ಬೆಂಗಳೂರು ಪುಣೆ ರಸ್ತೆ ಸಂಚಾರ ಇನ್ನು ಕೇವಲ 5 ಗಂಟೆ ಮಾತ್ರ. ಕೇಂದ್ರ ಸಚಿವ ನಿತಿಕ್ ಗಡ್ಕರಿ ಹೊಸ ಎಕ್ಸ್‌ಪ್ರೆಸ್‌ವೇ ಘೋಷಿಸಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿ ಅತೀ ವೇಗದ ರಸ್ತೆ ದಾಖಲೆಗೆ ಭಾರತ ಸಜ್ಜಾಗಿದೆ.

ನವದೆಹಲಿ (ಆ.08) ಭಾರತದಲ್ಲಿ ಎಕ್ಸ್‌ಪ್ರೆಸ್‌ವೇ ಮೂಲಕ ಹೊಸ ಕ್ರಾಂತಿ ಮಾಡಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ನಿತಿನ್ ಗಡ್ಕರಿ ಹೊಸ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ನಿರ್ಮಾಣದ ಘೋಷಣೆ ಮಾಡಿದ್ದಾರೆ. ಬೆಂಗಳೂರು ಹಾಗೂ ಪುಣೆ ಸಂಪರ್ಕಿಸುವ ಈ ರಸ್ತೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಿರ್ಮಾಣಗೊಳ್ಳಲಿದೆ. ಇದರಿಂದ ಪ್ರಯಾಣ ಸಮಯ ಎರಡು ಪಟ್ಟು ಇಳಿಕೆ ಮಾಡಲಿದೆ. ಈ ರಸ್ತೆ ಮೂಲಕ ಬೆಂಗಳೂರಿನಿಂದ ಪುಣೆಗೆ ಕೇವಲ 5 ಗಂಟೆಯಲ್ಲಿ ಪ್ರಯಾಣ ಮಾಡಲು ಸಾಧ್ಯವಿದೆ. ಬೆಂಗಳೂರಿನಿಂದ ಪುಣೆಗೆ ರಸ್ತೆ ಮೂಲಕ ಸಂಚರಿಸಲು ಸರಿಸುಮಾರು 15 ಬೇಕಿದೆ.

ಬೆಂಗಳೂರು-ಪುಣೆ-ಮುಂಬೈ

ಕರ್ನಾಟಕ ಹಾಗೂ ಮಹಾರಾಷ್ಟ್ರ ಸಂಪರ್ಕಿಸುವ ಈ ಹೆದ್ದಾರಿ ರಸ್ತೆ ದೇಶದ ವಾಣಿಜ್ಯ ವ್ಯವಹಾರಗಳಿಗೂ ಅತೀ ಮುಖ್ಯ ರಸ್ತೆ ಎಂದು ನಿತಿನ್ ಗಡ್ಕರಿ ಬಣ್ಣಿಸಿದ್ದಾರೆ. ಮುಂಬೈ-ಪುಣೆ-ಬೆಂಗಳೂರನ್ನು ಈ ಹೊಸ ಹೆದ್ದಾರಿ ಸಂಪರ್ಕಿಸಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಈ ರಸ್ತೆಯಲ್ಲಿ ಬೆಂಗಳೂರು ಪುಣೆ ಕೇವಲ 5 ಗಂಟೆ ಪ್ರಯಾಣವಾಗಿದ್ದರೆ, ಪುಣೆ-ಮುಂಬೈ ಕೇವಲ 90 ನಿಮಿಷಗಳ ಪ್ರಯಾಣವಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.

50,000 ಕೋಟಿ ರೂಪಾಯಿ ಹೂಡಿಕೆ

ಮುಂಬೈ-ಪುಣೆ ಸೇರಿದಂತೆ ಎಕ್ಸ್‌ಪ್ರೆಸ್ ವೇ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿದೆ. ಇದರ ಜೊತೆಗೆ ಈ ಹೆದ್ದಾರಿಯನ್ನು ಬೆಂಗಳೂರು ವರೆಗೆ ವಿಸ್ತರಿಸಲಾಗುತ್ತಿದೆ. ಹೀಗಾಗಿ ಈ ಬೃಹತ್ ಯೋಜನೆಗೆ 50,000 ಕೋಟಿ ರೂಪಾಯಿಗೆ ಹೂಡಿಕೆ ಮಾಡಲು ಸರ್ಕಾರ ಮುಂದಾಗಿದೆ. ಮುಂಬೈನಲ ಅಟಲ್ ಸುರಂಗ ಮಾರ್ಗದಿಂದ ಪುಣೆಯ ರಿಂಗ್ ರೋಡ್ ಮೂಲಕ ಸಾಗುವ ಈ ರಸ್ತೆ ಬೆಂಗಳೂರು ವರೆಗೆ ವಿಸ್ತರಣೆಗೊಳ್ಳಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಆರಂಭಗೊಂಡಿದೆ ಕಾಮಾಗಾರಿ

ಈ ಬೃಹತ್ ಹೆದ್ದಾರಿ ಯೋಜನೆಯ ಕಾಮಗಾರಿ ಆರಂಭಗೊಂಡಿದೆ. ಇದಕ್ಕೆ ಶಿಲನ್ಯಾಸ ಮಾಡಲು ಸಮಯ ಇಲ್ಲದಾಗಿದೆ. ಈ ಹೆದ್ದಾರಿಯಿಂದ ಎರಡು ರಾಜ್ಯಗಳ ಪ್ರಮುಖ ನಗರ ಮಾತ್ರವಲ್ಲ, ಸ್ಥಳೀಯ ಉತ್ಪನ್ನಗಳು, ಕೃಷಿ ಉತ್ಪನ್ನಗಳ ವ್ಯವಹಾರಕ್ಕೂ ನೆರವಾಗಲಿದೆ. ಸಣ್ಣ ಪಟ್ಟಣ, ಸಣ್ಣ ಹಳ್ಳಿಗಳಿಗೂ ಹೆದ್ದಾರಿ ಸಂಪರ್ಕ ಸಾಧ್ಯವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ಪುಣೆಯಲ್ಲಿ 2 ಲಕ್ಷ ಕೋಟಿ ರೂಪಾಯಿ ಮೊತ್ತದ ಹೆದ್ದಾರಿ ಇತರ ರಸ್ತೆ, ಮೂಲಭೂತ ರಸ್ತೆ ಸಂಪರ್ಕ ಯೋಜನೆಯ ಕಾಮಗಾರಿ ನಡೆಯುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.