ಕಪಿಲ್ ಶರ್ಮಾ ಕೆಫೆ ಮೇಲೆ 25 ಸುತ್ತಿನ ಗುಂಡು ಹಾರಿಸಿ ದಾಳಿ ಮಾಡಲಾಗಿದೆ. ದಾಳಿಯ ಹೊಣೆ ಹೊತ್ತುಕೊಂಡಿರುವ ಬಿಷ್ಣೋಯ್ ಗ್ಯಾಂಗ್ ಮುಂದಿನ ದಾಳಿ ಮುಂಬೈನಲ್ಲೇ ನಡೆಯಲಿದೆ ಎಂದು ಎಚ್ಚರಿಸಿದೆ. ಕಾರಣ ಸಲ್ಮಾನ್ ಖಾನ್ ಎಂದಿದೆ.

ನವದೆಹಲಿ (ಆ.08) ಕಾಮಿಡಿಯನ್ ಕಪಿಲ್ ಶರ್ಮಾ ಮಾಲೀಕತ್ವದ ಕೆನಡಾದ ಕ್ಯಾಪ್ಸ್ ಕಫೆ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿಯಾಗಿದೆ. ಒಂದು ತಿಂಗಳ ಅಂತರದಲ್ಲಿ ನಡೆದ 2ನೇ ದಾಳಿ ಇದಾಗಿದೆ. ಈ ಬಾರಿ ಬರೋಬ್ಬರಿ 26 ಸುತ್ತು ಗುಂಡಿನ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ರೆಸ್ಟೋರೆಂಟ್ ಬಹುತೇಕ ಹಾನಿಯಾಗಿದೆ. ಈ ಘಟನೆ ಬೆನ್ನಲ್ಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದಾಳಿ ಹೊಣೆ ಹೊತ್ತುಕೊಂಡಿತ್ತು. ಇದೀಗ ಕಪಿಲ್ ಶರ್ಮಾಗೆ ಮತ್ತೊಂದು ಬೆದರಿಕೆ ಬಂದಿದೆ. ಮುಂದಿನ ದಾಳಿ ಮುಂಬೈನಲ್ಲೇ ನಡೆಯಲಿದೆ ಎಂದು ಎಚ್ಚರಿಸಿದೆ. ರೆಸ್ಟೋರೆಂಟ್ ದಾಳಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕಾರಣ ಎಂದು ಬಿಷ್ಣೋಯ್ ಗ್ಯಾಂಗ್ ಹೇಳಿದೆ.

ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಫೇಸ್‌ಬುಕ್ ಮೂಲಕ ದಾಳಿಯ ಹೊಣೆ ಹೊತ್ತುಕೊಡಿದೆ. ಕಪಿಲ್ ಶರ್ಮಾಗೆ ಕರೆ ಮಾಡಿ ಎಚ್ಚರಿಸಲಾಗಿದೆ. ಆದರೆ ಕಪಿಲ್ ಶರ್ಮಾ ಸ್ಪಂದಿಸಿಲ್ಲ. ಹೀಗಾಗಿ ದಾಳಿ ಮಾಡಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಾಳಿ ಮುಂಬೈನಲ್ಲಿ ನಡೆಯಲಿದೆ ಎಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿದೆ.

ಕಪಿಲ್ ರೆಸ್ಟೋರೆಂಟ್ ಮೇಲಿನ ದಾಳಿಗೆ ಸಲ್ಮಾನ್ ಕಾರಣ ಎಂದಿದ್ದೇಕೆ?

ಕೆನಡಾದ ಸರ್ರೆಯಲ್ಲಿರುವ ಕಪಿಲ್ ಶರ್ಮಾ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿಯಾಗಿದೆ. ಈ ದಾಳಿಗೆ ಸಲ್ಮಾನ್ ಖಾನ್ ಕಾರಣ ಎಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೇಳಿದೆ. ಕಪಿಲ್ ಶರ್ಮಾ ತಮ್ಮ ಗ್ರೇಟ್ ಇಂಡಿಯನ್ ಕಪಿಲ್ ಶೋ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆಟ್‌ಫ್ಲಿಕ್ಸ್ ಮೂಲಕ ಲಾಂಚ್ ಮಾಡಿದ್ದರು. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಆಹ್ವಾನಿಸಲಾಗಿತ್ತು. ಇದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೆರಳಿಸಿದೆ. ಸಲ್ಮಾನ್ ಖಾನ್ ಮೇಲೆ ದಾಳಿಗೆ ಪ್ರಯತ್ನಿಸುತ್ತಿರುವ ಲಾರೆನ್ಸ್ ಗ್ಯಾಂಗ್ ಸಲ್ಮಾನ್ ಖಾನ್‌ಗೆ ಸಹಾಯ ಮಾಡಿದ, ಸಲ್ಮಾನ್ ಖಾನ್ ಜೊತೆ ಆತ್ಮೀಯ ಕಾಣಿಸಿಕೊಂಡಿರುವವರ ಮೇಲೂ ದಾಳಿ ಮಾಡುತ್ತಿದೆ. ಇದೀಗ ಕಪಿಲ್ ಶರ್ಮಾ ಟಾರ್ಗೆಟ್ ಮಾಡಲಾಗಿದೆ.

Scroll to load tweet…

ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವವರೂ ಟಾರ್ಗೆಟ್

ಬಿಷ್ಣೋಯ್ ಗ್ಯಾಂಗ್‌ನ ಸಲ್ಮಾನ್ ಖಾನ್ ಮೇಲಿನ ದ್ವೇಷ ತೀವ್ರಗೊಳ್ಳುತ್ತಿದೆ. ಬಿಷ್ಣೋಯ್ ಸಮುದಾಯದ ಅರಾಧ್ಯ ದೇವರಾಗಿರುವ ಕೃಷ್ಣ ಮೃಗವನ್ನು ಸಲ್ಮಾನ್ ಖಾನ್ ಬೇಟೆಯಾಡಿ ಕೊಂದಿರುವ ಪ್ರಕರಣದ ಬಳಿಕ ಈ ದ್ವೇಷ ಆರಂಭಗೊಂಡಿದೆ. ಸಲ್ಮಾನ್ ಖಾನ್ ಮುಗಿಸಲು ಹಲವು ದಾಳಿಯಾಗಿತ್ತು. ಇತ್ತೀಚೆಗೆ ಸಲ್ಮಾನ್ ಖಾನ್ ಮನೆ ಮೇಲೂ ಗುಂಡಿನ ದಾಳಿಯಾಗಿತ್ತು. ಇದೀಗ ಸಲ್ಮಾನ್ ಖಾನ್‌ಗೆ ಬಾರಿ ಭದ್ರತೆ ನೀಡಲಾಗಿದೆ. ಹೀಗಾಗಿ ಇದೀಗ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್‌ಗೆ ಸಹಾಯ ಮಾಡುತ್ತಿರುವ, ಸಲ್ಮಾನ್ ಜೊತೆ ಕಾಣಿಸಿಕೊಳ್ಳುತ್ತಿರವವರನ್ನು ಟಾರ್ಗೆಟ್ ಮಾಡುತ್ತಿದೆ. ಸಲ್ಮಾನ್ ಖಾನ್‌ಗೆ ನೆರವು ನೀಡುತ್ತಿದ್ದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ಕಿಯನ್ನು ಕಳೆದ ವರ್ಷ ಬಿಷ್ಣೋಯ್ ಗ್ಯಾಂಗ್ ಗುಂಡಿಕ್ಕಿ ಹತ್ಯೆ ಮಾಡಿತ್ತು.

ಕಪಿಲ್ ಶರ್ಮಾಗೆ ಪೊಲೀಸ್ ಭದ್ರತೆ

ಕಪಿಲ್ ಶರ್ಮಾ ಮೇಲೆ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಾಕಿದೆ. ಮುಂದಿನ ದಾಳಿ ಮುಂಬೈನಲ್ಲೇ ನಡೆಯಲಿದೆ ಎಂದಿದೆ. ಹೀಗಾಗಿ ಕಪಿಲ್ ಶರ್ಮಾಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಕೆಲ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕವೂ ಕಪಿಲ್ ಶರ್ಮಾಗೆ ಬೆದರಿಕೆ ಹಾಕಲಾಗಿದೆ. ಹೀಗಾಗಿ ಪರಿಸ್ಥಿತಿಯ ಗಂಭೀರತೆ ಅರಿತ ಮುಂಬೈ ಪೊಲೀಸರು ಇದೀಗ ಭದ್ರತೆ ಒದಗಿಸಿದ್ದಾರೆ. ಕಪಿಲ್ ಶರ್ಮಾ ಕುಟುಂಬಕ್ಕೂ ಭದ್ರತೆ ನೀಡಿದ್ದಾರೆ. ಇತ್ತ ಬೆದರಿಕೆ ಕುರಿತು ತನಿಖೆ ತೀವ್ರಗೊಂಡಿದೆ. ಬೆದರಿಕೆ ಬಂದ ಸೋಶಿಯಲ್ ಮೀಡಿಯಾ ಕುರಿತು ತನಿಖೆ ನಡೆಯುತ್ತಿದೆ.