ಸಿಲಿಂಡರ್ ಬದಲಿಸಿ ಸ್ಟವ್ ಹಚ್ಚಿದ್ದಾರೆ. ದಿಢೀರ್ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಕೆಲವೇ ಕ್ಷಣದಲ್ಲಿ ಬೆಂಕಿ ಮನೆಗೆ ಆವರಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ.

ಚಾಮರಾಜನಗರ (ಆ.08) ಗ್ಯಾಸ್ ಸಿಲಿಂಡರ್ ಅನಿಲ ಸೋರಿಕೆ ಅತ್ಯಂತ ಅಪಾಯಕಾರಿ. ಹೀಗೆ ಅನಿಲ ಸೋರಿಕೆಯಿಂದ ಹಲವು ದುರಂತಗಳು ನಡೆದಿದೆ. ಇದೀಗ ಸಿಲಿಂಡರ್ ಬದಲಿಸುವಾಗ ಅನಿಲ ಸೋರಿಕೆಯಾಗಿದೆ. ಈ ಅನಿಲ ಸೋರಿಕೆಯಾಗುವುದು ಮನೆಯವರಿಗೆ ತಿಳಿದಿಲ್ಲ. ಇದರ ನಡುವೆ ಸ್ಟವ್ ಹಚ್ಚಿದ್ದಾರೆ. ಇದರ ಪರಿಣಾಮ ಸೋರಿಕೆಯಾದ ಅನಿಲದಿಂದ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡ ಘಟನೆ ಚಾಮರಾಜನಗರದ ಬಸವಟ್ಟಿ ಗ್ರಾಮದಲ್ಲಿ ನಡೆದಿದೆ. ಪುಟ್ಟಮಾದಯ್ಯ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.

ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರು

ಗ್ಯಾಸ್ ಸಿಲಿಂಡರ್ ಬದಲಿಸಿದ ಸಂದರ್ಭದಲ್ಲಿ ಅನಿಲ ಸೋರಿಕೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿದೆ.ಆದರೆ ಪುಟ್ಟ ಮಾದಯ್ಯ ಹಾಗೂ ಮನೆಯವರಿಗೆ ಈ ಕುರಿತು ಗಮನಕ್ಕೆ ಬಂದಿಲ್ಲ. ಅನಿಲ ಸೋರಿಕೆ ನಡುವೆ ಸ್ಟವ್ ಹಚ್ಚಿದಾಗ ಇಡೀ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗಿ ವ್ಯಾಪಿಸುತ್ತಿದ್ದಂತೆ ಕೂಗಿಕೊಂಡಿದ್ದಾರೆ. ತಕ್ಷಣವೇ ಮನೆಯೊಳಗಿದ್ದವರು ಹೊರಗೆ ಓಡಿದ್ದಾರೆ. ಇದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಕ್ಷಾಂತರ ರೂಪಾಯಿ ನಷ್ಟ

ಮನೆಯೊಳಗಿದ್ದವರು ಹೊರಗಡೆ ಓಡಿದ್ದಾರೆ. ಕ್ಷಣಾರ್ಧಧಲ್ಲಿ ಬೆಂಕಿ ಆವರಿಸಿಕೊಂಡಿದೆ.ಮನೆಯೊಳಗಿದ್ದ 70,000 ರೂಪಾಯಿ ನಗದು, 5 ದಗ್ರಾಂ ಚಿನ್ನ, ಟಿವಿ, ಬೀರು, ಪಾತ್ರೆಗಳು ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಮನೆಯೊಳಗಿನ ಬಟ್ಟೆ ಸೇರಿದಂತೆ ಹಲವು ವಸ್ತುಗಳು ಭಸ್ಮವಾಗಿದೆ. ಬೆಂಕಿ ನಂದಿಸುವಂತೆ ಮನೆಯ ಕುಟುಂಬ ಸದಸ್ಯರು ಕೂಗಿಕೊಂಡಿದ್ದಾರೆ. ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ.

ಸ್ಥಳೀಯರಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ

ಸಿಲಿಂಡರ್ ಸೋರಿಕೆ ಕಾರಣ ಸ್ಛಳೀಯರಿಂದ ಬೆಂಕಿ ಆರಿಸುವದು ಸವಾಲಾಗಿತ್ತು. ಸಿಲಿಂಡರ್ ಸ್ಫೋಟಗೊಳ್ಳುವ ಆತಂಕ ಎದುರಾಗಿತ್ತು. ಹೀಗಾಗಿ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದಾರೆ.

ಕಣ್ಣೀರಿಟ್ಟ ಕುಟುಂಬ

ಕೂಲಿ ಕಾಮಿಕ ಕುಟುಂಬದ ಅಮೂಲ್ಯ ವಸ್ತುಗಳು ಬೆಂಕಿಯಲ್ಲ ನಾಶವಾಗಿದೆ. ಸಾಲ ಮಾಡಿ ತಂದಿದ್ದ 70,000 ರೂಪಾಯಿ ನಗದು ಹಣ ಕೂಡ ಬೆಂಕಿಯಲ್ಲಿ ಭಸ್ಮವಾಗಿದೆ. ಮನೆಯ ಎಲ್ಲಾ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಮನೆಯ ಮೇಲ್ಛಾವಣಿ ಕೂಡ ಭಸ್ಮವಾಗಿದೆ. ಇದೀಗ ರಿಪೇರಿ, ಮನೆ ವಸ್ತು ಖರೀದಿ, ಸಾಲ ಎಲ್ಲವನ್ನೂ ತೀರಿಸುವುದು ಹೇಗೆ ಎಂದು ಕುಟಂಬ ಕಣ್ಣೀರಿಟ್ಟಿದೆ.