Published : Mar 08, 2026, 06:36 AM ISTUpdated : Mar 08, 2026, 08:18 PM IST

Karnataka News Live: Jr NTR - 25 ವರ್ಷಗಳ ನಂತರ ಜೂ.ಎನ್‌ಟಿಆರ್ ಸಿಎಂ ಆಗ್ತಾರಾ? ಅಪಘಾತದ ಬಗ್ಗೆ ಮಾತಾಡಿದ ತಾರಕ್

ಸಾರಾಂಶ

ಬೆಂಗಳೂರು: ಬಿಜೆಪಿಯವರಿಗೆ ದೇಶ ಮತ್ತು ರಾಜ್ಯವನ್ನು ಆರ್ಥಿಕವಾಗಿ ಹೇಗೆ ನಡೆಸಬೇಕೆಂದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸಾಲ ಮಾಡಿಯೇ ದೇಶವನ್ನು ನಡೆಸುತ್ತಿದ್ದು, ಈವರೆಗೆ ₹200 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಾಲರಾಮಯ್ಯ ಎಂಬ ಬಿಜೆಪಿ ವ್ಯಂಗ್ಯಕ್ಕೆ ಬೀದರ್‌ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ನಮ್ಮ ₹80 ಸಾವಿರ ಕೋಟಿ ಪಾಲನ್ನು ನೀಡಿಲ್ಲ. ಅದರಿಂದಾಗಿ ನಮ್ಮ ಸರ್ಕಾರ ಸಾಲ ಮಾಡುವಂತಾಗಿದೆ. ಜೆಜೆಎಂ ಯೋಜನೆಯ ಕೇಂದ್ರದ ಪಾಲಾದ ₹15 ಸಾವಿರ ಕೋಟಿಯನ್ನು ನಾವು ಕೊಟ್ಟಿದ್ದೀವಿ. ಆದರೆ, ಪಂಚಾಯಿತಿಗೆ ಕೊಡಬೇಕಾದ 15ನೇ ಹಣಕಾಸಿನ ಪಾಲನ್ನು ಕೇಂದ್ರ ನೀಡಿಲ್ಲ ಎಂದು ಆರೋಪಿಸಿದರು.

08:18 PM (IST) Mar 08

Jr NTR - 25 ವರ್ಷಗಳ ನಂತರ ಜೂ.ಎನ್‌ಟಿಆರ್ ಸಿಎಂ ಆಗ್ತಾರಾ? ಅಪಘಾತದ ಬಗ್ಗೆ ಮಾತಾಡಿದ ತಾರಕ್

25 ವರ್ಷಗಳ ನಂತರ ನೀವು ಯಾವ ಸ್ಥಾನದಲ್ಲಿ ಇರುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಜೂ.ಎನ್‌ಟಿಆರ್ ತಮಾಷೆಯಾಗಿ ಉತ್ತರಿಸಿದ್ದಾರೆ. ಜೊತೆಗೆ 2009ರಲ್ಲಿ ತಮಗಾದ ಅಪಘಾತವನ್ನೂ ತಾರಕ್ ನೆನಪಿಸಿಕೊಂಡಿದ್ದಾರೆ.

Read Full Story

07:50 PM (IST) Mar 08

ಗರ್ಭಿಣಿಯಾಗಿದ್ದಾಗ ವಾಂತಿ ತಡೆಯಲು ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ- ವೈದ್ಯೆ ಹೇಳಿದ್ದೇನು ಕೇಳಿ

ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ವಾಕರಿಕೆ ಮತ್ತು ವಾಂತಿ ಹಾರ್ಮೋನುಗಳ ಬದಲಾವಣೆಯಿಂದ ಸಾಮಾನ್ಯವಾಗಿದೆ. ಸ್ತ್ರೀರೋಗ ತಜ್ಞರಾದ ಡಾ. ಶಿಲ್ಪ. ಜಿ. ಬಿ. ಅವರು, ಔಷಧಿಗಳ ಬದಲು ಏನು ಮಾಡಬೇಕು ಎಂದು ಹೇಳಿದ್ದಾರೆ ಕೇಳಿ. 

Read Full Story

07:48 PM (IST) Mar 08

ದೇವರ ದೃಷ್ಟಿಯಲ್ಲಿ ಧರ್ಮ, ಜಾತಿ ಇರುವುದಿಲ್ಲ, ನಾವೇ ಮಾಡಿಕೊಂಡಿದ್ದು - ಸಿಎಂ ಸಿದ್ದರಾಮಯ್ಯ

ಮನುಷ್ಯ ಮನುಷ್ಯನನ್ನು ದ್ವೇಷಿಸುವಂತಹ ಸ್ಥಿತಿ ಬಂದೊದಗಿದ್ದು, ಇದನ್ನು ಮೆಟ್ಟಿ ನಿಂತು ಎಲ್ಲರನ್ನು ಪ್ರೀತಿಸಿ, ಸಹಬಾಳ್ಮೆಯಿಂದ ಬಾಳುವ ವ್ಯವಸ್ಥೆ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Read Full Story

07:33 PM (IST) Mar 08

ಜಿಎಸ್ಟಿ ಪಾಲು ಹಂಚಿಕೆ ಸರಿ ಇಲ್ಲ, ಹೀಗಾಗಿ ಖಾಲಿ ಹುದ್ದೆ ಭರ್ತಿ ಆಗುತ್ತಿಲ್ಲ - ಸಚಿವ ಕೆ.ಜೆ.ಜಾರ್ಜ್‌

ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಿಯಾಗಿ ಜಿಎಸ್‌ಟಿ ಪಾಲು ಹಂಚಿಕೆ ಮಾಡುತ್ತಿಲ್ಲ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಖಾಲಿ ಹುದ್ದೆಗಳ ನೇಮಕಾತಿ ಹಾಗೂ ಅಭಿವೃದ್ಧಿ ಕಾರ್ಯ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

Read Full Story

07:14 PM (IST) Mar 08

ನನ್ನ ರಾಜಕೀಯ ಜೀವನ ಬೆಳವಣಿಗೆಗೆ ಅನೇಕ ಹಿರಿಯರ ಆಶೀರ್ವಾದವಿದೆ - ಸಚಿವ ಕೆ.ಎಚ್.ಮುನಿಯಪ್ಪ

ನಾನು ನನ್ನ ರಾಜಕೀಯ ಜೀವನದಲ್ಲಿ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಸಚಿವನಾಗಲು ಅನೇಕ ನಾಯಕರ ಸಹಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

 

Read Full Story

07:01 PM (IST) Mar 08

ಶಾಸಕ ಉದಯ್ ವೈಯಕ್ತಿಕ ಟೀಕೆಗೆ ಜನರೇ ಉತ್ತರ ಕೊಡುತ್ತಾರೆ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಶಾಸಕ ಕೆ.ಎಂ.ಉದಯ್ ನನ್ನ ಮೇಲೆ ವ್ಯಕ್ತಿಗತ ಟೀಕೆ, ಆರೋಪಕ್ಕೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

Read Full Story

06:45 PM (IST) Mar 08

ಗೆಜ್ಜಲಗೆರೆ ಗ್ರಾಪಂ ನಗರಸಭೆಯಿಂದ ಹೊರಗಿಡುವುದು ಕಷ್ಟದ ಕೆಲಸ - ಸಚಿವ ಚಲುವರಾಯಸ್ವಾಮಿ

ಕಾನೂನು ವ್ಯಾಪ್ತಿಯಲ್ಲಿ ಸಾಕಷ್ಟು ತೊಂದರೆಗಳಿರುವುದರಿಂದ ಪ್ರತಿಭಟನಾಕಾರರು ಹೋರಾಟ ಕೈ ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

Read Full Story

06:35 PM (IST) Mar 08

₹200 ಲಕ್ಷ ಸಾಲ ಮಾಡಿರುವ ಪ್ರಧಾನಿ ಮೋದಿ - ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬಿಜೆಪಿಯವರಿಗೆ ದೇಶ ಮತ್ತು ರಾಜ್ಯವನ್ನು ಆರ್ಥಿಕವಾಗಿ ಹೇಗೆ ನಡೆಸಬೇಕೆಂದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Read Full Story

06:21 PM (IST) Mar 08

ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಮುಖ್ಯ - ಸಚಿವ ಡಾ.ಎಂ.ಸಿ.ಸುಧಾಕರ್

ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್‌ ಭಾಷೆಯಲ್ಲಿಯೇ ಮಾತಾಡಬೇಕು. ಆ ರೀತಿ ಅವರನ್ನು ಪ್ರೇರೇಪಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನೂತನವಾಗಿ ಆಯ್ಕೆಯಾದ ಪ್ರಾಚಾರ್ಯರಿಗೆ ಕರೆ ನೀಡಿದರು.

Read Full Story

06:09 PM (IST) Mar 08

ಕಂಬಳ ಸಂಪ್ರದಾಯ ಉಳಿಸಲು ಸರ್ಕಾರ ಬೆಂಬಲ - ಸಿಎಂ ಸಿದ್ದರಾಮಯ್ಯ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕಂಬಳವು ಜಾತ್ಯತೀತ ಹಾಗೂ ಧರ್ಮಾತೀತವಾಗಿ ಎಲ್ಲರೂ ಭಾಗವಹಿಸುವ ಜನಪ್ರಿಯ ಕ್ರೀಡೆಯಾಗಿದೆ. ಈ ಸಂಪ್ರದಾಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ.

Read Full Story

06:02 PM (IST) Mar 08

Bigg Boss ರಕ್ಷಿತಾ ಶೆಟ್ಟಿ ಮದ್ವೆ Bhargavi LLb ನಾಯಕನ ಜೊತೆ! ಮಲ್ಲಮ್ಮ ಕೊಟ್ಟ ಶಾಕ್​ ಏನು ಕೇಳಿ

ಬಿಗ್ ಬಾಸ್ ಖ್ಯಾತಿಯ ಮಲ್ಲಮ್ಮ, ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಮದುವೆ ಮಾಡಲು ಹುಡುಗನನ್ನು ನೋಡಿದ್ದಾರೆ. ತಮಾಷೆಯಾಗಿ, 'ಭಾರ್ಗವಿ ಎಲ್ಎಲ್​ಬಿ' ಖ್ಯಾತಿಯ ನಟ ಮನೋಜ್ ಕುಮಾರ್ ಜೊತೆ ರಕ್ಷಿತಾ ಮದುವೆ ಮಾಡಿಸುವುದಾಗಿ ಹೇಳಿದ್ದಾರೆ.
Read Full Story

05:54 PM (IST) Mar 08

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ನೂರಕ್ಕೆ ನೂರರಷ್ಟು ಸತ್ಯ - ಸಂಸದ ರಮೇಶ ಜಿಗಜಿಣಗಿ ಭವಿಷ್ಯ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಸಂಸದ ರಮೇಶ ಜಿಗಜಿಣಗಿ ಭವಿಷ್ಯ ನುಡಿದರು. ಜನರ ಒಲವು ಬಿಜೆಪಿಯ ಮೇಲೆ ಎಂದಿಗೂ ಕಡಿಮೆಯಾಗಿಲ್ಲ.

Read Full Story

05:30 PM (IST) Mar 08

ಬಾಗಲಕೋಟೆ - ಗಂಡನಿಗೆ ಕೈಕೊಟ್ಟು ಮುಸ್ಲಿಂ ವ್ಯಕ್ತಿ ಹಿಂದೆ ಹೋಗಿದ್ದ ಶ್ರೀದೇವಿ ಬೀದಿಪಾಲು, ನ್ಯಾಯಕ್ಕಾಗಿ ಅಲೆದಾಟ

14 ವರ್ಷದ ಸಂಸಾರ ತ್ಯಜಿಸಿ, ಪ್ರೀತಿಸಿದವನಿಗಾಗಿ ಮತಾಂತರಗೊಂಡ ಶ್ರೀದೇವಿ ಎಂಬ ಮಹಿಳೆಗೆ ಆತನೇ ಮೋಸ ಮಾಡಿದ್ದಾನೆ. ಆಕೆಯ ಹಣ, ಬಂಗಾರ ದೋಚಿ ಪರಾರಿಯಾಗಿದ್ದು, ಇದೀಗ ಇಬ್ಬರು ಮಕ್ಕಳೊಂದಿಗೆ ಬೀದಿಪಾಲಾಗಿರುವ ಸಂತ್ರಸ್ತೆ ನ್ಯಾಯಕ್ಕಾಗಿ ಬಾಗಲಕೋಟೆ ಎಸ್ಪಿಗೆ ದೂರು ನೀಡಿದ್ದಾರೆ.
Read Full Story

05:26 PM (IST) Mar 08

ಸಿಕ್ಸ್‌ನಿಂದ ಅದ್ಭುತ ಕ್ಷಣದವರೆಗೆ, ಅವಳೇ ನನ್ನ ಇನ್ನಿಂಗ್ಸ್;‌ 26ನೇ ವಯಸ್ಸಿಗೆ ಕ್ರಿಕೆಟರ್‌ ಪೃಥ್ವಿ ಶಾ ಎಂಗೇಜ್

cricketer prithvi shaw age:‌ ಭಾರತೀಯ ಕ್ರಿಕೆಟರ್‌ ಪೃಥ್ವಿ ಶಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗೆಳತಿ ಆಕೃತಿ ಅಗರ್‌ವಾಲ್‌ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ರೊಮ್ಯಾಂಟಿಕ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story

05:02 PM (IST) Mar 08

ಮಹಿಳಾ ಆಟೋ ಡ್ರೈವರ್ಸ್‌ ಜೊತೆ ಮಹಿಳಾ ದಿನಾಚರಣೆ ಆಚರಿಸಿದ ಸ್ಟಾರ್‌ ಸುವರ್ಣ ವಾಹಿನಿ!

Star Suvarna Channel: 'ಸ್ಟಾರ್ ಸುವರ್ಣ' ವಾಹಿನಿಯು ಸದಾ ಮಹಿಳೆಯರ ಪರವಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಲೇ ಬಂದಿದೆ. ಈಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ "ಸುವರ್ಣ ಸಖಿ" ಎಂಬ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

.

 

Read Full Story

04:47 PM (IST) Mar 08

Jr NTR Bangalore visit - ಕರ್ನಾಟಕ ನನ್ನ ಅಮ್ಮನ ಮನೆ - ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ ಮಾಡಿದ ಎನ್‌ಟಿಆರ್

ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಜೂನಿಯರ್ ಎನ್‌ಟಿಆರ್, ಕನ್ನಡದಲ್ಲಿಯೇ ಮಾತನಾಡಿ ಅಭಿಮಾನಿಗಳ ಮನಗೆದ್ದರು. ತಮ್ಮ ತಾತ ಇದೇ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ್ದನ್ನು ಮತ್ತು 2009ರ ಅಪಘಾತದ ನಂತರ ಇದೇ ಆಸ್ಪತ್ರೆ ತಮ್ಮ ಪ್ರಾಣ ಉಳಿಸಿದ್ದನ್ನು  ಭಾವನಾತ್ಮಕವಾಗಿ ಸ್ಮರಿಸಿದರು..

Read Full Story

04:15 PM (IST) Mar 08

ಅಬ್ಬಬ್ಬಾ.. ಒಂದೇ ಧಾರಾವಾಹಿಯಲ್ಲಿ 2 ಸೂಪರ್‌ ಹಿಟ್‌ ಸೀರಿಯಲ್‌ ಹೀರೋಯಿನ್ಸ್;‌ ಕರ್ಣನ ದಾರಿ ಹಿಡಿದ್ರಾ?

Udaya Tv Serial: ಜೈಮಾತಾ ಕಂಬೈನ್ಸ್ ಅವರ ಮುಂಬರುವ ಹೊಸ ಧಾರವಾಹಿಯಲ್ಲಿ ಕಿರುತೆರೆಯ ಜನಪ್ರಿಯ ನಟಿಯರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಈಗಾಲೇ ಕರ್ಣ ಧಾರಾವಾಹಿಯಲ್ಲಿ ನಮ್ರತಾ ಗೌಡ, ಭವ್ಯಾ ಗೌಡ ನಟಿಸುತ್ತಿದ್ದಾರೆ. ಇವರಿಬ್ಬರು ಬೇರೆ ಬೇರೆ ಧಾರಾವಾಹಿಗಳ ಹೀರೋಯಿನ್ಸ್‌ ಆಗಿದ್ದವರು. 

 

Read Full Story

03:47 PM (IST) Mar 08

'ಟ್ರಂಪ್ ಒಬ್ಬ ಸರ್ವಾಧಿಕಾರಿ, ಮೋದಿ ಅವನ ಗುಲಾಮ' - ಚಿತ್ತಾಪುರದಲ್ಲಿ ಪ್ರಧಾನಿ ವಿರುದ್ಧ ಖರ್ಗೆ ಕಟು ವಾಗ್ದಾಳಿ

Trump is a Dictator Modi His Slave ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯಿಂದ ಮೋದಿ ಸರ್ಕಾರದ ವಿರುದ್ಧ ಗುಡುಗು! ಟ್ರಂಪ್ ಓರ್ವ ಸರ್ವಾಧಿಕಾರಿ, ಮೋದಿ ಗುಲಾಮ ಎಂದ ಖರ್ಗೆ. ವಿದೇಶಾಂಗ ನೀತಿ ಬಗ್ಗೆ ಅವರು ಹೇಳಿದ್ದೇನು? ತಿಳಿಯಲು ಓದಿ.

Read Full Story

03:27 PM (IST) Mar 08

ಮಜ್ಜಿಗೆಗೋಸ್ಕರ 3000 ಎಕರೆ ಜಮೀನು ಬರೆದುಕೊಟ್ಟ ಪ್ರಖ್ಯಾತ ನಟನ ಅಜ್ಜ! ಯಾರದು?

Krishnam Raju Family: ರೆಬೆಲ್ ಸ್ಟಾರ್ ಕೃಷ್ಣರಾಜು ರಾಜಮನೆತನದವರು. ಅವರ ಅಜ್ಜ, ಮೊಗಲ್ತೂರು ಮಹಾರಾಜ, ತೆಲುಗಿನ ಸ್ಟಾರ್ ನಿರ್ದೇಶಕರೊಬ್ಬರ ಕುಟುಂಬಕ್ಕೆ ಬರೋಬ್ಬರಿ 3000 ಎಕರೆ ಜಮೀನು ಬರೆದುಕೊಟ್ಟಿದ್ದರಂತೆ. ಇದರ ಹಿಂದಿನ ಕಾರಣ ಕೇಳಿದ್ರೆ ನೀವು ಅಚ್ಚರಿಪಡ್ತೀರಾ. ಈ ಬಗ್ಗೆ ಮಾಹಿತಿ ಇಲ್ಲಿದೆ.

 

Read Full Story

03:05 PM (IST) Mar 08

ಚಿತ್ತಾಪುರ - ಪ್ರಿಯಾಂಕ್ ಜನ ಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ, ಅಪಪ್ರಚಾರ ಮಾಡುವವರಿಗೆ ಖರ್ಗೆ ಎಚ್ಚರಿಕೆ

ಚಿತ್ತಾಪುರದಲ್ಲಿ ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪುತ್ರ ಪ್ರಿಯಾಂಕ್ ಖರ್ಗೆಯವರ ಕಾರ್ಯವನ್ನು ಶ್ಲಾಘಿಸಿದರು. ಅಭಿವೃದ್ಧಿ ಕಾರ್ಯಗಳ ನಡುವೆಯೂ ಅಪಪ್ರಚಾರ ಮಾಡುವ ವಿರೋಧಿಗಳಿಗೆ  ಖಡಕ್ ಎಚ್ಚರಿಕೆ ನೀಡಿದರು

Read Full Story

03:03 PM (IST) Mar 08

ವಿಶ್ವಕಪ್‌ ಗೆಲ್ಲುವ ಭರವಸೆಯಲ್ಲಿದ್ದ ಭಾರತ; ಆ ಕಹಿ ಘಟನೆ ನೆನಪಿಸಿ ಎಚ್ಚರಿಕೆ ಕೊಟ್ಟ ಪಾಕಿಸ್ತಾನ ಮಾಜಿ ಆಟಗಾರ

T20 world cup final: ಅಹಮದಾಬಾದ್‌ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ, ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ 2023ರ ವಿಶ್ವಕಪ್ ಸೋಲನ್ನು ನೆನಪಿಸಿ ಟೀಮ್ ಇಂಡಿಯಾ ಮೇಲೆ ಒತ್ತಡ ಹೇರುವ ಮಾತುಗಳನ್ನಾಡಿದ್ದಾರೆ.

 

Read Full Story

02:22 PM (IST) Mar 08

ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ಕೇಸ್ ದಾಖಲಿಸಿದ ಅಶುತೋಷ್ ವಿರುದ್ಧ ಚಲಿಸುವ ರೈಲಿನಲ್ಲಿ ಹಲ್ಲೆ

ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಅವರ ಮೇಲೆ ಚಲಿಸುವ ರೇವಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಹರಿತವಾದ ಆಯುಧಗಳಿಂದ ದಾಳಿ ನಡೆದಿದ್ದು, ಶೌಚಾಲಯದಲ್ಲಿ ಅಡಗಿ ಅವರು ಪ್ರಾಣ ಉಳಿಸಿಕೊಂಡಿದ್ದಾರೆ.

Read Full Story

02:14 PM (IST) Mar 08

ನಮ್ಮ ಮೆಟ್ರೋದಲ್ಲಿ ಆಟಿಕೆ ಗನ್‌ ಇಟ್ಟುಕೊಂಡು ಪ್ರಾಂಕ್‌ ಮಾಡಿ ಪೊಲೀಸರ ಅತಿಥಿಯಾದ ಯುವಕ

ನಮ್ಮ ಮೆಟ್ರೋದಲ್ಲಿ ಪ್ರಾಂಕ್‌ ವಿಡಿಯೋ ಮಾಡಲು ನಕಲಿ ಗನ್‌ ಇಟ್ಟುಕೊಂಡಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಹ ಪ್ರಯಾಣಿಕರ ದೂರಿನ ಮೇರೆಗೆ ಕ್ರಮ ಕೈಗೊಂಡ ಅಧಿಕಾರಿಗಳು, ಯುವಕನಿಂದ ಕ್ಷಮಾಪಣಾಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
Read Full Story

01:45 PM (IST) Mar 08

ಮಹಿಳಾ ದಿನದಂದೇ ಸಿಲಿಂಡರ್ ಗ್ಯಾಸ್‌ ಬೆಲೆ ಏರಿಕೆ - ಇದೇನಾ ಅಚ್ಚೇದಿನ್? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಚಿತ್ತಾಪುರದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ವಿಶ್ವ ಮಹಿಳಾ ದಿನದಂದೇ ಕೇಂದ್ರ ಸರ್ಕಾರ ಅಡುಗೆ ಅನಿಲ ಬೆಲೆ ಏರಿಸಿರುವುದನ್ನು ತೀವ್ರವಾಗಿ ಟೀಕಿಸಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು.

Read Full Story

01:34 PM (IST) Mar 08

ವೈದ್ಯರು ಆಗಷ್ಟೇ ಜನಿಸಿದ ಮಗುವನ್ನು ಕೈಗಿತ್ತಾಗ ಹೆದರಿ ನಡುಗಿದ ಮಗುವಿನ ಅಪ್ಪ - ವೀಡಿಯೋ ಭಾರಿ ವೈರಲ್

ಮೊದಲ ಬಾರಿಗೆ ತಂದೆಯಾದ ವ್ಯಕ್ತಿಯೊಬ್ಬರು, ಆಗ ತಾನೇ ಜನಿಸಿದ ಮಗುವನ್ನು ಕೈಗೆತ್ತಿಕೊಳ್ಳಲು ಭಯಪಡುವ ವೀಡಿಯೋವೊಂದು ವೈರಲ್ ಆಗಿದೆ. ವೈದ್ಯರು ಮಗುವನ್ನು ಕೈಗಿಟ್ಟಾಗ ಭಯದಿಂದ ನಡುಗುವ ಆ ತಂದೆಯನ್ನು ಸಮಾಧಾನಪಡಿಸುವ ದೃಶ್ಯವು ಅನೇಕರ ಮನಗೆದ್ದಿದೆ.

Read Full Story

01:29 PM (IST) Mar 08

ಕೊಟ್ಟೂರಿನ 'ಮಗ್ಗಿ ಅಜ್ಜಯ್ಯ'ನ ಗಣಿತದ ಚಮತ್ಕಾರ! ಇವರ ಟ್ಯಾಲೆಂಟ್‌ ಮುಂದೆ ಕಂಪ್ಯೂಟರ್‌ ಸ್ಲೋ

ವಿಜಯನಗರ ಜಿಲ್ಲೆಯ ಕೊಟ್ಟೂರಿನ ನಿವಾಸಿ ಕೊಟ್ರಯ್ಯ, 'ಮಗ್ಗಿ ಅಜ್ಜಯ್ಯ' ಎಂದೇ ಜನಪ್ರಿಯರಾಗಿದ್ದಾರೆ. ಕೇವಲ 8ನೇ ತರಗತಿ ಓದಿದ್ದರೂ, ಇವರು ಕಂಪ್ಯೂಟರ್‌ಗಿಂತ ವೇಗವಾಗಿ ಗಣಿತದ ಲೆಕ್ಕಗಳನ್ನು ಬಿಡಿಸುವ ಮೂಲಕ 'ಮಾನವ ಕಂಪ್ಯೂಟರ್' ಎನಿಸಿಕೊಂಡಿದ್ದಾರೆ. ಪ್ರತಿಭೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

01:21 PM (IST) Mar 08

Muddu Sose Serial - ಏಕಕಾಲಕ್ಕೆ ಮುದ್ದು ಸೊಸೆ ಧಾರಾವಾಹಿಯ ಎರಡು ಘಟಾನುಘಟಿ ಪಾತ್ರಗಳು ಮುಗಿದೋಯ್ತಾ?

Muddu Sose Serial: ಮುದ್ದು ಸೊಸೆ ಧಾರಾವಾಹಿಯಲ್ಲಿ ಈಗ ಎರಡು ಪಾತ್ರಗಳು ಅಂತ್ಯ ಆಗಲಿವೆಯಾ ಎಂಬ ಪ್ರಶ್ನೆ ಮೂಡಿದೆ. ಹೌದು, ಭದ್ರ ಹಾಗೂ ವಿನಂತಿ ಮದುವೆ ಆಗುತ್ತೋ ಇಲ್ಲವೋ ಎಂಬ ಪ್ರಶ್ನೆ ನಡುವೆ, ಇನ್ನೊಂದು ಕುತೂಹಲದ ವಿಷಯ ಇದೆ. ಹಾಗಾದರೆ ಏನದು?

 

Read Full Story

12:58 PM (IST) Mar 08

Video - ಬೆಂಗಳೂರಿನಲ್ಲಿ ನೆಚ್ಚಿನ ಸ್ಟಾರ್‌ ನೋಡಲು ಬಂದು, ಬಿಸಿ ಬಿಸಿ ಲಾಠಿ ಕಜ್ಜಾಯ ತಿಂದ ಜನರು

Actor Junior NTR: ನಟ-ನಟಿಯರನ್ನು ಕಂಡರೆ ಇಷ್ಟಪಡುವವರೂ ತುಂಬ ಜನರಿದ್ದಾರೆ. ಈಗ ನೆಚ್ಚಿನ ನಟನನ್ನು ನೋಡಲು ಬಂದು, ಜನರು ಬಿಸಿ ಬಿಸಿ ಕಜ್ಜಾಯ ತಿಂದುಕೊಂಡು ಹೋಗಿದ್ದಾರೆ. ವಿಡಿಯೋ ನೋಡಿದರೆ, ಆ ನಟನ ಮೇಲೆ ಎಷ್ಟು ಅಭಿಮಾನಿ ಇಟ್ಟಿದ್ದಾರೆ ಎಂದು ತಿಳಿಯುವುದು, ನೀವು ವಿಡಿಯೋ ನೋಡಿ. 

 

Read Full Story

12:53 PM (IST) Mar 08

T20 World Cup 2026 final 'ಭಾರತ ಗೆದ್ದೇ ಗೆಲ್ಲುತ್ತೆ..' ಸಚಿವ ಭವಿಷ್ಯ, ಟೀಂ ಇಂಡಿಯಾ ಬಲದ ಬಗ್ಗೆ ತಂಗಡಗಿ ಹೇಳಿದ್ದೇನು?

ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತವು ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಾಡಲಿದ್ದು, ಈ ಕುರಿತು ಕೊಪ್ಪಳದಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಅವರು ತಂಡದ ಬಲಿಷ್ಠ ಪ್ರದರ್ಶನವನ್ನು ಉಲ್ಲೇಖಿಸಿ, ಭಾರತವೇ ಈ ಬಾರಿ ವಿಶ್ವಕಪ್ ಗೆಲ್ಲಲಿದೆ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Read Full Story

12:25 PM (IST) Mar 08

Bigg Boss ಸೂರಜ್​ ಸಿಂಗ್​ -ರಾಶಿಕಾ ಶೆಟ್ಟಿ ಚಿನ್ನ ಖರೀದಿ! ಬಂಗಾರದ ಚೈನ್​ ಉಡುಗೊರೆ- ಏನಿದು ಗುಡ್​ ನ್ಯೂಸ್​?

ಬಿಗ್​ಬಾಸ್​ ಖ್ಯಾತಿಯ ಸೂರಜ್​ ಸಿಂಗ್ ಮತ್ತು ರಾಶಿಕಾ ಶೆಟ್ಟಿ  ಚಿನ್ನ ಖರೀದಿ ಮಾಡಿದ್ದು, ರಾಶಿಕಾ ಸೂರಜ್‌ಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ, ಇಲ್ಲೊಂದು ಟ್ವಿಸ್ಟ್​ ಇದೆ. ಏನದು? ಜೋಡಿ ಈ ಹಿಂದೆ ಹೇಳಿದ್ದೇನು?

Read Full Story

11:52 AM (IST) Mar 08

Bengaluru - ಇನ್‌ಸ್ಟಾಗ್ರಾಂ ಪ್ರೀತಿ, ಆಮೇಲೆ ವಿಕೃತಿ - ಪ್ರೇಯಸಿ, ಆಕೆಯ ಪೋಷಕರಿಗೂ ಬೆಂಕಿ ಹಚ್ಚಿದ ಪಾಪಿ!

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಪ್ರೇಯಸಿ ಮತ್ತು ಆಕೆಯ ಪೋಷಕರ ಮೇಲೆ ಚಂದು ಎಂಬ ಆರೋಪಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೈಕ್ ವಿಚಾರವಾಗಿ ನಡೆದ ಗಲಾಟೆಯೇ ಈ ಕೃತ್ಯಕ್ಕೆ ಕಾರಣವಾಗಿದ್ದು, ಗಾಯಾಳುಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read Full Story

11:48 AM (IST) Mar 08

ತಂಗಿಯ ಮದುವೆಗೆ ಆಮಂತ್ರಣ ಕೊಡಲು ಹೋಗಿದ್ದಾಗ ಮಧ್ಯರಾತ್ರಿ ಹೊತ್ತಿ ಉರಿದ ಕಾರು!ಅದೃಷ್ಟವಶಾತ್ ಅಣ್ಣ ಪಾರು!

ತಂಗಿಯ ಮದುವೆ ಆಮಂತ್ರಣ ಪತ್ರಿಕೆ ಹಂಚಲು ತೆರಳಿದ್ದ ಅಣ್ಣನ ಕಾರಿಗೆ ಚಲಿಸುತ್ತಿದ್ದಾಗಲೇ ಬೆಂಕಿ ಹೊತ್ತಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ಬಳಿ ನಡೆದ ಈ ಘಟನೆಯಲ್ಲಿ ಮಾರುತಿ ಓಮಿನಿ ಕಾರು ಸಂಪೂರ್ಣ ಭಸ್ಮವಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story

11:09 AM (IST) Mar 08

PM e-bus scheme - ಹಳ್ಳಿ ಹಳ್ಳಿಗೂ ಎಲೆಕ್ಟ್ರಿಕ್ ಬಸ್ ಓಡಿಸಲು KSRTC ಸಿದ್ಧತೆ? ಏನಿದು ಪೋಗ್ರಾಮ್?

ಇಂಧನ ಮತ್ತು ಬಸ್‌ಗಳ ಕೊರತೆ ನೀಗಿಸಿ, ಸುಸ್ಥಿರ ಸಾರಿಗೆ ಒದಗಿಸಲು ಕರ್ನಾಟಕ ಸಾರಿಗೆ ಸಂಸ್ಥೆ ಗ್ರಾಮೀಣ ಭಾಗಗಳಲ್ಲೂ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. 'ಕರ್ನಾಟಕ ಎಲೆಕ್ಟ್ರಿಕಲ್ ಬಸ್ ಪ್ರೋಗ್ರಾಮ್' ಅಡಿಯಲ್ಲಿ, ಮೊದಲ ಹಂತದಲ್ಲಿ 1,950 ಬಸ್‌ಗಳನ್ನು ತರಲು ಯೋಜಿಸಲಾಗಿದೆ.

Read Full Story

10:51 AM (IST) Mar 08

ಯಾರನ್ನ ನಂಬೋದು? ಸೈಟ್ ಮಾರಿದ ಹಣಕ್ಕಾಗಿ ಪ್ರಾಣ ಸ್ನೇಹಿತನೇ ನಕಲಿ ಪೊಲೀಸ್ ಬಳಸಿ ದರೋಡೆ ಮಾಡಿಸಿದ!

ಬೆಂಗಳೂರಿನಲ್ಲಿ, ಹಣದ ದುರಾಸೆಗೆ ಬಿದ್ದ ಸ್ನೇಹಿತನೊಬ್ಬನೇ ತನ್ನ ಗೆಳೆಯನ ಮನೆ ದರೋಡೆಗೆ ಸಂಚು ರೂಪಿಸಿದ್ದಾನೆ. ನಕಲಿ ಪೊಲೀಸ್ ವೇಷಧಾರಿಯನ್ನು ಬಳಸಿ ಈ ಕೃತ್ಯ ಎಸಗಿದ್ದು, ತನಿಖೆ ವೇಳೆ ಸ್ನೇಹಿತನೇ ಈ ದರೋಡೆಯ ಮಾಸ್ಟರ್‌ಮೈಂಡ್ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. 

Read Full Story

10:44 AM (IST) Mar 08

KSRTCಯಲ್ಲಿ ಕೆಲಸ ಕೊಡಿಸುವ ಆಮಿಷ - ಹೆಂಡತಿ, ಮಕ್ಕಳ ಮೇಲೆ ಆಣೆ ಮಾಡಿ 12 ಲಕ್ಷಕ್ಕೂ ಹೆಚ್ಚು ವಂಚನೆ

ಕೆಎಸ್ಆರ್‌ಟಿಸಿಯಲ್ಲಿ ಉನ್ನತ ಅಧಿಕಾರಿಯೆಂದು ನಂಬಿಸಿ, ಕೆಲಸ ಕೊಡಿಸುವುದಾಗಿ ಹಲವು ಉದ್ಯೋಗ ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಇಬ್ಬರು ಆರೋಪಿಗಳ ವಿರುದ್ಧ ಸಿಸಿಬಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

Read Full Story

10:40 AM (IST) Mar 08

Radhika Pandit Birthday‌ Photos - ಹಳೆ ಬೇರು ಮರೆಯದೆ 42ನೇ ಜನ್ಮದಿನ ಆಚರಿಸಿಕೊಂಡ ರಾಧಿಕಾ ಪಂಡಿತ್!

ದಶಕಗಳಿಗೂ ಕಾಲ ನಾಯಕಿಯಾಗಿ ಮೆರೆದ ನಟ ಯಶ್‌ ಪತ್ನಿ ರಾಧಿಕಾ ಪಂಡಿತ್‌ ಅವರು ಮದುವೆಯಾದಬಳಿಕ ಸಿನಿಮಾದತ್ತ ಮುಖ ಮಾಡಿಲ್ಲ. ಜಾಹೀರಾತು, ಸಿನಿಮಾ ಕಾರ್ಯಕ್ರಮಗಳಲ್ಲಿ ಅವರು ಭಾಗಿ ಆಗುತ್ತಿದ್ದಾರೆ. ಈಗ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿವೆ. 

Read Full Story

10:15 AM (IST) Mar 08

4 ಜಾಬ್‌ ಆಫರ್‌ ಬಿಟ್ಟು ಆದಿ ಲಕ್ಷ್ಮೀ ಪುರಾಣ ಸೀರಿಯಲ್‌ಗೆ ಬಂದಿದ್ದ ನಟಿ; 3 ತಿಂಗಳಿಗೇ ಧಾರಾವಾಹಿಯಿಂದ ಔಟ್

Adi Lakshmi Purana Kannada Serial Episode Update: ಆದಿಲಕ್ಷ್ಮೀ ಪುರಾಣ ಧಾರಾವಾಹಿಯಲ್ಲಿ ಅಮೃತಾ ಪಾತ್ರದಲ್ಲಿ ರಕ್ಷಿತಾ ಅವರು ನಟಿಸುತ್ತಿದ್ದರು. ಈ ಸೀರಿಯಲ್‌ ಶುರುವಾಗಿ ಮೂರು ತಿಂಗಳು ಆಗಿತ್ತು. ಈಗ ಈ ಸೀರಿಯಲ್‌ನಿಂದ ಹೊರಬಂದಿದ್ದಾರೆ. ಇದಕ್ಕೆ ಕಾರಣ ಏನು?

 

Read Full Story

09:54 AM (IST) Mar 08

ಗೂಗಲ್‌ ಸಿಇಒಪಿಚೈಗೆ 3 ವರ್ಷಕ್ಕೆ 6300 ಕೋಟಿ ರು. ವೇತನ, ಭತ್ಯೆ !

ಕಳೆದ 11 ವರ್ಷಗಳಿಂದ ಗೂಗಲ್‌ ಮತ್ತು 7 ವರ್ಷಗಳಿಂದ ಆಲ್ಫಾಬೆಟ್‌ನ ಸಿಇಒ ಆಗಿರುವ ಭಾರತೀಯ ಮೂಲದ ಸಿಇಒ ಸುಂದರ್‌ ಪಿಚೈಗೆ ಕಂಪನಿಯ ಆಡಳಿತ ಮಂಡಳಿ ಮುಂದಿನ 3 ವರ್ಷದ ಅವಧಿಗೆ ವೇತನ, ಭತ್ಯೆ ಮತ್ತು ಪ್ರೋತ್ಸಾಹಕಗಳ ರೂಪದಲ್ಲಿ 6300 ಕೋಟಿ ರು.ನ ಆಫರ್‌ ನೀಡಿದೆ ಎಂದು ವರದಿಯಾಗಿದೆ.

Read Full Story

09:48 AM (IST) Mar 08

Education quality - ಶಿಕ್ಷಕರಿಗೆ ಬೋಧನೆ ಬಿಟ್ಟು ಬೇರೆ ಕೆಲಸ ನೀಡಬಾರದು -ಬಸವರಾಜ ಹೊರಟ್ಟಿ

Teachers' role in education quality ಗದಗದಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡಿದ ಬಸವರಾಜ ಹೊರಟ್ಟಿ, ಶಿಕ್ಷಕರಿಗೆ ಬೋಧನೆ ಬಿಟ್ಟು ಬೇರೆ ಕೆಲಸ ನೀಡಬಾರದು ಎಂದರು. ಶೇ.100 ಎಸ್‌ಎಸ್‌ಎಲ್‌ಸಿ ಫಲಿತಾಂಶ ಪಡೆದ ಶಾಲೆಗಳ ಸನ್ಮಾನದ ಕುರಿತು ತಿಳಿಯಿರಿ.

Read Full Story

09:26 AM (IST) Mar 08

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ - ಟಿಕೆಟ್‌ಗಾಗಿ ತೆರೆಮರೆ ಕಸರತ್ತು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಟಿಕೆಟ್‌ಗಾಗಿ ಹಿರಿಯ ಮುಖಂಡ ಕೃಷ್ಣಮೂರ್ತಿ ಪವಾರ್ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಒತ್ತಾಯದ ಮೇರೆಗೆ ಕಾಂಗ್ರೆಸ್‌ನಿಂದ ಎ.ಆರ್.ಎಂ.ಹುಸೇನ್ ಆಕಾಂಕ್ಷಿಯಾಗಿದ್ದಾರೆ.
Read Full Story

More Trending News