ಬೆಂಗಳೂರು: ಹೈಕೋರ್ಟ್ ನಿರ್ದೇಶನ ಧಿಕ್ಕರಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಸುಮಾರು 30 ಸಾವಿರ ಸಾರಿಗೆ ನೌಕರರಿಗೆ ಇದೀಗ ಸಂಕಷ್ಟ ಎದುರಾಗಿದೆ. ಮಂಗಳವಾರ ಕೆಲಸಕ್ಕೆ ಗೈರಾಗಿದ್ದ ಸಾರಿಗೆ ನೌಕರರ ಒಂದು ದಿನದ ವೇತನ ಕಡಿತದ ಜತೆಗೆ, ಗೈರಿಗೆ ಕಾರಣ ಕೇಳಿ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ 1.14 ಲಕ್ಷ ನೌಕರರ ಪೈಕಿ 30 ಸಾವಿರಕ್ಕೂ ಹೆಚ್ಚಿನ ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರಕ್ಕೆ ಬೆಂಬಲ ನೀಡಿದ್ದರು. ಆ ಹಿನ್ನೆಲೆಯಲ್ಲಿ ಗೈರಾಗಿದ್ದ ಎಲ್ಲ ನೌಕರರಿಗೂ ನೋಟಿಸ್ ನೀಡಿ, ಕರ್ತವ್ಯಕ್ಕೆ ಹಾಜರಾಗದಿರಲು ಕಾರಣ ತಿಳಿಸುವಂತೆ ಸೂಚಿಸಲಾಗಿದೆ. ಧರ್ಮಸ್ಥಳದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಯೂಟ್ಯೂಬರ್‌ಗಳಿಗೆ ಭಕ್ತರಿಂದ ಧರ್ಮದೇಟು. ಸ್ಥಳೀಯ ಆಸ್ಪತ್ರೆಗೆ ದಾಖಲು. ಧರ್ಮಸ್ಥಳದ ಕುರಿತು ಅವಹೇಳನ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭಕ್ತರಿಂದ ಪ್ರತಿಭಟನೆ.

11:32 PM (IST) Aug 07
ಗೇಮರ್‌ಗಳು ಮತ್ತು ಪವರ್ ಯೂಸರ್‌ಗಳಿಗಾಗಿ ನಿರ್ಮಿತವಾದ ಒಪ್ಪೋ ಕೆ13 ಟರ್ಬೋ ಸೀರಿಸ್ ಫೋನ್ ಭಾರಿ ಸದ್ದು ಮಾಡುತ್ತಿದೆ. ಪರ್ಫಾರ್ಮೆನ್ಸ್ ಮತ್ತು ಫ್ಯೂಟರ್ ರೆಡಿ ಇಂಟಲಿಜೆನ್ಸ್ ಫೋನ್ ವಿಶೇಷತೆ ಏನು?
11:17 PM (IST) Aug 07
ಅಮೆರಿಕ ಬೋಸ್ಟನ್ ನಗರದಲ್ಲಿ ಆಯೋಜಿಸಿರುವ 50ನೇ ನ್ಯಾಷನಲ್ ಕಾನ್ಫರೆನ್‌ಸ್ ಆಫ್ ಸ್ಟೇಟ್ ಲೆಜಿಸ್ಲೇಚರ್ ಶೃಂಗ ಸಭೆಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ರಾಜ್ಯದ 11 ಮಂದಿ ವಿಧಾನ ಪರಿಷತ್ ಸದಸ್ಯ ತಂಡವು ಭಾಗವಹಿಸಿದರು, ಕಾರ್ಯಕ್ರಮದ ಫೋಟೋಗಳು ಇಲ್ಲಿವೆ
11:08 PM (IST) Aug 07
ಧರ್ಮಸ್ಥಳದಲ್ಲಿ ಗಾಯಗೊಂಡ ಯೂಟ್ಯೂಬರ್‌ಗಳನ್ನು ಎಸ್‌ಡಿಪಿಐ ಮುಖಂಡರು ಭೇಟಿ ಮಾಡಿದ್ದಾರೆ. ಈ ಭೇಟಿಗೂ ಸೌಜನ್ಯ ಹೋರಾಟಗಾರರಿಗೂ ಇರುವ ಸಂಬಂಧವೇನು? ಎಂದು ಬಿಜೆಪಿ ನಾಯಕ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
11:03 PM (IST) Aug 07
ರಕ್ತ ಸಂಬಂಧಕ್ಕಿಂತಲೂ ಮಿಗಿಲಾದದ್ದು ಋಣದ ಸಂಬಂಧ. ಇದೀಗ ಟಾಟಾ ಇಂಡಸ್ಟ್ರೀಸ್‌ನ ಮಾಜಿ ಉದ್ಯೋಗಿಯೊಬ್ಬರು ಕೇರ್ಟೇಕರ್ ಮೊಮ್ಮಗಳಿಗೆ ಆಸ್ತಿ ಬರೆದಿಟ್ಟು ಕೊನೆಯುಸಿರೆಳೆದ ಘಟನೆ ನಡೆದಿದೆ. ಏನಿದು ವಿಷ್ಯ?
10:50 PM (IST) Aug 07
ಸೌಜನ್ಯ ಕೊಲೆ ಪ್ರಕರಣ ವರದಿ ಮಾಡುತ್ತಿದ್ದ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದಿದ್ದು, ಧರ್ಮಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ಕಡೆಯವರ ಮೇಲೆ ಆರೋಪ-ಪ್ರತ್ಯಾರೋಪಗಳ ನಡುವೆ ಏಳು ಎಫ್‌ಐಆರ್‌ಗಳು ದಾಖಲಾಗಿವೆ. ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟಣ್ಣನವರ್ ಎಫ್‌ಐಆರ್ ದಾಖಲು.
10:17 PM (IST) Aug 07
ಡೋನಾಲ್ಡ್ ಟ್ರಂಪ್ ಭಾರತದ ಮೇಲೆ ಡಬಲ್ ತೆರಿಗೆ ವಿಧಿಸಿದ್ದಾರೆ. ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆಯಾಗಿದೆ. ಅಜಿತ್ ದೋವಲ್ ವ್ಲಾದಿಮಿರ್ ಪುಟಿನ್ ಭೇಟಿ ಮಾಡಿದ್ದಾರೆ. ಇತ್ತ ಚೀನಾ ಕೂಡ ಭಾರತಕ್ಕೆ ಬೆಂಬಲ ನೀಡಿದೆ. ಇದೀಗ ಅಮೆರಿಕ ಹೊರಗಿಟ್ಟು ವ್ಯಾಪಾರ ವ್ಯಹಹಾರ ಹಾಗೂ ಕರೆನ್ಸಿಗೆ ಬ್ರಿಕ್ಸ್ ಮುಂದಾಗಿದೆಯಾ?
10:03 PM (IST) Aug 07
09:39 PM (IST) Aug 07
09:31 PM (IST) Aug 07
ಕೇರಳ ಸರ್ಕಾರ ಬರೋಬ್ಬರಿ 13 ಲಕ್ಷ ರೂಪಾಯಿ ಖರ್ಚು ಮಾಡಿ ಫುಟ್ಬಾಲಿಗ ಲಿಯೋನಲ್ ಮೆಸ್ಸಿಯನ್ನು ಆಹ್ವಾನಿಸಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಮೆಸ್ಸಿ ಮಾತ್ರ ಕೇರಳಕ್ಕೆ ಭೇಟಿ ನೀಡುತ್ತಿಲ್ಲ.
09:12 PM (IST) Aug 07
08:50 PM (IST) Aug 07
ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಚಿನ್ನಾಭರಣಗಳನ್ನು ಧರಿಸುವಾಗ ಮತ್ತು ಹೊರಗೆ ಓಡಾಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಬೆಂಗಳೂರು ಪೊಲೀಸರು ಸೂಚಿಸಿದ್ದಾರೆ. ಅಪರಿಚಿತರನ್ನು ಮನೆಗೆ ಬಿಡದಂತೆ ಮತ್ತು ದೇವರನ್ನು ಕಿಟಕಿಯ ಪಕ್ಕದಲ್ಲಿ ಕೂರಿಸದಂತೆಯೂ ಸಲಹೆ ನೀಡಿದ್ದಾರೆ.
08:43 PM (IST) Aug 07
ಸೌಜನ್ಯ ಪ್ರಕರಣದಲ್ಲಿ ಗಿರೀಶ್ ಮಟ್ಟೆನ್ನವರ್ ನೀಡಿರುವ ಹೇಳಿಕೆಗೆ ಜೈನಮುನಿ ಕುಲರತ್ನ ಮಹಾರಾಜರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೈನ ಧರ್ಮದ ಬಗ್ಗೆ ಅಧ್ಯಯನವಿಲ್ಲದೆ ಮಾತನಾಡುವುದು ಸರಿಯಲ್ಲ ಎಂದು ಮಟ್ಟೆನ್ನವರ್ ವಿರುದ್ಧ ಕಿಡಿಕಾರಿದ್ದಾರೆ.
08:25 PM (IST) Aug 07
ಜೋಗ್ ಫಾಲ್ಸ್‌ನ ನಿಷೇಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಬೆಂಗಳೂರು ಮೂಲದ ಯೂಟ್ಯೂಬರ್ ಮತ್ತು ಸ್ಥಳೀಯ ಗೈಡ್ ವಿರುದ್ಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. \
08:25 PM (IST) Aug 07
ಕಪಿಲ್ ಶರ್ಮಾ ಮಾಲೀಕತ್ವದ ಕ್ಯಾಪ್ಸ್ ಕಫೆ ರೆಸ್ಟೋರೆಂಟ್ ಮೇಲೆ ದುರ್ಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಒಂದೇ ತಿಂಗಳ ಅಂತರದಲ್ಲಿ ನಡೆದ 2ನೇ ಗುಂಡಿನ ದಾಳಿ ಇದಾಗಿದೆ.
07:57 PM (IST) Aug 07
ಧರ್ಮಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಯೂಟ್ಯೂಬರ್ ವರದಿಗಾರಿಕೆ ಹಾಗೂ ನಡೆ ಕುರಿತು ಧರ್ಮಸ್ಥಳದ ಭಕ್ತ ವೃಂದ, ಸ್ಥಳೀಯರು ಪ್ರಶ್ನಿಸಿದ್ದಾರೆ. ಇದರ ಬೆನ್ನಲ್ಲೇ ನೂಕಾಟ ತಳ್ಳಾಟ ನಡೆದಿದ್ದು, ಹಲ್ಲೆಯೂ ವರದಿಯಾಗಿದೆ. ಯೂಟ್ಯೂಬರ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಓರ್ವ ಆರೋಪಿ ಬಂಧನವಾಗಿದೆ.
07:54 PM (IST) Aug 07
07:46 PM (IST) Aug 07
07:13 PM (IST) Aug 07
ನಟಿ ಶ್ವೇತಾ ಮೆನನ್ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ನಟಿ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
06:55 PM (IST) Aug 07
06:52 PM (IST) Aug 07
06:28 PM (IST) Aug 07
06:11 PM (IST) Aug 07
ಕೆಲ ಹುದ್ದೆ ಸುಭದ್ರ ಎಂದು ಲೆಕ್ಕಚಾರ ಹಾಕಿದ್ದರೆ ತಪ್ಪು, ಕೆಲವೇ ವರ್ಷದಲ್ಲಿ ಉದ್ಯೋಗದ ಚಿತ್ರಣ ಬದಲಾಗಲಿದೆ. ಸಿಇಒ ಹುದ್ದೆ ಕೂಡ ಸೇಫ್ ಅಲ್ಲ ಎಂದು ಗೂಗಲ್ ಮಾಜಿ ಬ್ಯೂಸಿನೆಸ್ ಆಫೀಸರ್ ಎಚ್ಚರಿಸಿದ್ದಾರೆ.
05:53 PM (IST) Aug 07
05:40 PM (IST) Aug 07
ಬಿಜೆಪಿ ಸರ್ಕಾರವನ್ನು 'ನೇಮ್ ಚೇಂಜಿಂಗ್ ಸರ್ಕಾರ' ಎಂದು ಟೀಕಿಸಿದ ಪ್ರಿಯಾಂಕ್ ಖರ್ಗೆ, ಕಲಬುರಗಿ ಗುತ್ತಿಗೆದಾರ ಸಾವು, ಮೆಟ್ರೋ ಯೋಜನೆಗಳ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
05:31 PM (IST) Aug 07
05:23 PM (IST) Aug 07
ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಪಂಥೀಯ ಸಂಘಟನೆಗಳ ಒತ್ತಡದಿಂದಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದರೆ, ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮತ್ತು ಮಾಧ್ಯಮಗಳ ವೈಭವೀಕರಣ ಬೇಡ ಎಂದರು.
05:01 PM (IST) Aug 07
04:59 PM (IST) Aug 07
04:36 PM (IST) Aug 07
04:30 PM (IST) Aug 07
ಮುಕೇಶ್ ಅಂಬಾನಿ ಸತತ 5ನೇ ವರ್ಷ ತಮಗೆ ಒಂದು ರೂಪಾಯಿ ಸ್ಯಾಲರಿ ಬೇಡ ಎಂದಿದ್ದಾರೆ. ಇಷ್ಟಾದರೂ ಮುಕೇಶ್ ಅಂಬಾನಿ ಆದಾಯ ಹೆಚ್ಚಾಗುತ್ತಿರುವುದು ಹೇಗೆ?
04:07 PM (IST) Aug 07
04:00 PM (IST) Aug 07
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಸಂಸದ ಸುಧಾಕರ್ ತಮ್ಮ ಹೆಸರು ಉಲ್ಲೇಖಿಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಾಬುವಿನ ಪರಿಚಯವಿಲ್ಲ, ರಾಜಕೀಯ ಪಿತೂರಿ ಇದೆ. ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.
03:56 PM (IST) Aug 07
ಬಿಹಾರದಲ್ಲಿ 2400 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಲು ಅದಾನಿ ಪವರ್‌ಗೆ ಒಪ್ಪಿಗೆ ಸಿಕ್ಕಿದೆ.
03:47 PM (IST) Aug 07
ಟಿಸಿಎಸ್ ಉದ್ಯೋಗ ಕಡಿತ ಘೋಷಣೆ ಹಲವರಿಗೆ ಆಘಾತ ನೀಡಿತ್ತು. ಇದರ ಬೆನ್ನಲ್ಲೇ ಟಿಸಿಎಸ್ ಇದೀಗ ಉದ್ಯೋಗಿಗಳಿ ಬಂಪರ್ ಗಿಫ್ಟ್ ಘೋಷಿಸಿದೆ. ಸೆಪ್ಟೆಂಬರ್ 1 ರಿಂದ ಟಿಸಿಎಸ್ ಉದ್ಯೋಗಿಗಳಿಗೆ ವೇತನ ಹೆಚ್ಚಳವಾಗುತ್ತಿದೆ.
03:29 PM (IST) Aug 07
ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳ ತನಿಖೆಯ ಹೆಸರಿನಲ್ಲಿ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಅಪಪ್ರಚಾರ ಬಗ್ಗೆ ತನಿಖೆ ನಡೆಸಬೇಕು ಮತ್ತು ಜನರ ಅಸಹನೆ ಕಟ್ಟೆ ಒಡೆಯುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು.
03:03 PM (IST) Aug 07
ಇಸ್ಲಾಂನಿಂದ ಮತಾಂತರಗೊಂಡು ಲಿಂಗದೀಕ್ಷೆ ಪಡೆದ ನಿಜಲಿಂಗ ಸ್ವಾಮೀಜಿ ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿದ್ದಾರೆ. ಫೋಟೋ ಮತ್ತು ವಿಡಿಯೋ ಲೀಕ್ ಆಗಿದ್ದು ಹೇಗೆ ಎಂಬುದರ ಬಗ್ಗೆಯೂ ನಿಜಲಿಂಗ ಸ್ವಾಮೀಜಿ (ಮೊಹಮ್ಮದ್ ನಿಸಾರ್) ಮಾಹಿತಿ ನೀಡಿದ್ದಾರೆ.
02:32 PM (IST) Aug 07
ಕರ್ನಾಟಕದಲ್ಲಿ ಮರು ಜಾತಿ ಜನಗಣತಿಯನ್ನು ಡಿಜಿಟಲ್ ಮೂಲಕ ನಡೆಸಲು ಸರ್ಕಾರ ಸೂಚನೆ ನೀಡಿದೆ. ವೋಟರ್ ಐಡಿ ಆಧಾರಿತ ಮಾದರಿಯನ್ನು ಬಳಸುವ ಸಾಧ್ಯತೆಗಳಿವೆ. ಒಳ ಮೀಸಲಾತಿ ವರದಿ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.
01:36 PM (IST) Aug 07
ಧರ್ಮಸ್ಥಳದ ನೇತ್ರಾವತಿ ನದಿ ತೀರದ ಶವ ಹೂತಿಟ್ಟ ಪ್ರಕರಣದಲ್ಲಿ ಅನಾಮಿಕ ದೂರುದಾರರು 2 ಗಂಟೆ ತಡವಾಗಿ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. ವಕೀಲರೊಂದಿಗೆ ಬಂದ ದೂರುದಾರರ ಮಾರ್ಗದರ್ಶನದಲ್ಲಿ 13ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ಆರಂಭವಾಗಲಿದೆ. ದೂರುದಾರನ ವಿಳಂಬದ ಕಾರಣ ತಿಳಿದಿಲ್ಲ.
01:27 PM (IST) Aug 07
01:00 PM (IST) Aug 07
ವಿಜಯಪುರದ ಬಾಲಕಿಯರ ವಸತಿ ನಿಲಯದಲ್ಲಿ ರಾತ್ರಿ ಪಾರ್ಟಿ ಹಾಗೂ ಡಾನ್ಸ್ ಕಾರ್ಯಕ್ರಮ ಆಯೋಜಿಸಿದ ಆರೋಪದ ಮೇಲೆ ವಾರ್ಡನ್ ಮತ್ತು ಅಡುಗೆಯವರ ವಿರುದ್ಧ ತನಿಖೆ ನಡೆಯುತ್ತಿದೆ. ಹಾಸ್ಟೆಲ್ ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿನಿಯರನ್ನು ಹೊಟೇಲ್‌ಗೆ ಕರೆದೊಯ್ದ ಆರೋಪ ಕೇಳಿಬಂದಿದೆ.