ್ಯೆಯಿದೆ. 2009ರಲ್ಲಿ ವಿಷ್ಣುವರ್ಧನ್ ನಿಧನರಾದರು. ವಿಷ್ಣುವರ್ಧನ್ ಸಮಾಧಿಗೆ ಎರಡು ಎಕರೆ ಬಿಟ್ಟುಕೊಡಿ ಎಂದು ಬಿಶುಕುಮಾರ್ ಎನ್ನುವವರು ಹೇಳಿದ್ದರು. ಆಗ ಇದ್ದ ನ್ಯಾಯಾಧೀಶರು ಪಾರ್ಟ್ ಪಾರ್ಟ್ ಆಗಿ ಬಿಟ್ಟುಕೊಡೋಕೆ ಆಗೋದಿಲ್ಲ, ಕಾಂಪ್ರಮೈಸ್ ಮಾಡ್ಕೊಳ್ಳಿ ಎಂದರು. ಒಟ್ಟೂ 20 ಎಕರೆಯಲ್ಲಿ 10 ಎಕರೆ ಅವ್ಯವಹಾರ ಆಗಿದೆ. ಬೇರೆ ರೀತಿಯಲ್ಲಿ ಈ ಜಾಗ ಮಾರಾಟ ಆಗಿದೆ, ಇದು ನನಗೆ 2004ರಲ್ಲಿ ಗಮನಕ್ಕೆ ಬಂದಿತು. ನಾನು ಕೇಸ್ ಹಿಂಪಡೆಯೋದಿಲ್ಲ. ಎರಡು ಎಕರೆ ಜಮೀನು ಕೊಡೋದಕ್ಕೆ ನನ್ನದೇನೂ ಸಮಸ್ಯೆ ಇಲ್ಲ. ಈ ಕೇಸ್ ಬಗೆಹರಿದಮೇಲೆ ನಿಮ್ಮಿಷ್ಟ ಎಂದು ಕೋರ್ಟ್ ಕೂಡ ಹೇಳಿತ್ತಂತೆ” ಎಂದು ಗೀತಾ ಬಾಲಿ ಅವರು ಹೇಳಿದ್ದರು.
ಡಾ ವಿಷ್ಣುವರ್ಧನ್ ( Dr Vishnuvardhan ) ಅಭಿಮಾನಿಗಳು ಕಳೆದ ಏಳು ವರ್ಷಾದಿಂದ ಸಮಾಧಿ ವಿಚಾರದಲ್ಲಿ ಹೋರಾಟ ಮಾಡುತಿದ್ರು. ಮೈಸೂರಿನಲ್ಲಿ ಸಮಾಧಿ ನಿರ್ಮಾಣಕ್ಕೆ ಸರ್ಕಾರ ಜಾಗ ಕೊಟ್ಟಿದೆ. ಹೀಗಾಗಿ ಬಾಲಣ್ಣ ಸ್ಟುಡಿಯೋ ಜಾಗದ ಬಗ್ಗೆ ಸರ್ಕಾರ ತಲೆ ಕೇಡಿಸಿಕೊಂಡಿಲ್ಲ. ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ಮಾಡಲಾಗಿದೆ. ಅಲ್ಲಿ ಬಹಳ ಅದ್ದೂರಿಯಾಗಿ ಸ್ಮಾರಕ ಕಟ್ಟಲಾಗಿದೆ.
ಸಮಾಧಿ ನೆಲಸಮ ಮಾಡಿರುವ ಬಗ್ಗೆ ಇನ್ನೂ ಡಾ ವಿಷ್ಣುವರ್ಧನ್ ಅವರ ಪತ್ನಿ ಭಾರತಿ, ಅಳಿಯ ಅನಿರುದ್ಧ, ಮಗಳು ಕೀರ್ತಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
ಅಂದಹಾಗೆ ಅಭಿಮಾನ್ ಸ್ಟುಡಿಯೋ ಬಳಿ ಪೊಲೀಸರು ಇರುವ ದೃಶ್ಯಗಳು ಕೂಡ ಕಂಡಿವೆ. ಪೊಲೀಸರ ಮುಂದೆಯೇ ರಾತ್ರೋರಾತ್ರಿ ಸಮಾಧಿಯನ್ನು ನೆಲಸಮ ಮಾಡಲಾಗಿದೆ ಎನ್ನಲಾಗಿದೆ.
ಇಷ್ಟುವರ್ಷಗಳಿಂದ ವಿಷ್ಣುವರ್ಧನ್ ಜನ್ಮದಿನ ಹಾಗೂ ನಿಧನರಾದ ದಿನ ಅಭಿಮಾನಿಗಳು ಸಮಾಧಿಗೆ ಬಳಿ ಸಾಹಸ ಸಿಂಹನನ್ನು ನೆನಪಿಸಿಕೊಳ್ತಿದ್ದರು. ಇದು ಬಾಲಣ್ಣ ಕುಟುಂಬದ ಜಾಗ. ಬಾಲಣ್ಣ ಕುಟುಂಬ ಒಪ್ಪಿದ್ರೆ ಸಮಾಧಿ ಜಾಗ ಕೊಡಬಹುದಿತ್ತು ಎಂದು ಕೋರ್ಟ್ ಹೇಳಿತ್ತು. ಆದರೆ ಬಾಲಣ್ಣ ಕುಟುಂಬ ಒಪ್ಪಲಿಲ್ಲ ಎಂದು ಹೇಳಿದೆ. ಹೀಗಾಗಿ ಕೋರ್ಟ್‌ನಿಂದ ಸಮಾಧಿ ತೆರವಿಗೆ ಆದೇಶ ಇತ್ತು.
ಕಳೆದ ಏಳು ವರ್ಷಗಳಿಂದ ಸಮಾಧಿ ಜಾಗ ಕೊಡಿ ಎಂದು ಅಭಿಮಾನಿಗಳು ಹೋರಾಟ ಮಾಡುತ್ತಿದ್ದರು. ಕೊನೆಗೂ ಈ ಹೋರಾಟಕ್ಕೆ ಫಲ ಇಲ್ಲದಂತಾಗಿದೆ.
ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ನಟ ವಿಷ್ಣುವರ್ಧನ್ ಸಮಾಧಿಗೆ ಇಷ್ಟೆಲ್ಲ ಸಮಸ್ಯೆ ಆಗಿದೆ ಎನ್ನೋದು ನಿಜಕ್ಕೂ ಬೇಸರದ ವಿಷಯ.