ಬೆಂಗಳೂರು: ಬಸ್ ಪ್ರಯಾಣ ದರದ ನಂತರ ಇದೀಗ ಲಗೇಜ್ ಶುಲ್ಕವನ್ನೂ ಕೆಎಸ್ಸಾರ್ಟಿಸಿ ಏರಿಕೆ ಮಾಡಿದ್ದು, ನೂತನ ದರ ಶನಿವಾರದಿಂದ ಜಾರಿಗೆ ಬಂದಿದೆ. ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರವನ್ನು ಹಂತವಾರು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶಿಸಿದೆ. ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಹೆಚ್ಚು ಸ್ಥಳಾವಕಾಶ ಪಡೆಯುವ ಲಗೇಜ್‌ಗಳಿಗೆ 10 ಕೆಜಿ, ಭಾರವಾದ ಸಾಮಗ್ರಿಗಳಿಗೆ 20 ಕೆಜಿವರೆಗೆ ಉಚಿತಗೊಳಿಸಲಾಗಿದೆ. ಅದಕ್ಕಿಂತ ಮೀರಿದ ಲಗೇಜ್‌ಗಳಿಗೆ ಸ್ಟೇಜ್‌ವಾರು ಶುಲ್ಕ ವಿಧಿಸಲಾಗುತ್ತಿದ್ದು. ಇದೀಗ ಪರಿಷ್ಕೃತ ದರದಂತೆ ಮೊದಲ 5 ಸ್ಟೇಜ್‌ಗಳಿಗೆ 6 ರು.ನಿಂದ 10 ರು.ಗೆ ಹೆಚ್ಚಿಸಲಾಗಿದೆ. 6 ರಿಂದ 10 ಸ್ಟೇಜ್‌ಗೆ 15 ರು., 11ರಿಂದ 15ನೇ ಸ್ಟೇಜ್‌ಗೆ 20 ರು.ನಿಂದ 25 ರು. ಹೀಗೆ ಪ್ರತಿ 5 ಸ್ಟೇಜ್‌ಗೆ ನಿಗದಿಯಾಗಿರುವ ದರದಲ್ಲೂ ಏರಿಕೆ ಮಾಡಲಾಗಿದೆ.

07:46 AM (IST) Nov 08
ರಾಜ್ಯದ 4 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗಾಗಿ ಕಡಿಮೆ ದರದಲ್ಲಿ ಐವಿಎಫ್ (ಬಂಜೆತನ ಚಿಕಿತ್ಸಾ) ಕೇಂದ್ರಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಕೇಂದ್ರ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಶುರುವಾಗಲಿದ್ದು, ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣಕ್ಕೂ ಕೇಂದ್ರ ಸರ್ಕಾರ ಕ್ರಮ.
07:46 AM (IST) Nov 08